ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 17, 2019

CRIME INCIDENTS 17-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-02-2019 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಳ್ಳಿ ಅಮ್ಮಿನಭಾವಿ ರಸ್ತೆ ಹೆಬ್ಬಳ್ಳಿ ಗ್ರಾಮದ ಕರೆಮ್ಮ ದೇವರ ಗುಡಿ ಹತ್ತಿರ ಯಾವುದೋ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಹೆಬ್ಬಳ್ಳಿ ಕಡೆಯಿಂದ ಅಮ್ಮಿನಭಾವಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಅಮ್ಮಿನಭಾವಿ ಕಡೆಯಿಂದ ಹೆಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಸಾವಕಾಶವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಮೋಟರ ಸೈಕಲ ನಂ ಕೆಎ 25 ಈ ಬಿ 5093 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ ಸೈಕಲ ಚಾಲಕ ರವಿ ಮುದಕಪ್ಪ ಮುಂಗೋಡಿ ವಯಾಃ34ವರ್ಷ ಜಾತಿಃಹಿಂದೂ ಸಮಗಾರ ಉದ್ಯೋಗ ಕೂಲಿ ಸಾಃಜನತಾ ಪ್ಲಾಟ ಹೆಬ್ಬಳ್ಳಿ ಇವನಿಗೆ ಭಾರಿ ಗಾಯ ಪಡಿಸಿ ಸ್ಥಳದಲ್ಲಿ ಮರಣ ಪಡಿಸಿ ಪಿರ್ಯಾದಿಗೆ  ಸಾದಾ ಗಾಯ ಪಡಿಸಿ ವಾಹನವನ್ನು ನಿಲ್ಲಿಸದೇ ವಾಹನ ಸಮೇತವಾಗಿ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2019 ಕಲಂ279.337.304(ಎ)ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, February 16, 2019

CRIME INCIDENTS 16-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-02-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ತಾರಿಹಾಳ ಗ್ರಾಮದ ಮಾರುತಿ ಹನಮಂತಪ್ಪ ಬಂಡಿವಡ್ಡರ ವಯಾ. 52 ವರ್ಷ ಸಾ. ತಾರಿಹಾಳ ಇವರು ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೊರಗೆ ಹೋದವರು, ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ, ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ.ಅಂತ ಕಾಣೆಯಾದವರ ಮಗ ಅಭಯ ಮಾರುತಿ ಸಾಗರ@ಬಂಡಿವಡ್ಡರ ಸಾ. ತಾರಿಹಾಳ ಇವರು ಪಿರ್ಯಾದಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2019 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ಗ್ರಾಮದ ಮೃತ ಮಹಾದೇವಿ ಕೋಂ ಶಿವಪ್ಪ ಅಣಿಗೇರಿ, ವಯಾ: 24 ವರ್ಷ, ಸಾ: ಶಿರೂರ, ತಾ: ಕುಂದಗೋಳ ಇವಳು ತನಗೆ ಬರುತ್ತಿದ್ದ ಹೊಟ್ಟೆ ನೋವಿನ ಭಾದೆಯನ್ನು ತಾಳಲಾರದೇ ಯಾವುದೋ ವಿಷಕಾರಕ ಎಣ್ಣೆಯನ್ನು ತನ್ನಷ್ಟಕ್ಕೆ ತಾನೇ ಸೇವಿಸಿ ಅಸ್ವಸ್ಥಳಾಗಿ ಸದರಿಯವಳನ್ನು ಕುಂದಗೋಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಉಪಚಾರ ಮಾಡಿಸಿ ಹೆಚ್ಚಿನ ಚಿಕ್ಸಿತೆ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಅವಳು ಉಪಚಾರ ಫಲಿಸದೇ ಈ ದಿವಸ ದಿನಾಂಕ: 16-02-2019 ರಂದು 1230 ಗಂಟೆಗೆ ಮರಣಹೊಂದಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, February 15, 2019

CRIME INCIDENTS 15-02-2019ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-02-2019 ರಂದು ವರದಿಯಾದ ಪ್ರಕರಣಗಳು

1. , ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸುಗಲ್ ಗ್ರಾಮದ ಹತ್ತಿರ, ಹುಬ್ಬಳ್ಳಿ ನವಲಗುಂದ ರಸ್ತೆಯ ಮೇಲೆ, ಆರೋಪಿ ಆನಂದ ಬಾಬು ಘಾಟಗೆ ಸಾ. ಹಿಟ್ನಳ್ಳಿ ತಾ.ಜಿ. ವಿಜಯಪುರ ಇವನು ತನ್ನ ಕ್ರೂಸರ ವಾಹನ ನಂ. ಕೆಎ-28-ಪಿ-0773 ನೇದ್ದನ್ನು ಹೆಬಸೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆಯ ಎಡಬದಿಗೆ ಕಚ್ಚಾ ರಸ್ತೆಯ ಮೇಲೆ ಟಾಟಾ ಏಸ್ ವಾಹನ ನಂ. ಕೆಎ-28-ಬಿ-0196 ನೇದ್ದಕ್ಕೆ ಸ್ಟೇಪ್ಣಿ ಜೋಡಿಸುವ ಸಲುವಾಗಿ, ವಾಹನಕ್ಕೆ ಜಾಕ್ ಹಚ್ಚುತ್ತಿದ್ದಾಗ, ಪಿರ್ಯಾದಿ ಯಮನಪ್ಪ ಹನಮಗೌಡ ಚಿತ್ತವಾಡಗಿ ಸಾ. ಚಿಕ್ಕಯರನಕೇರಿ ಪೊ. ಬೇವಿನಮಟ್ಟಿ ತಾ. ಹುನಗುಂದ ಜಿ. ಬಾಗಲಕೋಟೆ ಇವರ ಎರಡು ಪಾದಗಳ ಮೇಲೆ ಕ್ರೂಸರ ವಾಹನ ನಂ. ಕೆಎ-28-ಪಿ-0773 ನೇದ್ದನ್ನು ಹಾಯಿಸಿ, ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, February 14, 2019

CRIME INCIDENTS 14-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-02-2019 ರಂದು ವರದಿಯಾದ ಪ್ರಕರಣಗಳು

1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂಕೂರ ಗ್ರಾಮದ ಮಕ್ತುಂಸಾಬ ಇವರ  ಮನೆಯಲ್ಲಿಂದ ಇದರಲ್ಲಿ ಕಾಣೆಯಾದ ಆಸೀಮಾ ಕೋಂ ಶರೀಫಸಾಬ ಇಟಗಿ. ವಯಾ: 19 ವರ್ಷ, ಸಾ: ಬಡಾಬಡಾಸಂಗಾಪೂರ, ತಾ: ರಟ್ಟಿಹಳ್ಳಿ, ಹಾಲಿ: ಕುಂಕೂರ, ತಾ: ಕುಂದಗೋಳ ಇವಳು ದವಾಖಾನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಂಚಟಗೇರಿ ಗ್ರಾಮದ ಕೇರೆಯ ಹತ್ತಿರ ಇರುವ ಖೂಲ್ಲಾ ಜಾಗೆಯಲ್ಲಿ ಆರೋಪಿತರಾದ 1.ರಾಹುಲ ಪೋಲ್ ಹಾಗೂ ಇನ್ನೂ 08 ಜನರು ಕೊಡಿಕೊಂಡು  ತಮ್ಮ ತಮ್ಮ ಫಾಯ್ದೇಗೋಸ್ಕರ ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ. 5600/- ರೂಪಾಯಿಗಳು, 5 ಮೋಟರ ಸೈಕಲಗಳು , 8 ಮೋಬೈಲ್ ಪೋನಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ, ಸಿದ್ಧರಾಮೇಶ್ವರ ಮಠದ ಜಾಗೆಯಲ್ಲಿರುವ, ಬಿ.ಎಸ್.ಎನ್.ಎಲ್. ಮೊಬೈಲ್ ಟಾವರಗೆ ಪಿರ್ಯಾದಿದಾರರು ಅಳವಡಿಸಿದ್ದ 24(400AH 1 SET) ಬ್ಯಾಟರಿ ಅ.ಕಿ. 48000/- ರೂ. ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ, ಸಿದ್ದರಾಮೇಶ್ವರ ಮಠದ ಜಾಗೆಯಲ್ಲಿರುವ ಪಿರ್ಯಾದಿದಾರರ ಬಿ.ಎಸ್.ಎನ್.ಎಲ್. ಟಾವರಗೆ ಅಳವಡಿಸಿರುವ ಬ್ಯಾಟರಿ 24(400AH 1 SET) ಅ.ಕಿ. 48000/- ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಹಾಳಕುಸುಗಲ್ ಗ್ರಾಮದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ ದಾವಲಸಾಬ ಅಲ್ಲಿಸಾಬ ಹೆಬಸೂರ ವಯಾ:38 ವರ್ಷ ಸಾ: ಹಾಳಕುಸುಗಲ ಈತನು ತನ್ನ ಸ್ವಂತ ಪಾಯ್ದೆಗೋಸ್ಕರ ಪಾಸ್ ವ ಪರ್ಮಿಟ ಇಲ್ಲದೆ ಅನಧಿಕೃತವಾಗಿ 1) 30 ಬೆಂಗಳೂರು ಮಾಲ್ಟ ವಿಸ್ಕಿ ತುಂಬಿದ 90 ಎಮ್ ಎಲ್ ಟೆಟ್ರಾ ಪ್ಯಾಕೇಟಗಳು ಅ.ಕಿ.720 =00 2) 12 ಓಲ್ಡ ಟಾವರೇನ ವಿಸ್ಕಿ ತುಂಬಿದ 180 ಎಮ್ ಎಲ್ ದ ಟೆಟ್ರಾ ಪ್ಯಾಕೇಟಗಳು ಅ.ಕಿ.880=00 3)ಒಂದು ಗೊಬ್ಬರ ಚೀಲ ಅ.ಕಿ.00=00 ಇವುಗಳ ಒಟ್ಟು ಕಿಮ್ಮತ್ತು 1600 =00 ರೂಪಾಯಿ ತನ್ನ ತಾಬಾದಲ್ಲಿಟ್ಟಕೊಂಡು ಮಾರಾಟ ಮಾಡುತ್ತಿದ್ದಾಗ ಮಾಲ್ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆಯ ಮೇಲೆ ಸ್ಪೈಸರ್ ಇಂಡಿಯಾ ಕಂಪನಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ವಿಶ್ವನಾಥ ಬಾಬಜಿ ಇತನು  ತನ್ನ ಬಳಿ ಯಾವುದೆ ಪಾಸು ವ ಪರ್ಮಿ ಇಲ್ಲದೆ ಅನಧಿಕೃತವಾಗಿ ಒಟ್ಟು  ಅ..ಕಿ..2742/- ಕಿಮ್ಮತ್ತಿನ  Old Tavern Whaisky 180 ML.ದ 40 Tetra pockets ನೇದವುಗಳನ್ನು ಮಾರಾಟ ಮಾಡುವ ಉದ್ದೆದಿಂದ ಸಾಗಟ ಮಾಡಲು ಬಸ್ಸಿಗಾಗಿ ಕಾಯುತ್ತಾ ನಿಂತಾಗ ಮಾಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, February 13, 2019

CRIME INCIDENTS 13-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-02-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರಗುಪ್ಪಿ ಗ್ರಾಮದ ಕೇರೆಯ ಹತ್ತಿರ ಇರುವ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ ನೀಲಪ್ಪ ತಂದೆ ಸಿದ್ದಪ್ಪ ಜಟ್ಟಪ್ಪನವರ ಸಾ. ಶಿರಗುಪ್ಪಿ 2) ಗುರಣಗೌಡ ತಂದೆ ಮಲ್ಲನಗೌಡ ದೊಡ್ಡಲಿಂಗನವರ ಸಾ. ಶಿರಗುಪ್ಪಿ 3) ಬಸವರಾಜ ತಂದೆ ವಲಮಪ್ಪ ಬಳಿಗಾರ 4) ಶಿವಪುತ್ರಯ್ಯಾ ತಯಂದೆ ಜಗದೀಶಯ್ಯಾ ಹಿರೇಮಠ ಸಾ. ಶಿರಗುಪ್ಪಿ 5) ಈರಭದ್ರಪ್ಪ ತಂದೆ ಈರಪ್ಪ ಕುಂಬಾರ ಸಾ. ಉಮಚಗಿ ಇವರೆಲ್ಲರು ಕೂಡಿಕೊಂಡು ತಮ್ಮ ತಮ್ಮ ಪಾಯ್ದೆಗೊಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿರುವಾಗ  ಸದರಿಯವರ ತಾಬಾದಲ್ಲಿಂದ ಒಟ್ಟು ಹಣ 3200/- ರೂಪಾಯಿಗಳು ಹಾಗೂ 52 ಇಸ್ಪೀಟ ಎಲೆಗಳ ಸಹಿತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ23/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಹತ್ತಿರ ಆರೋಪಿ ಟಾಟಾ ಏಸಿಇ ಗೂಡ್ಸ ಗಾಡಿ ನಂ KA-29 A-4700 ನೇದ್ದರ ಚಾಲಕನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಯ ಟ್ರ್ಯಾಕ್ಟರ ನಮ KA-18 TA-9487 ನೇದ್ದು ರಸ್ತೆಯ ಎಡಸೈಡಿನಲ್ಲಿ ನಿಂತಾಗ ಪಿರ್ಯಾದಿಯ ಅಳಿಯನಾದ ಕಾರ್ತಿಕ ಈತನು ಬರ್ಹಿದೆಸೆಗೆ ನಿಂತಾಗ ಆರೋಪಿತನು ಪಿರ್ಯಾದಿ ಅಳಿಯನಿಗೆ ಡಿಕ್ಕಿ ಮಾಡಿ ಬಲಗಾಲಿಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, February 12, 2019

CRIME INCIDENTS 12-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-02-2019 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ: ಅಮೃತೇಶ್ವರ ದೇವಸ್ತಾನದ ಹತ್ತಿರ ಆರೋಪಿತನಾದ ಗುರುನಾಥ ತಂದೆ ದತ್ತಪ್ಪ ಆಕಳವಾಡಿ ಸಾ: ಅಣ್ಣಿಗೇರಿ ಈತನು ಅಮೃತೇಶ್ವರ ದೇವಸ್ಥಾನದ ಮುಂದುಗಡೆಯ ಖುಲ್ಲಾ ಜಾಗೆಯಲ್ಲಿ ತನ್ನ ಫಾಯದೇಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಮಟಕಾ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ115-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2019 ಕಲಂ 78(3)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ರಾಮನಕೊಪ್ಪ ಗ್ರಾಮದ ಲಕ್ಷೀ ಮೊರೆ ಇವರ  ಮಗಳು ಗಾಯತ್ರಿ ತಂದೆ ಬಸಪ್ಪ ಮೋರೆ, ವಯಾ 19 ವರ್ಷ, ಸಾ: ತಡಸ ಕ್ರಾಸ್, ರಾಮನಕೊಪ್ಪ, ತಾ: ಕುಂದಗೋಳ, ಜಿ: ಧಾರವಾಡ ಇವಳು ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಯಾವುದೋ ಕಾರಣಕ್ಕಾಗಿ ಮನೆಯಿಂದ ಎಲ್ಲಿಯೋ ಹೋಗಿದ್ದು ಇರುತ್ತದೆ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2019 ಕಲಂ ಹೆಣ್ಣುಮಗು ಕಾಣೆ ಪ್ರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಟಾಟಾ ಸುಮೊ ನಂ KA-29 B-2711 ನೇದ್ದರ ಚಾಲಕ ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತಿ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನವಲಗುಂದದಿಂದ ಶೆಲವಡಿ ಕಡೆಗೆ ಹೊರಟ ಟಮ್ ಟಮ್ ಆಟೋರಿಕ್ಷಾದಲ್ಲಿದ್ದವರಿಗೆ ನಂ KA-27 A-6953 ನೇದ್ದಕ್ಕೆ ಡಿಕ್ಕಿ ಮಾಡಿ ನನಗೆ ಮತ್ತು ಟಮ್ ಟಮ್ ರೀಕ್ಷಾದಲ್ಲಿದ್ದವರಿಗೆ ಸಾದಾ ವ ಭಾರಿ ಗಾಯಪಡಿಸಿ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು .ನಮಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದೆ, ಠಾಣೆಗೆ ತಿಳಿಸದೇ ಹೋಗಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2019 ಕಲಂ 279.337.338. ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಲಸಿದ್ದು ಇರುತ್ತದೆ.

4. ಗರಗ ಪೊಲೀಸ ಠಾಣೆ ವ್ಯಾಪ್ತಿಯ: ಶಿಂಗನಳ್ಳಿ ಗ್ರಾಮದಲ್ಲಿರುವ ವರದಿಗಾರಳ ಮನೆಯಲ್ಲಿ ದಿನಾಂಕಃ 11-02-2019 ರಂದು ಮುಂಜಾನೆ 9-00 ಗಂಟೆಯಿಂದಾ ಸಂಜೆ 6-00 ಗಂಟೆಯ ನಡುವಿನ ಅವಧಿಯಲ್ಲಿ ಮೃತ ಫಾತಿಮಾ ತಂದೆ ಮಹಮ್ಮದಲಿ ಸೈಯದನವರ. ವಯಾಃ18 ವರ್ಷ ಇವಳು ಏಕಾ ಏಕಿ ಸಂಶಯಾಸ್ಪದ ರೀತಿಯಲ್ಲಿ ಮನೆಯ ಹಂಚಿನ ತಾಟಿನ ಕಟ್ಟಿಗೆಯ ಜಂತಿಗೆ ಸೀರೆಯಿಂದಾ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ವರದಿಗಾರಳ ವರದಿಯಿಂದಾ ತಿಳಿದು ಬಂದಿದ್ದು ಇರುತ್ತದೆ, ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Monday, February 11, 2019

CRIME INCIDENTS 11-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-02-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೋಗಿಲೆಗೇರಿ ಗ್ರಾಮದ  ರಸ್ತೆಯ ಕೋಗಿಲಗೇರಿ ಗ್ರಾಮದ ಸಮೀಪ ರಸ್ತೆಯ ಮೇಲೆ ಇದರಲ್ಲಿಯ ಪಿರ್ಯಾದಿದಾರನು ಅಳ್ನಾವರ ಕಡೆಯಿಂದ ದಾರವಾಡ ಕಡೆಗೆ ಕಾರ ನಂಬರ ಎ.ಪಿ.21/ಎ.ಜಿ-4888 ನೇದ್ದರಲ್ಲಿ ಹೋಗುವಾಗ ಅವರ ಹಿಂದಿನಿಂದ ಅಳ್ನಾವರ ಕಡೆಯಿಂದ ದಾರವಾಡ ಕಡೆಗೆ ಹೊರಟ ಮೋಟರ ಸೈಕಲ್ಲ ನಂಬರ ಕೆ.ಎ 25/ಇ.ವ್ಹಿ-0011 ನೇದ್ದರ ಚಾಲಕನಾದ ಮಲ್ಲಪ್ಪ @ ಮಲ್ಲೇಶ ಸಳಕೆಣ್ಣವರ ಸಾ|| ಕೋಗಿಲಗೇರಿ ತಾ|| ಅಳ್ನಾವರ ಅವನು ತಾನು ನಡೆಯಿಸುತ್ತಿದ್ದ ಮೋಟರ ಸೈಕಲ್ಲನ್ನು ಅತೀ ಜೋರಿನಿಂದ ಹಾಗೂ ದುಡುಕುತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನು ಬಾರಿ ದುಖಾ:ಪತ್ತ ಹೊಂದಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸಗಲ್ಲ ಗ್ರಾಮದ ಹತ್ತಿರ ಮಾಡಿದ ಕಾರ ನಂ. KA25-MB-378 ನೇದ್ದರ ಚಾಲಕನು ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀಜೋರಿನಿಂದ ವ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ,  ಹುಬ್ಬಳ್ಳಿ ನವಲಗುಂದ ರಸ್ತೆಯ ಮೇಲೆ, ಕುಸುಗಲ್ಲ ಸಿದ್ದಾರೋಡ ಮಠದ ಹತ್ತಿರ ರಸ್ತೆಯ ಎಡಬದಿಯಲ್ಲಿ ಇದರಲ್ಲಿಯ ಪಿರ್ಯಾಧಿ ತನ್ನ ಬಾಬಾತ್ತ ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದಾಗ ಕುರಿಗಳ ಪೈಕಿ ಎರಡು ಕುರಿಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅವುಗಳನ್ನು ಸ್ಥಳದಲ್ಲಿಯೇ ಮರಣ ಪಡಿಸಿ ಗಾಡಿಯನ್ನು ಮೊದಲು ತರುಬಿ ನಂತರ ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2019 ಕಲಂ 279.ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, February 10, 2019

CRIME INCIDENTS 10-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-02-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾಲವಾಡ ಕ್ರಾಸ ಹತ್ತಿರ ಆರೋಪಿತನಾದ ರಮೇಶ ತಂದೆ ಭರಮಪ್ಪ ಪೂಜಾರ ಸಾ: ಹನಮಸಾಗರ ತಾ: ಕುಷ್ಠಗಿ ಜಿ: ಕೊಪ್ಪಳ ಈತನು ತಾನು ಚಲಯಿಸುತ್ತಿದ್ದ ಟಿ.ವ್ಹಿಎಸ್ ಸ್ಟಾರ್ ಸಿಟಿ ಮೋಟರ ಸೈಕಲ ನಂಬರ ಕೆಎ-27/ಎಲ್-8325 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಕಾಲವಾಡ ಕ್ರಾಸ್ ಹತ್ತಿರ ರಸ್ತೆಯ ಕಾಮಗಾರಿ ನಡೆಯುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಬ್ಬಿಣದ ಬ್ಯಾರಿಕೇಡ್ಗಳನ್ನು ರಸ್ತೆಯ ಮೇಲೆ ಒಂದು ಸೈಡಿಗೆ ಇಟ್ಟಿದ್ದು ಅದನ್ನು ಮೋಟರ ಸೈಕಲ್ ಚಾಲಕನು ಗಮನಿಸದೇ ಅಲಕಷತನದಿಂದ ತನ್ನ ಮೋಟರ ಸೈಕಲ್ಲಿನ ವೇಗದ ನಿಯಂತ್ರಣ ಮಾಡಲಾಗದೇ ಬ್ಯಾರಿಕೇಡಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ತಲೆಗೆ ಭಾರಿ ಪ್ರಮಾಣದ ಮಾರಣಾಂತಿಕ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಅಲ್ಲದೇ ತನ್ನ ಮೋಟರ ಸೈಕಲ್ ಹಿಂದೆ ಕುಳಿತಿದ್ದ ನಾಗರಾಜ ಪರಸಪ್ಪ ಕೋಳುರು ಇವನಿಗೆ ಸಾಧಾ ವ ಭಾರಿ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2019 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, February 9, 2019

CRIME INCIDENTS 09-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-02-2019 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಬೂದಿಹಾಳ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಇಸಿದುಕೊಂಡು ಓ.ಸಿ ಎಂಬ ನಶೀಬಿನ ಅಂಕಿ ಸಂಖ್ಯೆಗಳ ಜೂಜಾಟವನ್ನು ಆಡಿಸುತ್ತಿದ್ದಾಗ ಸಿಕ್ಕ ಆರೋಪಿ ಮಂಜಪ್ಪ ತಂದೆ ಚನ್ನಪ್ಪ ಸವಣೂರ, ವಯಾಃ 42 ವರ್ಷ, ಸಾ: ಹಿರೇಬೂದಿಹಾಳ ಇತನಿಗೆ ಹಾಗೂ ಮುದ್ದೆ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿಯವನ ಮೇಲೆ   ಗುನ್ನಾನಂ 06/2019 ಕಲಂ:78 [iii] ಕೆ,ಪಿ ಆಕ್ಟ್ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹೋರಕೇರಿ ಗ್ರಾಮದ ಹತ್ತಿರ  ಆರೋಪಿತ ಬಸವರಾಜ ಗುರಪ್ಪ ಕಾಳಿ, ವಯಾ 26 ವರ್ಷ ಸಾಃ ನಾಗರಹಳ್ಳಿ ತಾಃ ನವಲಗುಂದ ಈತನು ತಾನು ಚಲಾಯಿಸುತಿದ್ದ ಟಾಟಾ ಲಾರಿ ನಂಬರ್ KA-63/4485 ನೇದ್ದನ್ನು ರಾಷ್ಟ್ರೀಯ ಹೆದ್ದಾರಿ 63 ಗದಗ ಹುಬ್ಬಳ್ಳಿ ರಸ್ತೆಯಲ್ಲಿ ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಕೊಂಡಿಕೊಪ್ಪ ಗ್ರಾಮ ಹದ್ದಿಯ ಸವಳಹಳ್ಳ ಬ್ರಿಡ್ಜ ಹತ್ತಿರ ರಸ್ತೆಯ ಮೇಲೆ ತನ್ನ ಮುಂದೆ ಅಣ್ಣಿಗೇರಿ ಕಡೆಗೆ ಹೊರಟ ಬಜಾಜ ಪಲ್ಸರ್ ಮೋಟರ್ ಸೈಕಲ್ ನಂಬರ್ KA-25/EZ 2832 ನೇದ್ದನ್ನು ಓವರ್ ಟೇಕ್ ಮಾಡುತ್ತಾ ಸದರ ಮೋಟರ್ ಸೈಕಲ್ ಗೆ  ಲಾರಿಯ ಎಡಭಾಗವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ್ ಸೈಕಲ್ ಚಾಲಕ ರಾಘವೇಂದ್ರ ಈಶ್ವರಪ್ಪ ಇಂಗಳಹಳ್ಳಿ ವಯಾ 21 ವರ್ಷ ಸಾಃ ಅಣ್ಣಿಗೇರಿ ಇವನು ಹಾಗು ಮೋಟರ್ ಸೈಕಲ್ ಹಿಂಬದಿ ಸವಾರ ಪಿರ್ಯಾದಿಯ ಮಗನಾದ ಪ್ರಶಾಂತ ನಿಂಗಪ್ಪ ಬೀರಣ್ಣವರ ವಯಾ 22 ವರ್ಷ ಸಾಃ ಅಣ್ಣಿಗೇರಿ ಇವರು ಕೆಳಗೆ ಬೀಳುವಂತೆ ಮಾಡಿ ಮೋಟರ್ ಸೈಕಲ್ ಚಾಲಕ ರಾಘವೇಂದ್ರ ಈತನಿಗೆ ಸಾದಾ ವ ಭಾರೀ ಪ್ರಮಾಣದ ಗಾಯ ಪೆಟ್ಟು ಮಾಡಿದ್ದು ಅಲ್ಲದೇ ಹಿಂಬದಿ ಸವಾರ ಪಿರ್ಯಾದಿಯ ಮಗನ ಎಡಗೈ ಮೇಲೆ ಲಾರಿಯ ಹಿಂಬದಿಯ ಟೈರ್ ಹಾಯುವಂತೆ ಮಾಡಿ ಅಪಘಾತ ಪಡಿಸಿ ಎಡಗೈಗೆ ಭಾರೀ ಪ್ರಮಾಣದ ಗಾಯ ಪೆಟ್ಟು ಮಾಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬ,ಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ಆರೋಪಿ ಫಕ್ಕೀರಪ್ಪ ಈರಪ್ಪ ಅಂಗಡಿ ಸಾ. ಬ್ಯಾಹಟ್ಟಿ ಇವನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ, ತನ್ನ ಎಗ್ ರೈಸ್ ಅಂಗಡಿಗೆ ಬಂದ ಜನರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಅನಧಿಕೃತವಾಗಿ 1] 90 ಎಂ. ಎಲ್. ದ ಬೆಂಗಳೂರು ಮಾಲ್ಟ್ ವಿಸ್ಲಿ ಟೆಟ್ರಾ ಪೌಚಗಳು ಅ.ಕಿ. 489.40/- ರೂ. ನೇದ್ದವುಗಳನ್ನು ಮಾರಾಟ ಮಾಡುವತ್ತಿರುವಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2019 ಕಲಂ 15(ಎ)32(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, February 7, 2019

CRIME INCIDENTS 07-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-02-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 06-02-2019 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 07-02-2019 ರಂದು ಬೆಳಗಿನ ಜಾವ 6-00 ಗಂಟೆಯ ನಡುವಿನ ಅವಧಿಯಲ್ಲಿ, ಕೊಟಗೊಂಡಹುಣಸಿ ಗ್ರಾಮದ ಸರ್ವೆ ನಂ. 105 ಜಮೀನದಲ್ಲಿ, ಯಾರೋ ಆರೋಪಿತರು, ಮೃತ ಸುಮಾರು 20 ರಿಂದ 25 ವಯಸ್ಸಿನ ಹೆಣ್ಣು ಮಗಳಿಗೆ, ಯಾವುದೋ ಕಾರಣಕ್ಕೆ ಚಾಕು ಅಥವಾ ಹರಿತವಾದ ಆಯುಧದಿಂದ ಕುತ್ತಿಗೆ, ಹಾಗೂ ಗದ್ದಕ್ಕೆ ಹೊಡೆದು ರಕ್ತ ಗಾಯಪಡಿಸಿ ಕೊಲೆ ಮಾಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗುನ್ನಾನಂ 20/2019 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಲ್ಲರವಾಡ ಗ್ರಾಮದ ಯಾವುದೋ ಟ್ರ್ಯಾಕ್ಟರ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ನವಲಗುಂದ ಕಡೆಯಿಂದ ಬಲ್ಲರವಾಡದ ಕಡೆಗೆ ಬಲ್ಲರವಾಡ ಗ್ರಾಮದ ಶಾನವಾಡ ರವರ ರೇಷ್ಮೆ ಸಾಕಾಣಿಕೆ ಕೇಂದ್ರದ ಹತ್ತಿರ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಸೈಡಿನಲ್ಲಿ ಬಂದು ತನ್ನ ಎದುರಿಗೆ ಬಲ್ಲರವಾಡದ ಕಡೆಯಿಂದ ನವಲಗುಂದ ಕಡೆಗೆ ಮೃತನು ತನ್ನ ಸೈಡಿನಲ್ಲಿ ಚಾಲನೆ ಮಾಡಿಕೊಂಡು ಹೊರಟ ಹೊಂಡಾ ಡ್ರೀಮ್  ಮೋಟರ್ ಸೈಕಲ್ ನಂಬರ್ KA-25/EU 8005 ನೇದ್ದಕ್ಕೆ ಟ್ರ್ಯಾಕ್ಟರನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಟ್ರ್ಯಾಕ್ಟರನ ಟ್ರೆಲರ ಬಡಿಯುವಂತೆ ಮಾಡಿ ಮೋಟರ್ ಸೈಕಲ್ ಚಾಲಕ ಮೃತ ಶಿವಪುತ್ರಪ್ಪ @ ಮುತ್ತು ತಂದೆ ಪಕ್ಕಿಪ್ಪ ಸತ್ಯನಾಯ್ಕರ ವಯಾ 32 ವರ್ಷ ಸಾಃ ಯರಗುಪ್ಪಿ ತಾಃ ಕುಂದಗೋಳ ಈತನ ತಲೆಗೆ, ಹಣೆಗೆ ಮರಣಾಂತಿಕ ಗಾಯ ಪೆಟ್ಟು ಪಡಿಸಿ ಅವನನ್ನು ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದಲ್ಲದೇ ಮೃತನು ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ನ ಹಿಂಬದಿ ಸವಾರ ಪಿರ್ಯಾದಿಯ ಸಹೋದರನಾದ ಮೈಲಾರೆಪ್ಪ ತಂದೆ ಶಿವಾನಂದ ಕರೆಮ್ಮನವರ ವಯಾ 24 ವರ್ಷ ಈತನಿಗೂ ಸಹಿತ ತಲೆಗೆ, ಮುಖಕ್ಕೆ ಸಾದಾ ವ ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸುವಂತೆ ಮಾಡಿದ್ದು ನಂತರ ಈ ಅಪಘಾತದ ಬಗ್ಗೆ ಮಾಹಿತಿಯನ್ನು ನೀಡದೇ ಅಪಘಾತ ಪಡಿಸಿರುವ ಹಾಗು ತಾನು ಚಾಲನೆ ಮಾಡುತ್ತಿದ್ದ ಟ್ರ್ಯಾಕ್ಟರ ಸಮೇತ ಪರಾರಿ ಆಗಿ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2019 ಕಲಂ 279.337.338.304(ಎ)ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಯಾದವಾಡ ಗ್ರಾಮ ಹದ್ದಿಯಲ್ಲಿರುವ ಸೋಮಪ್ಪಾ ಇವರ ಸರ್ವೆ ನಂಬರಃ 6, ಕ್ಷೇತ್ರ 8 ಎಕರೆ, 10 ಗುಂಟೆ ಹೊಲದ ಬದುವಿನಲ್ಲಿ ದಿನಾಂಕಃ 23-12-2018 ರಂದು 18-00 ಅವರ್ಸಕ್ಕೆ ನಮೂದ ಆರೋಪಿತನಾದ ಆನಂದ ತಂದೆ ಪ್ರಭುಲಿಂಗಪ್ಪಾ ಕೇಶಗೊಂಡ. ಸಾಃ ಯಾದವಾಡ ಇತನು ಹೊಲ ಅಳತೆಯ ಸಂಭಂದ ಹಳೆಯ ದ್ವೇಷ ಇಟ್ಟುಕೊಂಡು ಪಿರ್ಯಾದಿ ಸಂಗಡ ವಿನಾಃಕಾರಣ ತಂಟೆ ತೆಗೆದು ಹಲ್ಕಟ ಬೈದಾಡಿ ಕೈಯಿಂದಾ ಮತ್ತು ಬಡಿಗೆಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2019 ಕಲಂ 323.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಬಸವರಾಜ ತಂದೆ ಲಕ್ಷಣ್ಣ ಪಾಶ್ಚಾಪುರ ವಯಾ 44 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ  ಕೆಲಸ ಸಾ:ತಲವಾಯಿ  ಇತನು ಹಮೇಶಾ ಸರಾಯಿ ಕುಡಿಯು ಚಟವನ್ನು ಹೊಂದಿ ಮದ್ಯೆದ ವ್ಯೆಸನಿಯಾಗಿದ್ದು ಇದರಿಂದ ಹೊಟ್ಟೆಯಲ್ಲಿ ನೀರು ತುಂಬಿ ಎರಡು ಕಿಡ್ನಿಗಳು ಪೇಲ್ ಆಗಿದ್ದು ಇದ್ದರಿಂದ ಮಾನಸಿಕ ಮಾಡಿಕೊಂಡು ದಿನಾಂಕ 04-02-2019 ರಂದು ಸಾಯಂಕಾಲ 5,00 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಠಕ್ಕೆ ತಾನೆ ಯಾವೂದೂ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಉಪಚಾರಕ್ಕೆ ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಧಾಖಾಲಾಗಿ ಉಪಚಾರವನ್ನು ಹೊಂದುವ ಕಾಲಕ್ಕೆ ಉಪಚಾರ ಪಲೀಸದೆ ದಿನಾಂಕ 07-02-2019 ರಂದು ಬೆಳಿಗ್ಗೆ 7,30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, February 6, 2019

CRIME INCIDENTS 06-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-02-2019 ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಸೊಸೈಟಿ ಹತ್ತಿರ ಇರುವ ಸ್ಮಶಾನಗಟ್ಟಿಯಲ್ಲಿ ಆರೋಪಿತರಾದ 1) ಅಡಿವೆಪ್ಪ ಫಕ್ಕೀರಪ್ಪ ಕರಿಷಣ್ಣವರ, 2) ಮಂಜುನಾಥ ಕರೆಪ್ಪ ಕರಿಷಣ್ಣವರ, 3) ಈರಪ್ಪ ಕರೆಪ್ಪ ಕರಿಷಣ್ಣವರ. ಸಾ: 3 ಜನರು ಸಂಶಿ, ತಾ: ಕುಂದಗೋಳ ಇವರು ನಾಗಪ್ಪಾ ಇವರಿಗೆ ಅಡ್ಡಗಟ್ಟಿ ತರುಬಿ ವಿನಾಃಕಾರಣ ಅಂತಾ ಅವಾಚ್ಯ ಬೈಯ್ದಾಡಿ, ಕೈಯಿಂದ ಹೊಡೆ ಬಡೆ ಮಾಡಿದ್ದಲ್ಲದೇ, ಆರೋಪಿತರೆಲ್ಲರೂ ಪಿರ್ಯಾದಿಗೆ ಇದೊಮ್ಮೆ ಉಳಕೊಂಡಿ ಇನ್ನೊಮ್ಮೆ ಸೀಗ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2019 ಕಲಂ 323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, February 5, 2019

CRIME INCIDENTS 05-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-02-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಸಿಂಗಹಳ್ಳಿ ಗ್ರಾಮದ ಕಾರ ನಂ.ಕೆ.ಎ.25/ಎಮ.ಬಿ./9997 ನೇದ್ದರ ಚಾಲಕನು ತನ್ನ ಕಾರನ್ನು ಬೆಳಗಾವಿ-ಕಡೆಯಿಂದಾ  ಧಾರವಾಡ ಕಡೆಗೆ ಸಿಂಗನಹಳ್ಳಿ ಕ್ರಾಸ್ ಹತ್ತಿರ ಹೆದ್ದಾರಿಯ ಮೇಲೆ ಅತೀಜೊರಿನಿಂದಾ ವ  ನಿಷ್ಕಾಳಜಿತನದಿಂದಾ ಚಲಾಯಿಸಿಕೊಂಡು ಬಂದು ತನ್ನ ಕಾರನ್ನು ನಿಯಂತ್ರಣವನ್ನು ಕಳೆದುಕೊಂಡು ತನ್ನ ಮುಂದೆ ಹೋಗುತ್ತಿದ್ದ ಯಾವುದೋ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದ 3  ಜನರಿಗೆ ಸಾದಾ ಸ್ವರೂಪದ ಗಾಯ ಪಡಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2019 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತನಾದ ಅರ್ಜುನ ತಂದೆ ಯಲ್ಲಪ್ಪ ಅಟಗಲ್ ವಯಾ-35 ವರ್ಷ ಸಾ: ಅಣ್ಣಿಗೇರಿ ತಾ: ನವಲಗುಂದ ಈತನಿಗೆ ಈಗ ಸುಮಾರು 03 ವರ್ಷಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ಸದರಿಯವನು ಹೊಟ್ಟೆ ನೋವು ಬಂದಾಗ ಬಹಳ ತ್ರಾಸ ಮಾಡಿಕೊಳ್ಳುತ್ತಿದ್ದು ಅವನು ಇತ್ತಿತ್ತಲಾಗಿ ನೋವಿನ ಬಾದೆಯಿಂದ ಸಾರಾಯಿ ಕುಡಿಯುವ ಚಟವನ್ನು ರೂಡಿಸಿಕೊಂಡಿದ್ದು ಸದರಿಯವನು ದಿನಾಂಕ 01-02-2019 ರಂದು 16-00 ಗಂಟೆಯಿಂದ ದಿನಾಂಕ 05-02-2019 ರಂದು 11-00 ಗಂಟೆಯ ನಡುವಿನ ಅವಧಿಯಲ್ಲಿ ತನಗಿರುವ ಹೊಟ್ಟೆ ನೋವಿನ ಭಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ತಮ್ಮ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ಹಗ್ಗವನ್ನು ಕಟ್ಟಿ ಹಗ್ಗದ ಇನ್ನೊಂದು ಭಾಗದಿಂದ ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿದಾರರ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಗ್ರಾಮದ  ಮೃತ ಮಹಾವೀರ ಶಾಂತಪ್ಪ ಹೊಂಡದ, ವಯಾ: 34 ವರ್ಷ, ಸಾ: ಬೆಟದೂರ ಇವನು ಕುಂದಗೋಳ ಹದ್ದಿಯ ತಮ್ಮ ಜಮೀನದಲ್ಲಿ ತನ್ನ ತಂದೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿನ ಬೆಳೆಸಾಲ ಹಾಗೂ ತಾನು ಮಾಡಿದ ಕೈಗಡ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕ: 05-02-2019 ರ ಮಧ್ಯಾಹ್ನ 1-00 ಗಂಟೆಗೆ ಮರಣ ಹೊಂದಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಮೃತನ ಹೆಂಡತಿಯು ವರದಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿಯುಡಿನಂ 03/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Monday, February 4, 2019

CRIME INCIDENTS 04-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-02-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಆರೋಪಿ ಮಹಾಂತೇಶ ತಂದೆ ಹುಲಿಗೆಪ್ಪ ವಡ್ಡರ ವಯಾ: 28 ವರ್ಷ ಸಾ:ವಡ್ಡರ ಓಣಿ, ನವಲಗುಂದ ಈತನು ತನ್ನ ಸ್ವಂತ ಫಾಯಿದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ 55 ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ 90 ಎಂ.ಎಲ್. ರೂ 1.760-00 ಮೌಲ್ಯದ  ಟೆಟ್ರಾ ಪ್ಯಾಕೇಟುಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 09/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಮೃತ ಜಯಂತಿ  ಮಹೇಶ ಶೆಲವಡಿ ವಯಾ:32 ವರ್ಷ ಈತಳಗಿ ಸುಮಾರು 08 ವರ್ಷದಿಂದ ಹೊಟ್ಟೆ ನೋವು ಮತ್ತು ಮಲಬದ್ದೆತೆ ಇದ್ದು ಅಲ್ಲಲ್ಲಿ ಆಸ್ಪತ್ರೆಗೆ ತೋರಿಸಿದರು ಆರಾಮ ವಾಗಿರುವದಿಲ್ಲ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಈ ದಿವಸ ತನ್ನಪತ್ಲದ ಸಹಾಯದಿಂದ ಉರುಲು ಹಾಕಿಕೊಂಡು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಮೃತನ ತಾಯಿಯು ತನ್ನ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Sunday, February 3, 2019

CRIME INCIDENTS 03-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-02-2019 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಸುಳ್ಳ ಗ್ರಾಮದ ದಿನಾಂಕಃ 03-02-2019 ರಂದು ಮುಂಜಾನೆ 08-00 ಗಂಟೆಗೆ ಸುಳ್ಳ ಗ್ರಾಮದ ಚಿಕ್ಕಹಳ್ಳದಲ್ಲಿ ಆರೋಪಿತರಾದ 1.ಮಂಜುನಾಥ ಗೋರಿ ಹಾಗೂ ಇನ್ನೂ 07 ಜನರು ತಮ್ಮ ತಮ್ಮ ಫಾಯ್ದೇಗೋಸ್ಕರ ಪಣಕ್ಕೆ ಹಣವನ್ನು ಹಚ್ಚಿ ಅದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಇವರ ತಾಬಾದಿಂದ  52 ಇಸ್ಟೀಟ ಎಲೆಗಳ ಮತ್ತು 3800/- ರೂಪಾಯಿಗಳ ಸಮೇತ ಸಿಕ್ಕಿದ್ದು  ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ದುರ್ಗಮ್ಮನ ಗುಡಿ ಹತ್ತಿರ ರಸ್ತೆ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಂ KA-23-F-956 ನೇದ್ದರ ಚಾಲಕನಾದ ಬಸವರಾಜ ತಂದೆ ಶಿವಾನಂದ ಸೋನ್ಯಾಳ ಸಾ: ಅಥಣಿ ಡಿಪೋ ಇವನು ತನ್ನ ಬಸನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆಯನ್ನು ಕ್ರಾಸ  ಮಾಡುತ್ತಿದ್ದ ಮಂಜುನಾಥ ತಂದೆ ಮಾರುತಿ ಐರಾಣಿ ವಯಾ-24 ಸಾ: ಧಾರವಾಡ ಇವನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2019 ಕಲಂ 279.337.ನೇದ್ದರಲಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಲ್ಲರವಾಡ ಗ್ರಾಮದ  ಮೃತನಾದ ಮಹಾಂತೇಶ ತಂದೆ ಬಸಪ್ಪ ಗಿಡ್ಡಣ್ಣವರ ವಯಾ-45 ವರ್ಷ ಜಾತಿ-ಹಿಂದೂ ಕುರಬ ಉದ್ಯೊ ಶೇತ್ಕಿ ಕೆಲಸ ಸಾ: ಬಲ್ಲರವಾಡ ತಾ: ನವಲಗುಂದ ಈತನು ತನ್ನ ಬಾಬತ್ 04 ಎಕರೆ ಜಮೀನದ ಮೇಲೆ ನವಲಗುಂದ ಎಸ್.ಬಿ.ಐ ಬ್ಯಾಂಕದಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಬೆಳೆಸಾಲವನ್ನು ಪಡೆದುಕೊಂಡು ಸದರ ಹಣವನ್ನು ತನ್ನ ಹೊಲಕ್ಕೆ ಕೃಷಿ ಕೆಲಸಕ್ಕೆ ಬಳಸಿದ್ದು ಆದರೆ ಮಳೆ ಬಾರದೇ ಬೇಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 01-02-2019 ರಂದು 17-00 ಗಂಟೆಗೆ ತನ್ನ ಮನೆಯಲ್ಲಿ ಇಟ್ಟಿದ್ದ ಹತ್ತಿಗೆ ಹೊಡೆಯುವ ವಿಷದ ಎಣ್ಣೆಯನ್ನು ಕುಡಿದು ಅಸ್ವಸ್ಥನಾಗಿ ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆಗೆ ದಾಖಲಾಗಿ ನಂತರ ಅಲ್ಲಿಂದ ಯಾರಿಗೂ ಹೇಳದೇ ಕೇಳದೇ ಉಪಚಾರ ದಿಕ್ಕರಿಸಿ ಮನೆಗೆ ಬಂದು ನಂತರ ಈ ದಿವಸ 03-02-2019 ರಂದು ನಸುಕಿನ 05-00 ಗಂಟೆ ಸುಮಾರಿಗೆ ಮರಳಿ ವಿಷ ಸೇವನೆ ಮಾಡಿ ಅಸ್ವಸ್ಥನಾಗಿ ಮನೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರನ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, February 2, 2019

CRIME INCIDENTS 02-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-02-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ  ಮಾರುತಿ ಬಸಪ್ಪ ಹರಿನಶಿಕಾರಿ, ವಯಾ-33 ವರ್ಷ ಜಾತಿ-ಹಿಂದೂ ಹರಣಶಿಕಾರಿ, ಉದ್ಯೊಕೂಲಿ ಕೆಲಸ ಸಾ!! ಅಣ್ಣಿಗೇರಿ ತಾ!! ನವಲಗುಂದ ಈತನು ದಿನಾಂಕ 02-02-2019 ರಂದು 09-45 ಗಂಟೆಗೆ ಅಣ್ಣಿಗೇರಿ ಪಟ್ಟಣದ ಮಾರ್ಕೆಟನಲ್ಲಿ ಇರುವ ಚನ್ನಮ್ಮ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಒಟ್ಟು 52 Original Choice ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು, ಅಕಿ 1560=00  ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತೆಗ್ಗಿನಕೇರಿ ಗ್ರಾಮದ  ಮೃತ ಇರ್ಫಾನ ತಂದೆ ಜೈನುದ್ದೀನ ನೀಲಿ ವಯಾ:17 ವರ್ಷ ಸಾ!! ನವಲಗುಂದ ಈತನಿಗೆ ತನ್ನ ತಂದೆ ಕೆಲಸ ಮಾಡುವ ಸಲುವಾಗಿ ಬುದ್ದಿ ಹೇಳಿದ್ದಕ್ಕೆ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ದುಡಿಯಲಿಕ್ಕೆ ಆಗದ್ದರಿಂದ ದಿನಾಂಕ 01-02-2019 ರಂದು 11-00 ಗಂಟೆ ಸುಮಾರಿಗೆ ತನ್ನಷ್ಟಕ್ಕೆ ತಾನೆ ನುಶಿ ಗುಳಿಗೆ ಸೇವಿಸಿ ಅಸ್ವಸ್ಥಗೊಂಡಿದ್ದು ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೆ. ಈ ದಿವಸ ದಿನಾಂಕ 02-02-2019 ರಂದು ಬೆಳಗಿನ 08-20 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮೃತನ ತಾಯಿ ವರದಿ ನೀಡಿದ್ದು  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Friday, February 1, 2019

CRIME INCIDENTS 01-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-02-2019 ರಂದು ವರದಿಯಾದ ಪ್ರಕರಣಗಳು

1ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ:ತುಪ್ಪದ ಕುರಹಟ್ಟಿ ಗ್ರಾಮದ ಆರೋಪಿತನಾದ ನಿಂಗಪ್ಪ ತಂದೆ ಯಲ್ಲಪ್ಪ ಮುರಗಣ್ಣವರ ಈತನು ದಿನಾಂಕ 01-02-2019 ರಂದು 14-30 ಗಂಟೆಗೆ ತುಪ್ಪದಕುರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಮುಂದಿನ ಖುಲ್ಲಾ ಜಾಗೆಯಲ್ಲಿ  ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು, ಅಜ್ಮಾಸು ಕಿಮ್ಮತ್ತು 1500=00  ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕ್ಯಾರಕೊಪ್ಪ ಗ್ರಾಮದ  ಯಾರೋ ಕಳ್ಳರು ಚಿಕ್ಕಮಲ್ಲಿಗವಾಡ, ಕ್ಯಾರಕೊಪ್ಪ ಹಾಗೂ ಕಲಕೇರಿ ಗ್ರಾಮದ ವಡಾಪೋನ. ಏರಟೇಲ ಕಂಪನಿಯ  Site ID CHKMW-1 INID-1256538 ಟಾವರದಲ್ಲಿಯ 25 ಬ್ಯಾಟರಿಗಳು, Site ID KYRKP-1 INID- 1111243 ಟಾವರದಲ್ಲಿಯ 48 ಬ್ಯಾಟರಿಗಳು, Site ID KAKR-001 INID-1111388 ಟಾವರದಲ್ಲಿಯ 48 ಬ್ಯಾಟರಿಗಳು ಅ:ಕಿ: 30,000/- ನೇದವುಗಳನ್ನು ಕಳ್ಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2019 ಕಲಂ 379ದ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಹತ್ತಿ ಮಿಲ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳಾದ  ಲಕ್ಷ್ಮೀ @ ಲಕ್ಷ್ಮೀಬಾಯಿ ಕೋಂ ಕೃಷ್ಣಾ ಗೋಕಾಕ  ವಯಾ-38 ವರ್ಷ. ಜಾತಿ-ಹಿಂದು ಬಜಂತ್ರಿ   ಉದ್ಯೋಗ-ಮನೆಗೆಲಸ  ಸಾ:ಗೋಳಪ್ಪನ ಕೆರಿ ಹತ್ತಿರ ಅಮ್ಮಿನಭಾವಿ ಗ್ರಾಮ ಇವಳು  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೆ ಪಾಸು ಪರ್ಮೀಟ ಇಲ್ಲದೆ  ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಕೆಂಪು  ಕೈ ಚೀಲದಲ್ಲಿ  1)ಒಟ್ಟು 08 ಓಲ್ಡ ಟವರನ್   ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ  ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  1 ಲೀಟರ 440 ಮೀಲಿ) 576 ರೂ ಆಗಬಹುದು ಹಾಗೂ 2)ಒಟ್ಟು 24 ಹೈವಡ್ಸ ಚೀಯರ್ಸ  ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ  ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  2 ಲೀಟರ 160 ಮೀಲಿ)  ಅ:ಕಿ: 708/- ರೂ ನೇದ್ದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2019 ಕಲಂ .32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಅನಾಮಧೇಯ  ಗಂಡಸು ವಯಾ: 55 ರಿಂದ 60 ವರ್ಷ ಈತನು ತನಗಿದ್ದ ಯಾವುದೋ ಕಾಯಿಲೆಯಿಂದಾಗಲೀ ಅಥವಾ ಹಸಿವಿನಿಂದಾಗಲೀ ಕುಂದಗೋಳ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯ ಪುಟ್ ಪಾತ್ ಮೇಲೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.