ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 7, 2019

CRIME INCIDENTS 07-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-02-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 06-02-2019 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ: 07-02-2019 ರಂದು ಬೆಳಗಿನ ಜಾವ 6-00 ಗಂಟೆಯ ನಡುವಿನ ಅವಧಿಯಲ್ಲಿ, ಕೊಟಗೊಂಡಹುಣಸಿ ಗ್ರಾಮದ ಸರ್ವೆ ನಂ. 105 ಜಮೀನದಲ್ಲಿ, ಯಾರೋ ಆರೋಪಿತರು, ಮೃತ ಸುಮಾರು 20 ರಿಂದ 25 ವಯಸ್ಸಿನ ಹೆಣ್ಣು ಮಗಳಿಗೆ, ಯಾವುದೋ ಕಾರಣಕ್ಕೆ ಚಾಕು ಅಥವಾ ಹರಿತವಾದ ಆಯುಧದಿಂದ ಕುತ್ತಿಗೆ, ಹಾಗೂ ಗದ್ದಕ್ಕೆ ಹೊಡೆದು ರಕ್ತ ಗಾಯಪಡಿಸಿ ಕೊಲೆ ಮಾಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗುನ್ನಾನಂ 20/2019 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಲ್ಲರವಾಡ ಗ್ರಾಮದ ಯಾವುದೋ ಟ್ರ್ಯಾಕ್ಟರ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ನವಲಗುಂದ ಕಡೆಯಿಂದ ಬಲ್ಲರವಾಡದ ಕಡೆಗೆ ಬಲ್ಲರವಾಡ ಗ್ರಾಮದ ಶಾನವಾಡ ರವರ ರೇಷ್ಮೆ ಸಾಕಾಣಿಕೆ ಕೇಂದ್ರದ ಹತ್ತಿರ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಸೈಡಿನಲ್ಲಿ ಬಂದು ತನ್ನ ಎದುರಿಗೆ ಬಲ್ಲರವಾಡದ ಕಡೆಯಿಂದ ನವಲಗುಂದ ಕಡೆಗೆ ಮೃತನು ತನ್ನ ಸೈಡಿನಲ್ಲಿ ಚಾಲನೆ ಮಾಡಿಕೊಂಡು ಹೊರಟ ಹೊಂಡಾ ಡ್ರೀಮ್  ಮೋಟರ್ ಸೈಕಲ್ ನಂಬರ್ KA-25/EU 8005 ನೇದ್ದಕ್ಕೆ ಟ್ರ್ಯಾಕ್ಟರನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಟ್ರ್ಯಾಕ್ಟರನ ಟ್ರೆಲರ ಬಡಿಯುವಂತೆ ಮಾಡಿ ಮೋಟರ್ ಸೈಕಲ್ ಚಾಲಕ ಮೃತ ಶಿವಪುತ್ರಪ್ಪ @ ಮುತ್ತು ತಂದೆ ಪಕ್ಕಿಪ್ಪ ಸತ್ಯನಾಯ್ಕರ ವಯಾ 32 ವರ್ಷ ಸಾಃ ಯರಗುಪ್ಪಿ ತಾಃ ಕುಂದಗೋಳ ಈತನ ತಲೆಗೆ, ಹಣೆಗೆ ಮರಣಾಂತಿಕ ಗಾಯ ಪೆಟ್ಟು ಪಡಿಸಿ ಅವನನ್ನು ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದಲ್ಲದೇ ಮೃತನು ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ನ ಹಿಂಬದಿ ಸವಾರ ಪಿರ್ಯಾದಿಯ ಸಹೋದರನಾದ ಮೈಲಾರೆಪ್ಪ ತಂದೆ ಶಿವಾನಂದ ಕರೆಮ್ಮನವರ ವಯಾ 24 ವರ್ಷ ಈತನಿಗೂ ಸಹಿತ ತಲೆಗೆ, ಮುಖಕ್ಕೆ ಸಾದಾ ವ ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸುವಂತೆ ಮಾಡಿದ್ದು ನಂತರ ಈ ಅಪಘಾತದ ಬಗ್ಗೆ ಮಾಹಿತಿಯನ್ನು ನೀಡದೇ ಅಪಘಾತ ಪಡಿಸಿರುವ ಹಾಗು ತಾನು ಚಾಲನೆ ಮಾಡುತ್ತಿದ್ದ ಟ್ರ್ಯಾಕ್ಟರ ಸಮೇತ ಪರಾರಿ ಆಗಿ ಹೋಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 11/2019 ಕಲಂ 279.337.338.304(ಎ)ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ಯಾದವಾಡ ಗ್ರಾಮ ಹದ್ದಿಯಲ್ಲಿರುವ ಸೋಮಪ್ಪಾ ಇವರ ಸರ್ವೆ ನಂಬರಃ 6, ಕ್ಷೇತ್ರ 8 ಎಕರೆ, 10 ಗುಂಟೆ ಹೊಲದ ಬದುವಿನಲ್ಲಿ ದಿನಾಂಕಃ 23-12-2018 ರಂದು 18-00 ಅವರ್ಸಕ್ಕೆ ನಮೂದ ಆರೋಪಿತನಾದ ಆನಂದ ತಂದೆ ಪ್ರಭುಲಿಂಗಪ್ಪಾ ಕೇಶಗೊಂಡ. ಸಾಃ ಯಾದವಾಡ ಇತನು ಹೊಲ ಅಳತೆಯ ಸಂಭಂದ ಹಳೆಯ ದ್ವೇಷ ಇಟ್ಟುಕೊಂಡು ಪಿರ್ಯಾದಿ ಸಂಗಡ ವಿನಾಃಕಾರಣ ತಂಟೆ ತೆಗೆದು ಹಲ್ಕಟ ಬೈದಾಡಿ ಕೈಯಿಂದಾ ಮತ್ತು ಬಡಿಗೆಯಿಂದಾ ಹೊಡಿಬಡಿ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2019 ಕಲಂ 323.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಬಸವರಾಜ ತಂದೆ ಲಕ್ಷಣ್ಣ ಪಾಶ್ಚಾಪುರ ವಯಾ 44 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ  ಕೆಲಸ ಸಾ:ತಲವಾಯಿ  ಇತನು ಹಮೇಶಾ ಸರಾಯಿ ಕುಡಿಯು ಚಟವನ್ನು ಹೊಂದಿ ಮದ್ಯೆದ ವ್ಯೆಸನಿಯಾಗಿದ್ದು ಇದರಿಂದ ಹೊಟ್ಟೆಯಲ್ಲಿ ನೀರು ತುಂಬಿ ಎರಡು ಕಿಡ್ನಿಗಳು ಪೇಲ್ ಆಗಿದ್ದು ಇದ್ದರಿಂದ ಮಾನಸಿಕ ಮಾಡಿಕೊಂಡು ದಿನಾಂಕ 04-02-2019 ರಂದು ಸಾಯಂಕಾಲ 5,00 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಠಕ್ಕೆ ತಾನೆ ಯಾವೂದೂ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಉಪಚಾರಕ್ಕೆ ಧಾರವಾಡ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಧಾಖಾಲಾಗಿ ಉಪಚಾರವನ್ನು ಹೊಂದುವ ಕಾಲಕ್ಕೆ ಉಪಚಾರ ಪಲೀಸದೆ ದಿನಾಂಕ 07-02-2019 ರಂದು ಬೆಳಿಗ್ಗೆ 7,30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.