ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, January 6, 2019

CRIME INCIDENTS 06-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-01-2019 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ತಾವಗೇರೆ ಗ್ರಾಮದ  ಮೃತಳಾದ ಶಿವಕ್ಕ ಗಂಡ ರಾಮಪ್ಪ ಕಲಕುಟ್ರಿ ವಯಸ್ಸು 70 ವರ್ಷ, ಸಾ: ಹಾಳಉಗ್ಗಿನಕೇರಿ ತಾ: ಮುಂಡಗೋಡ ಹಾ:ವ: ತಾವರಗೇರಿ ಇವಳು ದಿನಾಂಕ: 03/01/2019 ರಂದು ಮುಂಜಾನೆ 06.30 ಗಂಟೆ ಸುಮಾರಿಗೆ ತನಗೆ ಚಳಿಯಾಗುತ್ತಿದೆ ಅಂತ ಅಡುಗೆ ಮನೆಯ ಒಲೆಯ ಮುಂದೆ ಬೆಂಕಿ ಕಾಯಿಸಿಕೊಳ್ಳಲು ಹೋದಾಗ ಆಕಸ್ಮಿಕವಾಗಿ ಅವಳ ಸೀರೆಗೆ ಬೆಂಕಿ ಹತ್ತಿ  ಪಾದ, ಕಾಲು, ಟೊಂಕ, ಹೊಟ್ಟೆಗೆ ಮತ್ತು ಬೆನ್ನಿಗೆ ಅಲ್ಲಲ್ಲಿ ಸುಟ್ಟಗಾಯಗಳನ್ನು ಮಾಡಿಕೊಂಡವಳು ಉಪಚಾರಕ್ಕೆ ಹುಬ್ಬಳ್ಳಿ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದದೇ ಈ ದಿವಸ ದಿನಾಂಕ: 06/01/2019 ರಂದು ಮದ್ಯಾಹ್ನ 03.00 ಗಂಟೆಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಮಗಳು ವರದಿ ಕೊಟ್ಟಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.