ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 1, 2019

CRIME INCIDENTS 01-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-02-2019 ರಂದು ವರದಿಯಾದ ಪ್ರಕರಣಗಳು

1ಅಣ್ಣಿಗೇರಿ ಪೊಲೀಸ ಠಾಣಾ ವ್ಯಾಪ್ತಿಯ:ತುಪ್ಪದ ಕುರಹಟ್ಟಿ ಗ್ರಾಮದ ಆರೋಪಿತನಾದ ನಿಂಗಪ್ಪ ತಂದೆ ಯಲ್ಲಪ್ಪ ಮುರಗಣ್ಣವರ ಈತನು ದಿನಾಂಕ 01-02-2019 ರಂದು 14-30 ಗಂಟೆಗೆ ತುಪ್ಪದಕುರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಮುಂದಿನ ಖುಲ್ಲಾ ಜಾಗೆಯಲ್ಲಿ  ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು, ಅಜ್ಮಾಸು ಕಿಮ್ಮತ್ತು 1500=00  ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕ್ಯಾರಕೊಪ್ಪ ಗ್ರಾಮದ  ಯಾರೋ ಕಳ್ಳರು ಚಿಕ್ಕಮಲ್ಲಿಗವಾಡ, ಕ್ಯಾರಕೊಪ್ಪ ಹಾಗೂ ಕಲಕೇರಿ ಗ್ರಾಮದ ವಡಾಪೋನ. ಏರಟೇಲ ಕಂಪನಿಯ  Site ID CHKMW-1 INID-1256538 ಟಾವರದಲ್ಲಿಯ 25 ಬ್ಯಾಟರಿಗಳು, Site ID KYRKP-1 INID- 1111243 ಟಾವರದಲ್ಲಿಯ 48 ಬ್ಯಾಟರಿಗಳು, Site ID KAKR-001 INID-1111388 ಟಾವರದಲ್ಲಿಯ 48 ಬ್ಯಾಟರಿಗಳು ಅ:ಕಿ: 30,000/- ನೇದವುಗಳನ್ನು ಕಳ್ಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2019 ಕಲಂ 379ದ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಹತ್ತಿ ಮಿಲ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳಾದ  ಲಕ್ಷ್ಮೀ @ ಲಕ್ಷ್ಮೀಬಾಯಿ ಕೋಂ ಕೃಷ್ಣಾ ಗೋಕಾಕ  ವಯಾ-38 ವರ್ಷ. ಜಾತಿ-ಹಿಂದು ಬಜಂತ್ರಿ   ಉದ್ಯೋಗ-ಮನೆಗೆಲಸ  ಸಾ:ಗೋಳಪ್ಪನ ಕೆರಿ ಹತ್ತಿರ ಅಮ್ಮಿನಭಾವಿ ಗ್ರಾಮ ಇವಳು  ತನ್ನ ಸ್ವಂತ ಪಾಯ್ದೆಗೋಸ್ಕರ ಯಾವುದೆ ಪಾಸು ಪರ್ಮೀಟ ಇಲ್ಲದೆ  ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಕೆಂಪು  ಕೈ ಚೀಲದಲ್ಲಿ  1)ಒಟ್ಟು 08 ಓಲ್ಡ ಟವರನ್   ವಿಸ್ಕಿ ತುಂಬಿದ 180 ಎಂ.ಎಲ್ ಅಳತೆಯ  ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  1 ಲೀಟರ 440 ಮೀಲಿ) 576 ರೂ ಆಗಬಹುದು ಹಾಗೂ 2)ಒಟ್ಟು 24 ಹೈವಡ್ಸ ಚೀಯರ್ಸ  ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ  ಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  2 ಲೀಟರ 160 ಮೀಲಿ)  ಅ:ಕಿ: 708/- ರೂ ನೇದ್ದವುಗಳನ್ನು ಅಕ್ರಮವಾಗಿ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 23/2019 ಕಲಂ .32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಮೃತ ಅನಾಮಧೇಯ  ಗಂಡಸು ವಯಾ: 55 ರಿಂದ 60 ವರ್ಷ ಈತನು ತನಗಿದ್ದ ಯಾವುದೋ ಕಾಯಿಲೆಯಿಂದಾಗಲೀ ಅಥವಾ ಹಸಿವಿನಿಂದಾಗಲೀ ಕುಂದಗೋಳ ಸರಕಾರಿ ಆಸ್ಪತ್ರೆಯ ಮುಂದಿನ ರಸ್ತೆಯ ಪುಟ್ ಪಾತ್ ಮೇಲೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.