ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-02-2019
ರಂದು ವರದಿಯಾದ ಪ್ರಕರಣಗಳು
1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಸೊಸೈಟಿ ಹತ್ತಿರ ಇರುವ ಸ್ಮಶಾನಗಟ್ಟಿಯಲ್ಲಿ
ಆರೋಪಿತರಾದ 1) ಅಡಿವೆಪ್ಪ ಫಕ್ಕೀರಪ್ಪ ಕರಿಷಣ್ಣವರ, 2) ಮಂಜುನಾಥ ಕರೆಪ್ಪ ಕರಿಷಣ್ಣವರ, 3) ಈರಪ್ಪ
ಕರೆಪ್ಪ ಕರಿಷಣ್ಣವರ. ಸಾ: 3 ಜನರು ಸಂಶಿ, ತಾ: ಕುಂದಗೋಳ ಇವರು ನಾಗಪ್ಪಾ ಇವರಿಗೆ ಅಡ್ಡಗಟ್ಟಿ ತರುಬಿ
ವಿನಾಃಕಾರಣ ಅಂತಾ ಅವಾಚ್ಯ ಬೈಯ್ದಾಡಿ, ಕೈಯಿಂದ ಹೊಡೆ ಬಡೆ ಮಾಡಿದ್ದಲ್ಲದೇ, ಆರೋಪಿತರೆಲ್ಲರೂ ಪಿರ್ಯಾದಿಗೆ
ಇದೊಮ್ಮೆ ಉಳಕೊಂಡಿ ಇನ್ನೊಮ್ಮೆ ಸೀಗ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು
ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2019 ಕಲಂ
323.341.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.