ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 1, 2019

CRIME INCIDENTS 01-01-2019


WISH YOU HAPPY NEW YEAR-2019
ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-01-2019 ರಂದು ವರದಿಯಾದ ಪ್ರಕರಣಗಳು
1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದೇವಿಕೊಪ್ಪ ಗ್ರಾಮ ಪಂಚಾಯಿತಿ ಹತ್ತೀರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಮಂಜುನಾಥ ಆಲದಮರದ 2.ಮಂಜುನಾಥ ಪರವರ 3.ನಿಂಗಪ್ಪಾ ಹೂಸುರ ಇವರುಗಳು  ಕೂಡಿಕೊಂಡು ತಮ್ಮ ಸ್ವಂತ ಪಾಯ್ದೆಗೋಸ್ಕರ 1 ರೂ ಗೆ 80 ರೂ ಕೊಡುವದಾಗಿ ಹೇಳಿ ಸಾರ್ವಜನಿಕರಿಗೆ ಕರೆದು ಅವರಿಂದ ಹಣ ಇಸಿದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಓಸಿ ಎಂಬ ಜೂಜಾಟ ಆಡಿಸುತ್ತಿದ್ದಾಗ ದಾಳಿ ಮಾಡಿದ ಕಾಲಕ್ಕೆ ಆರೋಪಿ ನಂ 1 ನೇದವನು ಸಿಕ್ಕಿದ್ದು ಆರೋಪಿ ನಂ 2 & 3 ನೇದವರು ಪರಾರಿಯಾಗಿದ್ದು, ಅವರಿಂದ ರೂ 1.180-00 ಗಳನ್ನು ವಶಪಡಿಸಿಕೊಂಡಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01-01-2019 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.