ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, January 5, 2019

CRIME INCIDENTS 05-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-01-2019 ರಂದು ವರದಿಯಾದ ಪ್ರಕರಣಗಳು


1.ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ: ಚನ್ನಾಪೂರ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ, ಆರೋಪಿತನಾದ ಫಕ್ಕಿರೇಶ ತಂದೆ ಬಸವಾಣ್ಣೆಪ್ಪ ಗಾಣಗೇರ ವಯಾ. 35 ವರ್ಷ  ಸಾ. ಚನ್ನಾಪೂರ ತಾ. ಹುಬ್ಬಳ್ಳಿ ಇವನು ತನ್ನ ಪಾಯ್ದೇಗೋಸ್ಕರ, ಯಾವುದೇ ಪಾಸ ವ ಪರ್ಮಿಟ ಇಲ್ಲದೇ, ಆರೋಪಿ ನಂ. 2 ರಾಜು ಪಟ್ಟಣದ , ಇವರ ಮಾಲೀಕತ್ವದ  ಮಹಾಲಕ್ಷ್ಮೀ ವೈನ್ಸ್ ಹುಬ್ಬಳ್ಳಿ  ಇವರ ಬಳಿ ಖರೀದಿಸಿದ  1] ಒಟ್ಟು 96 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ. ಎಲ್. ದ ಟೆಟ್ರಾ ಪೌಚಗಳು ಅ.ಕಿ 2910/- ರೂ.ಕಿಮ್ಮತ್ತಿನೇದ್ದವುಗಳನ್ನು  ಮಾರಾಟ ಮಾಡುತ್ತಿದ್ದಾಗ, ಟೇಟ್ರಾ ಪೌಚಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 02-2019 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಳ್ಳಿ ಪಾರಂ ಹತ್ತಿರ ಇರುವ ರಂಗನಗೌಡ ಪಾಟೀಲ ಇವರ ಹೊಲದ ಕಚ್ಚಾ ದಾರಿಯಲ್ಲಿ ನಮೂದು ಮಾಡಿದ ಲಾರಿ ನಂ MH-06-K-6678 ನೇದರ ಚಾಲಕನಾದ ಸುಖದೇವ ವಾಕಳೆ ಸಾ: ಅಂಬ್ಲಿ ಮಹಾರಾಷ್ಟ್ರ ಇವನು ತನ್ನ ಲಾರಿಯಲ್ಲಿ ಅತಿ ಹೆಚ್ಚಿನ ಕಬ್ಬು ಲೋಡಮಾಡಿಕೊಂಡು  ಲಾರಿಯನ್ನು ಹೊಲದ ಕಚ್ಚಾ ರಸ್ತೆ ಕಡೆಯಿಂದ  ಧಾರವಾಡ ನವಲಗುಂದ ರಸ್ತೆ ಕಡೆಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕಚ್ಚಾ ರಸ್ತೆಗೆ ಅಡ್ಡಾಲಾಗಿ ಹಾಯ್ದು ಹೋಗಿರುವ  ಕೆ.ಈ.ಬಿ ವಿದ್ಯೂತ್ತ ತಂತಿಗೆ ಕಬ್ಬಿನ ಲೋಡ ಬಡೆಸಿ ಅಪಘಾತ ಮಾಡಿ ಒಂದು ಡಿಪಿ(ಡಬಲ್ ಪೋಲ) ಜಿ.ಓ.ಎಸ್ ಸಹಿತ ಮತ್ತು ಒಂದು ಟಿ.ಸಿ ಸ್ಟ್ರಕ್ಚರ್ ಟಿಸಿ ಸಹಿತ ಒಟ್ಟು 14 ವಿದ್ಯೂತ್ ಕಂಬಗಳನ್ನು ಮುರಿಯುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 03/2019 ಕಲಂ IPC 1860 (U/s-279); INDIAN MOTOR VEHICLES ACT, 1988 (U/s-177,194) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.