ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 9, 2019

CRIME INCIDENTS 09-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-02-2019 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಬೂದಿಹಾಳ ಗ್ರಾಮದ ಬಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಇಸಿದುಕೊಂಡು ಓ.ಸಿ ಎಂಬ ನಶೀಬಿನ ಅಂಕಿ ಸಂಖ್ಯೆಗಳ ಜೂಜಾಟವನ್ನು ಆಡಿಸುತ್ತಿದ್ದಾಗ ಸಿಕ್ಕ ಆರೋಪಿ ಮಂಜಪ್ಪ ತಂದೆ ಚನ್ನಪ್ಪ ಸವಣೂರ, ವಯಾಃ 42 ವರ್ಷ, ಸಾ: ಹಿರೇಬೂದಿಹಾಳ ಇತನಿಗೆ ಹಾಗೂ ಮುದ್ದೆ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿಯವನ ಮೇಲೆ   ಗುನ್ನಾನಂ 06/2019 ಕಲಂ:78 [iii] ಕೆ,ಪಿ ಆಕ್ಟ್ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹೋರಕೇರಿ ಗ್ರಾಮದ ಹತ್ತಿರ  ಆರೋಪಿತ ಬಸವರಾಜ ಗುರಪ್ಪ ಕಾಳಿ, ವಯಾ 26 ವರ್ಷ ಸಾಃ ನಾಗರಹಳ್ಳಿ ತಾಃ ನವಲಗುಂದ ಈತನು ತಾನು ಚಲಾಯಿಸುತಿದ್ದ ಟಾಟಾ ಲಾರಿ ನಂಬರ್ KA-63/4485 ನೇದ್ದನ್ನು ರಾಷ್ಟ್ರೀಯ ಹೆದ್ದಾರಿ 63 ಗದಗ ಹುಬ್ಬಳ್ಳಿ ರಸ್ತೆಯಲ್ಲಿ ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಕೊಂಡಿಕೊಪ್ಪ ಗ್ರಾಮ ಹದ್ದಿಯ ಸವಳಹಳ್ಳ ಬ್ರಿಡ್ಜ ಹತ್ತಿರ ರಸ್ತೆಯ ಮೇಲೆ ತನ್ನ ಮುಂದೆ ಅಣ್ಣಿಗೇರಿ ಕಡೆಗೆ ಹೊರಟ ಬಜಾಜ ಪಲ್ಸರ್ ಮೋಟರ್ ಸೈಕಲ್ ನಂಬರ್ KA-25/EZ 2832 ನೇದ್ದನ್ನು ಓವರ್ ಟೇಕ್ ಮಾಡುತ್ತಾ ಸದರ ಮೋಟರ್ ಸೈಕಲ್ ಗೆ  ಲಾರಿಯ ಎಡಭಾಗವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ್ ಸೈಕಲ್ ಚಾಲಕ ರಾಘವೇಂದ್ರ ಈಶ್ವರಪ್ಪ ಇಂಗಳಹಳ್ಳಿ ವಯಾ 21 ವರ್ಷ ಸಾಃ ಅಣ್ಣಿಗೇರಿ ಇವನು ಹಾಗು ಮೋಟರ್ ಸೈಕಲ್ ಹಿಂಬದಿ ಸವಾರ ಪಿರ್ಯಾದಿಯ ಮಗನಾದ ಪ್ರಶಾಂತ ನಿಂಗಪ್ಪ ಬೀರಣ್ಣವರ ವಯಾ 22 ವರ್ಷ ಸಾಃ ಅಣ್ಣಿಗೇರಿ ಇವರು ಕೆಳಗೆ ಬೀಳುವಂತೆ ಮಾಡಿ ಮೋಟರ್ ಸೈಕಲ್ ಚಾಲಕ ರಾಘವೇಂದ್ರ ಈತನಿಗೆ ಸಾದಾ ವ ಭಾರೀ ಪ್ರಮಾಣದ ಗಾಯ ಪೆಟ್ಟು ಮಾಡಿದ್ದು ಅಲ್ಲದೇ ಹಿಂಬದಿ ಸವಾರ ಪಿರ್ಯಾದಿಯ ಮಗನ ಎಡಗೈ ಮೇಲೆ ಲಾರಿಯ ಹಿಂಬದಿಯ ಟೈರ್ ಹಾಯುವಂತೆ ಮಾಡಿ ಅಪಘಾತ ಪಡಿಸಿ ಎಡಗೈಗೆ ಭಾರೀ ಪ್ರಮಾಣದ ಗಾಯ ಪೆಟ್ಟು ಮಾಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬ,ಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬ್ಯಾಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ಆರೋಪಿ ಫಕ್ಕೀರಪ್ಪ ಈರಪ್ಪ ಅಂಗಡಿ ಸಾ. ಬ್ಯಾಹಟ್ಟಿ ಇವನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ, ತನ್ನ ಎಗ್ ರೈಸ್ ಅಂಗಡಿಗೆ ಬಂದ ಜನರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಅನಧಿಕೃತವಾಗಿ 1] 90 ಎಂ. ಎಲ್. ದ ಬೆಂಗಳೂರು ಮಾಲ್ಟ್ ವಿಸ್ಲಿ ಟೆಟ್ರಾ ಪೌಚಗಳು ಅ.ಕಿ. 489.40/- ರೂ. ನೇದ್ದವುಗಳನ್ನು ಮಾರಾಟ ಮಾಡುವತ್ತಿರುವಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 21/2019 ಕಲಂ 15(ಎ)32(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.