ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 3, 2019

CRIME INCIDENTS 03-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-02-2019 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಸುಳ್ಳ ಗ್ರಾಮದ ದಿನಾಂಕಃ 03-02-2019 ರಂದು ಮುಂಜಾನೆ 08-00 ಗಂಟೆಗೆ ಸುಳ್ಳ ಗ್ರಾಮದ ಚಿಕ್ಕಹಳ್ಳದಲ್ಲಿ ಆರೋಪಿತರಾದ 1.ಮಂಜುನಾಥ ಗೋರಿ ಹಾಗೂ ಇನ್ನೂ 07 ಜನರು ತಮ್ಮ ತಮ್ಮ ಫಾಯ್ದೇಗೋಸ್ಕರ ಪಣಕ್ಕೆ ಹಣವನ್ನು ಹಚ್ಚಿ ಅದರ ಬಾಹರ ಅಂಬುವ ಜೂಜಾಟವನ್ನು ಆಡುತ್ತಿದ್ದಾಗ ಇವರ ತಾಬಾದಿಂದ  52 ಇಸ್ಟೀಟ ಎಲೆಗಳ ಮತ್ತು 3800/- ರೂಪಾಯಿಗಳ ಸಮೇತ ಸಿಕ್ಕಿದ್ದು  ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 17/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ದುರ್ಗಮ್ಮನ ಗುಡಿ ಹತ್ತಿರ ರಸ್ತೆ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಂ KA-23-F-956 ನೇದ್ದರ ಚಾಲಕನಾದ ಬಸವರಾಜ ತಂದೆ ಶಿವಾನಂದ ಸೋನ್ಯಾಳ ಸಾ: ಅಥಣಿ ಡಿಪೋ ಇವನು ತನ್ನ ಬಸನ್ನು ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ರಸ್ತೆಯನ್ನು ಕ್ರಾಸ  ಮಾಡುತ್ತಿದ್ದ ಮಂಜುನಾಥ ತಂದೆ ಮಾರುತಿ ಐರಾಣಿ ವಯಾ-24 ಸಾ: ಧಾರವಾಡ ಇವನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸಾದಾ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2019 ಕಲಂ 279.337.ನೇದ್ದರಲಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಲ್ಲರವಾಡ ಗ್ರಾಮದ  ಮೃತನಾದ ಮಹಾಂತೇಶ ತಂದೆ ಬಸಪ್ಪ ಗಿಡ್ಡಣ್ಣವರ ವಯಾ-45 ವರ್ಷ ಜಾತಿ-ಹಿಂದೂ ಕುರಬ ಉದ್ಯೊ ಶೇತ್ಕಿ ಕೆಲಸ ಸಾ: ಬಲ್ಲರವಾಡ ತಾ: ನವಲಗುಂದ ಈತನು ತನ್ನ ಬಾಬತ್ 04 ಎಕರೆ ಜಮೀನದ ಮೇಲೆ ನವಲಗುಂದ ಎಸ್.ಬಿ.ಐ ಬ್ಯಾಂಕದಲ್ಲಿ 1 ಲಕ್ಷ 50 ಸಾವಿರ ರೂಪಾಯಿ ಬೆಳೆಸಾಲವನ್ನು ಪಡೆದುಕೊಂಡು ಸದರ ಹಣವನ್ನು ತನ್ನ ಹೊಲಕ್ಕೆ ಕೃಷಿ ಕೆಲಸಕ್ಕೆ ಬಳಸಿದ್ದು ಆದರೆ ಮಳೆ ಬಾರದೇ ಬೇಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ದಿನಾಂಕ 01-02-2019 ರಂದು 17-00 ಗಂಟೆಗೆ ತನ್ನ ಮನೆಯಲ್ಲಿ ಇಟ್ಟಿದ್ದ ಹತ್ತಿಗೆ ಹೊಡೆಯುವ ವಿಷದ ಎಣ್ಣೆಯನ್ನು ಕುಡಿದು ಅಸ್ವಸ್ಥನಾಗಿ ಉಪಚಾರಕ್ಕೆ ಅಂತಾ ಕೀಮ್ಸ ಆಸ್ಪತ್ರೆಗೆ ದಾಖಲಾಗಿ ನಂತರ ಅಲ್ಲಿಂದ ಯಾರಿಗೂ ಹೇಳದೇ ಕೇಳದೇ ಉಪಚಾರ ದಿಕ್ಕರಿಸಿ ಮನೆಗೆ ಬಂದು ನಂತರ ಈ ದಿವಸ 03-02-2019 ರಂದು ನಸುಕಿನ 05-00 ಗಂಟೆ ಸುಮಾರಿಗೆ ಮರಳಿ ವಿಷ ಸೇವನೆ ಮಾಡಿ ಅಸ್ವಸ್ಥನಾಗಿ ಮನೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರನ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 01/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.