ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 2, 2019

CRIME INCIDENTS 02-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-02-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮದ  ಮಾರುತಿ ಬಸಪ್ಪ ಹರಿನಶಿಕಾರಿ, ವಯಾ-33 ವರ್ಷ ಜಾತಿ-ಹಿಂದೂ ಹರಣಶಿಕಾರಿ, ಉದ್ಯೊಕೂಲಿ ಕೆಲಸ ಸಾ!! ಅಣ್ಣಿಗೇರಿ ತಾ!! ನವಲಗುಂದ ಈತನು ದಿನಾಂಕ 02-02-2019 ರಂದು 09-45 ಗಂಟೆಗೆ ಅಣ್ಣಿಗೇರಿ ಪಟ್ಟಣದ ಮಾರ್ಕೆಟನಲ್ಲಿ ಇರುವ ಚನ್ನಮ್ಮ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಒಟ್ಟು 52 Original Choice ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು, ಅಕಿ 1560=00  ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತೆಗ್ಗಿನಕೇರಿ ಗ್ರಾಮದ  ಮೃತ ಇರ್ಫಾನ ತಂದೆ ಜೈನುದ್ದೀನ ನೀಲಿ ವಯಾ:17 ವರ್ಷ ಸಾ!! ನವಲಗುಂದ ಈತನಿಗೆ ತನ್ನ ತಂದೆ ಕೆಲಸ ಮಾಡುವ ಸಲುವಾಗಿ ಬುದ್ದಿ ಹೇಳಿದ್ದಕ್ಕೆ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ದುಡಿಯಲಿಕ್ಕೆ ಆಗದ್ದರಿಂದ ದಿನಾಂಕ 01-02-2019 ರಂದು 11-00 ಗಂಟೆ ಸುಮಾರಿಗೆ ತನ್ನಷ್ಟಕ್ಕೆ ತಾನೆ ನುಶಿ ಗುಳಿಗೆ ಸೇವಿಸಿ ಅಸ್ವಸ್ಥಗೊಂಡಿದ್ದು ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೆ. ಈ ದಿವಸ ದಿನಾಂಕ 02-02-2019 ರಂದು ಬೆಳಗಿನ 08-20 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಮೃತನ ತಾಯಿ ವರದಿ ನೀಡಿದ್ದು  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.