ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, January 8, 2019

CRIME INCIDENTS 08-01-2019


ದಿನಾಂಕ: 08-01-2019 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 07-01-2019 ರಂದು 1900 ಗಂಟೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಮೇಲೆ ಕುಂದಗೋಳದಿಂದ 3 ಕಿ.ಮೀ ಅಂತರದಲ್ಲಿ ಕೊಪ್ಪದವರ ಕೆರೆಯ ಹತ್ತಿರ, ರಿಕ್ಷಾ ನಂ: KA 20 / A 3246 ನೇದ್ದರ ಹೆಸರು ವಿಳಾಸ ತಿಳಿಯದ ಚಾಲಕನು ಸದರ ರಿಕ್ಷಾವನ್ನು ಕುಂದಗೋಳ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿ, ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಮೋಟಾರ ಸೈಕಲ್ ನಂ: KA 25 / EW: 7942 ನೇದ್ದರಲ್ಲಿ ಹೊರಟಿದ್ದ ಮಹಬೂಬಸಾಬ ಇಮಾಮಸಾಬ ಕ್ಯಾಲಕೊಂಡ, ಮುಸ್ತಾಕಮೊಹ್ಮದ ಶಿಖಂದರಸಾಬ ನಾಯ್ಕರ, ಸಾ: ಇಬ್ಬರೂ ಕಾಳಿದಾಸನಗರ ಕುಂದಗೋಳ ಇವರ ಮೋಟಾರ ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಅವರಿಗೆ ಸಾದಾ ವ, ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ, ಸದರಿಯವರನ್ನು ನಿಂತು ನೋಡಿ ಅವರ ಉಪಚಾರಕ್ಕೆ ಸಹಕರಿಸದೇ ತನ್ನ ರಿಕ್ಷಾವನ್ನು ತೆಗೆದುಕೊಂಡು ಹೋದ ಅಪರಾಧ

2) ದಿನಾಂಕ: 08/01/2019 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ನೀಲಪ್ಪ ಬಸವೆಣ್ಣಪ್ಪ ಆರೋಪಿತರು ತಮ್ಮ ಸ್ವಂತ ಪಾಯಿದೇಗೋಸ್ಕರ ಮೊರಬ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ  ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಓಸಿ ಜೂಜಾಟ ನಡೆಸುತ್ತಿದ್ದಾಗ  ರೇಡ್ ಕಾಲಕ್ಕೆ ಮಹ್ಮದರಫೀಕ ಅನ್ನುವವನು  ಓಡಿ ಪರಾರಿ ಆಗಿದ್ದು ಇನ್ನೊಬ್ಬ ನೀಲಪ್ಪ ಪೂಜಾರಿ ಅನ್ನುವವನು 1) ರೋಖ ಹಣ 1130/- ರೂ, 2) ಒಂದು ಬಾಲಪೆನ್ ಅಕಿ: 0000, 3) ಓಸಿ ಅಂಕಿ-ಸಂಖ್ಯೆಗಳನ್ನು ಬರೆದ ಚೀಟಿ  ಅಕಿ: 0000, ಸಮೇತ ಸರಕಾರಿ ತರ್ಪಿ ಕಲಂ 78 (iii)  ಕೆ.ಪಿ ಆಕ್ಟ್ ಪ್ರಕಾರ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣದಲ್ಲಿಯ ಮೃತನಾದ ಇಸ್ಮಾಯಿಲ್ ತಂದೆ ಹುಸೇನಸಾಬ ಅಣ್ಣಿಗೇರಿ ವಯಾ: 19 ವರ್ಷ, ಇವನು ಸುಮಾರು 4-5 ವರ್ಷಗಳಿಂದ ಹುಚ್ಚರ ಆಕಾರ ಮಾಡುತ್ತ, ಯಾರಿಗೂ ಹೇಳದೇ ಕೇಳದೇ ಮನೆಬಿಟ್ಟು ಬೇರೆ ಊರುಗಳಿಗೆ ಹೋಗುವದು ಬರುವದು ಮಾಡುತ್ತ ಮಾನಸಿಕ ಕಾಯಿಲೆಯಿಂದ ಬಳಲುತ್ತ ಇದ್ದವನಿಗೆ ಧಾರವಾಡದ ಮಾನಸಿಕ ಆಸ್ಪತ್ರೆಗೆ ತೋರಿಸಿ ಗುಳಿಗೆ ಔಷಧೋಪಚಾರ ಮಾಡುತ್ತ ಬಂದಿದ್ದರೂ ಅವನಿಗೆ ಗುಣವಾಗದ್ದರಿಂದ ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ; 08/01/2019 ರಂದು ಮುಂಜಾನೆ 10.30 ಗಂಟೆಯಿಂದ 11.50 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಕೋಣೆಯ ಸೀಲಿಂಗಿಗೆ ಫ್ಯಾನ್ ಕೂಡಿಸಲು ಹಾಕಿದ ಕಬ್ಬಿಣದ ಸಳಿಗೆ ಪತ್ತಲ ಕಟ್ಟಿ ತಾನಾಗಿಯೇ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಬೇರೆ ಯಾವ ಮತ್ತು ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಂದೆ ವರದಿ ನೀಡಿದ್ದು ಇರುತ್ತದೆ.