ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, February 10, 2019

CRIME INCIDENTS 10-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-02-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಾಲವಾಡ ಕ್ರಾಸ ಹತ್ತಿರ ಆರೋಪಿತನಾದ ರಮೇಶ ತಂದೆ ಭರಮಪ್ಪ ಪೂಜಾರ ಸಾ: ಹನಮಸಾಗರ ತಾ: ಕುಷ್ಠಗಿ ಜಿ: ಕೊಪ್ಪಳ ಈತನು ತಾನು ಚಲಯಿಸುತ್ತಿದ್ದ ಟಿ.ವ್ಹಿಎಸ್ ಸ್ಟಾರ್ ಸಿಟಿ ಮೋಟರ ಸೈಕಲ ನಂಬರ ಕೆಎ-27/ಎಲ್-8325 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಕಾಲವಾಡ ಕ್ರಾಸ್ ಹತ್ತಿರ ರಸ್ತೆಯ ಕಾಮಗಾರಿ ನಡೆಯುತ್ತಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಬ್ಬಿಣದ ಬ್ಯಾರಿಕೇಡ್ಗಳನ್ನು ರಸ್ತೆಯ ಮೇಲೆ ಒಂದು ಸೈಡಿಗೆ ಇಟ್ಟಿದ್ದು ಅದನ್ನು ಮೋಟರ ಸೈಕಲ್ ಚಾಲಕನು ಗಮನಿಸದೇ ಅಲಕಷತನದಿಂದ ತನ್ನ ಮೋಟರ ಸೈಕಲ್ಲಿನ ವೇಗದ ನಿಯಂತ್ರಣ ಮಾಡಲಾಗದೇ ಬ್ಯಾರಿಕೇಡಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನಗೆ ತಲೆಗೆ ಭಾರಿ ಪ್ರಮಾಣದ ಮಾರಣಾಂತಿಕ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಅಲ್ಲದೇ ತನ್ನ ಮೋಟರ ಸೈಕಲ್ ಹಿಂದೆ ಕುಳಿತಿದ್ದ ನಾಗರಾಜ ಪರಸಪ್ಪ ಕೋಳುರು ಇವನಿಗೆ ಸಾಧಾ ವ ಭಾರಿ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2019 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.