ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, September 16, 2019

CRIME INCIDENTS 16-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-09-2019 ರಂದು ವರದಿಯಾದ ಪ್ರಕರಣಗಳು
1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:16/09/2019 13:15:00 ಮುಗದ ಗ್ರಾಮದ  ಆರೋಪಿತನಾದ ವಿನೋದ ತಂದೆ ಸುಂಕಪ್ಪ ಯರಗುಂಟಿ ವಯಾ 30 ವರ್ಷ ಜಾತಿ ಹಿಂದೂ ಮಾದರ  ಉದ್ಯೋಗಃ ಗೌಂಡಿ ಕೆಲಸ ಸಾ:ಬಂಕಾಪುರ ಚೌಕ ಹುಬ್ಬಳ್ಳಿ ಹಾಲಿ: ಮುಗದ ಭೋವಿ ಓಣಿ ಜಿಲ್ಲಾ.ಧಾರವಾಡ ಈತನು ದಿನಾಂಕ 16-09-2019 ರಂದು 11-45 ಗಂಟೆಗೆ ಮುಗದ  ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಬಳಿಗೆ ಯಾವುದೇ ಪಾಸ್ ಹಾಗು ಪರ್ಮಿಟನ್ನು ಹೊಂದದೇ ಅಕ್ರಮವಾಗಿ  ಒಟ್ಟು 40 ಹೈವರಡ್ಸ ಚೀಯರ್ಸ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  3 ಲೀಟರ 600 ಮೀಲಿ)  ಅ:ಕಿ: 1212 /- ರೂ ರೂ ನೇದ್ದವುಗಳನ್ನು ಅಕ್ರಮವಾಗಿ ತನ್ನ ಫಾಯದೇಗೋಸ್ಕರ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಧಾರವಾಡ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:16-09-2019 ರಂದು ಮುಳಮುತ್ತಲ ಗ್ರಾಮದ ಮೃತ ಬಸಯ್ಯ ರುದ್ರಯ್ಯ ಹಳ್ಳಿಗೇರಿಮಠ ವಯಾ 65 ವರ್ಷ ಸಾ;ಮುಳಮುತ್ತಲ  ಇತನು 4-5 ವರ್ಷಗಳ ಹಿಂದೆ ನರೇಂದ್ರ ಸಿಂಡಿಕೆಟ್ ಬ್ಯಾಂಕಿನಲ್ಲಿ ಫಾರ್ಮಹೌಸ್ಗೆ ಅಂತಾ 4 ಲಕ್ಷ ಸಾಲ ಪಡೆದಿದ್ದು ಮತ್ತು  ಕೃಷಿ ಸಾಲ ಮಾಡಿದ್ದು ಸಾಲ ಹೇಗೆ ತಿರಿಸುವುದು ಅಂತಾ ಮನಃನೊಂದು  ದಿನಾಂಕ;16/09/2019 ರಂದು ಮುಂಜಾನೆ 07 ಗಂಟೆಯಿಂದ 08-30 ರ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ಕೀಟ ನಾಶಕ ಎಣ್ಣೆಯನ್ನು ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡಿದ್ದು ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ವಗೈರಿ ಸಂಶಯವಿರುವುದಿಲ್ಲ ಅಂತಾ ವರದಿಗಾರ ಮೃತನ ಮಗ ತನ್ನ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 33/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

Sunday, September 15, 2019

CRIME INCIDENTS 15-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-09-2019 ರಂದು ವರದಿಯಾದ ಪ್ರಕರಣಗಳು
1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ  ಮೃತ  ನಿಂಗಪ್ಪ ತಂದೆ ದೇವೇಂದ್ರಪ್ಪ ಮಡಿವಾಳರ ವಯಾ 60 ವರ್ಷ ಜಾತಿ ಹಿಂದು ಮಡಿವಾಳರ ಉದ್ಯೋಗ ಶೇತ್ಕಿ ಕೆಲಸ ಸಾ:ಜಾವೂರ ಇತನು ತನ್ನ ಹೆಸರಿನಲ್ಲಿ ಕಳೆದ 03 ವರ್ಷಗಳ ಹಿಂದೆ ಕೆ ವಿ ಜಿ ಬ್ಯಾಂಕ್ ಅಳಗವಾಡಿಯಲ್ಲಿ 20,000/- ರೂಪಾಯಿಗಳ ಸಾಲವನ್ನು ಮತ್ತು ತನ್ನ ಹೆಂಡತಿ ಸರೋಜಾ ಇವಳ ಹೆಸರಿನಲ್ಲಿ ಕೆ ಸಿ ಸಿ ಬ್ಯಾಂಕ್ ಅಳಗವಾಡಿಯಲ್ಲಿ ಕಳೆದ 2 ವರ್ಷಗಳ ಹಿಂದೆ 45,000/- ರೂಪಾಯಿಗಳ ಸಾಲವನ್ನು, ಧರ್ಮಸ್ಥಳ ಮಹಿಳಾ ಸಂಘ ಜಾವೂರದಲ್ಲಿ 35,000/- ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದು, ಧಾರವಾಡ ಧನಲಕ್ಷ್ಮೀ ಮಹಿಳಾ  ಸಂಘದಲ್ಲಿ ಕಳೆದ 3 ವರ್ಷಗಳ ಹಿಂದೆ 45,000/- ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದು, ಚೈತನ್ಯೆ ಮಹಿಳಾ ಸಂಘ ನವಲಗುಂದದಲ್ಲಿ 25,000/- ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದು,ಸದರ ಹಣದಿಂದ ಕೃಷಿ ಸಾಗುವಳಿಯನ್ನು ಮಾಡಿದ್ದು ಸರಿಯಾಗಿ ಬೆಳೆ ಬಾರದ್ದರಿಂದ ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 15-09-2019 ರಂದು ಬೆಳಿಗ್ಗೆ 06,00 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಠಕ್ಕೆ ತಾನೆ ಇಲಿ ಪಾಶಾನವನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ನವಲಗುಂದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆದಲ್ಲಿ ಮೃತ ಪಟ್ಟಿದ್ದು ಇರುತ್ತದೆ, ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 40/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, September 13, 2019

CRIME INCIDENTS 13-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-09-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-13-09-2019 ರಂದು 11:00 ಶ್ರೀಮತಿ  ಮುನಿರಾ ಇವರು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಈ ದಿನ ಬೆಳಗ್ಗೆ 07:00 ಗಂಟೆಯ ಸುಮಾರಿಗೆ ಮಾಡಿದ ಆರೋಪಿತರಾದ ಇಸ್ಮಾಯಿಲ್ ಹಾಗೂ ಇನ್ನೂ 03 ಜನರು ಕೊಡಿಕೊಂಡು  ಮೊಮ್ಮಕ್ಕಳ ಹತ್ತಿರ ಪಟಾಕಿಯನ್ನು ಕಿತ್ತುಕೊಂಡಿದ್ದು ಅದನ್ನು ಪಿರ್ಯಾದಿದಾರರು ಕೇಳಲು ಹೋದಾಗ ಇಸ್ಮಾಯಿಲ್ ನು ಕಲ್ಲಿನಿಂದ ಮತ್ತು ಇನ್ನುಳಿದ ಆರೋಪಿತರು ತಮ್ಮ ಕೈಕಾಲುಗಳಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 113/2019 ಕಲಂ 504.323.324.504.34 ಐಪಿಸಿ ನೇದ್ದರಲ್ಲಿಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹರ್ಲಾಪೂರ ಗ್ರಾಮದ  ಮೃತಳಾದ ರೇಣವ್ವ ಕೋಂ ರಾಮಣ್ಣ ಸೂರಣಗಿ ವಯಾ:45 ವರ್ಷ ಈತಳು ದಿನಾಂಕ 14-08-2019 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಹರ್ಲಾಪೂರ ಗ್ರಾಮದ ತನ್ನ ವಾಸದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮೀಕವಾಗಿ ಮನೆ ಮುಂಚಿನ ಬಾಗಿಲು ಹೊಸ್ತಿಲಕ್ಕೆ ಕಾಲು ಬಡಿದು ಎಡವಿ ಬಿದ್ದು ಕೈಗೆ ಹಾಗೂ ತಲೆಯ ಹಿಂದೆಲೆಗೆ ಪೆಟ್ಟಾಗಿದ್ದು ಉಪಚಾರಕ್ಕೆ ಅಂತಾ 108 ಆಂಬ್ಯೂಲೆನ್ಸ್ ದಲ್ಲಿ ತೆಗೆದುಕೊಂಡು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಯ ವೈದ್ಯರು ಉಪಚರಿಸಿ  ಹೆಚ್ಚಿನ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೋಗಲು ತಿಳಿಸಿದ್ದರಿಂದ ದಿನಾಂಕ 15-08-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ 108 ಆಂಬ್ಯೂಲೆನ್ಸ್ ದಲ್ಲಿ ತೆಗೆದುಕೊಂಡು ಬಂದು ದಾಖಲಿಸಿದ್ದು ಅಲ್ಲಿ ಉಪಚಾರ ಪಡೆಯುತ್ತಿದ್ದಾಗ ಈ ದಿವಸ ದಿನಾಂಕ 13-09-2019 ರಂದು ಬೆಳಗಿನ 1-15 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅದೆ ಸದರಿ ನನ್ನ ಅಣ್ನನ ಮಗಳ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ವರದಿಯನ್ನು ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, September 12, 2019

CRIME INCIDENTS 12-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-09-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 11-09-2019 ರಂದು ಸಾಯಂಕಾಲ 17-15 ಗಂಟೆಗೆ ಡೋರಿ ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಆರೋಪಿತರಾದ 1) ಅಶೋಕ ತಂದೆ ಈರಪ್ಪ ಹರಿಜನ. 2) ರವಿ ತಂದೆ ಗಡಿಯಪ್ಪ ಹರಿಜನ 3) ಸಂಜು ತಂದೆ ಯಲ್ಲಪ್ಪ ಕದಂ, 4) ಸಿಂದಭಾದ ತಂದೆ ದಾದಾಪೀರ ಹಳಿಯಾಳ ಎಲ್ಲರು  ಸಾ|| ಡೊರಿ  ತಾ|| ಅಳ್ನಾವರ ಜಿ|| ಧಾರವಾಡ ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್ - ಬಾಹರ್ '' ಎಂಬ ಜೂಜಾಟ ಆಡುತ್ತಿದ್ದಾಗ  ಸಿಕ್ಕಿದ್ದು ಅವರಿಂದ  ರೂ 1.310-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 78/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

2.  ಧಾರವಾಡ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ನರೇಂದ್ರ ಗ್ರಾಮದ ಮೃತನಾದ ಶಂಕರ ತಂದೆ ಭೀಮಪ್ಪ ಬೆವನೂರು ವಯಾ-35 ವರ್ಷ ಜಾತಿ-ಹಿಂದೂ ಲಿಂಗಾಯತ ಉದ್ಯೋಗ-ಕೂಲಿ ಕೆಲಸ ಸಾ: ನದಿ ಇಂಗಳಗಾಂವ ತಾ: ಅಥಣಿ ಜಿ: ಬೆಳಗಾವಿ ಈತನು ಸರಾಯಿ ಕುಡಿಯುವ ಚಟದವನಿದ್ದು ದಿನಾಂಕ 30-08-2019 ರಂದು ನರೇಂದ್ರ ಗ್ರಾಮ ಹದ್ದಿಯ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಪೇರಲ ತೋಟಕ್ಕೆ ಕೀಟನಾಶಕ ಎಣ್ಣೆಯನ್ನು ಹೊಡೆದಿದ್ದು ಸದರ ಕೀಟನಾಶಕ ಎಣ್ಣೆಯು ಗಾಳಿಯ ಮುಖಾಂತರ ಮೃತನ ದೇಹಕ್ಕೆ ಸೇರಿ ಅಸ್ವಸ್ಥನಾಗಿದ್ದು ಅಲ್ಲದೇ  ಸಾಯಂಕಾಲ ಕೆಲಸ ಮುಗಿಸಿ ಕೀಟನಾಶಕ ಹೊಡೆದ ಕೈಯಿಂದ ನೀರಲ್ಲಿ ಕೈ ತೊಳೆದುಕೊಂಡು ಅದೇ ನೀರನ್ನು ಬಳಸಿ ಸಾರಾಯಿಗೆ ಹಾಕಿಕೊಂಡು ಕುಡಿದು ಅಸ್ವಸ್ಥನಾಗಿ ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾದಾಗ ನಿನ್ನಿಯ ದಿವಸ ದಿನಾಂಕ 11-09-2019 ರಂದು ರಾತ್ರಿ 21-00 ಗಂಟೆಗೆ ಮೃತನಾಗಿದ್ದು ಇರುತ್ತದೆ. ವಿನಃ ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 47/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

Wednesday, September 11, 2019

CRIME INCIDENTS 11-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-09-2019 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬಳ್ಳೂರ ಗ್ರಾಮದ  ಆರೋಪಿತನಾದ ಶಿವಾನಂದ ತಂದೆ ಹೂವಪ್ಪ ಚುಂಚನೂರ ವಯಾ 35 ವರ್ಷ ಜಾತಿ ಹಿಂದು ಕ್ಷೇತ್ರೀಯ ಉದ್ಯೋಗ ಕೂಲಿ ಕೆಲಸ ಸಾ:ಬಳ್ಳೂರ ಇತನು ದಿನಾಂಕ 11-09-2019 ರಂದು 13-00 ಗಂಟೆಯ ಸುಮಾರಿಗೆ ಬಳ್ಳೂರ ಗ್ರಾಮದ ಬಸ್ಡಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ಬಿಳಿ ಗೊಬ್ಬರ ಚೀಲದಲ್ಲಿ ಒಟ್ಟು 36 ಹೈವರ್ಡ್ಸ ವಿಸ್ಕೀ ತುಂಬಿದ 90 ಎಮ್ ಎಲ್ ಅಳತೆಯ ಮದ್ಯೆದ ಟೆಟ್ರಾ ಪಾಕೀಟಗಳನ್ನು ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಮಾರಾಟ ಮಾಡುತ್ತಿದ್ದು ಅವನಿಂದ ಅಕಿ:1091/ಮೌಲ್ಯದ ಮಧ್ಯೆವನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 118/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 11/09/2019 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಹುಬ್ಬಳ್ಳಿ-ನವಲಗುಂದ ರಸ್ತೆಯ ಮೇಲೆ, ಕಿರೇಸೂರ ಹದ್ದಿಯ ಸಿದ್ದಪ್ಪ ಬಡಿಗೇರಿ ಸಾಃ ಕಿರೇಸೂರ ಇವರ ಹೋಲದ ಹತ್ತಿರ, KSRTC ಬಸ್ ನಂಃ KA-29-F-1475 ನೇದ್ದರ ಚಾಲಕನಾದ ಪಾಂಡಪ್ಪ ಶ್ಯಾಸಪ್ಪ ತಳವಾರ ಸಾಃ ಮುಡಪಲಜೀವಿ. ತಾಃಜಿಃ ಬಾಗಲಕೋಟ ಇವನು ತಾನು ನಡೆಸುತ್ತಿದ್ದ ಬಸ್ಸನ್ನು ಹೆಬಸೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀಜೋರಿನಿಂದ ಅಜಾಗರೂಕತೆಯಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಇದರಲ್ಲಿಯ ಮೃತ ಗುರುಸಿದ್ದಪ್ಪ ನಿಂಗಪ್ಪ ಹರ್ತಿ ವಯಾಃ 52 ವರ್ಷ. ಸಾಃ ಹೆಬಸೂರ ಇವನು ಹೆಬಸೂರ ಕಡೆಯಿಂದ ಕುಸುಗಲ್ಲ ಕಡೆಗೆ ನಡೆಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ನಂಃ KA-35-Y-2717 ನೇದ್ದನ್ನು ಓವರ್ ಟೇಕ್ ಮಾಡಲು ಹೋಗಿ , ಮೋಟಾರ ಸೈಕಲ್ಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸದರಿ ಮೋಟಾರ ಸೈಕಲ್ಲ ಸವಾರನ ತಲೆಯ ಮೇಲೆ ಬಸ್ಸಿನ ಹಿಂದಿನ ಗಾಲಿಯನ್ನು ಹಾಯಿಸಿ ಇವನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.