ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 4, 2019

CRIME INCIDENTS 04-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-02-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಆರೋಪಿ ಮಹಾಂತೇಶ ತಂದೆ ಹುಲಿಗೆಪ್ಪ ವಡ್ಡರ ವಯಾ: 28 ವರ್ಷ ಸಾ:ವಡ್ಡರ ಓಣಿ, ನವಲಗುಂದ ಈತನು ತನ್ನ ಸ್ವಂತ ಫಾಯಿದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ 55 ಓರಿಜಿನಲ್ ಚಾಯ್ಸ ವಿಸ್ಕಿ ತುಂಬಿದ 90 ಎಂ.ಎಲ್. ರೂ 1.760-00 ಮೌಲ್ಯದ  ಟೆಟ್ರಾ ಪ್ಯಾಕೇಟುಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 09/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಗ್ರಾಮದ ಮೃತ ಜಯಂತಿ  ಮಹೇಶ ಶೆಲವಡಿ ವಯಾ:32 ವರ್ಷ ಈತಳಗಿ ಸುಮಾರು 08 ವರ್ಷದಿಂದ ಹೊಟ್ಟೆ ನೋವು ಮತ್ತು ಮಲಬದ್ದೆತೆ ಇದ್ದು ಅಲ್ಲಲ್ಲಿ ಆಸ್ಪತ್ರೆಗೆ ತೋರಿಸಿದರು ಆರಾಮ ವಾಗಿರುವದಿಲ್ಲ ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಈ ದಿವಸ ತನ್ನಪತ್ಲದ ಸಹಾಯದಿಂದ ಉರುಲು ಹಾಕಿಕೊಂಡು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ. ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಮೃತನ ತಾಯಿಯು ತನ್ನ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.