ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, December 31, 2018

CRIME INCIDENTS 31-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-12-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ  ಆರೋಪಿರಾದ ಪ್ರೇಮಾ ಬಳಿಗೇರ ಹಾಗೂ ಇನ್ನೂ 02 ಜನರು ಕೊಡಿ ತಮ್ಮ ಹಳೆಯ ಮನೆಯ ಜಾಗೆಯಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವ ಕುರಿತು ಕೂಲಿ ಕೆಲಸಗಾರರು ಹಾಗು ಆರೋಪಿತರು ಕೂಡಿಕೊಂಡು ದಿನಾಂಕ 27-12-2018 ರಂದು ಮುಂಜಾನೆ 08-30 ಘಂಟೆಗೆ ಮನೆಯನ್ನು ಕೆಡವುವಾಗ ಆ ಸ್ಥಳದಲ್ಲಿ ಅನಾಹುತ ಆಗುವ ಬಗ್ಗೆ ಆರೋಪಿತರಿಗೆ ಗೊತ್ತಿದ್ದರೂ ಸಹಿತ ಸಾಕಷ್ಟು ಮುಂಜಾಗ್ರತೆ ವಹಿಸದೇ ಮನೆಯ ಗೋಡೆಯು ನಡೆದಾಡುವ ಜನರ ಮೇಲೆ ಬೀಳುವ ಬಗ್ಗೆ ತಿಳಿದೂ ಸಹಿತ ಸದರ ಮನೆಯ ಪಕ್ಕದಲ್ಲಿ ನಡದುಕೊಂಡ ಹೊರಟಿದ್ದ ಪಿರ್ಯಾದಿ ಮಕ್ಕಳ ಮೇಲೆ ನಿರ್ಲಕ್ಷತನದಿಂದ ಗೋಡೆಯು ಕುಸಿದು ಬೀಳುವಂತೆ ಮಾಡಿ ಇಬ್ಬರಿಗೂ ನಿಷ್ಕಾಳಜೀಯಿಂದ ಸಾದಾ ವ ಭಾರೀ ಪ್ರಮಾಣದ ಗಾಯ ಪಡಿಸಿದ್ದಲ್ಲದೇ ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 120/2018 ಕಲಂ 338.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣೆ ವ್ಯಾಪ್ತಿಯ: ಹೊಸಟ್ಟಿ ಗ್ರಾಮದಲ್ಲಿರುವ ಆರೋಪಿತನಾದ ರವಿ ತಂದೆ ನಾಗಪ್ಪಾ ಸಣ್ಣಗೌಡರ ಇತನು ಮೃತ ಗಂಗಂಮಯ್ಯಾ ತಂದೆ ಮಲ್ಲಪ್ಪಾ ಹಜೇರಿ. ವಯಾಃ 19 ವರ್ಷ. ಸಾಃ ಹೊಸಟ್ಟಿ ಇವಳಿಗೆ ವಿನಾಃಕಾರಣ ಅವಳ ಹಿಂದೆ ಬೆನ್ನತ್ತಿ ಅವಳ ಮನಸ್ಸು ಇಲ್ಲದಿದ್ದರು. ಅವಳಿಗೆ ಮದುವೆ ಆಗು ಅಂತಾ ಮಾನಸಿಕವಾಗಿ ಹಿಂಸೆಯನ್ನು ಕೊಟ್ಟಿದ್ದರಿಂದಾ ಮೃತಳು ಜೀವಿಸಲು ಬೇಸತ್ತು ತನ್ನ ಮನೆಯಲ್ಲಿ ವಿಷಕಾರಕ ಎಣ್ಣೆಯನ್ನು ಕುಡಿದು ಹೆಚ್ಚಿನ ಉಪಚಾರಕ್ಕಾಗಿ ಕಿಮ್ಸ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಫಲಿಸದೆ ದಿಃ 31-12-2018 ರಂದು 05-40 ಅವರ್ಸಕ್ಕೆ ಮೃತಪಟ್ಟಿರುತ್ತಾಳೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 203/2018 ಕಲಂ 306 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, December 30, 2018

CRIME INCIDENTS 30-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-12-2018 ರಂದು ವರದಿಯಾದ ಪ್ರಕರಣಗಳು

1 ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಗೂರ  ಮೃತನಾದ ನಾಗಪ್ಪ ತಂದೆ ಶಿವಪ್ಪ ನಿಗದಿ ವಯಾ: 45 ವರ್ಷ ಸಾ: ಬೇಗೂರ ಇವನು ತನ್ನ ಮದುವೆಯಾದ ನಂತರ ಸ್ವಲ್ಪ ದಿವಸ ಚನ್ನಾಗಿ ಇದ್ದವನು ಮುಂದೆ ಹುಚ್ಚರ ಆಕಾರ ಮಾಡುವದನ್ನು ಕಂಡು ದೇವರಿಗೆ ಹೇಳಿಕೆ ಮಾಡಿಸಿ, ಹಾಗೂ ಸರಕಾರಿ ದವಾಖಾನೆಗೆ ಮತ್ತು ಮೆಂಟಲ್ ಆಸ್ಪತ್ರೆ ಧಾರವಾಡಕ್ಕೆ ತೋರಿಸಿದಾಗ ಅವನು ಆರಾಮವಾಗಿ ಇದ್ದನು, ಅಜಮಾಸ ಆರು ತಿಂಗಳಿನಿಂದ ಸರಿಯಾಗಿ ಊಟ ಮಾಡದೇ ನನ್ನ ಮನಸು ಸರಿ ಇಲ್ಲಾ ಜೀವನ ಇಡಬಾರದು ಅಂತ ಅನ್ನಿಸುತ್ತದೆ ಅಂತ ಅನ್ನುತ್ತಿದ್ದನು. ದಿ: 30/12/2018 ರಂದು ಮುಂಜಾನೆ 09.00 ಗಂಟೆಯಿಂದ ಮದ್ಯಾಹ್ನ 03.00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಅಟ್ಟದ ತೊಲೆಗೆ ತಾನಾಗಿಯೇ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದು ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 79/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, December 29, 2018

CRIME INCIDENTS 29-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-12-2018 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಉಮಚಗಿ-ರೊಟ್ಟಿಗವಾಡ ರಸ್ತೆಯ ಮೇಲೆ, ಯಲ್ಲಪ್ಪ ಹಡಪದ, ಇವನ ಕಟಿಂಗ್ ಅಂಗಡಿಯ ಹತ್ತಿರ ಟಾಟಾ ಗೂಡ್ಸ್ ಲಾರಿ ನಂ: ಕೆಎ 25 / ಎಎ: 4400 ನೇದ್ದನ್ನು ಅದರ ಚಾಲಕನು ಉಮಚಗಿ ಕಡೆಯಿಂದ ರೊಟ್ಟಿಗವಾಡ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ರಸ್ತೆಯ ಸೈಡಿನಲ್ಲಿ ನಡೆಯುತ್ತಾ ಮನೆಯ ಕಡೆಗೆ ಹೊರಟಿದ್ದ ಪಿರ್ಯಾದಿಯ ಮಗನಾದ ಬಸವರಾಜ ಯಲ್ಲಪ್ಪ ಕಿತ್ತೂರ, ವಯಾ: 6 ವರ್ಷ ಸಾ: ರೊಟ್ಟಿಗವಾಡ ತಾ: ಕುಂದಗೋಳ ಈತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಲೆಯ ಮೇಲೆ ಲಾರಿಯ ಗಾಲಿಯನ್ನು ಹಾಯಿಸಿ ಸ್ಥಳದಲ್ಲಿಯೇ ಮರಣಪಡಿಸಿ ತನ್ನ ಲಾರಿಯನ್ನು ಮುಂದೆ ಹೋಗಿ ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ಹೋಗಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 196/2018 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಮೇಶ್ವರ ಕೂಡಲಗಿ ರಸ್ತೆಯ ಮೇಲೆ ಸಂಮೇಶ್ವರ ಗ್ರಾಮದ  ಸಣ್ಣ ಬ್ರಡ್ಜ್ ಹತ್ತಿರ ಲಾರಿ ನಂ  KA-25-D-5691 ನೇದ್ದರ ಚಾಲಕನು ಸಂಗಮೇಶ್ವರ  ಕಡೆಯಿಂದಾ ಕೂಡಲಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಮಣ್ಣಿನ ದಿಬ್ಬು ಗಮನಿಸದೆ ಅದನ್ನು ಜೆಂಪ ಮಾಡಿ ರಸ್ತೆಯ ಎಡಬದಿ ತೆಗ್ಗಿನಲ್ಲಿ ಕೆಡವಿ ಲಾರಿ ಸಂಪೂರ್ಣ ಜಕಂಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ291/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಬಾವಿ ಗ್ರಾಮದ  ಮೃತ  ಗಂಗವ್ವ ಕೋಂ ಗೂಳಪ್ಪ ಬಂಡರಗಟ್ಟಿ ವಯಾ 65 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಮನೆ ಕೆಲಸ ಸಾ:ಅಮ್ಮಿನಬಾವಿ ಇತಳು ದಿನಾಂಕ 24-12-2018 ರಂದು ಮದ್ಯಾಣ 3,30 ಗಂಟೆಯ ಸುಮಾರಿಗೆ ನಳದ ನೀರು ಹಿಡಿಯಲು ಕರೆಂಟ್ ಮಶೀನ ಹಚ್ಚಿ ನೀರು ತುಂಬಿ ನಂತರ ಬಂದ ಮಾಡಲು ಹೊದಾಗ ಆಕಸ್ಮಾತಾಗಿ ಸ್ವೀಚ್ ಹಿಡಿದಿದ್ದು ಮತ್ತು ಕರೆಂಟ ಮಶೀನದಲ್ಲಿನ ವಿದ್ಯೂತ್ ತಂತ್ತಿಯು ಗಂಗವ್ವಳ ಬಲಗೈ ಮುಂಗೈಗೆ ತಗುಲಿ ವಿದ್ಯೂತ್ ಶಾಖ ಹೊಡೆದು ತಲೆ ಹಚ್ಚಿ ನೆಲಕ್ಕೆ ಬಿದಿದ್ದು ತಲೆಗೆ ಒಳ ಪೆಟ್ಟಾಗಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲೀಸದೆ ದಿನಾಂಕ 28-12-2018 ರಂದು 19,00 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ತಾಯಿಯ ಮರಣದಲ್ಲಿ ಬೇರೆ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ಮಗನು ಕೊಟ್ಟ ವರದಿಯನ್ನು ಸ್ವೀಕರಿಸಕೊಂಡು ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 52/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, December 27, 2018

CRIME INCIDENTS 27-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-12-2018 ರಂದು ವರದಿಯಾದ ಪ್ರಕರಣಗಳು

1.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ಮೃತ ಪ್ರಭಾಕರ.ತಂದೆ ಚೆನ್ನಬಸಪ್ಪ.ಗುರುಪುತ್ರನವರ.ವಯಾ-48 ವರ್ಷ.ಸಾಃಬೆಲೂರ.ತಾಃಧಾರವಾಡ ಇತನುಇತ್ತಿಚಿಗೆ ವಿಪರೀತ ಸರಾಯಿ ಕುಡಿಯುವ ಚಟಕ್ಕೆಅಂಟಿಕೊಂಡಿದ್ದು ಸರಾಯಿ ಕುಡಿಯವದು ಒಳ್ಳೆಯದು ಅಲ್ಲಾ ಜೀವನ ಹಾಳ ಮಾಡುಕೊಳ್ಳಬೇಡಾ ಅಂತಾ ಮೃತನ ಹೆಂಡತಿಯು ಬುದ್ದಿ ಮಾತು ಹೇಳಿದ್ದಕ್ಕೆ ಅದನ್ನು ತನ್ನಮನಸ್ಸಿಗೆ ಹಚ್ಚಿಕೊಂಡು ತನ್ನಷ್ಟಕ್ಕೆ ತಾನೇ ತನ್ನಷ್ಟ್ಕಕ್ಕೆ ತಾನೇ ತನ್ನ ಮನೆಯ ಬಾತರೂಮನಲ್ಲಿ ವಿಷಸೇವನೆ ಮಾಡಿ ಅಸ್ತವ್ಯಸ್ಥಗೊಂಡು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದ್ದು ಸದರಿಯವನು ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಸದೇ ದಿನಾಂಕ:27-12-2018 ರಂದು ಬೆಳಗಿನ 04-30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2018 ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Wednesday, December 26, 2018

CRIME INCIDENTS 26-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-12-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಳಗಾವಿ-ಧಾರವಾಡ  ರಾಷ್ಟ್ರೀಯ ಹೆದ್ದಾರಿಯ  ರಸ್ತೆಯ ಮೇಲೆ ರೊಟಿಘರ ಹೊಟೀಲ ಎದುರಿಗೆ ಲಾರಿ ನಂ.ಕೆ.ಎ.25-ಎಎ-8773 ನೇದ್ದರ ಚಾಲಕನು ತನ್ನ ಲಾರಿಯನ್ನು ಬೆಲೂರ ಕಡೆಯಿಂದ ಅತೀವೇಗವಾಗಿ ನಿಷ್ಕಾಳಜತನದಿಂದಾ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟ ಮತ್ತೊಂದು ವಾಹನವನ್ನು ಓವರಟೇಕ ಮಾಡಿ ಹೆದ್ದಾರಿಯ ಮೂರನೇ ಲೈನದಿಂದ ಒಂದನೇ ಲೈನ ಕಡೆಗೆ ಏಕಾಏಕಿ ಯಾವುದೇ ಮೂನ್ಸೂಚನೆ ತೋರಿಸದೇ ಇಂಡಿಕೇಟರ ಕೊಡದೇ ಲಾರಿಯನ್ನು ನಡೆಯಿಸಿಕೊಂಡು ಬಂದು ಒಂದನೇ ಲೈನದಲ್ಲಿ ಚಲಾಯಿಸುತ್ತಿದ್ದ ಅನೀಲ ಶೇಟ್ಟಿಯವರ ಕಾರ ನಂ.ಎಮ.ಎಚ.03-ಸಿ,ಎಮ.-0556 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದ ಅನೀಲ ತಿಮ್ಮಪ್ಪ.ಶೆಟ್ಟಿ.ವಯಾ-65ವರ್ಷ. ಸಾಃಪೇರಾಡಿ ತಾಃಮೂಡಬಿದ್ರೆ ಹಾಗೂ ಶ್ರೀಮತಿ ಕುಶಾಲ ಕೋಂ.ಅನೀಲ.ಶೇಟ್ಟಿ ವಯಾ-62 ವರ್ಷ ಸಾಃಪೇರಾಡಿ ತಾಃಮೂಡಬಿದ್ರೆ  ಇವರಿಗೆ ಮರಣ ಪಡಿಸಿ ಕಾರು ಚಲಾಯಿಸುತ್ತಿದ್ದ ಶೈಲೆಂದ್ರ.ಅನೀಲ.ಶೆಟ್ಟಿ.ವಯಾ-36 ವರ್ಷ.ಸಾಃಪೆಲಾಡಿ.ತಾಃಮೂಡಬಿದ್ರೆ ಇವರಿಗೆ ಭಾರಿ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 202-2018 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹೊಸಹಂಚಿನಾಳ ಗ್ರಾಮದ ಕೆಂಪಿಗೇರಿ ಕ್ರಾಸ ಬಸ್ ನಿಲ್ದಾಣದ ಮುಂದೆ ಇದರಲ್ಲಿ ಆರೋಪಿತನಾದ ಪರಶುರಾಮ ನಂಜಪ್ಪ ಹಣಭೆ. ವಯಾ: 45 ವರ್ಷ, ಸಾ: ಕಮಡೊಳ್ಳಿ, ತಾ: ಕುಂದಗೋಳ ಈತನು ಜಪ್ತಾದ ಗಾಂಜಾ ಹಾಗೂ ಸರಾಯಿ ಟೆಟ್ರಾ ಪಾಕೀಟಗಳನ್ನು ಇಟ್ಟ ಚೀಲದೊಂದಿಗೆ ನಿಂತು ಸಾರ್ವಜನೀಕರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವ ತಯಾರಿಯಲ್ಲಿದ್ದಾಗ ಸಿಕ್ಕಿದ್ದು ಅವನಿಂದ ರೂ 2345-00 ರೂ ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 195/2018 ಕಲಂ NARCOTIC DRUGS & PSYCHOTROPIC SUBSTANCES ACT, 1985 (U/s-20 (b) (ii) (A)); KARNATAKA EXCISE ACT, 1965 (U/s-32,34) ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಶಿಶುವಿನಹಳ್ಳಿ ಗ್ರಾಮದ  ಮೃತನಾದ ದೇವಿಂದ್ರ ತಂದೆ ಹನಮಪ್ಪ ಜಾಧವ ವಯಾ-51 ವರ್ಷ ಜಾತಿ-ಹಿಂದೂ ಮರಾಠಾ ಉದ್ಯೊ ಶೇತ್ಕಿ ಕೆಲಸ ಸಾ: ಸಾಸ್ವಿಹಳ್ಳಿ ತಾ: ನವಲಗುಂದ ಈತನು ತನ್ನ ಬಾಬತ್ 7 ಎಕರೆ 20 ಗುಂಟೆ ಜಮೀನದ ಮೇಲೆ ಅಣ್ಣಿಗೇರಿ ಕೆನರಾ ಬ್ಯಾಂಕದಲ್ಲಿ 9 ಲಕ್ಷ ರೂಪಾಯಿ ಬೆಳೆಸಾಲವನ್ನು ಪಡೆದುಕೊಂಡು ಸದರ ಹಣವನ್ನು ತನ್ನ ಹೊಲಕ್ಕೆ ಬೀಜ ಗೊಬ್ಬರ ಇನ್ನಿತರೆ ಕೃಷಿ ಕೆಲಸಕ್ಕೆ ಬಳಸಿದ್ದು ಆದರೆ ಈ ವರ್ಷ ಸರಿಯಾಗಿ ಮಳೆ ಬಾರದೇ ಬೇಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 20-12-2018 ರಂದು ರಾತ್ರಿ 22-15 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಇಟ್ಟಿದ್ದ ಹತ್ತಿಗೆ ಹೊಡೆಯುವ ವಿಷದ ಎಣ್ಣೆಯನ್ನು ಕುಡಿದು ಅಸ್ವಸ್ಥನಾಗಿ ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆಗೆ ದಾಖಲಾಗಿ ಈ ದಿವಸ ದಿನಾಂಕ 26-12-2018 ರಂದು ನಸುಕಿನ 02-05 ನಿಮಿಷಕ್ಕೆ ಉಪಚಾರ ಫಲಿಸದೇ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರನ ವರದಿಯಲ್ಲಿ ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 21/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, December 25, 2018

CRIME INCIDENTS 25-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-12-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪಾಲಿಕೊಪ್ಪ ಗ್ರಾಮದ  ಲಾರಿ ನಂಬರಃ KA-22-B-5375 ನೇದ್ದರ ಚಾಲಕನಾದ ಇಕ್ಬಾಲ್ ತಂದೆ ಬಾಬುಸಾಬ ತಾಳಿಕೋಟಿ. ಸಾಃ ಸಂಪಗಾಂವ ತಾಃ ಬೈಲಹೊಂಗಲ ಇವನು ತಾನು ನಡೆಸುತ್ತಿದ್ದ ಸದರಿ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀವೇಗ ವ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗಿ ಪಾಲಿಕೊಪ್ಪ ಹತ್ತಿರ ರಸ್ತೆಯ ಎಡಬದಿಯಲ್ಲಿ ನಿಂತ ಇದರಲ್ಲಿಯ ಪಿರ್ಯಾಧಿ ಬಾಬತ್ತ ಲಾರಿ ನಂಬರಃ KA-25-AA-9537 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 323/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ರಮೇಶ ನೀರಲಗಿ ಇವರ  ಮನೆಯ ಹಿತ್ತಲದಲ್ಲಿ ಪಿರ್ಯಾದಿಯು ಸಾಕ್ಷಿದಾರರೊಂದಿಗೆ ಶೇಂಗಾ ಹೊಟ್ಟನ್ನು ಟ್ರ್ಯಾಕ್ಟರ-ಟ್ರೇಲರಿಗೆ ಲೋಡ ಮಾಡುತ್ತಿರುವಾಗ, ಆರೋಪಿತರಾದ 1) ಪರಮೇಶ ಹನಮಂತಪ್ಪ ನೀರಲಗಿ, 2) ಅನ್ನಪೂರ್ಣ ಕೋಂ ಪರಮೇಶ ನೀರಲಗಿ, 3) ಯಲ್ಲಪ್ಪ ನೀರಲಗಿ, 4) ಚನ್ನಬಸಪ್ಪ ಪಕ್ಕೀರಪ್ಪ ನೀರಲಗಿ ಸಾ: ಎಲ್ಲರೂ ಸಂಶಿ ಇವರು ಪಿರ್ಯಾದಿಯ ಹಿತ್ತಲದಲ್ಲಿ ಬಂದು ಶೇಂಗಾ ಹೊಟ್ಟು ಟ್ರೇಲರಿಗೆ ಲೋಡ ಮಾಡುವ ವಿಚಾರವಾಗಿ ತಂಟೆ ತೆಗೆದು, ಅವಾಚ್ಯ ಬೈದಾಡಿ, ಕಬ್ಬಿಣದ ಜಂತಕುಂಟಿಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು ಉಳಿದವರು ಕೈಯಿಂದ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 194/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, December 23, 2018

CRIME INCIDENTS 23-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-12-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಕೇರಿ ಗ್ರಾಮದ  ಮೃತನಾದ ಮಂಜುನಾಥ ತಂದೆ ನಾಗಪ್ಪ ಹಲಗಿ ವಯಾ-26 ವರ್ಷ ಸಾ: ಹಳ್ಳಿಕೇರಿ ತಾ: ನವಲಗುಂದ ಈತನು ಸಾರಾಯಿ ಕುಡಿಯುವ ಚಟದವನಿದ್ದು ಅವನು ಸರಿಯಾಗಿ ಕೆಲಸಕ್ಕೆ ಹೋಗದೇ ದಿನಾಲೂ ಸಾರಾಯಿ ಕುಡಿಯುತ್ತಾ ಮನೆಯಲ್ಲಿ ಇದ್ದು ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕ ತಾನೇ ದಿನಾಂಕ 22-12-2018 ರಂದು ರಾತ್ರಿ 20-00 ಗಂಟೆಯಿಂದ 21-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿನ ಕಬ್ಬಿಣದ ಜಂತಿಗೆ ಸೀರೆಯನ್ನು ಕಟ್ಟಿ ಸೀರೆಯ ಇನ್ನೊಂದು ಭಾಗದಿಂದ ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರನ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದೇವರಗುಡಿಹಾಳ ಗ್ರಾಮದ  ಮೃತ ಫಕ್ಕಿರಗೌಡ ಗಂಗನಗೌಡ ಪಾಟೀಲ್ ವಯಾ 32 ವರ್ಷ ಸಾ: ದೇವರಗುಡಿಹಾಳ ಇವನು ಮಾಡಿದ ಖಾಸಗಿ ಸಾಲದ ಬಾದೆಯನ್ನು ತಾಳಲಾರದೇ ದಿನಾಂಕ 21/12/2018 ರ ಮಧ್ಯಾಹ್ನ 12-30 ರಿಂದ ದಿನಾಂಕ 22/12/2018 ರ ಸಂಜೆ 06-30 ಗಂಟೆಯ ನಡುವಿನ ಅವಧಿಯಲ್ಲಿ ದೇವರಗುಡಿಹಾಳ ರೈಲ್ವೆ ಕೆರೆಯ ಬೈಲಿನಲ್ಲಿ ತನ್ನಷ್ಟಕ್ಕೆ ತಾನೆ ಯಾವದೋ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಅಂತ ವರದಿಯನ್ನು ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 67/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, December 22, 2018

CRIME INCIDENTS 22-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-12-2018 ರಂದು ವರದಿಯಾದ ಪ್ರಕರಣಗಳು

1 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮ ದ ಮೃತ  ತಾನಾಜಿ ತಂದೆ ಹನಮಂತಪ್ಪ ಪಾಲಕನವರ @ ಹೆಬ್ಬಾಳ ವಯಾ 66 ವರ್ಷ ಜಾತಿ ಹಿಂದು ಮರಾಠ ಉದ್ಯೋಗ ಶೇತ್ಕಿ ಕೆಲಸ ಸಾ:ಅಮ್ಮಿನಬಾವಿ ಇತನಿಗೆ ಕಳೆದ 7 ತಿಂಗಳುಗಳಿಂದ ಕ್ಷಯ ರೋಗದ ಖಾಯಲೆಯಿಂದ ಬಳಲುತಿದ್ದು ಮತ್ತು ಮೇಲಿಂದ ಮೇಲೆ ಹೊಟ್ಟೆ ನೋವು ಬರುತ್ತಿದ್ದು ಈ ಬಗ್ಗೆ ಧಾರವಾಡದ ರಾಮನಗೌಡ ಆಸ್ಪತ್ರೆ, ಜರ್ಮನ ಆಸ್ಪತ್ರೆ,ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರವನ್ನು ಮಾಡಿಸಿದರು ಸಹಿತಾ ಸದರಿಯವನಿಗೆ ಇದ್ದ ಕ್ಷಯ ರೋಗ ಮತ್ತು ಹೊಟ್ಟೆ ನೋವು ಕಡಿಮಿಯಾಗದ್ದರಿಂದ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆ ಹೊಂದಿ ದಿನಾಂಕ 22-12-2018 ರಂದು ಬೆಳಗಿನ 04-30 ಘಂಟೆಯ ಸುಮಾರಿಗೆ ಅಮ್ಮಿನಬಾವಿ ಗ್ರಾಮದ ಸಿಹಿನೀರಿನ ಬಾವಿಯಲ್ಲಿ ತನ್ನಷ್ಠಕ್ಕೆ ತಾನೆ ಬಿದ್ದು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಇರುತ್ತದೆ, ವಿನಃ ನನ್ನ ತಂದೆಯ ಮರಣದಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಮಗನು ಕೊಟ್ಟ ವರದಿಯನ್ನು ಸ್ವೀಕರಿಸಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Friday, December 21, 2018

CRIME INCIDENTS 21-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-12-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಯಮನೂರ ಗ್ರಾಮದ  ಆರೋಪಿತತಾದ ಫಕ್ಕಿರಪ್ಪಾ ತಳವಾರ ಈತನು ತನ್ನ ಮೋಟಾರ್ ಸೈಕಲ್ ನಂ ಕೆಎ-31/ಎಸ್-5657 ನೇದ್ದರಲ್ಲಿ ಹುಲಿಗೆಮ್ಮ ದೇವಸ್ಥಾನದಿಂದ ಮದುವೆ ಮುಗಿಸಿಕೊಂಡು ವಾಪಸ್ ನವಲಗುಂದ ಯಮನೂರ ಮಾರ್ಗವಾಗಿ  ಶಾನವಾಡ ಗ್ರಾಮಕ್ಕೆ ಹೋಗುವಾಗ ಯಮನೂರ ಬೆಣ್ಣಿ ಹಳ್ಳ ಬ್ರಿಡ್ಜ್ ಹತ್ತಿರ  ಮೋಟಾರ್ ಸೈಕಲನ್ನು ಅತೀ ಜೋರಿನಿಂದ ಅಲಕ್ಷತನದಿಂಧ ನಡೆಯಿಸಿಕೊಂಡು ನಿಯಂತ್ರಣ ಕಳೆದುಕೊಂಡು ಪೂಲ್ ಗೆ ಡಿಕ್ಕಿ ಮಾಡಿದ್ದಲ್ಲದೆ  ಹಿಂದೆ ಕುಳಿತ ಭೀಮಪ್ಪ  ನಾಗನ್ನವರ ಈತನಿಗೆ ಕೆಡವಿ ಬಾರಿ ಗಾಯಪಡಿಸಿ ತಾನು ಸಾದಾಗಾಯ ಹೊಂದಿದ್ದು ಕಿಮ್ಸ್ ಆಸ್ಪತ್ರೆಗೆ ಉಪಚಾರಕ್ಕೆ ದಾಖಲು ಮಾಡಿದ ಭೀಮಪ್ಪ ನಾಗನ್ನವರ ಈತನು ಈ ದಿವಸ ದಿನಾಂಕ: 21-12-2018 ರಂದು ಬೆಳಗಿನ 01-30 ಗಂಟೆಯ ಸುಮಾರಿಗೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 189/2018 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ಕಾಮಧೇನು ಕ್ರಾಸ್ ದರ್ಗಾ ಸಮೀಪ ರಸ್ತೆ ಹತ್ತಿರ ಆರೋಪಿತನಾದ ಮಾಹಾದೇವಪ್ಪ ತಂದೆ ಯಲ್ಲಪ್ಪ ಮೇಟಿ ಸಾ: ಮಡಕಿಹೊನ್ನಳ್ಳಿ ಈತನು ತನ್ನ ಮೊಟಾರ ಸೈಕಲ್ ನಂ KA31/Q360 ನೇದ್ದರ ಮೇಲೆ ಶಿವಲಿಂಗ ಕುಂಬಿಹಾಳ ಇತನಿಗೆ  ಕೂಡ್ರಿಸಿಕೊಂಡು ಮಡಕಿಹೊನ್ನಳ್ಳಿ ಕಡೆಯಿಂಡ ಮಿಶ್ರಿಕೋಟಿ ಕಡೆಗೆ ಅತಿಜೋರು ಅವಿಚಾರ ಅಲಕ್ಷ್2ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ಸ್ಕಿಡ್ ಮಾಡಿ ಕೆಡವಿ ಅಪಘಾತಪಡಿಸಿಕೊಂಡು ತಾನೇ ತಲೆಗೆ, ಬಲಗೈ ಮತ್ತು ಎಡಗೈಗೆ ಬಲವಾದ ಗಾಯಪಡಿಸಿಕೊಂಡು ಉಪಚಾರಕ್ಕೆ ಕಿಸ್ಮ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಿಸಿದಾಗ ಉಪಚಾರ ಪಲಿಸದೇ ದಿ:21-12-2018 ರಂದು 10-00 ಗಂಟೆಗೆ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 287/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ಗ್ರಾಮದ ವಡ್ಡಿನ ಹಳ್ಳದ ಹತ್ತಿರ ಆರೋಪಿತರಾದ ಮಲ್ಲಿಕಾಜುಱನ ಹುಣಕಲ್ಲ ಹಾಗೂ ಇನ್ನೂ 05 ಜನರು ಕೊಡಿಕೂಂಡು ಹುಣಸಿಗಿಡದ ಕೆಳಗೆ ಸಾರ್ವಜನಿಕ ಬಯಲು ಜಾಗೆಯಲ್ಲಿ ಇದರಲ್ಲಿಯ ಆರೋಪಿತರು ತಮ್ಮ ತಮ್ಮ ಫಾಯ್ದೇಗೋಸ್ಕ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸದರಿಯವರ ಒಟ್ಟು ರೋಖ ಹಣ 3200/- ರೂಪಾಯಿ ಹಾಗೂ 52 ಇಸ್ಟೀಟ್ ಎಲೆಗಳ ಸಹಿತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 322/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, December 20, 2018

CRIME INCIDENTS 20-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-12-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಪ್ಪ ತಂದೆ ಈರಪ್ಪ ಗುಳಗಣ್ಣವರ ಸಾ:  ಹುಲಕೊಪ್ಪ ಈತನು ಇವರು ಠಾಣೆಗೆ ಹಾಜರಾಗಿ ತನ್ನ ದೊಡ್ಡಪ್ಪನ ಮಗನಾದ ಮಲ್ಲಿಕಾರ್ಜುನ ತಂದೆ ನಿಂಗಪ್ಪ ಗುಳಗಣ್ಣವರ ವಯಾ 35 ಸಾ: ಹುಲಕೊಪ್ಪ ತಾಲೂಕ ಕಲಘಟಗಿ ಇವನು ಕೋಳಿ ಭಾಡಿಗೆ ಬಂದಿರುತ್ತದೆ ಅಂತಾ ಮನೆಯಲ್ಲಿ ತನ್ನ ಹೆಂಡತಿಗೆ ಹೇಳಿ ತನ್ನ ಬಾಬತ್ತ ಟಾಟಾ ಏಸ್ ಗಾಡಿ ನಂ:KA 25/ AA 1153 ತೆಗೆದುಕೊಂಡು ಹೋದವನು ಎಲ್ಲಿಯೊ ಹೋಗಿ ಕಾಣೆಯಾಗಿರುತ್ತಾನೆ ಆತನು ತೆಗೆದುಕೊಂಡು ಹೋದ ಟಾಟಾ ಏಸ್ ವಾಹನ ನಂ: KA 25/ AA 1153 ನೇದ್ದು ಕಾಣೆಯಾದವನ ಜಮೀನದ ರಸ್ತೆಯ ಪಕ್ಕದಲ್ಲಿ ನಿಂತಿದ್ದು ಹಾಗೂ ರಕ್ತ ಹತ್ತಿದೆ ಎನ್ನಲಾದ ಕಾಣೆಯಾದವನ ಹರಿದ ಅಂಗಿ ಮೋಬಾಯಿಲ ಫೋನ್, ವಾಹನದ ಚಾವಿ, ತನ್ನ ಹೊಲದಲ್ಲಿಯ ದಡ್ಡಿ ಮನೆಯಲ್ಲಿ ಇದ್ದ ಬಗ್ಗೆ ತಿಳಿಸಿದ್ದು ಮಲ್ಲಿಕಾರ್ಜುನ  ಈತನು ಈ ವರೆಗೆ ಮನೆಗೆ ಮರಳಿ ಬಾರದೆ ಎಲ್ಲಿಯೊ ಹೋಗಿ ಕಾಣೆಯಾಗಿದ್ದು  ಇರುತ್ತದೆ ಈ ಕುರಿತು ಕಲಘಟಗಿ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 286/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಶೆಲವಡಿ ರಸ್ತೆಯ ಹತ್ತಿರ -ನವಲಗುಂದ ಮಾರ್ಗವಾಗಿ ಶೆಲವಡಿಗೆ ಹೊರಟಾಗ ತನ್ನ ಮೋಟಾರು ಸೈಕಲ್ ನಂ.KA-25-EC-9273 ನೇದ್ದನ್ನು ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ಖನ್ನೂರ ಕೆನಾಲ ಮೇಲಿನಮನಿ ಇವರ ಹೊಲದ ಹತ್ತಿರ ತನ್ನ ಮೋಟಾರು ಸೈಕಲ್ಲಿನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ತಲೆಗೆ, ಕೈಕಾಲಿಗೆ ಬಾರಿ ಗಾಯ ಹೊಂದಿ ಇದರಲ್ಲಿ ಬಿದ್ದವನಿಗೆ ಶೆಲವಡಿ ಹಾಗೂ ನವಲಗುಂದ ಆಸ್ಪತ್ರೆಗೆ ಉಪಚಾರ ಮಾಡಿಸಿ ಅಲ್ಲಿಂದ ಕಿಮ್ಸ ಆಸ್ಪತ್ರೆಗೆ ದಾಖಲ ಮಾಡಿದಾಗ ಉಪಚಾರ ಫಲಿಸದೆ ಈ ದಿವಸ ದಿನಾಂಕ 20-12-2018 ರಂದು ಬೆಳಿಗ್ಗೆ 10-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 188/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹೆಬ್ಬಳ್ಳಿ ಗ್ರಾಮದ  ಮೃತ  ಅಂಜಲಿ ತಂದೆ ಅಶೋಕ ಸುಳ್ಳದ ವಯಾ 6 ವರ್ಷ ಜಾತಿ ಹಿಂದು ಕುರುಬರ ಉದ್ಯೋಗ ವಿದ್ಯಾರ್ಥಿ ಸಾ:ಹೆಬ್ಬಳ್ಳಿ ತಾ:ಧಾರವಾಡ ಇತಳು ದಿನಾಂಕ 02-12-2018 ರಂದು ಹೆಬ್ಬಳ್ಳಿ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಟವನ್ನು ಆಡುತ್ತಿರುವಾಗ ದೇವಸ್ಥಾನದಲ್ಲಿ ಹಚ್ಚಿ ಇಟ್ಟಿದ ಪಣತೆಯ ಮೇಲೆ ಬಿದ್ದು ಪಣತೆಯಲ್ಲಿನ ಬೆಂಕಿಯು ಅಂಜಲಿ ಹಾಕಿಕೊಂಡ ಬಟ್ಟೆಗೆ ಹತ್ತಿಕೊಂಡು ಮೈಕೈಗಳು ಸುಟ್ಟ ಘಾಯಗಳಾಗಿ ಉಪಚಾರಕ್ಕೆ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲೀಸದೆ ದಿನಾಂಕ 19-12-2018 ರಂದು ರಾತ್ರಿ 20,30 ಘಂಟೆಗೆ ಮೃತ ಪಟ್ಟಿದ್ದು ಇರುತ್ತದೆ, ವಿನಃ ನನ್ನ ಮಗಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ತಂದೆಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 50/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, December 19, 2018

CRIME INCIDENTS 19-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-12-2018 ರಂದು ವರದಿಯಾದ ಪ್ರಕರಣಗಳು
1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಚಮನ್ ಷಾವಲಿ ದರ್ಗಾ ರೋಡ ಹತ್ತಿರ ಆರೋಪಿತರಾದ 1] ಮಹ್ಮದಗೌಸ ತಂದೆ ಮಹ್ಮದ ಅಕ್ಬರ ಕಮ್ಮಾರ, ಸಾ ಃ ಹಳಿಯಾಳ ಪಿಷ್ ಮಾರ್ಕೇಟ 2] ಮಂಜುನಾಥ ದೇವಪ್ಪಾ ಕೇದಾರಿ ಸಾ ಃ ಮಂಡಿಹಾಳ 3] ಮಾಂತೇಶ ಫಕ್ಕೀರಪ್ಪಾ ಹುಲಕೊಪ್ಪ ಸಾ:ವರವ ನಾಗಲಾವಿ 4] ಪುನೀತ ಲಕ್ಷ್ಮಣ ಮಲ್ಲಿಗವಾಡ ಸಾ ಃ ಮಂಡಿಹಾಳ ಇವರುಗಳು ಲಾರಿಗಳಿಗೆ ಉಪಯೋಗಿಸಿದ ಒಟ್ಟು 14  ಟಾಯರಗಳು ಅಃಕಿಃ 1,25,000/- ರೂ ಕಿಮ್ಮತ್ತಿನವುಗಳನ್ನು ಒಂದು ಮಿನಿ ಅಶೋಕ ಲೈಲಂಡ ವಾಹನ ನಂ. ಕೆಎ-25/ಎಎ-4486 ಅಃಕಿಃ 3,00,000/- ರೂ  ನೇದ್ದರಲ್ಲಿ ಹಾಕಿಕೊಂಡು ಎಲ್ಲಿಂದಲೋ ಕಳವು ಮಾಡಿಕೊಂಡು ಟಾಯರಗಳನ್ನು ಮಾರಾಟ ಮಾಡಲು ಹೋಗುತ್ತಿರುವಾಗ ಟಾಯರ ಹಾಗೂ ವಾಹನದ ಬಗ್ಗೆ ಸರಿಯಾದ ವ ಸಮರ್ಪಕವಾದ ಮಾಹಿತಿ ಕೊಡದೇ ಅಳ್ನಾವರದ ಆಝಾದ ರಸ್ತೆಯಲ್ಲಿ ಇರುವ ಚಮನ್ ಷಾವಲಿ ದರ್ಗಾ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ರಾತ್ರಿ ಗಸ್ತು ಕರ್ತವ್ಯು ಮತ್ತು ವಾಹನಗಳನ್ನು ತಪಾಸಣೆ ಮಾಡುತ್ತಿರುವ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 119/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, December 18, 2018

CRIME INCIDENTS 18-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-12-2018 ರಂದು ವರದಿಯಾದ ಪ್ರಕರಣಗಳು

1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಯರಗುಪ್ಪಿ ಗ್ರಾಮದ   ಹಸಸಾಬ ಬೆಳಗಲಿ ಇತನಿಗೆ ಆರೋಪಿತರಾದ 1) ಮಿಸ್ಟರ್ ಗುಡ್ ಲಕ್, 2) ಶ್ರೀಮತಿ ಸೋನಿಯಾ ಶರ್ಮಾ, 3) ಸಂಜಯಕುಮಾರ, ಇವರು ಮೋಸ ಮಾಡುವ ಉದ್ದೇಶದಿಂದ ಪೋನ್ ಕರೆ ಮಾಡಿ, ನಿಮ್ಮ ಖಾತೆಗೆ ರೂ 1,91,37,000/- (ಒಂದು ಕೋಟಿ ತೊಂಬತ್ತೊಂದು ಲಕ್ಷ ಮೂವತ್ತೇಳು ಸಾವಿರ ರೂ) ಬಂದಿದೆ ಅದಕ್ಕೆ ನೀವು ಬೇರೆ ಬೇರೆ ರೀತಿಯಾಗಿ ಸರ್ವೀಸ ಚಾರ್ಜ, ಆನ್ ಲೈನ ಚಾರ್ಜ, ಕಸ್ಟಮ್ ಸರ್ವೀಸ ಚಾರ್ಜ, ಪಾಸವರ್ಡ ಚಾರ್ಜ, ಖಾತೆ ಅಪ್ ಗ್ರೇಡ ಚಾರ್ಜ, ವೆರಿಪಿಕೇಶನ್ ಚಾರ್ಜ ವಗೈರೆ ಪಿರ್ಯಾದಿಗೆ ನಂಬಿಕೆ ಬರುವಂತೆ ಹೇಳಿ ಪಿರ್ಯಾದಿಯನ್ನು ನಂಬಿಸಿ, ದಿನಾಂಕ: 28-08-2018 ರಿಂದ 07-12-2018 ವರೆಗೆ ಒಟ್ಟು ಅಂದಾಜು 35,00,000/-ರೂ ಗಳನ್ನು ಆನಲೈನ ಮುಖಾಂತರ ತಮ್ಮ ಹಾಗೂ ವಿವಿಧ ಅಕೌಂಟಗಳಿಗೆ ಹಣವನ್ನು ಹಾಕಿಸಿಕೊಂಡು ಪಿರ್ಯಾದಿಗೆ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 192/2018 ಕಲಂ INFORMATION TECHNOLOGY  ACT 2000 (U/s-66(C),66(D)); IPC 1860 (U/s-406,420,34) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದೇವಿಕೊಪ್ಪ ಗ್ರಾಮದಲ್ಲಿ ಆರೋಪಿರಾದ 1]ಸುಭಾಸ ಸುಣಗಾರ 2]ಮಹಾಬಳೇಶ್ವರ ದುಗ್ನಿಕೇರಿ 3]ಮಂಜುನಾಥ ದುಗ್ನಿಕೇರಿ ಇವರು ಕೂಡಿಕೊಂಡು ಪಿರ್ಯಾದಿದಾರಳ ತಂದೆ ಬಸಪ್ಪ ಯಲ್ಲಪ್ಪ ದುಗ್ನಿಕೇರಿ ಇವರು ದಿ..15-06-2016 ರಂದು ಮತ್ತು ಪಿರ್ಯಾದಿದಾರಳ ಅಣ್ಣ ನಿಂಗಪ್ಪ ಬಸಪ್ಪ ದುಗ್ನಿಕೇರಿ ಇವರು ತಿರಿಕೊಂಡ ನಂತರ ಅವರ ಆಸ್ತಿಯಲ್ಲಿ ವಾರಸಾ ಪ್ರಕಾರ ಪಿರ್ಯಾದಿದಾರಳ ಹೆಸರು ದಾಖಲಾಗಿದ್ದನ್ನು ಆರೋಪಿತರು ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಚೆನಮ್ಮ & ಮಾದೇವಿ ಇವರ ಪರವಾಗಿ ಬೇರೆಯವರಿಗೆ ಹಾಜರುಪಡಿಸಿ ಮೋಸತನದಿಂದ ಸತ್ತ ವ್ಯೆಕ್ತಿಗಳ ಜಾಗೆಯಲ್ಲಿ ಬೇರೆಯವರಿಗೆ ಹಾಜರುಪಡಿಸಿ ಪಿರ್ಯಾದಿಯ ಹೆಸರನ್ನು ಪಹಣಿ ಪತ್ರಿಕೆಯಿಂದಾ ಕಡಿಮೆಗೊಳಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 284/2018 ಕಲಂ 419.420.465.468.471.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಸಿಂಗನಹಳ್ಳಿ  ಕ್ರಾಸ ಹತ್ತಿರ ಕೆ.ಎಸ್.ಆರ.ಟಿ.ಸಿ.ಬಸ್ ನಂ.ಕೆ.ಎ25-ಎಫ್-2915 ನೇದ್ದರ ಚಾಲಕನು ತನ್ನ ಬಸ್ಸನ್ನು ಸಿಂಗನಹಳ್ಳಿ ಕ್ರಾಸ್ ಹತ್ತಿರ ಹೆದ್ದಾರಿ ರಸ್ತೆಯ ಮೇಲಿಂದಾ ಸಿಂಗನಹಳ್ಳಿ ಕಡೆಗೆ ಒಮ್ಮಲೆ ತಿರುಗಿಸಿಕೊಂಡು ಅತೀವೇಗವಾಗಿ ನಿಷ್ಕಾಳಜಿತನದಿಂದಾ ಚಲಾಯಿಸಿಕೊಂಡು ಬಂದು ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮಹೇಂದ್ರ ಬುಲೆರೋ  ಗೂಡ್ಸ ವಾಹನ ನಂ.ಕೆ.ಎ.25-ಎ.ಎ-2679 ನೇದ್ದಕ್ಕೆ ಅಪಘಾತಪಡಿಸಿ ಬಸ್ಸಿನಲ್ಲಿದ್ದ ಪಿರ್ಯಾದಿಗೆ ಭಾರಿ ಗಾಯಪಡಿಸಿ ಬುಲೆರೋ ವಾಹನದ ಚಾಲಕನಿಗೆ ಸಾದಾ ಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 197/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುನಾ ಬೆಂಗಳೂರ ರಸ್ತೆ ನರೇಂದ್ರ ಬ್ರಿಡ್ಜ ಹತ್ತಿರ ರಸ್ತೆ ಮೇಲೆ  ಮಾರುತಿ ಆಲ್ಟೊ ಕಾರ ನಂ ಕೆಎ 25 ಝಡ್ 5690 ನೇದ್ದರ ಚಾಲಕ ಶಶಾಂಕ ಸಣ್ಣಪ್ಪ ಮಣಕೂರ ಸಾಃಧಾರವಾಡ ಇವನು  ಕಾರನ್ನು ಬೆಲೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ  ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ಕಾರಿನ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಬದಿಯ ಗುಟದ ಕಲ್ಲಿಗೆ ಡಿಕ್ಕಿ ಮಾಡಿ ಕಾರು ಒಂದು ಸುತ್ತು ತಿರುಗಿ ವಂತೆ ಅಪಘಾತ ಮಾಡಿ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಹಾಗೂ ತನಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 289/2018 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
  
5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಮಂಜುನಾಥ ತಂದೆ ಕಲ್ಲಪ್ಪ ಜಿನ್ನೂರ ಸಾ..ತಾವರಗೇರಿ ತಂಗಿಯಾದ ಯಶೊಧ ತಂದೆ ಕಲ್ಲಪ್ಪ ಜಿನ್ನೂರ ವಯಾ 19 ವರ್ಷ ಸಾ..ತಾವರಗೇರಿ ತಾ..ಕಲಘಟಗಿ ಇವಳು  ಪಿರ್ಯಾದಿ ಮನೆಯಿಂದ ಯಾರಿಗೂ ಹೇಳದೆ ಕೇಳದೇ ಹೋದವಳು  ಈವರೆಗೂ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 285/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.Monday, December 17, 2018

CRIME INCIDENTS 17-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-12-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ದಾಸ್ತಿಕೊಪ್ಪ ಗ್ರಾಮದ  ರೇಣುಕಾ ಧೋತ್ರಿ ಇವರ ಮಗಳು ಇವಳು ಕಲಘಟಗಿಗೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಸಾಯಂಕಾಲ 6-00 ಗಂಟೆಯಾದರೂ ಮನೆಗೆ ವಾಪಸ್ ಬಾರದೇ ಅವಳಿಗೆ ಅದೇ ಗ್ರಾಮದ ಕಂಡಪ್ಪ ವಿಷ್ಣು ವಡ್ಡರ ಇವನು ಏನೋ ಆಸೆ ತೋರಿಸಿ ಪುಸಲಾಯಿಸಿ ಯಾವುದೋ ಕಾರಣಕ್ಕಾಗಿ ಎಲ್ಲಿಯೋ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಎಂದು ಫಿರ್ಯಾದಿ  ನೀಡಿದ್ದು ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2018 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕೊಟ್ಟಗುಣಿಸಿ ಗ್ರಾಮದ ಹತ್ತಿರ KSRTC BUS No- KA-42-F-1269 ನೇದ್ದರ ಚಾಲಕನಾದ ಅಶೋಕ ಭರಮಪ್ಪ ಪೂಜಾರ ಸಾಃ ಹಿರೆಮಲ್ಲಾಪೂರ, ತಾಃ ಲಕ್ಷ್ಮೇಶ್ವರ ಇವನು ತಾನು ನಡೆಸುತ್ತಿದ್ದ ಬಸ್ಸನ್ನು ಹುಬ್ಬಳ್ಳಿ ಕಡೆಯಿಂದ ಅತೀವೇಗ ವ ಅಜಾಗರೂಕತೆಯಿಂದ ನಡೆಸಿಕೊಂಡ ಹೋಗಿ ಕುಂದಗೋಳ ಕ್ರಾಸ್ ಹತ್ತಿರ ಇರುವ ಸರ್ವಿಸ್ ರಸ್ತೆಗೆ ಕೂಡವ ದಾರಿಯಲ್ಲಿ ಬಸ್ಸನ್ನು ಒಮ್ಮೇಲೆ ಕಟ್ ಮಾಡಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಮೋಟಾರ ಸೈಕಲ್ಲ ನಂ: KA-63-J-9409 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟಾರ ಸೈಕಲ್ಲ ಸವಾರನಾದ ರೇವಣಸಿದ್ದಪ್ಪ ಕಮಡೊಳ್ಳಿ ಸಾಃ ಅದರಗುಂಚಿ ಇವನಿಗೆ ಸಾದಾ ಮತ್ತು ಭಾರಿ ಘಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 319/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.ಗರಗ  ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ  ಮದ್ಯದಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಬೇಲೂರ ಕೈಗಾರಿಕಾ ಪ್ರದೇಶದ ಪ್ಲಾಟ ನಂಬರ 472 ರಲ್ಲಿ ಬಂದ ಇದ್ದ ಇಮಾತಾಜ ಇವರ ಡೈನಾಮಿಕ ಇಂಡಸ್ಟ್ರಿಜದ ಗೂಡೆಯ ಮೇಲೆ ಹಾಕಿದ ತಗಡಿನ ಶೀಟ ತೆಗೆದು ಒಳಗೆ ಹೋಗಿ ಅದರಲ್ಲಿ ಇದ್ದ 1) ಕೆಇಬಿಯ ಮೀಟರ ಬೋರ್ಡ ಅಃಕಿಃ 3500 ರೂ 2) 10 ಪೂಟಿನ ಕಬ್ಬಿಣದ 2 ಏಂಗ್ಲರಗಳು ಅಃಕಿಃ 1000 ರೂ 3) ಎರಡು ತಗಡಿನ ಶೀಟಗಳು ಅಃಕಿಃ 1000 ರೂ ಒಟ್ಟು 5500 ರೂ ಕಿಮ್ಮತ್ತಿನವುಗಳನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 196/2018 ಕಲಂ 380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುರಕಟ್ಟಿ ಗ್ರಾಮದ ಪೂಣಿಱಮಾ ಬಳಿಗಾರ ಇವರ ಮನೆಯ ಹತ್ತಿರ ಆರೋಪಿತನಾದ ಕಲ್ಲಪ್ಪ ತಂದೆ ನಾಗಪ್ಪ ಬಳಿಗೇರ ಸಾ|| ಮುರಕಟ್ಟಿ ತಾ||ಜಿ|| ದಾರವಾಡ ಅವನು ತನ್ನ ಮನೆಯಲ್ಲಿ ಸೆಗಣೀ ಬಳಿಯುವಾಗ ಎಕಾ ಎಕಿ ಬಂದು ಪಿರ್ಯಾದಿಗೆ ಸಿರೆ ಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಗುನ್ನಾನಂ 118/2018 ಕಲಂ 354.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, December 16, 2018

CRIME INCIDENTS 16-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-12-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ಮೇಲೆ ದ್ಯಾವನೂರ ಕ್ರಾಸ ಹತ್ತಿರ  ಆರೋಪಿತರಾದ ವೀರಭದ್ರಯ್ಯ ಮಠಪತಿ ಹಾಗೂ ಇನ್ನೂ 04 ಜನರು 1) ಮಹಿಂದ್ರಾ ಭೂಮಿಪುತ್ರ ಟ್ರ್ಯಾಕ್ಟರ ಇಂಜಿನ್ / ಚೆಸ್ಸಿ ನಂ ZFBX00683 ಹಾಗೂ ಟ್ರೇಲರ ಚೆಸ್ಸಿ ನಂ 544 ರಲ್ಲಿ ಮತ್ತು 2) ಮಹಿಂದ್ರಾ ಭೂಮಿಪುತ್ರ ಟ್ರ್ಯಾಕ್ಟರ ಇಂಜಿನ್ / ಚೆಸ್ಸಿ ನಂ NHZB00208 ಹಾಗೂ ಟ್ರೇಲರ ನಂಬರ ಇರದೇ ಇದ್ದುದರಲ್ಲಿ ಕುಂದಗೋಳ ತಾಲೂಕ ಬಾಗವಾಡ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಲೋಡ ಮಾಡಿಕೊಂಡು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಹುಬ್ಬಳ್ಳಿಗೆ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ191/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, December 15, 2018

CRIME INCIDENTS 15-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-12-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ..19-06-1999 ರಂದು ಕಲಘಟಗಿ ಹಿರಿಯ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಆರೋಪಿ ಬಸಪ್ಪ ಬೈರಿಕೊಪ್ಪ, ವೀರುಪಾಕ್ಷಪ್ಪ ಬೈರಿಕೊಪ್ಪ, ಸಂಗಪ್ಪ ಬೈರಿಕೊಪ್ಪ ಇವರು ಆರೋಪಿ ಹಿರಿಯ ಉಪನೊಂದಣಾಧಿಕಾರಿ ಜೊತೆ ಸಂಗನಮತ ಮಾಡಿಕೊಂಡು ಖೊಟ್ಟಿ ಖರಿದಿ ಕಾಗದ ಪತ್ರವನ್ನು ಸೃಷ್ಠಿಸಿ ಪಿರ್ಯಾಧಿ ಬಾಭತ್ ರಾಮನಾಳ ತಾಲೂಕಿನ ಆಸ್ತಿ ನಂ 2/6 ಕ್ಷೇತ್ರ 3 ಎಕರೆ 22 ಗುಂಟೆ ನೇದ್ದನ್ನು ಅಬ್ದುಲ್ ಖಾದರ ತಂದೆ ಪೀರಸಾಬ ಮೂನೋಳಿ ಎಂಬುವನಿಗೆ ಮಾರಾಟ ಮಾಡಿದ್ದಲ್ಲದೆ, ಆರೋಪಿರೆಲ್ಲೂ ಜೊತೆಗೂಡಿ ಪಿರ್ಯಾಧಿ ವಿಪಿಸಿ ನಂ 242 ನೇದ್ದನ್ನು ಆರೋಪಿ ನಂ 4 ನೇದವನಿಗೆ ಖೊಟ್ಟಿ ಖರಿದಿ ದಸ್ತಾವೇಜು ಮಾಡಿ 2014 ರಲ್ಲಿ ಖರಿದಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 281/2018 ಕಲಂ 408.420.425.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಬಕದಹೊನ್ನಳ್ಳಿ ಗ್ರಾಮದ ಪಿರ್ಯಾದಿ ಸುಮಿತ್ರಾ ಕರಡಿಕೊಪ್ಪ ಇವರ ಬಾಭತ್ ಜಾಗೆ ಸರ್ವೆ ನಂ 02/02 ಅ1 ಕ್ಷೇತ್ರ 11 ಗುಂಟೆ ನೇದ್ದರಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ಸದರ ಜಾಗೆಯಲ್ಲಿ ಗುಡಿಸಲು ಕಟ್ಟಲು ಅಂತಾ ಗೂಟಗಳನ್ನು ಹಾಕುವ ಕಾಲಕ್ಕೆ ನಮ್ಮ ಜಾಗೆಯಲ್ಲಿ ಯಾಕೆ ಗುಡಿಸಲು ಹಾಕುತ್ತಿರಾ ಅಂತಾ ಕೇಳಲು ಬಂದ ಪಿರ್ಯಾಧಿಗೆ ಲೇ ಅವಾಚ್ಯ ಬೈದಾಡಿ ನಿಮ್ಮ ಜಾಗೆ ನಾವು ಈ ಜಾಗಾದಾಗ ಗುಡಿಸಲು ಹಾಕುವವರೆ ಏನ ಮಾಡಕೋತಿರೋ ಮಾಡಕೋರಿ ಅಂತಾ ಬೈದಾಡುತ್ತಾ ಪಿರ್ಯಾಧಿಗೆ ಹಾಗು ಪಿರ್ಯಾಧಿಯ ಗಂಡನಿಗೆ ಕೈಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀ್ಸ್ ಠಾಣೆಯಲ್ಲಿ ಗುನ್ನಾನಂ 282/2018 ಕಲಂ 143.147.323.447.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ತಡಕೋಡ ಗ್ರಾಮದ ಹೊರಕೇರಿ ಓಣಿ ಬಸವಣ್ಣದೇವರ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ ಯಲ್ಲಪ್ಪ ಮುದಕಪ್ಪ ಮೊದಣ್ಣವರ ಸಾಃ ತಡಕೋಡ ಇತನು ಕುಳಿತುಕೊಂಡು ತನ್ನ  ಸ್ವಂತ ಪಾಯ್ದೇಗೂಸ್ಕರ ಅಂಕಿ ಸಂಖ್ಯೆಗಳ ಆದಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ  ಸಾರ್ವಜನಿಕರಿಂದಾ ಹಣ ಪಡೆದು ಓ,ಸಿ ಚೀಟಿ ಬರೆದುಕೂಡುತ್ತಾ ಓ,ಸಿ ಜೂಜಾಟದಲ್ಲಿ ತೊಡಗಿದ್ದಾಗ ಸಿಕ್ಕಿದ್ದು ಅವನಿಂದ ರೂ 750-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 195/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಬ್ಯಾಹಟ್ಟಿ ರಸ್ತೆಯ ಹತ್ತಿರ, ಆರೋಪಿತ ಬಸನಗೌಡ ತಂದೆ ಸಂಗನಗೌಡ ಪಾಟೀಲ್ ಸಾಃ ಚಿಕ್ಕ ಉಳ್ಳಿಗೇರಿ, ತಾಃ ಸವದತ್ತಿ. ಇವನು ತಾನು ನಡೆಸುತ್ತಿದ್ದ ಟಾಟಾ ಮೋಟಾರ್ಸ ಇವರ ಹೊಸ ಬಸ್ ನಂಬರಃ KA-51-TS-008999 ನೇದ್ದನ್ನು ಬ್ಯಾಹಟ್ಟಿ -ನರಗುಂದ ರಸ್ತೆಯ ಮೇಲೆ, ಬ್ಯಾಹಟ್ಟಿಯಿಂದ ಮೂರು ಕಿ,ಮೀ. ಅಂತರದಲ್ಲಿ , ಗಾಡಿಯನ್ನು ಅತೀವೇಗ ವ ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗಿ , ಗಾಡಿಯ ಮೇಲಿನ ನಿಯಂತ್ರಣ ಕಳೆದುಕೊಂಡು , ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 318/2018 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Thursday, December 13, 2018

CRIME INCIDENTS 13-12-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-12-2018 ರಂದು ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಡಹಾಳ ಗ್ರಾಮದ ಆರೋಪಿ ರಿಯಾಜ ಸೈದುಸಾಬ ಜಿದ್ದಿಮನಿ ವಯಾ:24 ವರ್ಷ ಸಾ:ಯಾದವಾಡ ತಾ:ಗೋಕಾಕ ಈತನು ಪರಶು @ ಅರುಣ ತಂದೆ ಪ್ರಕಾಶ ಮಾದರ ಈತನ ಮೋಟಾರು ಸೈಕಲ್ ನಂ.ಕೆಎ-49/ಡಬ್ಲೂ-2959 ನೇದ್ದನ್ನು ತೆಗೆದುಕೊಂಡು ನವಲಗುಂದ-ನರಗುಂದ ಮಾರ್ಗವಾಗಿ ತಡಹಾಳ ಗ್ರಾಮದ ಕಡೆಗೆ ಹೋಗುವಾಗ ತಡಹಾಳ ಗ್ರಾಮದ ಹದ್ದಿ ಪೈಕಿ ತಡಹಾಳ ಗ್ರಾಮದ ಕೆರೆಯ ಹತ್ತಿರ ಅತೀ ವೇಗವಾಗಿ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿ ಕರವಿಂಗ ನಿಯಂತ್ರಣ ಕಳೆದುಕೊಂಡು ತನ್ನ ಮೋಟಾರು ಸೈಕಲ್ ಅಪಘಾತಪಡಿಸಿ ತಾನೂ ಹಾಗೂ ಹಿಂದೆ ಕುಳಿತ ಪರಶು @ ಅರುಣ ತಂದೆ ಪ್ರಕಾಶ ಮಾದರನಿಗೂ ಭಾರಿ ಗಾಯ ಆಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ನವಗಲುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 187/2018 ಕಲಂ 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲೂಕಿನ ಮುಕ್ಕಲ ಗ್ರಾ,ಮದ ಅಜುಱನ ಯಲ್ಲಾರಿ ಇವರ ವಾಸದ ಮನೆಯಲ್ಲಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲದ ಅಗಳಿ ತೆಗೆದುಕೊಂಡು ಒಳಗಡೆ ಬಂದು ಮನೆಯ ಒಳಗಡೆ ಕೊಣೆಯಲ್ಲಿ ಇಟ್ಟ ಟ್ರೆಜರಿಯ ಬಾಗಿಲು ಮುರಿದು ಅದರಲ್ಲಿದ್ದ ರೋಖ ಹಣ 1.70.000/-ರೂಗಳು ಮತ್ತು 07 ಗ್ರಾಂ ತೂಕದ ಬಂಗಾರದ ಆಭರಣ ಅಕಿ: 21.000/-ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279/2018 ಕಲಂ 380.457.ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣಪ  ಪೊಲೀಸ ಠಾಣಾ ವ್ಯಾಪ್ತಿಯ:, ಶಿರಗುಪ್ಪಿ ಗ್ರಾಮದ ದೇವೇಂದ್ರಪ್ಪಾ ಇವರ  ಮನೆಯ ಮುಂದೆ, ಆರೋಪಿತರಾದ 1] ರವಿ ಅಶೋಕ ಗುಗ್ಗರಿ ಸಾ. ಕಲಘಟಗಿ 2] ಅಶೋಕ ಧರ್ಮಪ್ಪ ಗುಗ್ಗರಿ ಸಾ. ಶಿರಗುಪ್ಪಿ 3] ತಾರಾಮತಿ ಕೋಂ ಅಶೋಕ ಗುಗ್ಗರಿ ಸಾ. ಶಿರಗುಪ್ಪಿ 4] ಲಲಿತಾ ಕೋಂ ಸುಭಾಶ ಪಾಯಪ್ಪನವರ ಸಾ. ಕಲಘಟಗಿ 5] ಶಾಂತರಾಜ ನಾಗರಾಜ ಪಾಯಪ್ಪನವರ ಸಾ. ಕಲಘಟಗಿ 6] ಸುಭಾಶ ಶಾಂತರಾಜ ಪಾಯಪ್ಪನವರ ಸಾ. ಕಲಘಟಗಿ 7] ಜಗನ್ನಾಥ ವಾಸುದೇವ ಕುಲಕರ್ಣಿ ಸಾ. ಶಿರಗುಪ್ಪಿ 8] ಜಯಪಾಲ ಗಂಗಪ್ಪ ಕಣವಿ ಸಾ. ಶಿರಗುಪ್ಪಿ 9] ಶಾಂತಪ್ಪ ಗಂಗಪ್ಪ ಕಣವಿ ಸಾ. ಶಿರಗುಪ್ಪಿ 10] ಮಹಾವೀರ ಲ. ಪಾಟೀಲ ಸಾ. ಶಿರಗುಪ್ಪಿ ಇವರುಗಳು ತಮ್ಮ ಸಮಾನ ಉದ್ದೇಶ ಸಾಧಿಸುವ ಸಲುವಾಗಿ ಒಳಸಂಚು ಮಾಡಿ, ಪಿರ್ಯಾದಿ ದೇವಿಂದ್ರಪ್ಪ ಧರ್ಮಪ್ಪ ಗುಗ್ಗರಿ ಸಾ. ಶಿರಗುಪ್ಪಿ ಇವರಿಗೆ ತೀವ್ರತರ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 316/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ: ನಾಗರಹಳ್ಳಿ ಗ್ರಾಮದ ನಾಗಪ್ಪ ಚನ್ನಪ್ಪ ಅಲ್ಲಾಪೂರ ಇವರ ಖುಲ್ಲಾ ಜಾಗೆಯಲ್ಲಿ, ಕಟ್ಟಿದ್ದ ನಾಗೇಶ ಹುಚ್ಚಪ್ಪಣವರ ಇವರ 1] ಒಂದು ಹೋತ ಬಿಳಿ ಬಣ್ಣದ್ದು 2 ವರ್ಷದ್ದು ಅ.ಕಿ. 4000/- ರೂ. 2] ಒಂದು ಹೋತ ಕೆಂದ ಬಣ್ಣದ್ದು 3 ವರ್ಷದ್ದು ಅ.ಕಿ. 5000/- ರೂ. 3] ಒಂದು ಆಡು ಕೆಂದ ಬಣ್ಣದ್ದು 2 ವರ್ಷದ್ದು ಅ.ಕಿ. 3000/- ರೂ. 4] ಒಂದು ಆಡು ಕಪ್ಪು ಬಣ್ಣದ್ದು 4 ವರ್ಷದ್ದು ಅ.ಕಿ. 4000/- ರೂ. 5] ಒಂದು ಆಡು ಬಿಳಿ ಬಣ್ಣದ್ದು 3 ವರ್ಷದ್ದು ಅ.ಕಿ. 3000/- ರೂ. 6] ಒಂದು ಆಡು ಕಪ್ಪು ಬಣ್ಣದ್ದು 3 ವರ್ಷದ್ದು ಅ.ಕಿ. 3000/- ರೂ. ಅದರಂತೆ ಒಟ್ಟು 2 ಹೋತ 4 ಆಡುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 317/2018 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


5.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದಿಂದ ಗುಡಗೇರಿ ಕಡೆಗೆ ಹೋಗುವ ರಸ್ತೆಯ ಬದಿಗೆ ಇರುವ ಸರ್ವೇ ನಂ 637/3 ನೇ ಜಮೀನದಲ್ಲಿ ಯಾರೋ ಅನಾಮಧೇಯ 35 ರಿಂ 40 ವರ್ಷದ ವಯಸ್ಸಿನ ಗಂಡಸ್ಸು ಯಾವುದೋ ಕಾರಣದಿಂದ ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ಸಂಶಯ ಇದ್ದು, ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 43/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.