ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, January 17, 2019

CRIME INCIDENTS 17-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-01-2019 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಹಾರೋಬೆಳವಡಿ ಗ್ರಾಮದ ಹತ್ತಿರ ಇರುವ ನಾಗಪ್ಪನ ಹಳ್ಳದ ಹತ್ತಿರ ರಸ್ತೆ ಮೇಲೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ  ಮೋಟರ್ ಸೈಕಲ ನಂ KA-25-EU-3501 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ್ ಸೈಕಲ ಚಾಲಕ ವೀನಿತ ತಂದೆ ಶಿವಮೂತ್ರಿ ಮುತ್ತಗಿ ವಯಾ-30 ವರ್ಷ ಸಾ: ಅಳ್ನಾವರ ಹಾಗೂ ಹಿಂಬದಿ ಸವಾರ ಭೀಮರಾಯಪ್ಪ ತಂದೆ ತಿರಕಪ್ಪ ಹೊಂಗಲ ವಯಾ-50 ಸಾ: ಕಬ್ಬೆನೂರ ಹಾಲಿ: ಧಾರವಾಡ ರವರಿಗೆ ಸ್ಥಳದಲ್ಲಿಯೇ ಮೃತಪಡಿಸಿದ್ದಲ್ಲದೇ ವಾಹನ ಸಮೇತ ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಈ  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2019 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಪಟ್ಟಣದ ಹತ್ತಿ ಇರುವ ತಡಸ ಕ್ರಾಸ್ದಲ್ಲಿ ಎದರುಗಾರರು ಸಂಶಯಾಸ್ಪದವಾಗಿ ನಿಂತಿದ್ದು ನಮಗೆ ನೋಡಿ ತಮ್ಮ ಇರುವಿಕೆಯನ್ನು ಮರೆಮಾಚಲು ಪ್ರಯತ್ನ ಮಾಡಲು ನಾವು ಅವರಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವರು ಸಮರ್ಪಕವಾದ ಉತ್ತರ ಕೊಡದೆ ಇದ್ದುದರಿಂದ ಮತ್ತು ಈ ಹೊತಿನಲ್ಲಿ ಇಲ್ಲಿ ಯಾಕೆ ನಿಂತಿರುವಿರಿ ಅಂತಾ ಕೇಳಲಾಗಿ ಸರಿಯಾದ ಉತ್ತರ ನೀಡದೆ ಇದ್ದುದರಿಂದ ಸದರಿಯವರು ಯಾವುದಾದರು ಸ್ವತಿನ ಅಪರಾಧ ಮಾಡಲು ಹೊಂಚು ಹಾಕಿರುವ ಬಗ್ಗೆ ಮೇಲ್ನೊಕ್ಕೆ ದೃಡವಾಗಿದ್ದರಿಂದ  ಮತ್ತು ಸದರಿಯವರು ತಮ್ಮ ಇರುವಿಕೆಯನ್ನು ಮರೆಮಾಚಿಕೊಳ್ಳುತ್ತಾ ತಪ್ಪಿಸಿಕೊಂಡು ಹೋಗುತ್ತಿದ್ದು ಇವರ ವಿರುದ್ದ ಕ್ರಮ ಕೈಗೊಳ್ಳದೆ ಹೋದಲ್ಲಿ ಕಲಘಟಗಿಯಲ್ಲಿ & ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಜ್ಞೆಯ ಅಪರಾಧಗಳನ್ನು ಮಾಡಿ ತನ್ನ ಇರುವಿಕೆಯನ್ನು ಮರಮಚುವ ಸಂಭವ ಹೆಚ್ಚಾಗಿ ಕಂಡು ಬಂದಿದ್ದರಿಂದ  ಸದರಿಯವರ ಮೇಲೆ CODE OF CRIMINAL PROCEDURE, 1973 (U/s-109)ಮುಂಜಾಗ್ರತಾ ಕ್ರಮ ಜರುಗಿಸಿದ್ದು ಇರುತ್ತದೆ


Wednesday, January 16, 2019

CRIME INCIDENTS 16-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-01-2019 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ನಲವಡಿ ಗ್ರಾಮದ ಹತ್ತಿರ  ಆರೋಪಿತನಾದ ವ್ಹಿಆರ್.ಎಲ್ ಬಸ್ ನಂಬರ ಕೆಎ-25/ಸಿ-5976 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಭದ್ರಾಪುರ ಕಡೆಯಿಂದ ನಲವಡಿ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾಧಿ ಚಲಾಯಿಸುತ್ತಿದ್ದ ಮೋಟರ ಸೈಕಲನ್ನು ಓವರಟೇಕ ಮಾಡುತ್ತಾ ತನ್ನ ಬಲಸೈಡಿಗೆ ಹೋಗಿ, ನಲವಡಿ ಕಡೆಯಿಂದ ಭದ್ರಾಪುರ ಕಡೆಗೆ ಹೊರಟಿದ್ದ ಟೆಂಪೋ ಟ್ರಾವಲ್ಸ ಸ್ಕೂಲ ವಾಹನ ಸಂಖ್ಯೆ ಕೆಎ-02/ಸಿ-9668 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಟೆಂಪೋ ಟ್ರಾವಲ್ಸ ಸ್ಕೂಲ ವಾಹನದ ಚಾಲಕನಾದ ಬಸನಗೌಡ ತಂದೆ ಶಿವನಗೌಡ ನಡವಿನಮನಿ ವಯಾ-40 ವರ್ಷ ಸಾ: ಶಿರಗುಪ್ಪಿ ತಾ: ಹುಬ್ಬಳ್ಳಿ ಇವನಿಗೆ ತಲೆಗೆ ಕೈಗಳಿಗೆ ಮಾರಾಣಾಂತಿಕ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣಪಡಿದ್ದು ಅಲ್ಲದೇ ಬಸ್ಸನಲ್ಲಿದ್ದ ಸುಮಾರು 12 ರಿಂದ 15 ಪ್ರಯಾಣಿಕರಿಗೆ ಸಾಧಾ ವ ಭಾರಿ ಪ್ರಮಾಣದ ಗಾಯ ಪಡಿಸಿ ಬಸ್ ಚಾಲಕನು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2019 ಕಲಂ 279.337.338.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, January 14, 2019

CRIME INCIDENTS 14-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-01-2019 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಚಿಕ್ಕಹರಕುಣಿ ಗ್ರಾಮದ ಬಸವಣ್ಣನ ಗುಡಿಯ ಹತ್ತಿರ ಆರೋಪಿತನಾದ ಭೀಮಪ್ಪ ಹನಮಂತಪ್ಪ ಅಲಬನವರ ವಯಾ: 19 ವರ್ಷ, ಸಾ: ಕಮಡೊಳ್ಳಿ ಈತನು ಜಪ್ತಾದ ಸರಾಯಿ ಟೆಟ್ರಾ ಪಾಕೀಟಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಮೋಟಾರ ಸೈಕಲ್ ನಂ: ಕೆಎ 27 / ಇ.ಎ: 0724 ನೇದ್ದರಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಸಿಕ್ಕಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 03/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಆರೋಪಿತನಾದ ಬಸವರಾಜ ತಂದೆ ಮಡಿವಾಳಪ್ಪ ಕವಲಗೇರಿ ವಯಾ 20 ವರ್ಷ ಸಾ:ಅಮ್ಮಿನಬಾವಿ ಇತನು ಅಮ್ಮಿನಬಾವಿ ಗ್ರಾಮದ ಬಸ್ಡಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ನಿಂತು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು  ಸಾರ್ವಜನಿಕರಿಗೆ ತೊರಿಸುತ್ತಾ ಹೆದರಿಸುತ್ತಾ  ಬಾಯಿಗೆ ಬಂದಂತೆ ಬೈದಾಡುತ್ತಾ ಚಿರಾಡುತ್ತಾ ಹೋಗಿ ಬರುವ ಹೆಣ್ಣುಮಕ್ಕಳೂಂದಿಗೆ ಬಾಯಿಗೆ ಬಂದಂತೆ ಮಾತನಾಡುವದು  ಅಸಬ್ಯೆವಾಗಿ ವರ್ತನೆ ಮಾಡುವ ಪ್ರವೃತ್ತಿಯವನಿದ್ದು ಸದರಿಯವನಿಗೆ ಅಲ್ಲಿಯ ಬಿಟ್ಟರೆ ಯಾವುದಾದರು ಸಂಜ್ಞೆಯ ಅಪರಾದವನ್ನು ಮಾಡುವ ಸಂಭವ  ಇರುವದರಿಂದ ಸದರಿಯವನ ಮೇಲೆ ಕಲಂ 110 (ಈ & ಜಿ) ಸಿ ಆರ್ ಪಿ ಸಿ ಪ್ರಕಾರ ಕ್ರಮ ಜರೂಗಿಸಿದ್ದು  ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ CODE OF CRIMINAL PROCEDURE, 1973 (U/s-110(E)(G)) ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, January 10, 2019

CRIME INCIDENTS 10-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-01-2019 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಮೃತ ಮಾರುತಿ ತಂದೆ ಹನಮಂತಪ್ಪ ಕೇಸವಾಯಿ ವಯಾ 48 ವರ್ಷ ಜಾತಿ ಹಿಂದು ವಾಲ್ಮೀಕಿ ಉದ್ಯೋಗ ಟಾಟಾ ಎಸಿ ಡ್ರೈವರ ಸಾ:ಕಣವಿ ಹೊನ್ನಾಪುರ ತಾ:ಧಾರವಾಡ ಇತನು ಹಮೇಶಾ ಸರಾಯಿ ಕುಡಿಯುವ ಚಟವನ್ನು ಹೊಂದಿ ಮಾನಸಿಕ ಅಸ್ವಸ್ಥನಾಗಿ ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 10-01-2019 ರಂದು ಬೆಳಗಿನ 03,00 ಗಂಟೆಯಿಂದ 05,00 ಗಂಟೆಯ ಮದ್ಯೆದ ಅವದಿಯಲ್ಲಿ ತನ್ನ ವಾಸದ ಮನೆಯ ಮುಂದೆ ಕಬ್ಬೀಣ ಪೈಪಿಗೆ ವಾಯರ ಹಗ್ಗವನ್ನು ಕಟ್ಟಿ ಅದೇ ಹಗ್ಗದಿಂದ ತನ್ನಷ್ಠಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ02/2019 ಕಲಂ 174 ಸಿ.ಆರ್. ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಸಂತೋಷ ತಂದೆ ಗದಿಗೆಪ್ಪ ಹೆಬ್ಬಳ್ಳಿಯವರ ವಯಾ 26 ವರ್ಷ ಜಾತಿ ಹಿಂದು ಅಂಬಿಗೇರ ಉದ್ಯೋಗ  ಕೂಲಿ ಕೆಲಸ ಸಾ:ಬ್ಯಾಹಟ್ಟಿ ಹಾಲಿ ಮುಗದ  ಇತನು ಮಾನಸಿಕ ಅಸ್ವಸ್ಥನಿದ್ದು ದಿನಾಂಕ 10-01-2019 ರಂದು ಬೆಳಗಿನ 05,00 ಗಂಟೆಯ ಸುಮಾರಿಗೆ ಯಾವುದೂ ಕಾರಣದ ಸಲುವಾಗಿ ತನ್ನಷ್ಟಕ್ಕೆ ತಾನೆ  ತಾನು ಇದ್ದ ಬಾಡಿಗೆ ಮನೆಯ ಜಂತ್ತಿಗೆ ಹಗ್ಗವನ್ನು ಕಟ್ಟಿ ಅದೇ ಹಗ್ಗದಿಂದ ತನ್ನಷ್ಟಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಮಗನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಾಯಿಯು ಕೊಟ್ಟ ವರದಿಯನ್ನು ನೀಡಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ03/2019 ಕಲಂ 174 ಸಿ.ಆರ್. ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, January 9, 2019

CRIME INCIDENTS 09-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-01-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಿರೆಸೂರ ಗ್ರಾಮದ ಮೃತಃ ಸದಾನಂದ  ಶಿವಪ್ಪ ಸವದತ್ತಿ. ವಯಾಃ 43 ವರ್ಷ. ಸಾಃ ಕಿರೇಸೂರ ಇವನು ತನ್ನ ಬಾಬತ್ತ ಮೋಟಾರ ಸೈಕಲ್ ನಂಃ KA-63-TMP -17626 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನಡೆಯಿಸಿಕೊಂಡು ಬರುತ್ತಿರುವಾಗ, ಇದಕ್ಕೆ ಹುಬ್ಬಳ್ಳಿ- ನವಲಗುಂದ ರಸ್ತೆಯ ಮೇಲೆ, ಕುಸುಗಲ್ಲ ಹದ್ದಿ, ಇಂಗಳಹಳ್ಳಿ ಕ್ರಾಸ್ ಹತ್ತಿರ, ಟ್ರ್ಯಾಕ್ಟರ್ ನಂ. KA-29-T-9326 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಕಿರೇಸೂರ ಕಡೆಯಿಂದ ಕುಸುಗಲ್ಲ ಕಡೆಗೆ ಅತೀ ಜೋರಿನಿಂದ ವ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಅಪಘಾತ ಪಡಿಸಿ ತಲೆಗೆ ಭಾರಿ ಗಾಯ ಪಡಿಸಿದ್ದು ಇವನು ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿರುವಾಗ, ದಿಃ 08-01-2019 ರಂದು ರಾತ್ರಿ 10.30 ಗಂಟೆಗೆ ಉಪಚಾರ ಫಲೀಸದೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2019 ಕಲಂ 279.304(ಎ)ವಾಹನ ಕಾಯ್ದೆ 134 .187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, January 8, 2019

CRIME INCIDENTS 08-01-2019


ದಿನಾಂಕ: 08-01-2019 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 07-01-2019 ರಂದು 1900 ಗಂಟೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಕುಂದಗೋಳದಿಂದ 3 ಕಿ.ಮೀ ಅಂತರದಲ್ಲಿ ಕೊಪ್ಪದವರ ಕೆರೆಯ ಹತ್ತಿರ, ರಿಕ್ಷಾ ನಂ: KA 20 / A 3246 ನೇದ್ದರ ಹೆಸರು ವಿಳಾಸ ತಿಳಿಯದ ಚಾಲಕನು ಸದರ ರಿಕ್ಷಾವನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ, ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಮೋಟಾರ ಸೈಕಲ್ ನಂ: KA 25 / EW: 7942 ನೇದ್ದರಲ್ಲಿ ಹೊರಟಿದ್ದ ಮಹಬೂಬಸಾಬ ಇಮಾಮಸಾಬ ಕ್ಯಾಲಕೊಂಡ, ಮುಸ್ತಾಕಮೊಹ್ಮದ ಶಿಖಂದರಸಾಬ ನಾಯ್ಕರ, ಸಾ: ಇಬ್ಬರೂ ಕಾಳಿದಾಸನಗರ ಕುಂದಗೋಳ ಇವರ ಮೋಟಾರ ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಅವರಿಗೆ ಸಾದಾ ವ, ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ, ಸದರಿಯವರನ್ನು ನಿಂತು ನೋಡಿ ಅವರ ಉಪಚಾರಕ್ಕೆ ಸಹಕರಿಸದೇ ತನ್ನ ರಿಕ್ಷಾವನ್ನು ತೆಗೆದುಕೊಂಡು ಹೋದ ಅಪರಾಧ

2) ದಿನಾಂಕ: 08/01/2019 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ನೀಲಪ್ಪ ಬಸವೆಣ್ಣಪ್ಪ ಆರೋಪಿತರು ತಮ್ಮ ಸ್ವಂತ ಪಾಯಿದೇಗೋಸ್ಕರ ಮೊರಬ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ  ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಓಸಿ ಜೂಜಾಟ ನಡೆಸುತ್ತಿದ್ದಾಗ  ರೇಡ್ ಕಾಲಕ್ಕೆ ಮಹ್ಮದರಫೀಕ ಅನ್ನುವವನು  ಓಡಿ ಪರಾರಿ ಆಗಿದ್ದು ಇನ್ನೊಬ್ಬ ನೀಲಪ್ಪ ಪೂಜಾರಿ ಅನ್ನುವವನು 1) ರೋಖ ಹಣ 1130/- ರೂ, 2) ಒಂದು ಬಾಲಪೆನ್ ಅಕಿ: 0000, 3) ಓಸಿ ಅಂಕಿ-ಸಂಖ್ಯೆಗಳನ್ನು ಬರೆದ ಚೀಟಿ  ಅಕಿ: 0000, ಸಮೇತ ಸರಕಾರಿ ತರ್ಪಿ ಕಲಂ 78 (iii)  ಕೆ.ಪಿ ಆಕ್ಟ್ ಪ್ರಕಾರ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣದಲ್ಲಿಯ ಮೃತನಾದ ಇಸ್ಮಾಯಿಲ್ ತಂದೆ ಹುಸೇನಸಾಬ ಅಣ್ಣಿಗೇರಿ ವಯಾ: 19 ವರ್ಷ, ಇವನು ಸುಮಾರು 4-5 ವರ್ಷಗಳಿಂದ ಹುಚ್ಚರ ಆಕಾರ ಮಾಡುತ್ತ, ಯಾರಿಗೂ ಹೇಳದೇ ಕೇಳದೇ ಮನೆಬಿಟ್ಟು ಬೇರೆ ಊರುಗಳಿಗೆ ಹೋಗುವದು ಬರುವದು ಮಾಡುತ್ತ ಮಾನಸಿಕ ಕಾಯಿಲೆಯಿಂದ ಬಳಲುತ್ತ ಇದ್ದವನಿಗೆ ಧಾರವಾಡದ ಮಾನಸಿಕ ಆಸ್ಪತ್ರೆಗೆ ತೋರಿಸಿ ಗುಳಿಗೆ ಔಷಧೋಪಚಾರ ಮಾಡುತ್ತ ಬಂದಿದ್ದರೂ ಅವನಿಗೆ ಗುಣವಾಗದ್ದರಿಂದ ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ; 08/01/2019 ರಂದು ಮುಂಜಾನೆ 10.30 ಗಂಟೆಯಿಂದ 11.50 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಕೋಣೆಯ ಸೀಲಿಂಗಿಗೆ ಫ್ಯಾನ್ ಕೂಡಿಸಲು ಹಾಕಿದ ಕಬ್ಬಿಣದ ಸಳಿಗೆ ಪತ್ತಲ ಕಟ್ಟಿ ತಾನಾಗಿಯೇ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಂದೆ ವರದಿ ನೀಡಿದ್ದು ಇರುತ್ತದೆ.

Monday, January 7, 2019

CRIME INCIDENTS 07-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-01-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪಿ.ಬಿ ರಸ್ತೆಯ ಮೇಲೆ ಮುಮ್ಮಿಗಟ್ಟಿ ಬಸ್ಸಸ್ಟಾಪ ಹತ್ತಿರ ದಿನಾಂಕಃ 03-01-2019 ರಂದು 19-00 ಅವರ್ಸಕ್ಕೆ ನಮೂದ ಆರೋಪಿತನಾದ ದಯಾನಂದ ತಂದೆ ಹನಮಂತಪ್ಪಾ ಕೋರಿ. ಸಾಃ ಕಾರ್ಕಳ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ25/ಎಚ್ಎ/2413 ನೇದ್ದನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಬರುವ ಪಿ.ಬಿ ರಸ್ತೆಯ ಮೇಲೆ ಧಾರವಾಡ ಹೈಕೋರ್ಟ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಬಸ್ಸಸ್ಟಾಪ ಹತ್ತಿರ ರಸ್ತೆಯ ಬದಿಗೆ ನಿಂತ ಪಿರ್ಯಾದಿಗೆ ಮೋಟಾರ ಸೈಕಲ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದಲ್ಲಿ ಆರೋಪಿತರು ಹಿಂದಿನಿಂದಲೂ ಕಬ್ಬು ಕಡಿಯಲು ಗ್ಯಾಂಗಗಳನ್ನು ಕಲಘಟಗಿಗೆ ಕರೆದುಕೊಂಡು ಬರುತ್ತಿದ್ದು, ಅದರಂತೆ ಈವರ್ಷವು ಸಹಾ ಕಲಘಟಗಿ ತಾಲೂಕಿಗೆ ಕಬ್ಬು ಕಡಿಯಲು ಅಂತಾ ಗ್ಯಾಂಗಗಳನ್ನು ಕರೆದುಕೊಂಡು ಬಂದು ಮೋಸ ಮಾಡುವ ಉದ್ದೇಶದಿಂದಲೇ ಇದರಲ್ಲಿ ಪಿರ್ಯಾದಿ ಹಾಗು ಇನ್ನುಳಿದ 4 ಜನರೊಂದಿಗೆ ಕಬ್ಬು ಕಡಿಯಲು ಎರಡೆರಡು ಗ್ಯಾಂಗಳನ್ನು ಕಳುಹಿಸಿಕೊಡುವದಾಗಿ ನಂಬಿಸಿ ಪಿರ್ಯಾದಿಯಿಂದಾ ಮುಂಗಡವಾಗಿ 5 ಲಕ್ಷಗಳನ್ನು ಹಾಗು ಅನೀಲ ಪಾಟೀಲ, ಶಂಕ್ರಪ್ಪ ಬೂದಪ್ಪನವರ, ನಿಜಲಿಂಗಪ್ಪ ಹುಲಮನನಿ ಮತ್ತು ಗುರುಪಾದಪ್ಪ ಮುದಿಗೌಡ್ರ ಇವರ ಕಡೆಯಿಂದಾ ತಲಾ ಎರಡುವರೆ ಲಕ್ಷ ಹಣವನ್ನು ಇಸಿದುಕೊಂಡು ಕಬ್ಬು ಕಟಾವು ಮಾಡಿಕೊಡುದಾಗಿ ಕರಾರು ಪತ್ರ ಮಾಡಿಕೊಟ್ಟು ಅವರ ಕಬ್ಬು ಕಟಾವು ಮಾಡಿಕೊಡದೆ ನಂಬಿಕೆ ದ್ರೋಹ ಮಾಡಿ ಪಿರ್ಯಾಧಿ ಮತ್ತು ಉಳಿದ 4 ಜನರಿಂದ ಒಟ್ಟು 15,00,000/- ಲಕ್ಷ ರೂಗಳನ್ನು ಇಸಿದುಕೊಂಡು ಮೋಸ ಮಾಡಿ ತಾವು ತಂದ ಗೂಡ್ಸ ಲಾರಿ ನಂ KA-43-2539 ನೇದ್ದರಲ್ಲಿ ಹತ್ತಿಕೊಂಡು ಹೋಗುವಾಗ ಚಳಮಟ್ಟಿ ಹತ್ತೀರ ಆರೋಪಿ ನಂ 2 ನೇದವನು ಮತ್ತು ಗೂಡ್ಸ ಲಾರಿ ಸಮೇತ ಸಿಕ್ಕಿದ್ದು, ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 03/2019 ಕಲಂ 420.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶಿರೋಳ ಗ್ರಾಮದ  ಮೃತ ನಾಗಪ್ಪ ಗುರುಪಾದಪ್ಪ ಶಿರೋಳ ವಯಾ: 38 ವರ್ಷ ಸಾ:ತಲೆಮೊರಬ ಈತನು ಈಗ ಸುಮಾರು 5-6 ವರ್ಷಗಳ ಹಿಂದೆ ಉಮಾಶ್ರೀ ಈತಳು ಮೃತ ಗಂಡನೊಂದಿಗೆ ಜಗಳ ಮಾಡಿಕೊಂಡು ಕಲಘಟಗಿ ತಾಲೂಕ ಸೋಲಾರಗೊಪ್ಪದಲ್ಲಿ ಇದ್ದಳು ಅಲ್ಲಿ ಅವರ ತಂದೆ ಹಾಗೂ ತಾಯಿ ಹಾಗೂ ಗ್ರಾಮದ ಹಿರಿಯರನ್ನು ಕೂಡಿಸಿ ಗಂಡನ ಮನೆಗೆ ಹೋಗು ಅಂತಾ ಕರೆದಾಗ ಉಮಾಶ್ರೀ ಈತಳು ಹಾಗೂ ತಂದೆ-ತಾಯಿ ಇವರೆಲ್ಲರೂ ಕೂಡಿಕೊಂಡು ನಾನು ಬರುವುದಿಲ್ಲ ನೀವು ಕೂಡಿಕೊಂಡು ಬೇರೆ ಮದುವೆ ಮಾಡಿರಿ ಅಂತಾ ಹೇಳಿದರು. ಆದರೆ ಪೋತಿ ನಾಗಪ್ಪನು ನಾನು ಬೇರೆ ಮದುವೆ ಆಗುವುದಿಲ್ಲ ಅಂತಾ ತಿಳಿಸಿ ತನ್ನ ಮನೆಯಲ್ಲಿ ಹೊಲ ಮನೆ ಕೆಲಸಮಾಡಿಕೊಂಡು ಹೆಂಡಿತಿ ಮಕ್ಕಳನ್ನು ಬಿಟ್ಟು ಇರುವುದರಿಂದ ಅವನಿಗೆ ಮಾನಸಿಕವಾಗಿ ತಿರುಗಾಡುತ್ತಿದ್ದನು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಮಾಡಿಕೊಂಡು ದಿನಾಂಕ 06-01-2019 ರಂದು ಸಾಯಂಕಾಲ 7-00 ಗಂಟೆಯಿಂದ ದಿನಾಂಕ 07-01-2019 ರ ಬೆಳಿಗಿನ 9-30 ಗಂಟೆಯ ನಡುವಿನ ಅವಧಿಯಲ್ಲಿ ತಲೆಮೊರಬ ಗ್ರಾಮದ ಹದ್ದಿ ಪೈಕಿ ಮೊರಬ-ಅಮ್ಮಿನಬಾವಿ ರಸ್ತೆಯ ಅಶೋಕ ಹಸರಣ್ಣವರ ರವರ ಕ್ವಾರಿಯ ಹತ್ತಿರ ಯಾವುದೋ ಕ್ರಿಮಿನಾಶಕ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಪೋತಿನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪೋತಿಯ ತಂದೆಯು ತನ್ನ ವರದಿಯಲ್ಲಿ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, January 6, 2019

CRIME INCIDENTS 06-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-01-2019 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಾವಗೇರೆ ಗ್ರಾಮದ  ಮೃತಳಾದ ಶಿವಕ್ಕ ಗಂಡ ರಾಮಪ್ಪ ಕಲಕುಟ್ರಿ ವಯಸ್ಸು 70 ವರ್ಷ, ಸಾ: ಹಾಳಉಗ್ಗಿನಕೇರಿ ತಾ: ಮುಂಡಗೋಡ ಹಾ:ವ: ತಾವರಗೇರಿ ಇವಳು ದಿನಾಂಕ: 03/01/2019 ರಂದು ಮುಂಜಾನೆ 06.30 ಗಂಟೆ ಸುಮಾರಿಗೆ ತನಗೆ ಚಳಿಯಾಗುತ್ತಿದೆ ಅಂತ ಅಡುಗೆ ಮನೆಯ ಒಲೆಯ ಮುಂದೆ ಬೆಂಕಿ ಕಾಯಿಸಿಕೊಳ್ಳಲು ಹೋದಾಗ ಆಕಸ್ಮಿಕವಾಗಿ ಅವಳ ಸೀರೆಗೆ ಬೆಂಕಿ ಹತ್ತಿ  ಪಾದ, ಕಾಲು, ಟೊಂಕ, ಹೊಟ್ಟೆಗೆ ಮತ್ತು ಬೆನ್ನಿಗೆ ಅಲ್ಲಲ್ಲಿ ಸುಟ್ಟಗಾಯಗಳನ್ನು ಮಾಡಿಕೊಂಡವಳು ಉಪಚಾರಕ್ಕೆ ಹುಬ್ಬಳ್ಳಿ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದದೇ ಈ ದಿವಸ ದಿನಾಂಕ: 06/01/2019 ರಂದು ಮದ್ಯಾಹ್ನ 03.00 ಗಂಟೆಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಮಗಳು ವರದಿ ಕೊಟ್ಟಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, January 5, 2019

CRIME INCIDENTS 05-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-01-2019 ರಂದು ವರದಿಯಾದ ಪ್ರಕರಣಗಳು


1.ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ: ಚನ್ನಾಪೂರ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ, ಆರೋಪಿತನಾದ ಫಕ್ಕಿರೇಶ ತಂದೆ ಬಸವಾಣ್ಣೆಪ್ಪ ಗಾಣಗೇರ ವಯಾ. 35 ವರ್ಷ  ಸಾ. ಚನ್ನಾಪೂರ ತಾ. ಹುಬ್ಬಳ್ಳಿ ಇವನು ತನ್ನ ಪಾಯ್ದೇಗೋಸ್ಕರ, ಯಾವುದೇ ಪಾಸ ವ ಪರ್ಮಿಟ ಇಲ್ಲದೇ, ಆರೋಪಿ ನಂ. 2 ರಾಜು ಪಟ್ಟಣದ , ಇವರ ಮಾಲೀಕತ್ವದ  ಮಹಾಲಕ್ಷ್ಮೀ ವೈನ್ಸ್ ಹುಬ್ಬಳ್ಳಿ  ಇವರ ಬಳಿ ಖರೀದಿಸಿದ  1] ಒಟ್ಟು 96 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್. ದ ಟೆಟ್ರಾ ಪೌಚಗಳು ಅ.ಕಿ 2910/- ರೂ.ಕಿಮ್ಮತ್ತಿನೇದ್ದವುಗಳನ್ನು  ಮಾರಾಟ ಮಾಡುತ್ತಿದ್ದಾಗ, ಟೇಟ್ರಾ ಪೌಚಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 02-2019 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಳ್ಳಿ ಪಾರಂ ಹತ್ತಿರ ಇರುವ ರಂಗನಗೌಡ ಪಾಟೀಲ ಇವರ ಹೊಲದ ಕಚ್ಚಾ ದಾರಿಯಲ್ಲಿ ನಮೂದು ಮಾಡಿದ ಲಾರಿ ನಂ MH-06-K-6678 ನೇದರ ಚಾಲಕನಾದ ಸುಖದೇವ ವಾಕಳೆ ಸಾ: ಅಂಬ್ಲಿ ಮಹಾರಾಷ್ಟ್ರ ಇವನು ತನ್ನ ಲಾರಿಯಲ್ಲಿ ಅತಿ ಹೆಚ್ಚಿನ ಕಬ್ಬು ಲೋಡಮಾಡಿಕೊಂಡು  ಲಾರಿಯನ್ನು ಹೊಲದ ಕಚ್ಚಾ ರಸ್ತೆ ಕಡೆಯಿಂದ  ಧಾರವಾಡ ನವಲಗುಂದ ರಸ್ತೆ ಕಡೆಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕಚ್ಚಾ ರಸ್ತೆಗೆ ಅಡ್ಡಾಲಾಗಿ ಹಾಯ್ದು ಹೋಗಿರುವ  ಕೆ.ಈ.ಬಿ ವಿದ್ಯೂತ್ತ ತಂತಿಗೆ ಕಬ್ಬಿನ ಲೋಡ ಬಡೆಸಿ ಅಪಘಾತ ಮಾಡಿ ಒಂದು ಡಿಪಿ(ಡಬಲ್ ಪೋಲ) ಜಿ.ಓ.ಎಸ್ ಸಹಿತ ಮತ್ತು ಒಂದು ಟಿ.ಸಿ ಸ್ಟ್ರಕ್ಚರ್ ಟಿಸಿ ಸಹಿತ ಒಟ್ಟು 14 ವಿದ್ಯೂತ್ ಕಂಬಗಳನ್ನು ಮುರಿಯುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 03/2019 ಕಲಂ IPC 1860 (U/s-279); INDIAN MOTOR VEHICLES ACT, 1988 (U/s-177,194) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, January 4, 2019

CRIME INCIDENTS 04-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-01-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ ಆರೋಪಿತನಾದ ಪರಸಪ್ಪ ತಂದೆ ಯಮನಪ್ಪ ಭಜಂತ್ರಿ ಸಾ: ಅಣ್ಣಿಗೇರಿ ಈತನು ಅಣ್ಣಿಗೇರಿ ಶಹರದ ಹಿರೇ ಹನಮಪ್ಪನ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಫಾಯದೇಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಮಟಕಾ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 350-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.


Tuesday, January 1, 2019

CRIME INCIDENTS 01-01-2019


WISH YOU HAPPY NEW YEAR-2019
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-01-2019 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದೇವಿಕೊಪ್ಪ ಗ್ರಾಮ ಪಂಚಾಯಿತಿ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಮಂಜುನಾಥ ಆಲದಮರದ 2.ಮಂಜುನಾಥ ಪರವರ 3.ನಿಂಗಪ್ಪಾ ಹೂಸುರ ಇವರುಗಳು  ಕೂಡಿಕೊಂಡು ತಮ್ಮ ಸ್ವಂತ ಪಾಯ್ದೆಗೋಸ್ಕರ 1 ರೂ ಗೆ 80 ರೂ ಕೊಡುವದಾಗಿ ಹೇಳಿ ಸಾರ್ವಜನಿಕರಿಗೆ ಕರೆದು ಅವರಿಂದ ಹಣ ಇಸಿದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಓಸಿ ಎಂಬ ಜೂಜಾಟ ಆಡಿಸುತ್ತಿದ್ದಾಗ ದಾಳಿ ಮಾಡಿದ ಕಾಲಕ್ಕೆ ಆರೋಪಿ ನಂ 1 ನೇದವನು ಸಿಕ್ಕಿದ್ದು ಆರೋಪಿ ನಂ 2 & 3 ನೇದವರು ಪರಾರಿಯಾಗಿದ್ದು, ಅವರಿಂದ ರೂ 1.180-00 ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01-01-2019 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.