ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 5, 2019

CRIME INCIDENTS 05-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-02-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಸಿಂಗಹಳ್ಳಿ ಗ್ರಾಮದ ಕಾರ ನಂ.ಕೆ.ಎ.25/ಎಮ.ಬಿ./9997 ನೇದ್ದರ ಚಾಲಕನು ತನ್ನ ಕಾರನ್ನು ಬೆಳಗಾವಿ-ಕಡೆಯಿಂದಾ  ಧಾರವಾಡ ಕಡೆಗೆ ಸಿಂಗನಹಳ್ಳಿ ಕ್ರಾಸ್ ಹತ್ತಿರ ಹೆದ್ದಾರಿಯ ಮೇಲೆ ಅತೀಜೊರಿನಿಂದಾ ವ  ನಿಷ್ಕಾಳಜಿತನದಿಂದಾ ಚಲಾಯಿಸಿಕೊಂಡು ಬಂದು ತನ್ನ ಕಾರನ್ನು ನಿಯಂತ್ರಣವನ್ನು ಕಳೆದುಕೊಂಡು ತನ್ನ ಮುಂದೆ ಹೋಗುತ್ತಿದ್ದ ಯಾವುದೋ ಒಂದು ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರಿನಲ್ಲಿದ್ದ 3  ಜನರಿಗೆ ಸಾದಾ ಸ್ವರೂಪದ ಗಾಯ ಪಡಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2019 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತನಾದ ಅರ್ಜುನ ತಂದೆ ಯಲ್ಲಪ್ಪ ಅಟಗಲ್ ವಯಾ-35 ವರ್ಷ ಸಾ: ಅಣ್ಣಿಗೇರಿ ತಾ: ನವಲಗುಂದ ಈತನಿಗೆ ಈಗ ಸುಮಾರು 03 ವರ್ಷಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದು ಸದರಿಯವನು ಹೊಟ್ಟೆ ನೋವು ಬಂದಾಗ ಬಹಳ ತ್ರಾಸ ಮಾಡಿಕೊಳ್ಳುತ್ತಿದ್ದು ಅವನು ಇತ್ತಿತ್ತಲಾಗಿ ನೋವಿನ ಬಾದೆಯಿಂದ ಸಾರಾಯಿ ಕುಡಿಯುವ ಚಟವನ್ನು ರೂಡಿಸಿಕೊಂಡಿದ್ದು ಸದರಿಯವನು ದಿನಾಂಕ 01-02-2019 ರಂದು 16-00 ಗಂಟೆಯಿಂದ ದಿನಾಂಕ 05-02-2019 ರಂದು 11-00 ಗಂಟೆಯ ನಡುವಿನ ಅವಧಿಯಲ್ಲಿ ತನಗಿರುವ ಹೊಟ್ಟೆ ನೋವಿನ ಭಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ತಮ್ಮ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ಹಗ್ಗವನ್ನು ಕಟ್ಟಿ ಹಗ್ಗದ ಇನ್ನೊಂದು ಭಾಗದಿಂದ ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿದಾರರ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಗ್ರಾಮದ  ಮೃತ ಮಹಾವೀರ ಶಾಂತಪ್ಪ ಹೊಂಡದ, ವಯಾ: 34 ವರ್ಷ, ಸಾ: ಬೆಟದೂರ ಇವನು ಕುಂದಗೋಳ ಹದ್ದಿಯ ತಮ್ಮ ಜಮೀನದಲ್ಲಿ ತನ್ನ ತಂದೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿನ ಬೆಳೆಸಾಲ ಹಾಗೂ ತಾನು ಮಾಡಿದ ಕೈಗಡ ಸಾಲವನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕ: 05-02-2019 ರ ಮಧ್ಯಾಹ್ನ 1-00 ಗಂಟೆಗೆ ಮರಣ ಹೊಂದಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಮೃತನ ಹೆಂಡತಿಯು ವರದಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿಯುಡಿನಂ 03/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.