ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, January 7, 2019

CRIME INCIDENTS 07-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-01-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಪಿ.ಬಿ ರಸ್ತೆಯ ಮೇಲೆ ಮುಮ್ಮಿಗಟ್ಟಿ ಬಸ್ಸಸ್ಟಾಪ ಹತ್ತಿರ ದಿನಾಂಕಃ 03-01-2019 ರಂದು 19-00 ಅವರ್ಸಕ್ಕೆ ನಮೂದ ಆರೋಪಿತನಾದ ದಯಾನಂದ ತಂದೆ ಹನಮಂತಪ್ಪಾ ಕೋರಿ. ಸಾಃ ಕಾರ್ಕಳ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ25/ಎಚ್ಎ/2413 ನೇದ್ದನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಬರುವ ಪಿ.ಬಿ ರಸ್ತೆಯ ಮೇಲೆ ಧಾರವಾಡ ಹೈಕೋರ್ಟ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಮುಮ್ಮಿಗಟ್ಟಿ ಬಸ್ಸಸ್ಟಾಪ ಹತ್ತಿರ ರಸ್ತೆಯ ಬದಿಗೆ ನಿಂತ ಪಿರ್ಯಾದಿಗೆ ಮೋಟಾರ ಸೈಕಲ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದಲ್ಲಿ ಆರೋಪಿತರು ಹಿಂದಿನಿಂದಲೂ ಕಬ್ಬು ಕಡಿಯಲು ಗ್ಯಾಂಗಗಳನ್ನು ಕಲಘಟಗಿಗೆ ಕರೆದುಕೊಂಡು ಬರುತ್ತಿದ್ದು, ಅದರಂತೆ ಈವರ್ಷವು ಸಹಾ ಕಲಘಟಗಿ ತಾಲೂಕಿಗೆ ಕಬ್ಬು ಕಡಿಯಲು ಅಂತಾ ಗ್ಯಾಂಗಗಳನ್ನು ಕರೆದುಕೊಂಡು ಬಂದು ಮೋಸ ಮಾಡುವ ಉದ್ದೇಶದಿಂದಲೇ ಇದರಲ್ಲಿ ಪಿರ್ಯಾದಿ ಹಾಗು ಇನ್ನುಳಿದ 4 ಜನರೊಂದಿಗೆ ಕಬ್ಬು ಕಡಿಯಲು ಎರಡೆರಡು ಗ್ಯಾಂಗಳನ್ನು ಕಳುಹಿಸಿಕೊಡುವದಾಗಿ ನಂಬಿಸಿ ಪಿರ್ಯಾದಿಯಿಂದಾ ಮುಂಗಡವಾಗಿ 5 ಲಕ್ಷಗಳನ್ನು ಹಾಗು ಅನೀಲ ಪಾಟೀಲ, ಶಂಕ್ರಪ್ಪ ಬೂದಪ್ಪನವರ, ನಿಜಲಿಂಗಪ್ಪ ಹುಲಮನನಿ ಮತ್ತು ಗುರುಪಾದಪ್ಪ ಮುದಿಗೌಡ್ರ ಇವರ ಕಡೆಯಿಂದಾ ತಲಾ ಎರಡುವರೆ ಲಕ್ಷ ಹಣವನ್ನು ಇಸಿದುಕೊಂಡು ಕಬ್ಬು ಕಟಾವು ಮಾಡಿಕೊಡುದಾಗಿ ಕರಾರು ಪತ್ರ ಮಾಡಿಕೊಟ್ಟು ಅವರ ಕಬ್ಬು ಕಟಾವು ಮಾಡಿಕೊಡದೆ ನಂಬಿಕೆ ದ್ರೋಹ ಮಾಡಿ ಪಿರ್ಯಾಧಿ ಮತ್ತು ಉಳಿದ 4 ಜನರಿಂದ ಒಟ್ಟು 15,00,000/- ಲಕ್ಷ ರೂಗಳನ್ನು ಇಸಿದುಕೊಂಡು ಮೋಸ ಮಾಡಿ ತಾವು ತಂದ ಗೂಡ್ಸ ಲಾರಿ ನಂ KA-43-2539 ನೇದ್ದರಲ್ಲಿ ಹತ್ತಿಕೊಂಡು ಹೋಗುವಾಗ ಚಳಮಟ್ಟಿ ಹತ್ತೀರ ಆರೋಪಿ ನಂ 2 ನೇದವನು ಮತ್ತು ಗೂಡ್ಸ ಲಾರಿ ಸಮೇತ ಸಿಕ್ಕಿದ್ದು, ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 03/2019 ಕಲಂ 420.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶಿರೋಳ ಗ್ರಾಮದ  ಮೃತ ನಾಗಪ್ಪ ಗುರುಪಾದಪ್ಪ ಶಿರೋಳ ವಯಾ: 38 ವರ್ಷ ಸಾ:ತಲೆಮೊರಬ ಈತನು ಈಗ ಸುಮಾರು 5-6 ವರ್ಷಗಳ ಹಿಂದೆ ಉಮಾಶ್ರೀ ಈತಳು ಮೃತ ಗಂಡನೊಂದಿಗೆ ಜಗಳ ಮಾಡಿಕೊಂಡು ಕಲಘಟಗಿ ತಾಲೂಕ ಸೋಲಾರಗೊಪ್ಪದಲ್ಲಿ ಇದ್ದಳು ಅಲ್ಲಿ ಅವರ ತಂದೆ ಹಾಗೂ ತಾಯಿ ಹಾಗೂ ಗ್ರಾಮದ ಹಿರಿಯರನ್ನು ಕೂಡಿಸಿ ಗಂಡನ ಮನೆಗೆ ಹೋಗು ಅಂತಾ ಕರೆದಾಗ ಉಮಾಶ್ರೀ ಈತಳು ಹಾಗೂ ತಂದೆ-ತಾಯಿ ಇವರೆಲ್ಲರೂ ಕೂಡಿಕೊಂಡು ನಾನು ಬರುವುದಿಲ್ಲ ನೀವು ಕೂಡಿಕೊಂಡು ಬೇರೆ ಮದುವೆ ಮಾಡಿರಿ ಅಂತಾ ಹೇಳಿದರು. ಆದರೆ ಪೋತಿ ನಾಗಪ್ಪನು ನಾನು ಬೇರೆ ಮದುವೆ ಆಗುವುದಿಲ್ಲ ಅಂತಾ ತಿಳಿಸಿ ತನ್ನ ಮನೆಯಲ್ಲಿ ಹೊಲ ಮನೆ ಕೆಲಸಮಾಡಿಕೊಂಡು ಹೆಂಡಿತಿ ಮಕ್ಕಳನ್ನು ಬಿಟ್ಟು ಇರುವುದರಿಂದ ಅವನಿಗೆ ಮಾನಸಿಕವಾಗಿ ತಿರುಗಾಡುತ್ತಿದ್ದನು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕ ಮಾಡಿಕೊಂಡು ದಿನಾಂಕ 06-01-2019 ರಂದು ಸಾಯಂಕಾಲ 7-00 ಗಂಟೆಯಿಂದ ದಿನಾಂಕ 07-01-2019 ರ ಬೆಳಿಗಿನ 9-30 ಗಂಟೆಯ ನಡುವಿನ ಅವಧಿಯಲ್ಲಿ ತಲೆಮೊರಬ ಗ್ರಾಮದ ಹದ್ದಿ ಪೈಕಿ ಮೊರಬ-ಅಮ್ಮಿನಬಾವಿ ರಸ್ತೆಯ ಅಶೋಕ ಹಸರಣ್ಣವರ ರವರ ಕ್ವಾರಿಯ ಹತ್ತಿರ ಯಾವುದೋ ಕ್ರಿಮಿನಾಶಕ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಪೋತಿನ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಪೋತಿಯ ತಂದೆಯು ತನ್ನ ವರದಿಯಲ್ಲಿ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.