ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, January 10, 2019

CRIME INCIDENTS 10-01-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-01-2019 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಮೃತ ಮಾರುತಿ ತಂದೆ ಹನಮಂತಪ್ಪ ಕೇಸವಾಯಿ ವಯಾ 48 ವರ್ಷ ಜಾತಿ ಹಿಂದು ವಾಲ್ಮೀಕಿ ಉದ್ಯೋಗ ಟಾಟಾ ಎಸಿ ಡ್ರೈವರ ಸಾ:ಕಣವಿ ಹೊನ್ನಾಪುರ ತಾ:ಧಾರವಾಡ ಇತನು ಹಮೇಶಾ ಸರಾಯಿ ಕುಡಿಯುವ ಚಟವನ್ನು ಹೊಂದಿ ಮಾನಸಿಕ ಅಸ್ವಸ್ಥನಾಗಿ ಅದೇ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 10-01-2019 ರಂದು ಬೆಳಗಿನ 03,00 ಗಂಟೆಯಿಂದ 05,00 ಗಂಟೆಯ ಮದ್ಯೆದ ಅವದಿಯಲ್ಲಿ ತನ್ನ ವಾಸದ ಮನೆಯ ಮುಂದೆ ಕಬ್ಬೀಣ ಪೈಪಿಗೆ ವಾಯರ ಹಗ್ಗವನ್ನು ಕಟ್ಟಿ ಅದೇ ಹಗ್ಗದಿಂದ ತನ್ನಷ್ಠಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ02/2019 ಕಲಂ 174 ಸಿ.ಆರ್. ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಸಂತೋಷ ತಂದೆ ಗದಿಗೆಪ್ಪ ಹೆಬ್ಬಳ್ಳಿಯವರ ವಯಾ 26 ವರ್ಷ ಜಾತಿ ಹಿಂದು ಅಂಬಿಗೇರ ಉದ್ಯೋಗ  ಕೂಲಿ ಕೆಲಸ ಸಾ:ಬ್ಯಾಹಟ್ಟಿ ಹಾಲಿ ಮುಗದ  ಇತನು ಮಾನಸಿಕ ಅಸ್ವಸ್ಥನಿದ್ದು ದಿನಾಂಕ 10-01-2019 ರಂದು ಬೆಳಗಿನ 05,00 ಗಂಟೆಯ ಸುಮಾರಿಗೆ ಯಾವುದೂ ಕಾರಣದ ಸಲುವಾಗಿ ತನ್ನಷ್ಟಕ್ಕೆ ತಾನೆ  ತಾನು ಇದ್ದ ಬಾಡಿಗೆ ಮನೆಯ ಜಂತ್ತಿಗೆ ಹಗ್ಗವನ್ನು ಕಟ್ಟಿ ಅದೇ ಹಗ್ಗದಿಂದ ತನ್ನಷ್ಟಕ್ಕೆ ತಾನೆ ಉರುಲು ಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಮಗನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಾಯಿಯು ಕೊಟ್ಟ ವರದಿಯನ್ನು ನೀಡಿದ್ದು  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ03/2019 ಕಲಂ 174 ಸಿ.ಆರ್. ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.