ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 11, 2019

CRIME INCIDENTS 11-02-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-02-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕೋಗಿಲೆಗೇರಿ ಗ್ರಾಮದ  ರಸ್ತೆಯ ಕೋಗಿಲಗೇರಿ ಗ್ರಾಮದ ಸಮೀಪ ರಸ್ತೆಯ ಮೇಲೆ ಇದರಲ್ಲಿಯ ಪಿರ್ಯಾದಿದಾರನು ಅಳ್ನಾವರ ಕಡೆಯಿಂದ ದಾರವಾಡ ಕಡೆಗೆ ಕಾರ ನಂಬರ ಎ.ಪಿ.21/ಎ.ಜಿ-4888 ನೇದ್ದರಲ್ಲಿ ಹೋಗುವಾಗ ಅವರ ಹಿಂದಿನಿಂದ ಅಳ್ನಾವರ ಕಡೆಯಿಂದ ದಾರವಾಡ ಕಡೆಗೆ ಹೊರಟ ಮೋಟರ ಸೈಕಲ್ಲ ನಂಬರ ಕೆ.ಎ 25/ಇ.ವ್ಹಿ-0011 ನೇದ್ದರ ಚಾಲಕನಾದ ಮಲ್ಲಪ್ಪ @ ಮಲ್ಲೇಶ ಸಳಕೆಣ್ಣವರ ಸಾ|| ಕೋಗಿಲಗೇರಿ ತಾ|| ಅಳ್ನಾವರ ಅವನು ತಾನು ನಡೆಯಿಸುತ್ತಿದ್ದ ಮೋಟರ ಸೈಕಲ್ಲನ್ನು ಅತೀ ಜೋರಿನಿಂದ ಹಾಗೂ ದುಡುಕುತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನು ಬಾರಿ ದುಖಾ:ಪತ್ತ ಹೊಂದಿದ್ದು ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸಗಲ್ಲ ಗ್ರಾಮದ ಹತ್ತಿರ ಮಾಡಿದ ಕಾರ ನಂ. KA25-MB-378 ನೇದ್ದರ ಚಾಲಕನು ತನ್ನ ಕಾರನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀಜೋರಿನಿಂದ ವ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ,  ಹುಬ್ಬಳ್ಳಿ ನವಲಗುಂದ ರಸ್ತೆಯ ಮೇಲೆ, ಕುಸುಗಲ್ಲ ಸಿದ್ದಾರೋಡ ಮಠದ ಹತ್ತಿರ ರಸ್ತೆಯ ಎಡಬದಿಯಲ್ಲಿ ಇದರಲ್ಲಿಯ ಪಿರ್ಯಾಧಿ ತನ್ನ ಬಾಬಾತ್ತ ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದಾಗ ಕುರಿಗಳ ಪೈಕಿ ಎರಡು ಕುರಿಗಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅವುಗಳನ್ನು ಸ್ಥಳದಲ್ಲಿಯೇ ಮರಣ ಪಡಿಸಿ ಗಾಡಿಯನ್ನು ಮೊದಲು ತರುಬಿ ನಂತರ ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2019 ಕಲಂ 279.ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.