ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, November 8, 2018

CRIME INCIDENTS 08-11-2018

ದಿನಾಂಕ. 08-11-2018 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-07-11-2018 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ತಡಸ ಕ್ರಾಸ್ ಹತ್ತೀರ ನಮೂದ ಮಾಡಿದ ಟ್ಯಾಂಕರ ಲಾರಿ ನಂ TN-36-AU-9439 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ತನ್ನ ಮುಂದೆ ಪಿರ್ಯಾದಿ ನೆಡೆಸಿಕೊಂಡು ಹೊರಟ ಕಾರ ನಂ KA-31-N-4175 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಪಿರ್ಯಾಧಿ ಹೆಂಡತಿ ಶಕೀನಾ, ತಾಯಿ ಕುತೇಜಾ, ತಂಗಿ ಹಜರತಬಿ ಇವರಿಗೆ ಗಾಯಪಡಿಸಿದ್ದಲ್ಲದೆ ಕಾರನ್ನು ಸಹಾ ಜಕಂಗೊಳಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ-07-11-2018 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಹಿಂಡಸಗೇರಿ ಗ್ರಾಮದ ಹದ್ದಿ ಪಿರ್ಯಾಧಿ ಬಾಭತ್ ಜಮೀನು ಸರ್ವೆ ನಂ 8 ಕ್ಷೇತ್ರ 17 ಎಕರೆ ನೇದ್ದರಲ್ಲಿ ಬೆಳೆದ ಸೋಯಾಬಿನ ಪೀಕನ್ನು ಕಿತ್ತು ಒಂದು ಕಡೆಗೆ ಹಾಕಿದ್ದನ್ನು ಆರೋಪಿತರಾದ ಮಹಬೂಬಸಾಬ ಗರಡಿಮನಿ, ಹುಸೇನಸಾಬ ಗರಡಿಮನಿ, ದಾವಲಸಾಬ ಗರಡಿಮನಿ ಹಾಗೂ ಸದ್ದಾಂ ಹುಲಮನಿ ಇವರೆಲ್ಲರೂ ಕೂಡಿಕೊಂಡು ಪಿರ್ಯಾದಿ ಅಕ್ಕಳಾದ ಮಲ್ಲವ್ವಾ ಕೋಂ ದೂಳಪ್ಪ ತಾವರಗೇರಿ ಇವರು ತಮಗೆ ಜಮೀನನ್ನು ಉಳುಮೆ ಮಾಡಲು ಬಾಡಿಗೆ ತರೀಕ ಕೊಡದೆ ಇರುವ ಸಿಟ್ಟಿನಿಂದಾ ಜಮೀನದಲ್ಲಿ ಅತೀಕ್ರಮ ಪ್ರವೇಶ ಮಾಡಿ  ಸೋಯಾಬಿನ ಬೆಳೆಯ ಬಣವಿಗೆ ಬೆಂಕಿ ಹಚ್ಚಿ ಸುಟ್ಟು ಸುಮಾರು 7 ಲಕ್ಷ ರೂ ಕಿಮ್ಮತ್ತಿನಷ್ಟು ಲುಕ್ಷಾಣಪಡಿಸಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3)ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ:08-11-2018 ರಂದು 16-30 ಗಂಟೆಗೆ ಕಲಘಟಗಿ-ಹಳಿಯಾಳ ರಸ್ತೆ ಯುವಶಕ್ತಿ ಸರ್ಕಲ್ ಹತ್ತಿರ ರಸ್ತೆ ಮೇಲೆ ನಮೂದ ಮಾಡಿದ ಆರೋಪಿ ಈಶ್ವರಗೌಡ ತಂದೆ ಚನ್ನಪ್ಪಗೌಡ ಮರಿಗೌಡ್ರ ಸಾ: ತುಮರಿಕೊಪ್ಪ ಈತನು ತಾನು ನಡೆಸುತ್ತಿದ್ದ ಕಾರ ನಂ KA25/AB1180 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಹಳಿಯಾಳ ಕಡೆಗೆ ಅತಿಜೋರು ಅಲಕ್ಷ್ಯತನದಿಂದ  ನಡೆಸಿಕೊಂಡು ಹೋಗಿ ರಸ್ತೆ ಮೇಲೆ ತನ್ನ ಸೈಡಿನಲ್ಲಿ ನಡೆದುಕೊಂಡು ಹೊರಟ ಸಂತೋಷ ತಂದೆ ಮಾರುತಿ ಲಂಗೋಟಿ ಸಾ: ಕಲಘಟಗಿ ಈತನಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತಪಡಿಸಿ ಅವನ ಬಲಗಾಲಿಗೆ ಭಾರಿ ಪ್ರಮಾಣದ ಗಾಯಪಡಿಸಿದ ಅಪರಾಧ.  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4) ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 07-11-2018 ರಂದು ರಾತ್ರಿ 10-30 ಗಂಟೆಯ ಸುಮಾರಕ್ಕೆ, ವರೂರ ಗ್ರಾಮದ ಡಾಬಾದ ಹತ್ತಿರ, ಆರೋಪಿತರಾದ ಮಲ್ಲನಗೌಡ ಬಾಳನಗೌಡಾ ಪಾಟೀಲ ಹಾಗೂ 17 ಜನರು ಕೂಡಿಕೊಂಡು ತಮ್ಮ ತಮ್ಮ ಫಾಯ್ದೆಗೋಸ್ಕರ, ಹಣವನ್ನು & ಮೋಟರ ಸೈಕಲ್ ಗಳನ್ನು & ಕಾರನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ, ಮುದ್ದೆಮಾಲ 1] ರೋಖ ರಕಂ 24000/- ರೂ. 2] ಒಟ್ಟು 52 ಇಸ್ಪೆಟ್ ಎಲೆಗಳು ಅ.ಕಿ. 00-00 3] ಒಟ್ಟು 21 ಮೋಟರ ಸೈಕಲ್ ಗಳು 4] ಒಂದು ಕಾರ 5] ಒಟ್ಟು 13 ಮೊಬೈಲ ಫೋನಗಳ ಸಮೇತ ಸಿಕ್ಕಿದ್ದು ಮತ್ತು ಕೆಲವು ಜನರು ಓಡಿ ಹೋದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.