ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, January 9, 2019

CRIME INCIDENTS 09-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-01-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕಿರೆಸೂರ ಗ್ರಾಮದ ಮೃತಃ ಸದಾನಂದ  ಶಿವಪ್ಪ ಸವದತ್ತಿ. ವಯಾಃ 43 ವರ್ಷ. ಸಾಃ ಕಿರೇಸೂರ ಇವನು ತನ್ನ ಬಾಬತ್ತ ಮೋಟಾರ ಸೈಕಲ್ ನಂಃ KA-63-TMP -17626 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ನಡೆಯಿಸಿಕೊಂಡು ಬರುತ್ತಿರುವಾಗ, ಇದಕ್ಕೆ ಹುಬ್ಬಳ್ಳಿ- ನವಲಗುಂದ ರಸ್ತೆಯ ಮೇಲೆ, ಕುಸುಗಲ್ಲ ಹದ್ದಿ, ಇಂಗಳಹಳ್ಳಿ ಕ್ರಾಸ್ ಹತ್ತಿರ, ಟ್ರ್ಯಾಕ್ಟರ್ ನಂ. KA-29-T-9326 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಕಿರೇಸೂರ ಕಡೆಯಿಂದ ಕುಸುಗಲ್ಲ ಕಡೆಗೆ ಅತೀ ಜೋರಿನಿಂದ ವ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಅಪಘಾತ ಪಡಿಸಿ ತಲೆಗೆ ಭಾರಿ ಗಾಯ ಪಡಿಸಿದ್ದು ಇವನು ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಹೊಂದುತ್ತಿರುವಾಗ, ದಿಃ 08-01-2019 ರಂದು ರಾತ್ರಿ 10.30 ಗಂಟೆಗೆ ಉಪಚಾರ ಫಲೀಸದೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2019 ಕಲಂ 279.304(ಎ)ವಾಹನ ಕಾಯ್ದೆ 134 .187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.