ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, March 31, 2019

CRIME INCIDENTS 31-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-03-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ ಆರೋಪಿ ನಾಗಪ್ಪ ರಾಯಪ್ಪ ಹರಣಶಿಕಾರಿ ವಯಾ-40 ವರ್ಷ ಸಾ|| ಅಳಗವಾಡಿ ಈತನು ದಿನಾಂಕ: 31-03-2019 ರಂದು 09-30 ಗಂಟೆಯ ಸುಮಾರಿಗೆ ಅಳಗವಾಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಸ್ವಂತ ಪಾಯಿದೆಗೋಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ ಸರಾಯಿ ಟೆಟ್ರಾ ಪಾಕೀಟಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ರೇಡ್ ಕಾಲಕ್ಕೆ 1) 180 ಎಮ್ ಎಲ್ ದ 9 ಹೈವರ್ಡ್ಸ್ ವಿಸ್ಕಿ ಟೆಟ್ರಾ ಪಾಕೀಟಗಳು ಅಕಿ:549/- 2) 90 ಎಮ್ ಎಲ್ ದ 13 ಬೆಂಗಳೂರು ಮಾಲ್ಟ್ ವಿಸ್ಕಿ ಟೆಟ್ರಾ ಪಾಕೀಟಗಳು ಅಕಿ: 325/- ವಶಪಡಿಸಿಕೊಂಡಿದ್ದು,ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 34/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, March 30, 2019

CRIME INCIDENTS 30-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-03-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರೂರ ಗ್ರಾಮದ 1 ನೇ ವಾರ್ಡಿನ ಗೌಡರ ಓಣಿಯಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರಸ್ತೆ ಕಡಿ, ಮೂರಂ ದುರಸ್ತಿ ಹಾಗೂ ಸಿ.ಡಿ ನಿರ್ಮಾಣ ಕೆಲಸವನ್ನು ಮಾಡಿಸದೇ ಕೂಲಿಕಾರರಿಂದ ಮಾಡಿಸಿದ್ದೇವೆಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಕೂಲಿಕಾರರ ಖೊಟ್ಟಿ ಸಹಿಗಳನ್ನು ಮಾಡಿ ಸದರ ಖೊಟ್ಟಿ ದಾಖಲೆಗಳನ್ನು  ಸೃಪ್ಠಿಸಿ ಆರೋಪಿತರಾದ 1.ಯಲ್ಲವ್ವಾ ನತ್ರಿ ಹಾಗೂ ಇನ್ನೂ 07 ಜನರು ಕೊಡಿಕೊಂಡು ಹಾಜರಪಡಿಸಿ ಕಚ್ಚಾ ಸಾಮಗ್ರಿಗಳು ಮತ್ತು ಕೂಲಿಕಾರರ ವೇತನ ಅಂತಾ ಒಟ್ಟು ರೂ 3,26,989/- ಮತ್ತು ಸಿ.ಡಿ ನಿರ್ಮಾಣ ಕಾರ್ಯಕ್ಕೆ ಸಾಮಗ್ರಿಗಳ ವೆಚ್ಚ ಹಾಗೂ ಕೂಲಿಕಾರರ ವೇತನ ಒಟ್ಟು ರೂ 97,111/-ಗಳನ್ನು ಖರ್ಚು ಹಾಕಿ ಆರೋಪಿ ಅ.ನಂ: 6 & 7 ನೇದವರು ಸ್ಥಳಕ್ಕೆ ಭೆಟ್ಟಿಕೊಟ್ಟು ಸ್ಥಾನಿಕವಾಗಿ ಚೌಕಾಶಿ ಮಾಡಿ ಕೆಲಸವು ತೃಪ್ತಿಕರವಾಗಿದೆ ಅಂತಾ ಆರೋಪಿ ಅ.ನಂ: 1 ರಿಂದ 5 ನೇದವರೊಂದಿಗೆ ಮಿಲಾಪಿಯಾಗಿ ಎಲ್ಲ ಆರೋಪಿತರು ರೂ 4,24,100/-ಸರಕಾರಿ ಹಣವನ್ನು ತಮ್ಮ ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಹಾಗೂ ನಂಬಿಕೆ ದ್ರೋಹ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2019 ಕಲಂ IPC 1860 (U/s-120(A),120B,417,418,420,405,406,409,468,471,34) ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮರೇವಾಡ ಗ್ರಾಮದ ಹತ್ತಿರ ಟ್ರ್ಯಾಕ್ಟರ ನಂ KA-48-T-2269 ಹಾಗೂ ಟ್ರೇಲರ ನಂ KA-25-TA-9021 ನೇದರಲ್ಲಿ ಹೊಟ್ಟನ್ನು ಹೇರಿಕೊಂಡು ಬಂದು ಧಾರವಾಡದ ಚನ್ನಬಸಪ್ಪ ಸಣ್ಣಉಳವಪ್ಪ ಬೆಳ್ಳಕ್ಕಿ ಇವರ ಹೊಲದಲ್ಲಿ  ಹೊಟ್ಟನ್ನು ಇಳಿಸುವ ಸಲುವಾಗಿ ಕೃಷಿ ಕೂಲಿ ಕಾರ್ಮಿಕನಾದ ಕಲ್ಲಪ್ಪ ಚನ್ನಬಸಪ್ಪ ಬೆಳವಣಕಿ ಇವನು ಟ್ರ್ಯಾಕ್ಟರ ಟೇಲರದಲ್ಲಿ ಹತ್ತಿ ಟ್ರೇಲರಗೆ ಅಳವಡಿಸಿರುವ ತಗಡುಗಳನ್ನು ತೆಗೆಯುತ್ತಿರುವಾಗ ಟ್ರ್ಯಾಕ್ಟರ ಡ್ರೈವರನಾದ ಮಹ್ಮದಅಲಿ ಪ್ರಕುಸಾನ ನದಾಪ್ ಇವನು ನಿಷ್ಕಾಳಜಿತನದಿಂದ  ಟ್ರೇಲರ ಹೈಡ್ರೋಲಿಕ ಲಿಪ್ಟನ್ನು  ಎಬ್ಬಿಸಿದ್ದರಿಂದ ಟ್ರೇಲರ ಒಮ್ಮೇಲೆ ಮೇಲೆ ಎದ್ದು  ಕಲ್ಲಪ್ಪನ ಕೈಯಲ್ಲಿದ್ದ ತಗಡು ಅಲ್ಲಿಯೇ ಮೇಲೆ  ಹಾಯ್ದು ಹೋದ ವಿದ್ಯೂತ್ ತಂತಿಗೆ ತಗುಲಿ ವಿದ್ಯೂತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 61/2019 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಚಾಕಲಬ್ಬಿ ಗ್ರಾಮದ ಯಲ್ಲಮ್ಮನ ಗುಡಿಯ ಹತ್ತಿರ ಮಲ್ಲಿಕಾಜುಱನ ನೂಲ್ವಿ ಇವರು ಕರ್ತವ್ಯ ನಿರ್ವಹಿಸುವ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ 42 / ಎಫ್: 1316 ರಲ್ಲಿ ಪಿರ್ಯಾದಿ ಹಾಗೂ ಸಾಕ್ಷಿದಾರ ಬಸ್ ಚಾಲಕನು ಮಲಗಿರುವಾಗ ಆರೋಪಿತನಾದ ಬಸವರಾಜ ಪರಸಪ್ಪ ಮ್ಯಾಗಿನಮನಿ ವಯಾ: 23 ವರ್ಷ ಸಾ: ಯರೇಬೂದಿಹಾಳ ತಾ: ಕುಂದಗೋಳ ಈತನು ಪಿರ್ಯಾದಿಯು ಕಲೆಕ್ಷನ್ ಮಾಡಿದ ಹಣವನ್ನು ಕಳ್ಳತನ ಮಾಡಲಿಕ್ಕೆ ಬಂದು ಬಸ್ ಡೋರ್ ತೆಗೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 41/2019 ಕಲಂ 511.379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Friday, March 29, 2019

CRIME INCIDENTS 29-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-03-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 29-03-2019 ರಂದು 1155 ಗಂಟೆಗೆ  ತಿಮ್ಮಾಪೂರ ಗ್ರಾಮದ ಅಮ್ಮಿನಬಾವಿ ಜನತಾ  ಪ್ಲಾಟ ಕ್ರಾಸ ಹತ್ತಿರ ಮಾಡಿದ ಆರೋಪಿತನಾದ  ಬಸವರಾಜ ತಂದೆ ಸಂಗಪ್ಪ ಸುಬೇದಾರ ವಯಾ-76 ವರ್ಷ, ಸಾ: ತಿಮ್ಮಾಪೂರ ಇವನು ತನ್ನ ಸ್ವಂತ ಪಾಯ್ದಿಗೊಸ್ಕರ  ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಒಂದು ನೀಲಿ ಕೈ ಚೀಲದಲ್ಲಿ  ಒಟ್ಟು  43 ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ 90 ಎಂ.ಎಲ್ ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು   (ಒಟ್ಟು 3 ಲೀಟರ 870 ಮೀಲಿ)  ಅಕಿ: 1304/- ರೂ ನೇದವುಗಳನ್ನು ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 59/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಱವಾಡ ಗ್ರಾಮದ ಹತ್ತಿರ ಮಂಜುನಾಥ ವರಳಿ ಇನತು ಹಾಗೂ ಆತನ ಅಣ್ಣ ಶಿವಾನಂದ ವರಳಿ ಕೂಡಿಕೊಂಡು ತಮ್ಮ ಟ್ರ್ಯಾಕ್ಟರದಲ್ಲಿ ಮನೆಗೆ ಹೋಗುತ್ತಿದ್ದಾಗ ಇದರಲ್ಲಿ ಆರೋಪಿತರಾದ 1.ಮಲ್ಲಾಪ್ಪಾ ತಿಲಾಱಪುರ ಹಾಗೂ ಇನ್ನೂ 02 ಜನರು ಕೂಡಿಕೊಂಡು  ತಮ್ಮ ಮನೆಯ ಮುಂದಿನ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಟ್ರ್ಯಾಕ್ಟರ ಗಾಲಿ ಹಾಯಿಸಿದ್ದರ ಸಿಟ್ಟಿನಿಂದ ಆರೋಪಿತರೆಲ್ಲರು ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬೈದಾಡಿ ಚಾಕುವಿನಿಂದ ಹಾಗೂ ಕೈಯಿಂದ ತಲೆಗೆ, ಕೈಗೆ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2019 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ : ಕಲಱವಾಡ ಗ್ರಾಮದ ಹತ್ತಿರ ಆರೋಪಿತರ ಪೈಕಿ ಎ-1 ನೇದವನು ಪಿರ್ಯಾದಿದಾರಳ ಮನೆಯ ಮುಂದೆ ಸರಾಯಿ ಕುಡಿದ ನಶೆಯಲ್ಲಿ ಬಾಯಿ ಮಾಡುತ್ತಿದ್ದಾಗ ಪಿರ್ಯಾದಿದಾರಳು ಸಿಟ್ಟು ಮಾಡಿದ್ದರ ಸಿಟ್ಟಿನಿಂದ ಆರೋಪಿತರಾದ 1)ಶಿವಾನಂದ ಗುರಪ್ಪ ವರಳಿ 2) ಮಂಜುನಾಥ ಗುರಪ್ಪ ವರಳಿ 3) ಪ್ರದೀಪ 4) ಗುರಪ್ಪ ಭೀಮಪ್ಪ ವರಳಿ ಎಲ್ಲರೂ ಕೂಡಿಕೊಂಡು ಪಿರ್ಯಾದಿದಾರಳ ಮನೆಯೊಳಗೆ ಅತಿಕ್ರಮಣ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಪಿರ್ಯಾದಿದಾರಳ ಗಂಡನಿಗೆ ಚಾಕುವಿನಿಂದ ಹಾಗೂ ಕಲ್ಲಿನಿಂದ ತಲೆಗೆ, ಭುಜಕ್ಕೆ ಹೊಡಿಬಡಿ ಮಾಡಿದ್ದು ಅಲ್ಲದೆ ಬಿಡಿಸಿಕೊಳ್ಳಲು ಹೋದ ಪಿರ್ಯಾದಿದಾರಳಿಗೆ ಹಾಗೂ ಆಕೆಯ ಮಗನಿಗೆ ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 32/2019 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.
  
4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಸಿದ್ದಯ್ಯ ತಂದೆ ಬಸಯ್ಯ ಬಣವಿ ವಯಾ 37 ವರ್ಷ ಜಾತಿ ಹಿಂದು ಕುರುಬರ ಉದ್ಯೋಗ ಕೃಷಿ ಕಾರ್ಮಿಕ ಸಾ:ಅಮ್ಮಿನಬಾವಿ ಇತನು ಅಮ್ಮಿನಬಾವಿ ಗ್ರಾಮದಲ್ಲಿ ತನ್ನ  ಆಸ್ತಿ ನಂಬರ 714 ರಲ್ಲಿ   ಕಳೆದ 2017 ಮತ್ತು 2018 ನೇ ಸಾಲಿನಲ್ಲಿ ಬಸವ ವಸತಿ ಹೆಚ್ಚುವರಿ  ಯೋಜನೆ ಅಡಿಯಲ್ಲಿ 1,31,800/- ರೂಪಾಯಿಗಳು ಮಂಜೂರಾಗಿದ್ದು ಈ ಹಣದಿಂದ ಮನೆಯನ್ನು ಹಾಕಿಸಲು ಪ್ರಾರಂಬಿಸಿದ್ದು ಮನೆಯು ಕಟ್ಟಿಸಲು ಹಣ ಕಡಿಮಿಯಾಗಿದ್ದರಿಂದ ಊರಲ್ಲಿ ಯಾರ ಕಡೆಗೂ ಸಾಲ ಸಿಗದ್ದರಿಂದ ಮನೆಯನ್ನು ಹಾಕಿಸುವದು ಅರ್ದಕ್ಕೆ ನಿಂತಿತಲ್ಲಾ ಅಂತಾ ಮನನೂಂದು ಅದೇ ಚಿಂತೆಯಲ್ಲಿ ದಿನಾಂಕ 28-03-2019 ರಂದು ರಾತ್ರಿ 23,30 ಗಂಟೆಯಿಂದ ದಿನಾಂಕ 29-03-2019 ರಂದು ಬೆಳಗಿನ 05,00 ಗಂಟೆಯ ಮದ್ಯೆದ ಅವದಿಯಲ್ಲಿ ತಾನು ಬಾಡಿಗೆ ಇದ್ದ ಅಮ್ಮಿನಬಾವಿ ಗ್ರಾಮದ ನಾಗೇಶ ಎಡಳ್ಳಿ ಇವರ ಮನೆಯಲ್ಲಿ ಜಂತ್ತಿಗೆ ಹಗ್ಗವನ್ನು ಕಟ್ಟಿ ಅದೇ ಹಗ್ಗದಿಂದ ತನ್ನಷ್ಠಕ್ಕೆ ತಾನೆ ಉರುಲು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಇರುತ್ತದೆ, ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಯುಡಿನಂ 19/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, March 28, 2019

CRIME INCIDENTS 28-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-03-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:25.12.2018 ರಂದು ಮುಂಜಾನೆ 10.30 ಗಂಟೆಯಿಂದ ಸಾಯಂಕಾಲ 5-00 ಗಂಟೆಯ ನಡುವಿನ ವೇಳೆಯಲ್ಲಿ ಕಾಣೆಯಾದ ಗೀತಾ ಕೋಂ ಕರಬಸಪ್ಪ ಹಳೆಮನಿ, ವಯಾ 30 ವರ್ಷ, ಸಾ:ಸಂಶಿ, ತಾ:ಕುಂದಗೋಳ, ಜಿ:ಧಾರವಾಡ ಇವಳು ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಮನೆಗೆ ಕೀಲಿ ಹಾಕಿ ಮನೆಯಿಂದ ಹೋದವಳು ಯಾವುದೋ ಕಾರಣಕ್ಕಾಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಎಲ್ಲಿಯೋ ಹುಡಕಲಾಗಿ ಸಿಕ್ಕಿರುವುದಿಲ್ಲ ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 28/03/2019 ರಂದು 05-30 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆ ಮೇಲೆ ನೂಲ್ವೀ ಕ್ರಾಸ್ ಹತ್ತಿರ ಆರೋಪಿತನಾದ ರಾಜೇಶ.ಬಿ.ಆರ್ ತಂದೆ ರವಿ ಸಾ!! ಗಂಡಸಿ, ಪೋಸ್ಟ್ ಬಾಗೇವಾಲು ತಾ!! ಅರಸಿಕೇರಿ ಜಿ!! ಹಾಸನ ಿತನು ಲಾರಿ ನಂಬರ ಕೆಎ-53/ಡಿ-0515 ನೇದ್ದನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ತನ್ನ ಮುಂದೆ ನೂಲ್ವೀ ಕ್ರಾಸ್ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಟಾಟಾ ಎಸ್ ಗೂಡ್ಸ್ ಗಾಡಿ ನಂಬರ ಕೆಎ-25/ಡಿ-7636 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಟಾಟಾ ಎಸ್ ಗೂಡ್ಸ್ ವಾಹನ ಪಲ್ಟಿಯಾಗಿ ಬೀಳುವಂತೆ ಮಾಡಿ ಅದರಲ್ಲಿದ್ದ ಖಾಸೀಮಸಾಬ ರುಸ್ತುಮಸಾಬ ಕಲಘಟಗಿ ವಯಾ 60 ವರ್ಷ ಸಾ!! ಬೆಳಗಲಿ ಇತನಿಗೆ ತಲೆಗೆ, ಬಲಗೈಗೆ ಭಾರಿ ಗಾಯಪಡಿಸಿ ಉಪಚಾರಕ್ಕೆ ಅಂತಾ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆದಲ್ಲಿ ಮರಣ ಹೊಂದುವಂತೆ ಮಾಡಿದ್ದಲ್ಲದೇ, ಸದರ ಟಾಟಾ ಎಸ್ ಗೂಡ್ಸ್ ವಾಹನದಲ್ಲಿದ್ದ ಯಲ್ಲಪ್ಪ ತಿಪ್ಪಣ್ಣ ಹರಕುಣಿ ಸಾ!! ಬೆಳಗಲಿ ಇವರಿಗೆ ಹಾಗೂ ಅದರ ಚಾಲಕ ಮುತ್ತಪ್ಪ ಮಾದೇವಪ್ಪ ಮೇಲಗಿರಿ ಸಾ!! ಬೆಳಗಲಿ ಇವರಿಗೆ ಸಾಧಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/2019 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಬೆಳಗಾವಿ-ಧಾರವಾಡ ಪಿ.ಬಿ ರಸ್ತೆಯ ಮೇಲೆ ಶಿಂಗನಳ್ಳಿ ಕ್ರಾಸ ಹತ್ತಿರ ದಿನಾಂಕಃ 27-03-2019 ರಂದು 14-45 ಅವರ್ಸಕ್ಕೆ ಆರೋಪಿತನಾದ ಸತೀಶ ತಂದೆ ಮಲ್ಲೇಶಿ. ಸಾಃ ಹಾಸನ ಇತನು ತನ್ನ ಬಾಬತ್ತ ಇನೋವಾ ಕಾರ ನಂಬರಃ ಕೆಎಃ 03/ಸಿ/2719 ನೇದ್ದನ್ನು ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಶಿಂಗನಳ್ಳಿ ಕ್ರಾಸ ಹತ್ತಿರ ರಸ್ತೆಯ ಎಡಬದಿಗೆ ಇಳಿಸಿ ತಗ್ಗಿನಲ್ಲಿ ಪಲ್ಟಿ ಮಾಡಿ ಕೆಡವಿ ಅಪಘಾತಪಡಿಸಿ ಕಾರಿನಲ್ಲಿದ್ದ 8 ಜನರಿಗೆ ಸಾದಾ ವ ಭಾರಿ ಗಾಯಪಡಿಸಿ ತಾನು ಗಾಯಪಡಿಸಿಕೊಂಡಿದ್ದು. ಸದರಿ ಕಾರಿನಲ್ಲಿದ್ದ ಒಬ್ಬ ಗಾಯಾಳು ಸಂದೀಪ ತಂದೆ ಪ್ರೇಮಕುಮಾರ. ಸಾಃ ತಳನಕೆರೆ ಇತನು ಉಪಚಾರಕ್ಕಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2019 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಜೈಹಿಂದ ದಾಬಾ ಹತ್ತೀರ ಓಮಿನಿ ಕಾರ ನಂ KA-25-MB-2180 ನೇದ್ದರ ಚಾಲಕನಾದ ಕೃಷ್ಣಾ ಜಾಬಿನ ಇವನು ಕಾರನ್ನು ದೇವಿಕೊಪ್ಪದಿಂದ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದೆ ಹೊರಟ ಲಾರಿಗೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಜೈಹಿಂದ ದಾಬಾಕ್ಕೆ ಹಾಲು ಹಾಕಿ ಮರಳಿ ಜಮೀನ ಕಡೆಗೆ ಹೊರಟ ಪಿರ್ಯಾಧಿಯ ತಮ್ಮ ಮಲ್ಲಿಕಾರ್ಜುನ ಇವನ ಮೋಟಾರ್ ಸೈಕಲ್ ನಂ KA-25-EM-1393 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಿಗೆ ಗಾಯಪಡಿಸಿದ್ದಲ್ಲದೆ, ತನ್ನ ಕಾರಿನಲ್ಲಿದ್ದ ತನ್ನ ತಂದೆಗೆ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 55/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಾಸ್ತಿಕೊಪ್ಪ ಗ್ರಾಮದ ಮೃತಳಾದ ಸುವರ್ಣ ಗಂಡ ಬಸವರಾಜ ಮರೇವಾಡ ವಯಾ: 25 ವರ್ಷ ಸಾ: ದಾಸ್ತಿಕೊಪ್ಪ ಇವಳಿಗೆ ಮೊದಲನೆ ಮದುವೆ ಈಶ್ವರ ಜಾಲಗಾರ ಸಾ: ತಿಮ್ಮಾಪೂರ ಇವನೊಂದಿಗೆ ಆಗಿದ್ದರೂ ಗಂಡನಿಗೆ ಬಿಟ್ಟು ಫಿರ್ಯಾದಿಯ ಮಗ ಬಸವರಾಜನೊಂದಿಗೆ ಪ್ರೇಮಿಸಿ ಓಡಿ ಹೋಗಿ 2014 ನೇ ಇಸವಿ ಮಾರ್ಚ ತಿಂಗಳಲ್ಲಿ ಕಡೂರ ಹತ್ತಿರದ ದಾಸರಗುತ್ತಿ ಹನಮಂತ ದೇವರಗುಡಿಯಲ್ಲಿ ಇಬ್ಬರೇ ಮದುವೆ ಮಾಡಿಕೊಂಡಿದ್ದು, ಮದುವೆಯಾದ ನಂತರ ಅವಳು ತನ್ನ ಮೊದಲನೇ ಗಂಡನಿಗೆ ಮೋಸ ಮಾಡಿದೆ ಇದರಿಂದಾಗಿ ನಮ್ಮ ತವರು ಮನೆಯ ಜನರು ತನಗೆ ಮತ್ತು ತನ್ನ ಮಕ್ಕಳಿಗೆ ನೋಡಲು ಯಾರೂ ಬರಲಿಲ್ಲಾ ಅಂತ ಕೊರಗುತ್ತ ಚಿಂತೆ ಮಾಡುತ್ತಿದ್ದವಳು ಅದೇ ವಿಷಯವಾಗಿ ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ: 21/03/2019 ರಂದು ಸಾಯಂಕಾಲ 05.30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಇಲಿಪಾಷಾಣದ ರ್ಯಾಟೋಲ್ ಟ್ಯೂಬನ್ನು ತಿಂದು ತ್ರಾಸ್ ಮಾಡಿಕೊಂಡವಳಿಗೆ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಆದವಳು ಉಪಚಾರದಿಂದ ಗುಣಹೊಂದದೇ ದಿ: 27/03/2019 ರಂದು ರಾತ್ರಿ 10.15 ಗಂಟೆಗೆ ಮೃತಪಟ್ಟಿದ್ದು, ಅವಳಿಗೂ ತಮಗೂ ಯಾವುದೇ ಸಂಬಂಧ ಇರುವದಿಲ್ಲಾ, ಅವಳ ಶವವನ್ನು ಕೂಡ ನೋಡಲು ನಾವು ಬರುವದಿಲ್ಲಾ ಅಂತ ಅವಳ ತವರು ಮನೆಯವರು ತಿಳಿಸಿದ್ದು, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ಮಾವ ವರದಿ ಕೊಟ್ಟಿದ್ದು ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 20/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Wednesday, March 27, 2019

CRIME INCIDENTS 27-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-03-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ನಾಗನೂರ ಗ್ರಾಮದ ಕಮಲವ್ವಾ ಪಾಟೀಲ ಇವರ ವಾಸದ ಮನೆಯ ಮುಂದೆ ರಸ್ತೆಯ ಮೇಲೆ ಆರೋಪಿತರಾದ 1.ಸುರೇಶ ಧಮಱಗೌಡ್ರ ಹಾಗೂ ಇನ್ನು 06 ಜನರು  ಕೂಡಿಕೊಂಡು ಯಾವುದೋ ದ್ವೇಷದಿಂದ ವಿನಾಃಕಾರಣ ಹನಮಂತಪ್ಪ ಭೀಮಪ್ಪ ದೇವರಕೊಪ್ಪ ಇವನೊಂದಿಗೆ  ತಂಟೆ ತೆಗೆದು ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಗೆ ಅವಾಚ್ಯ ಬೈದಾಡಿ, ಪಿರ್ಯಾಧಿಯ ಗಂಡನಾದ ಹನಮಂತಗೌಡ ಪಾಟೀಲ ಇವರಿಗೆ ಆರೋಪಿತರೆಲ್ಲರೂ ಕೈಯಿಂದಾ ಹೊಡಿಬಡಿ ಮಾಡಿ ಊರಲ್ಲಿ ಇದ್ದು ಹೆಂಗ ಬಾಳೆ ಮಾಡತೀರಿ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 53/2019 ಕಲಂ 143.147.323.504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದುಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: : ನಾಗನೂರ ಗ್ರಾಮದ ಆರೋಪಿತರಿಗೂ ಕೆ.ಎಂ.ಎಫ್ನ ಚುನಾವಣೆಯ ಸಲುವಾಗಿ ಹಿಂದಿನಿಂದಲೂ ಜಗಳವಿದ್ದು ಬೇರೆ ಬೇರೆ ಕಾರಣಗಳಿಂದ ನನ್ನೊಂದಿಗೆ ಜಗಳವನ್ನು ಮಾಡಿತ್ತಾ ಬಂದಿರುತ್ತಾರೆ. ಆದರೆ ಈ ದಿನ ದಿನಾಂಕ-27-03-2019 ರಂದು ಬೆಳಗ್ಗೆ ನಮ್ಮ ಗ್ರಾಮದ ದೇಸಾಯಿ ರವರ ಮನೆಯ ಪಕ್ಕದಲ್ಲಿ ರಸ್ತೆ ಕಾಮಗಾರಿಯು ನಡೆಯುತ್ತಿದ್ದು ನಾನು ಅಲ್ಲಿಗೆ ಹೋಗಿ ಆರೋಪಿ 1ನೇದವರಾದ  ಹನುಮಂತಪ್ಪ ತಂಧೆ ಭೀಮಪ್ಪ ದೇವರಕೊಪ್ಪ, ಇವರನ್ನು ವಿಚಾರಿಸಲಾಗಿ ಅವರು ಹಳೆಯ ದ್ವೇಶವನ್ನು ಇಟ್ಟುಕೊಂಡು ನನಗೆ ಅವಾಚ್ಯ ಶಬ್ದಗಳಿಂದ ಬೈದಾಡಿದರು ನಾನು ಹಿರಿಯರ ಸಮಕ್ಷಮ ಬಗೆಹರಿಸಿಕೊಂಡರಾಯಿತು ಅಂತ ಸುಮ್ಮನಾಗಿದ್ದೆ, ಆದರೆ ಅದೇ ದಿನ 09:30 ಗಂಟೆಗೆ ನಾಗನೂರು ಗ್ರಾಮದ  ರಮೇಶ ತಂದೆ ಭರಮಗೌಡ ಪಾಟೀಲ ಇವರ ಮನೆಯ ಮುಂದೆ ನಾನು ಬರುತ್ತಿರುವಾಗ ನಮೂದ ಮಾಡಿದ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ವಿನಾಃ ಕಾರಣ ತಂಟೆತೆಗೆದು ನನಗೆ ತಮ್ಮ ಕೈಕಾಲುಗಳಿಂದ ಹಾಗೂ ಇಟ್ಟಂಗಿ ಹೆಂಡೆಯಿಂದ ಹೊಡಿಬಡಿ ಮಾಡುತ್ತಿದ್ದಾಗ ನಾನು ಕೂಗಿಕೊಂಡಾಗ ನನ್ನ ಸಹೋದರರಾದ 1] ಶಂಕರಗೌಡ ತಂದೆ ಚನ್ನಬಸನಗೌಡ ಪಾಟೀಲ, 2] ಉದಯಕುಮಾರ ತಂದೆ ಹನಮಂತಪ್ಪ ಭಜಂತ್ರಿ ಹಾಗೂ 3] ಗುರುಸಿದ್ದಗೌಡ ತಂದೆ ಭೀಮನಗೌಡ ಪಾಟೀಲ ಇವರುಗಳು ಬಂದು ಜಗಳವನ್ನು ಬಿಡಿಸಿದ್ದು ಆರೋಪಿತರು ಜಗಳವನ್ನು ಬಿಟ್ಟು ಹೋಗುವಾಗ ನನಗೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 54/2019 ಕಲಂ 143.147.323.504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದುಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಕರಣದಲ್ಲಿಯ ಮೃತನಾದ ದೇವೆಂದ್ರಪ್ಪ ತಂದೆ ಹೊಂಬಣ್ಣ @ ಅಂಬಣ್ಣ ಅಂಗಡಿ ವಯಸ್ಸು 39 ವರ್ಷ ಸಾ: ಬೀರವಳ್ಳಿ ಇವನು ಸುಮಾರು 12 ವರ್ಷಗಳಿಂದ ವಿಪರಿತ ಸಾರಾಯಿ ಕುಡಿಯುವ ಚಟಕ್ಕೆ ಬಿದ್ದವನು, ಸರಿಯಾಗಿ ಕೂಲಿ ಕೆಲಸಕ್ಕೆ ಹೋಗದೇ ಕುಡಿದು ಹಣವನ್ನು ಹಾಳುಮಾಡುತ್ತ ತನ್ನ ದೇಹದ ಆರೋಗ್ಯವನ್ನೂ ಸಹ ಕೆಡಿಸಿಕೊಂಡವನು, ತನ್ನ ಕುಡಿತದ ಚಟಕ್ಕಾಗಿ ಅವರಿವರ ಹತ್ತಿರ ಕೈಗಡ ಸಾಲ ಸಹ ಮಾಡಿದವನು, ಮಾಡಿಕೊಂಡು ತಿನ್ನಲು ತನ್ನದು ಸ್ವಂತ ಹೊಲ ಆಸ್ತಿ ಇಲ್ಲಾ ಅಂತ ಕೊರಗುತ್ತಿದ್ದವನು ಅದೇ ಚಿಂತೆಯಲ್ಲಿ ದಿ: 08/03/2019 ರಂದು ಮುಂಜಾನೆ 11.00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಾನಾಗಿಯೇ ತನ್ನ ಮೈ ಮೇಲೆ ಆಯಿಲ್ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಸುಟ್ಟಗಾಯ ಹೊಂದಿದವನು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಆದವನು ಉಪಚಾರದಿಂದ ಗುಣಹೊಂದದೇ ದಿ: 27/03/2019 ರಂದು ಮುಂಜಾನೆ 01.00 ಗಂಟೆಗೆ ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯುಡಿನಂ 19/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, March 25, 2019

CRIME INCIDENTS 25-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-03-2019 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗುಡಗೇರಿ ಲಕ್ಷ್ಮೇಶ್ವರ ರಸ್ತೆ ಮೇಲೆ ಗುಡಗೇರಿ ಗ್ರಾಮದಿಂದ 3 ಕಿ.ಮಿ ಅಂತರದಲ್ಲಿ  ಆರೋಪಿತನಾದ ಚಾಲಕನು ತಾನು ನಡೆಸುತ್ತಿದ್ದ ಮೋಟರ  ಸೈಕಲ್ ನಂಬರ ಕೆ.ಎ 27/ ಆರ್ 7850 ನೇದ್ದನ್ನು ಗುಡಗೇರಿ ಕಡೆಯಿಂದ ಲಕ್ಷ್ಮೇಶ್ವರ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ಲಕ್ಷ್ಮೇಶ್ವರ ಕಡೆಯಿಂದ ಗುಡಗೇರಿ ಕಡೆಗೆ ಬರುತ್ತಿದ್ದ ಪ್ರಕಾಶ ಗದಗ ಇವನು ಕುಳಿತ ಮೋಟರ್ ಸೈಕಲ್ ನಂಬರ ಕೆ.ಎ 25/ ಇವಿ 7406 ನೇದ್ದಕ್ಕೆ ಡಿಕ್ಕಿ ಮಾಡಿ ಮೋಟರ್ ಸೈಕಲ್ ಹಿಂದೆ ಕುಳಿತ ಫಿರ್ಯಾದಿ ಪುಟಿದು ಕೆಳಗೆ ಬಿಳುವಂತೆ ಮಾಡಿ ಮೈ ಕೈಗೆ ಕಾಲಿಗೆ ಹಲ್ಲಿಗೆ ಹಣೆಗೆ ಸಾದಾ ವ ಭಾರಿ ಗಾಯವಾಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಅಳ್ನಾವರ ಗ್ರಾಮದ ಉಡಚಮ್ಮ ಬಸಮ್ಮನವರ ಇವರ ಮನೆಯ ಜನರೊಂದಿಗೆ ಮನೆಯಲ್ಲಿದ್ದಾಗ ತನ್ನ ಮಗಳಾದ ರಕ್ಷಿತಾ ಇವಳು ತನ್ನ ಕೈಯಲ್ಲಿ ನೀರಿನ ಚರಿಗೆಯನ್ನು ಹಿಡಿದುಕೊಂಡು ನಾನು  ಶೌಚಾಲಯಕ್ಕೆ ಹೋಗಿ ಬರುತ್ತೇನೆ ಅಂತಾ ಹೋದವಳು ಪರತ್  ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೇಯಾಗಿರುತ್ತಾಳೆ   ಇಲ್ಲಿಯವರೆಗೂ ಅಲಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲಾ., ಅವಳ ಚಹರೆ ಪಟ್ಟಿಯು ಎತ್ತರ  5 ಪೂಟ 2 ಇಂಚ , ಗೋದಿಗೆಂಪು ಮೈ ಬಣ್ಣ, ದುಂಡು ಮುಖ, ಅಗಲ ಹಣೆ , ತಲೆಯಲ್ಲಿ ಕಪ್ಪು ಕೂದಲು ಈ ಪ್ರಕಾರ ಚಹರೆಯುಳ್ಳವಳು ಇರುತ್ತಾಳೆ. ಅವಳು ಕನ್ನಡ, ಹಿಂದಿ,ಹಾಗೂ ಅಲ್ಪ ಸ್ವಲ್ಪ ಮರಾಠಿ ಭಾಷೆ ಸಹ ಮಾತನಾಡುತ್ತಳೆ. ತಪಾಸಣೆ ಮಾಡಿ ಹುಡುಕಿ ಕೊಡುವ ಕುರಿತು ವರದಿ ನೀಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 25/2019 ಕಲಂ ಮಹಿಳೆ ಕಾಣೆ ಪ್ರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದೇವಿಕೊಪ್ಪ ಗ್ರಾಮದ ಸುನಂದಾ ಕೋಂ ಅಜ್ಜಯ್ಯಾ ಬೇಗೂರ ಸಾ..ದೇವಲಿಂಗಿಕೊಪ್ಪ ತಾ..ಕಲಘಟಗಿ ಇವರು ಠಾಣೆಗೆ ಹಾಜರಾಗಿ ತನ್ನ ಗಂಡನಾದ ಅಜ್ಜಯ್ಯಾ  ತಂದೆ ನಿಂಗಯ್ಯಾ ಬೇಗೂರ 35 ವರ್ಷ ಇವರೊಂದಿಗೆ ಅವನ ತಾಯಿ ಅಣ್ಣ, ಅತ್ತಿಗೆ ಕೂಡಿಕೊಂಡು ಜಮೀನು ವಿಷಯವಾಗಿ ತಂಟೆ ಮಾಡುತ್ತಿದ್ದರಿಂದ ಮನಸ್ಸಿಗೆ ಬೇಜಾರ ಮಾಡಿಕೊಂಡು ದಿ..15-03-2019 ರಂದು ಮುಂಜಾನೆ 07-00 ಗಂಟೆಗೆ ತನ್ನ ವಾಸದ ಮನೆಯಿಂದಾ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು ಅವನಿಗೆ ಪತ್ತೆ ಮಾಡಿಕೊಡಬೇಕು ಪಿರ್ಯಾಧಿದಾರಳ ಪಿರ್ಯಾಧಿಯನ್ನು ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2019 ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇನಮೂದ ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಮ್ಮಿಗಟ್ಟಿ ನರೇಂದ್ರ  ರಸ್ತೆ ನರೇಂದ್ರ ಗ್ರಾಮದ ಬಸವರಾಜ ಬನವನ್ನವರ ಇವರ ಜಮೀನ ಹತ್ತಿರ  ಬುಲೇರೋ ವಾಹನ ನಂ ಕೆಎ 27 ಬಿ 6024 ನೇದ್ದರ ಚಾಲಕ ಈರಯ್ಯ ಬಾಳಯ್ಯ  ಪೂಜೇರಿ ಸಾಃಕುರಗುಂದ ತಾಃಬೈಲಹೊಂಗಲ ತಾಃಬೈಲಹೊಂಗಲ ಇವನು  ತನ್ನ ವಾಹನವನ್ನು ಮುಮ್ಮಿಗಟ್ಟಿ ಕಡೆಯಿಂದ ನರೇಂದ್ರ ಕಡೆಗೆ  ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ  ನಡೆಸಿಕೊಂಡು ಬಂದು ವಾಹನದ ವೇಗ  ನಿಯಂತ್ರಣ ಮಾಡಲಾಗದೇ ಇದೇ  ರಸ್ತೆಯಲ್ಲಿ ರಸ್ತೆ ಎಡಸೈಡಿನಲ್ಲಿ ನರೇಂದ್ರ ಕಡೆಯಿಂದ ಮುಮ್ಮಿಗಟ್ಟಿ   ಕಡೆಗೆ ಹೋಗುತ್ತಿದ್ದ ಮೋಟರ ಸೈಕಲ ನಂ ನಂ ಕೆಎ 47 ಕೆ 2211  ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಮಾಡಿ ಅಪಘಾತದಲ್ಲಿ ಮೋಟರ ಸೈಕಲ ನಂ ನಂ ಕೆಎ 47 ಕೆ 2211  ಚಾಲಕ ಹಾಗೂ ಹಿಂಬದಿ ಸವಾರನಿಗೆ  ಭಾರಿ ಗಾಯ ಪಡಿಸಿದ್ದಲ್ಲದೆ ರಸ್ತೆ ಬದಿಯ ವಿದ್ಯೂತ ಕಂಬಗಳಿಗೆ ಡಿಕ್ಕಿ ಮಾಡಿ ಕೆಡವಿದ್ದು ಎರಡು ವಾಹನಗಳನ್ನು ಜಖಂ ಗೋಳಿಸಿದ್ದು ಇರುತ್ತದೆ.ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 56/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಣಚಿ ಗ್ರಾಮದ  ಫಿಜಾ ತಂದೆ ಹುಸೇನಸಾಬ ಹುಲ್ಲಿಕೇರಿ, ವಯಾ 20 ವರ್ಷ, ಸಾ:ಬೆಣಚಿ, ತಾ:ಅಳ್ನಾವರ, ಜಿ:ಧಾರವಾಡ ಇವಳು ಹಿತ್ತಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಎಲ್ಲಿ ಹುಡಕಿದರೂ ಸಿಕ್ಕಿರುವುದಿಲ್ಲ ಯಾವುದೋ ಕಾರಣಕ್ಕಾಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 15/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, March 24, 2019

CRIME INCIDENTS 24-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-03-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂಕೂರ ಗ್ರಾಮದ ರಾಜೇಸಾಬ ನಾಲಬಂದ  ಇವರ ಮನೆಯವರು ಹಾಗೂ ಆರೋಪಿತರ ನಡುವೆ ಹಿತ್ತಲಕ್ಕೆ ಹಾಯ್ದಾಡುವ ದಾರಿಯ ಸಲುವಾಗಿ ತಂಟೆ ತಕರಾರುಗಳಿದ್ದು, ದಿನಾಂಕ: 22-03-2019 ರಂದು 1400 ಗಂಟೆಗೆ, ಪಿರ್ಯಾದಿಯು ತನ್ನ ತಾಯಿಯೊಂದಿಗೆ ತಮ್ಮ ಮನೆಯ ಮುಂದೆ ಕುಳಿತಿದ್ದಾಗ  ಆರೋಪಿತರಾದ ಈಶ್ವರ @ ಕಾಶಪ್ಪ ತಂದೆ ಶಿವಪ್ಪ ಬಡಿಗೇರ,2. 3 ಮಂಜುನಾಥ ಶಿವಪ್ಪ ಬಡಿಗೇರ ಹಾಗೂ ಇನ್ನೂ 02 ಜನರು ಕೊಡಿಕೊಂಡು  ತಂಟೆ ತೆಗೆದು ಅವಾಚ್ಯ ಬೈದಾಡಿದ್ದು ಅಲ್ಲದೇ, ಆರೋಪಿತನು ಅದೇ ದಿನ ಸಂಜೆ 7-00 ಗಂಟೆಗೆ ಇನ್ನುಳಿದ ಎಲ್ಲರೂ ಕುಂಕೂರ ತಾ: ಕುಂದಗೋಳ ಇವರನ್ನು ಕರೆದುಕೊಂಡು ಬಂದು ಏಕಾಏಕಿ ಪಿರ್ಯಾದಿಯೊಂದಿಗೆ ತಂಟೆ ತೆಗೆದು ಅವಾಚ್ಯ ಬೈದಾಡಿದ್ದು ಬಿಡಿಸಲು ಬಂದ ಪಿರ್ಯಾದಿಯ ಚಿಕ್ಕಪ್ಪನಿಗೆ ತಮ್ಮ ಕೈಯಲ್ಲಿದ್ದ ಕಂದ್ಲಿ ಮತ್ತು ಬಡಿಗೆಯಿಂದ ತಲೆಗೆ, ಮೈ ಕೈ ಗಳಿಗೆ, ಕಾಲಿಗೆ ಹೊಡೆ ಬಡೆ ಮಾಡಿ ರಕ್ತಗಾಯಪಡಿಸಿ, ಎಡಮೊಣಕಾಲ ಕೆಳಗೆ ಎಲಬು ಮುರಿಯುವಂತೆ ಮಾಡಿದ್ದು, ನೆಲಕ್ಕೆ ಕೆಡವಿ ಎದೆಯ ಮೇಲೆ ಕುಳಿತು ಕುತ್ತಿಗೆ ಹಿಚುಕಿ ಅವರಿಬ್ಬರ ಕೊಲೆಗೆ ಪ್ರಯತ್ನಿಸಿದ್ದು, ಇದನ್ನು ಬಿಡಿಸಲು ಬಂದ ಪಿರ್ಯಾದಿಯ ತಂದೆ, ತಾಯಿ, ಹಾಗೂ ಚಿಕ್ಕಮ್ಮನಿಗೆ ಆರೋಪಿತರು ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಒಳನೋವು ಗಾಯಪೆಟ್ಟುಗಳಾಗುವಂತೆ ಮಾಡಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ39/2019 ಕಲಂ 323.324.307.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ತಿಮಿರಿಕೊಪ್ಪ ಗ್ರಾಮದ ಹತ್ತಿರ ಎನ್.ಎಚ್-4 ರಸ್ತೆ ರಾಮನಕೊಪ್ಪ ಖಾಲಸಾ ದಾಬಾದ ಹತ್ತಿರ ಇರುವ ಫಾತೀಮಾ ಪುಣಕಲ್ ಇವರ ಹೊಲದಲ್ಲಿರುವ ಹಾಳುಬಿದ್ದ ಕೊಠಡಿಯಲ್ಲಿ ಸುಮಾರು 35 ರಿಂದ 40 ವರ್ಷ ವಯಸ್ಸಿನ ಅನಾಮದೇಯ ಮೃತ ಗಂಡಸು ಕುಡಿದ ನಿಶೆಯಲ್ಲಾಗಲೀ ಅಥವಾ ಇನ್ನಾವುದೋ ಕಾರಣದಿಂದಾಗಲೀ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಸಂಶಯವಿದ್ದು ಶವ ಪರೀಕ್ಷೆಯಾಗಲು ವಿನಂತಿ ಅಂತಾ ವರದಿದಾರನ ವರದಿಯನ್ನು ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿಯುಡಿನಂ 12/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

Saturday, March 23, 2019

CRIME INCIDENTS 23-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-03-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:22-03-2019 ರಂದು 12-50 ಗಂಟೆ ಸುಮಾರಿಗೆ  ಮೊಟಾರ ಸೈಕಲ ನಂ.ಕೆ.ಎ.24.ಎಕ್ಸ.2464 ನೇದ್ದರ ಸವಾರ  ಹನಮಂತ ತಂದೆ ಗುರುನಾಥ.ಪೂಜಾರ.ಸಾಃಕಲ್ಲೇ ತಾಃಧಾರವಾಡ ಇತನು  ಮೊಟಾರ ಸೈಕಲ ನೇದರಲ್ಲಿ ಅನೀಲ ರಾಮಣ್ಣವರ ಇವರಿಗೆ  ಹತ್ತಿಸಿಕೊಂಡು ಹಂಗರಕಿಯಿಂದಾ ಮಸಾರಿ ಕಡೆಗೆ ಅತೀವೇಗವಾಗಿ ವ ನಿಷ್ಕಾಳಜಿತನದಿಂದಾ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ತನ್ನ ಮೊಟಾರ ಸೈಕಲಿನ ನಿಯಂತ್ರಣವನ್ನು ಕಳೆದುಕೊಂಡು ಹಂಗರಕಿ ಕ್ರಾಸ ಹತ್ತಿರ ಇರುವ ಫೂಲ ಕಟ್ಟಿಗೆ ಡಿಕ್ಕಿ ಮಾಡಿ  ಅಪಘಾತ ಪಡಿಸಿ  ಮೊಟಾರ  ಸೈಕಲ ಹಿಂದೆ ಕುಳಿತ ಪಿರ್ಯಾದಿಗೆ ಸಾದಾ ಸ್ವರೂಪದ ಗಾಯ ಪಡಿಸಿದಲ್ಲದೇ  ತನ್ನ ತಲೆಗೆ ಭಾರಿ ಸ್ವರೂಪದ ಗಾಯ ಪಡಿಸಿಕೊಂಡು ಉಪಚಾರಕ್ಕೆ ಕಿಮ್ಸ ಆಸ್ಪತ್ರೆಯಲ್ಲಿ ದಾಖಲಾಗಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ಮರಣ ಹೊಂದಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 37/2019 ಕಲಂ 279.337.304(ಎ)ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣೆ ವ್ಯಾಪ್ತಿಯ:ಬೇಲೂರ ರಸ್ತೆಯ ಹತ್ತಿರ ಪಿ.ಬಿ ರಸ್ತೆಯ ಮೇಲೆ ಆರೋಪಿತನಾದ ಸಂತೋಷ ತಂದೆ ಸಿದ್ದಾರೂಡ ಬೆಂಡಿಗೇರಿ. ಸಾಃ ಮಂಗಳಗಟ್ಟಿ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ27/ಯು/3672 ನೇದ್ದನ್ನು ಬೆಳಗಾವಿ-ಧಾರವಾಡ ಪಿ.ಬಿ ರಸ್ತೆಯ ಮೇಲೆ ಬೆಳಗಾವಿ ಕಡೆಯಿಂದಾ ಧಾರವಾಡ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಧಾರವಾಡ ವಾಲ್ಮಿ ಹತ್ತಿರ ರಸ್ತೆ ಬದಿಗೆ ಹೊರಟ ಮಲ್ಲಪ್ಪಾ ಇವರಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿಗಾಯಪಡಿಸಿ ತನ್ನ ಹಿಂದೆ ಕುಳಿತವನಿಗೂ ಗಾಯಪಡಿಸಿ ತಾನು ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, March 22, 2019

CRIME INCIDENTS 22-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-03-2019 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 21-12-2018 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಇಂಗಳಗಿ ಗ್ರಾಮದ ಮುಲ್ಲಾಣ್ಣವ ಇವರ ವಾಸದ ಹಾಗೂ ಗಂಡನ ಮನೆಯಲ್ಲಿ ಮಾಡಿದ ಆರೋಪಿ ಮೆಹಬೂಬ @ ಮೆಹಬೂಲಿ ತಂದೆ ಅಲ್ಲಾಭಕ್ಷಿ ಗುಡಗೇರಿ ಸಾ: ಇಂಗಳಗಿ ಈತನು  ಹಣದ ವಿಚಾರವಾಗಿ ಫಿರ್ಯಾದಿಯೊಂದಿಗೆ ತೆಂಟೆ ತೆಗೆದು ಅವಾಚ್ವ್ಯ ಬೈದಾಡಿ ಕೈಯಿಂದ ಫಿರ್ಯಾದಿಗೆ  ಹೊಡಿ ಬಡಿ ಮಾಡಿದ್ದಲ್ಲದೇ ಫಿರ್ಯಾದಿಯ ಮೈ ಕೈ ಮುಟ್ಟಿ ಅವಳ ಮೈ ಮೇಲಿನ ಬಟ್ಟೆ ಹಿಡಿದು ಎಳೆದಾಡಿ ಅವಳ ಕೈ ಹಿಡಿದು ಎಳೆದಾಡಿ  ಅವಳ ಮಹಿಳಾ ತನಕ್ಕೆ ಅಪಮಾನ ಮಾಡಿದ್ದಲ್ಲದೇ ಜೀವದ ಭೇದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2019 ಕಲಂ 354(ಎ)506.504.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನೂಲ್ವಿ ಗ್ರಾಮದ ಗಂಗಾಧರ ನಗರದಲ್ಲಿ ಇರುವ ಪಿರ್ಯಾದಿಯ ಅತ್ತೆಯ ಮನೆಯಿಂದ ಹುಸೇನಸಾಬ ತಂದೆ ಅಲ್ಲಾಭಕ್ಷ ಪೈಲ್ವಾನವರ ವಯಾ. 35 ವರ್ಷ ಜಾತಿ.ಮುಸ್ಲಿಂ ಉದ್ಯೋಗ. ಕೂಲಿ ಸಾ. ನೂಲ್ವಿ ತಾ. ಹುಬ್ಬಳ್ಳಿ ಇವನು ಇದರಲ್ಲಿಯ ಪಿರ್ಯಾದಿಯ ಹತ್ತಿರ ಹೋಗುತ್ತೇನೆ ಅಂತಾ ಹೇಳಿ ಹೋದವನು ರಾತ್ರಿಯಾದರು ಬರದೇ ಕಾಣೆಯಾಗಿದ್ದು ಇರುತ್ತದೆ.  ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2019 ಕಲಂ ಮನುಷ್ಯಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ-ಹುಬ್ಬಳ್ಳಿ ರಸ್ತೆಯ ಮೇಲೆ ಯಮನೂರ ಸಂಗೀತಾ ಡಾಬಾದ ಹತ್ತಿರ ಇದರಲ್ಲಿ ಯಾವುದೋ ವಾಹನ ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ಫಿರ್ಯಾದಿಯ ಮಾವ ಹುಸೇನಸಾಬ ಬುಡನಸಾಬ ಮೈನಳ್ಳಿ ವಯಾ: 37 ವರ್ಷ ಸಾ:ಹನುಕುಂಟೆ ತಾ:ಕೊಪ್ಪಳ ಈತನಿಗೆ ಢಿಕ್ಕಿ ಮಾಡಿ ಭಾರಿ ಗಾಯಪಡಿಸಿ ವಾಹನ ನಿಲ್ಲಿಸದೆ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2019 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂಬಾರಕೊಪ್ಪ ಗ್ರಾಮದ ಹದ್ದಿ ಪಿರ್ಯಾದಿದಾರನ ಹೊಲದ ಹತ್ತೀರ ಸರಕಾರಿ ಅರಣ್ಯ ಪ್ರದೇಶದಲ್ಲಿ ಮಂಜುನಾಥ ಗಿರಿಯಾಲ ಇವರ  ತಮ್ಮನಾದ ಸಂಜಯ ತಂದೆ ಮಾರುತಿ ಗಿರಿಯಾಲ ವಯಾ 20 ವರ್ಷ ಸಾ: ಅರವಟಿಗೆ ತಾ: ಅಳ್ನಾವರ ಜಿ: ಧಾರವಾಡ ಇವನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಯಾವುದೋ ವಸ್ತುವಿನಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಕುತ್ತಿಗೆಗೆ ಟವೆಲು ಬಿಗಿದು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2019 ಕಲಂ 302 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


5. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಹತ್ತಿರ ಮೃತಳಾದ ಶೋಭಾ ಕೊಂ ಬಾಲರಾಜ ರಾಯಚೂರ, ವಯಾ 31 ವರ್ಷ ಜಾತಿಃ ಹಿಂದೂ ನಾಯಿಂದಾ ಉದ್ಯೊಃ ಮನೆಕೆಲಸ ಸಾಃ ಅಣ್ಣಿಗೇರಿ ಗಾಂಧಿ ನಗರ ತಾಃ ನವಲಗುಂದ ಇವಳು ಮಾನಸೀಕ ಅಸ್ವಸ್ಥತೆಯ ಕಾಯಿಲೆಯವಳಾಗಿದ್ದು ತನಗಿರುವ ಮಾನಸೀಕತೆಯ ಭಾದೆಯಲ್ಲಿ ಅಣ್ಣಿಗೇರಿಯ ಗಾಂಧಿ ನಗರದಲ್ಲಿ ಇರುವ ಗಡೇದ ಭಾವಿಯಲ್ಲಿ ತನ್ನಷ್ಟಕ್ಕೆ ತಾನೇ ಬಿದ್ದು ಭಾವಿಯ ನೀರಿನಲ್ಲಿ ಮುಳುಗಿ ಮರಣ ಹೊಂದಿದ್ದು ಅವಳ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ  ಫಿಯಾಱಧೀ ನೀಡಿದ್ದು ಈ  ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹಬಸೂರ ಗ್ರಾಮದ ಹತ್ತಿರ ಮೃತ ಸೋಮಶೇಖರ ಲಿಂಗಬಸಪ್ಪ ಕುಲಕರ್ಣಿ ವಯಾ 63 ವರ್ಷ ಸಾ: ಚೈತನ್ಯ ನಗರ ಧಾರವಾಡ ಇವರು ನವಲಗುಂದಕ್ಕೆ ಹೋಗಿ ಬರುವದಾಗಿ ಹೇಳಿ ಹೋಗಿದ್ದು, ಹೆಬಸೂರ ಗ್ರಾಮದ ಗೋವಿಂದರೆಡ್ಡಿ ಹಲಗತ್ತಿ ಇವರ ಜಮೀನದಲ್ಲಿ ತನಗಿದ್ದ ಹೊಟ್ಟೆನೋವಿನ ಬಾದೆ ತಾಳಲಾರದೇ ದಿನಾಂಕ 21/03/2019 ರಂದು ಸಂಜೆ 05-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಮೃತ ಪಟ್ಟಿದ್ದು ವಿನಃ ಸದರಿಯವರ ಮನರಣದಲ್ಲಿ ಬೇರೆ ಯಾವ ಸಂಶಯ ಇರುವುದಿಲ್ಲ ಅಂತ ವರದಿ ಕೊಟ್ಟಿದ್ದುಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

   
7. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಗ್ರಾಮದ ಮೃತ ಅರುಣ ತಂದೆ ದುಂಡಪ್ಪ ಖಾನಾಪೂರ @ ಮೇತ್ರಿ ವಯಾ: 20 ವರ್ಷ, ಸಾ: ಹುಲ್ಲಂಬಿ ಇವನು ನಿನ್ನೆ ದಿನಾಂಕ; 21/03/2019 ರಂದು ಮದ್ಯಾಹ್ನ 12.45 ಗಂಟೆ ಸುಮಾರಿಗೆ ಹುಲ್ಲಂಬಿ ಹದ್ದಿಯ ಹಿರೇಕೆರೆಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಅಂತ ಹೋದಾಗ, ಆಕಸ್ಮಿಕವಾಗಿ ಒಂದು ಎತ್ತು ಕೊಸರಿಕೊಂಡು ನೀರಲ್ಲಿ ಹೋದಾಗ ಅದರ ಹಗ್ಗ ಹಿಡಿದುಕೊಂಡು ಹೋದವನು ನೀರಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗಿ ನೀರು ಕುಡಿದು ಉಸಿರುಗಟ್ಟಿ ಮೃತಪಟ್ಟವನಿಗೆ ಈ ದಿವಸ ದಿ: 22/03/2019 ರಂದು ಮದ್ಯಾಹ್ನ 01.00 ಗಂಟೆ ಸುಮಾರಿಗೆ ನೀರಿನಿಂದ ಮಗನ ಶವವನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಹೊರಗೆ ತೆಗೆದಿದ್ದು, ನನ್ನ ಮಗನ ಸಾವು ಆಕಸ್ಮಿಕವಾಗಿ ಆಗಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಂದೆ ವರದಿ ಕೊಟ್ಟಿದ್ದು  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 16/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.


Thursday, March 21, 2019

CRIME INCIDENTS 21-03-2019ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-03-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಬೇಲೂರ ಗ್ರಾಮದ ರೂಪಾ ಲಾಳಸಂಗಿ ಇವರ ಮಗಳು ಕುಮಾರಿ ಶ್ರೇಯಾ ತಂದೆ ಸೋಮನಾಥ ಲಾಳಸಂಗಿ, ವಯಾ 19 ವರ್ಷ, ಸಾ: ಬೇಲೂರ, ತಾ:ಜಿ:ಧಾರವಾಡ ಇವಳು ಯಾರಿಗೂ ಏನೂ ಹೇಳದೇ ಕೇಳದೇ ಯಾವುದೋ ಕಾರಣಕ್ಕಾಗಿ ಮನೆಯಿಂದ ಎಲ್ಲಿಯೋ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 14/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.,ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇಹರಕುಣಿ ಗ್ರಾಮದ ಪ್ರೇಮವ್ವ ಕರೇಮಲ್ಲೂರ ಇವರ ಮನೆಯ ಹತ್ತಿರ  ಆರೋಪಿತರಾದ 1) ಗುರುನಾಥ ಸಿದ್ದಪ್ಪ ಮೇಟಿ, 2) ಸಿದ್ದಪ್ಪ ಗುರಪ್ಪ ಮೇಟಿ, 3) ಬಸವಣ್ಣೆವ್ವ ಕೋಂ ಸಿದ್ದಪ್ಪ ಮೇಟಿ, 4) ಪಾರವ್ವ ಕೋಂ ಶಿವಪ್ಪ ಕುರಟ್ಟಿ, 5) ಕವಿತಾ ತಂದೆ ಸಿದ್ದಪ್ಪ ಮೇಟಿ, ಸಾ: ಎಲ್ಲರೂ ಹಿರೇಹರಕುಣಿ ಇವರು ತಮ್ಮ ಮಾಳಿಗೆಯ ಮೇಲೆ ಕುಂಬಿಯನ್ನು ಕಟ್ಟುತ್ತಿದ್ದು ಅದರ ಬಗ್ಗೆ ಹಿರಿಯರು ರಾಜಿ ಮಾಡಿಸುತ್ತಾರೆ ಕುಂಬಿಯನ್ನು ಕಟ್ಟಬೇಡಿರಿ ಅಂತಾ ಪಿರ್ಯಾದಿಯು ಹೇಳಿದ್ದಕ್ಕೆ ಅವಾಚ್ಯ ಬೈದಾಡಿ ಕೈಯಿಂದ ಹೊಡೆ ಬಡೆ ಮಾಡಿ, ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಾಳಿಗೆಯ ಮೇಲಿಂದ ಕೆಳಗೆ ದುಗಿಸಿ ಕೆಡವಿ ಕೊಲೆಗೆ ಪ್ರಯತ್ನಿಸಿ, ಬಿಡಿಸಲು ಹೋದ ಮಗನಿಗೆ ಆರೋಪಿತರೆಲ್ಲರೂ ಕೈಯಿಂದ ಹಾಗೂ ಕಲ್ಲುಗಳಿಂದ ಹೊಡೆ ಬಡೆ ಮಾಡಿ ದುಃಖಾಪತಪಡಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 37/2019 ಕಲಂ 143.147.148.323.324.307.504.149 ಐಪಿಸಿ ನೇದ್ದರಲ್ಲಿ  ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ನೆಹರು ನಗರ ಕುಂದಗೋಳ ಹತ್ತಿರ ಅನಾಮಧೇಯ ಗಂಡಸು ಅಜಮಾಸ ವಯಾ 50 ರಿಂದ 55 ವರ್ಷ ಈತನು ವರದಿಗಾರನ ಹೊಲದ ಬದುವಿನಲ್ಲಿ ಇರುವ ಬೇವಿನ ಗೀಡದ ಟೊಂಗಿಗೆ ವಾಯರ್ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ವರದಿಗಾರನು ವರದಿಕೊಟ್ಟಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಕಲಿಸಿದ್ದು ಇರುತ್ತದೆ.


Wednesday, March 20, 2019

CRIME INCIDENTS 20-03-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-03-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 20-03-2019 ರಂದು ಮುಂಜಾನೆ 8-30 ಗಂಟೆಗೆ ಹಿರೇಹರಕುಣಿ ಗುರುನಾಥ ಮೇಟಿ ಇವರ ಮನೆಯ ಹಿತ್ತಲದಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆ, ತಾಯಿ ಎಲ್ಲರೂ ಕೂಡಿ ತಮ್ಮ ಮನೆಯ ಕುಂಬಿ ಕಟ್ಟುತ್ತಿದ್ದಾಗ ಇದರಲ್ಲಿ ಆರೋಪಿತರಾದ ರಾಮಪ್ಪಾ ಕರಿಮಲ್ಲಣ್ಣವರ ಹಾಗೂ ಇನ್ನು 02 ಜನರಉ ಕೊಡಿ ಪಿರ್ಯಾದಿ ತಂದೆ ಹಾಗೂ ತಾಯಿಗೆ ಅಡ್ಡಗಟ್ಟಿ ತರುಬಿ ಏನರಲೇ ಅವಾಚ್ಯ ಬೈದಾಡಿ ಮನೆ ಮೇಲೆ ಕುಂಬಿ ಕಟ್ಟತೀರ್ಯಾ ಕುಂಬಿ ಕಟ್ಟಿ ಮನೆ ಹಿಂದಿರುವ ಹಿತ್ತಲ ಜಾಗಾನೂ ಸಹ ಲಪಟಾಯಿಸಾಕ ನೋಡಾಕತ್ತಿರ್ಯಾ ಅಂತಾ ತಂದೆಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ತಲೆಗೆ ಜೋರಾಗಿ ಹೊಡೆದು ರಕ್ತಗಾಯಪಡಿಸಿ ಕೊಲೆಗೆ ಪ್ರಯತ್ನಿಸಿದ್ದು, ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹಾಗೂ ಕೈಯಿಂದ ಪಿರ್ಯಾದಿ ತಾಯಿಗೆ ಹೊಡೆ ಬಡೆ ಮಾಡಿದ್ದು, ಬಿಡಿಸಿಕೊಳ್ಳಲು ಹೋದ ಬಡಿಗೆಯಿಂದ ಹೊಡೆ ಬಡೆ ಮಾಡಿ, ತಾಯಿಗೆ ಮಾನಭಂಗಪಡಿಸುವ ಉದ್ದೇಶದಿಂದ ಅವಳು ಧರಿಸಿದ್ದ ಜಂಪರನ್ನು ಹರಿದು ಬೆನ್ನು ಕಾಣುವಂತೆ ಮಾಡಿ ಸೀರೆ ಹಿಡಿದು ಎಳೆದಾಡಿ ಅವಮಾನಪಡಿಸಿದ್ದಲ್ಲದೇ, ಆರೋಪಿತರೇಲ್ಲರೂ ಇವತ್ತ ಉಳಕೊಂಡಿರಿ ಇನ್ನೊಮ್ಮೆ ಸೀಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 36/2019 323.324.307.354(ಬಿ)504.506.34 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಕೋಗಿಲಗೇರಿ ಗ್ರಾಮದಲ್ಲಿ ಇದರಲ್ಲಿಯ  ಸುಬ್ಬಯ್ಯಾ ಇವರ ಮಗನಾದ ಅಭಿಷೇಕ ತಂದೆ ಸುಬ್ಬಯ್ಯಾ ಮೀನಗೋಳ ಸಾ|| ಕೋಗಿಲಗೇರಿ ಅವನು ಹೋಗುವಾಗ ಆರೋಪಿತರಾದ  1) ಸುಬಾಸ ತಂದೆ ವೆಂಕಟಯ್ಯಾ ಮೀನಗೋಳ 2) ಶ್ರೀಮತಿ ಶ್ರೀದೇವಿ ಕೋಂ ಸಬಾಸ ಮೀನಗೋಳ 3) ಅಜಯ ತಂದೆ ಸುಬಾಸ ಮೀನಗೋಳ ಸಾ|| ಎಲ್ಲರೀ ಕೋಗಿಲಗೇರಿ ಅವರು ಕೈಯಿಂದ ನೆಲಕ್ಕೆ ಕೆಡವಿ ಅವಾಚ್ಯ ಶಬ್ದಗಳೀಂದ ಬೈದಾಡಿದ್ದು ಅಲ್ಲದೆ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2019 ಕಲಂ 323.504.156.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ಗ್ರಾಮ ಮೃತನಾದ ಅನಾಮದೇಯ ಗಂಡಸು ಅಂದಾಜು 65 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಯು ಕಳೆದ 4 ರಿಂದ 5 ದಿನಗಳ ಹಿಂದೆ ಎಲ್ಲಿಂದಲೋ ಬಂದು ಯಾವುದೋ ಕಾರಣಕ್ಕೆ ಮರಣ ಹೊಂದಿದ್ದು ಇರುತ್ತದೆ ಮೃತನು ಅಂದಾಜು 5.1 ಅಡಿ ಎತ್ತರ ತೆಳ್ಳನೆಯ ಮೈಕಟ್ಟು ಹೊಂದಿದ್ದು ಬಲಗೈಯಲ್ಲಿ ಕೆಂಪು ಬಣ್ಣದ ದಾರ ಕಟ್ಟಿರುತ್ತಾನೆ ಹಾಗು ತಲೆಯ ಕೂದಲು ಹಾಗು ಗಡ್ಡದಲ್ಲಿ ಬಿಳೀ ಬಣ್ಣದ ಕೂದಲುಗಳು ಇರುತ್ತವೆ ಶವವು ಭಾಗಶಃ ಕೊಳೆತಿದ್ದು ಮೃತನ ಸಾವಿನಲ್ಲಿ ಸಂಶಯ ಇರುವ ಬಗ್ಗೆ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಣ 04/219 ಕಲಂ 174.ಸಿ ರ್ ಪಿಸಿ ನೇದದ್ದರಲ್ಲಿ ಪ್ರಕಣವನ್ನು ಕ್ರಮ ಕೈಗೊಂಡಿದ್ದು ಇರುತ್ತದೆ.


Monday, March 18, 2019

CRIME INCIDENTS 18-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-03-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ..18-03-2019 ರಂದು ಬೆಳಗಿನ 05-25 ಗಂಟೆಯ ಸುಮಾರಿಗೆ ಕಲಘಟಗಿ ಶಹರದ  ಎಪಿಎಮ್ ಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿನಾದ ಖಾಸಿಂಸಾಬ ತಂದೆ ಇಮಾಮಸಾಬ ಇದಿಲಗಾರ ಸಾ..ಅರೆ ಬಸವನಕೊಪ್ಪ ತಾ..ಕಲಘಟಗಿ  ಇವನು ತನ್ನ ಬಳಿ ಯಾವುದೆ ಪಾಸು ವ ಪರ್ಮಿ ಇಲ್ಲದೆ ಅನಧಿಕೃತವಾಗಿ ಸುಮಾರು 1853/- ರೂ ಕಿಮ್ಮತ್ತಿನ ಓಲ್ಡ ಟವರಿನ ವಿಸ್ಕಿ ತುಂಬಿದ 180 Ml  ದ 25 ಟೆಟ್ರಾ ಪಾಕೀಟಗಳುನ್ನು ಸುಮಾರು 4.5 ಲೀಟರನಷ್ಟು ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುವ ಕುರಿತು ಸಾಗಾಟ ಮಾಡುತ್ತಿರುವಾಗ ಮಾಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಭೋಗೂರ ಗ್ರಾಮ ಹದ್ದಿ ಸವರ್ೆ ನಂಬರಃ 13 ಕ್ಷೇತ್ರ 1 ಎಕರೆ 34 ಗುಂಟೇ ಮಾಲಿನ ತೋಟದಲ್ಲಿ ದಿನಾಂಕಃ 17-05-2018 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಆರೋಪಿತರಾದ 1.ಗೊವಿಂದಪ್ಪಾ ಜಾಡರ 2 ಪ್ರವೀಣ  ಜಾಡರ ಹಾಗೂ ಇನ್ನು 05 ಜನರು ಸಮಾನ ಉದ್ದೇಶದಿಂದಾ ಪಿರ್ಯಾದಿ ಮಾವಿನ ತೋಟಕ್ಕೆ ಹೋದಾಗ ಅವರಿಗೆ ವಿಚಾರಿಸಲು ಹೋದ ಪಿರ್ಯಾದಿಗೆ ಕೈಯಿಂದಾ ಹೊಡಿ ಬಡಿ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 36/2019 ಕಲಂ 341.506.504.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಇದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ಕಣವಿಹೊನ್ನಾಪೂರ ಗ್ರಾಮದ ಹತ್ತಿರ ರಸ್ತೆ ಮೇಲೆ ದ EECO ಕಾರ ನಂ KA-25-P-7166 ನೇದರ ಚಾಲಕ ತಿಮ್ಮಣ್ಣ ಗೋಪಾಲಕೃಷ್ಣ ಭಟ್ಟ ಸಾ: ಯಲ್ಲಾಪೂರ ಹಾಲಿ:ಧಾರವಾಡ ಇವನು ತನ್ನ ವಾಹನವನ್ನು ಕಲಘಟಗಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಕಾರನ ವೇಗ ನಿಯಂತ್ರಣ ಮಾಡಲಾಗದೇ ಧಾರವಾಡ ಕಡೆಯಿಂದ ಕಲಘಟಗಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಮೋಟರ್ ಸೈಕಲ ನಂ KA-63-E-7330 ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಮೋಟರ್ ಸೈಕಲ ಚಾಲಕ ಮಲ್ಲಪ್ಪ ಲಕ್ಷ್ಮಣ ಹೊನ್ನಾಪೂರ ವಯಾ-36 ಸಾ: ಜಿ.ಬಸವನಕೊಪ್ಪ ಮೋಟರ ಸೈಕಲ ಹಿಂಬಂದಿ ಸವಾರರಾದ ಶಿವಾನಂದ ಮಲ್ಲಪ್ಪ ಅಪ್ಪೋಜಿ ವಯಾ-40 ಸಾ: ನೀರಸಾಗರ ಹಾಗೂ ರಾಚಪ್ಪ ತಂದೆ ದ್ಯಾಮಪ್ಪ ಮುಗದ ವಯಾ-22 ವರ್ಷ ಸಾ: ನೀರಸಾಗರ ಇವರಿಗೆ ಸಾದಾ ವ ಭಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಇದಲ್ಲಿಯ ಮೃತ ಸಬ್ಜಾನಸಾಬ ತಂದೆ ಇಮಾಮಸಾಬ ಬೆಟಗೇರಿ ವಯಾ-22 ವಷ್ ಜಾತಿ-ಮುಸ್ಲಿಂ ಉದ್ಯೋಗ-ಕೂಲಿ ಕೆಲಸ ಸಾ: ಅಣ್ಣಿಗೇರಿ ತಾ: ಅಣ್ಣಿಗೇರಿ ಈತನು ತನಗಿರುವ ಹೊಟ್ಟೆ ನೋವಿನ ಭಾದೆಯಿಂದ ತಾಳಲಾರದೇ ದಿನಾಂಕ: 17-03-2019 ರಂದು ಸಾಯಂಕಾಲ 18-00 ಗಂಟೆಯಿಂದ ದಿನಾಂಕ 18-03-2019 ರ ಬೆಳಗಿನ 09-30 ಗಂಟೆಯ ನಡುವಿನ ಅವಧಿಯಲ್ಲಿ ಅಣ್ಣಿಗೇರಿ ಶಹರದ ಶಿವರುದ್ರಪ್ಪ ರಾಮಪ್ಪ ಇವರ ಹೊಲದ ಮನೆಯಲ್ಲಿನ ಹಿತ್ತಲಿನ ಸಬಜೇದ ಕಬ್ಬಿಣದ ಹುಕ್ಕಿಗೆ ವಾಯರ್ ಹಗ್ಗದಿಂದ ತನ್ನಷ್ಟಕ್ಕೆ ತಾನೇ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ವಗೈರೆ ಇರುವುದಿಲ್ಲಾ ಅಂತ ವರದಿಗಾರನ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 03/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

 5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮಾಧನಬಾವಿ ಗ್ರಾಮದ  ಮೃತ ಶಿವರುದ್ರಪ್ಪ.ಗಂಗಪ್ಪ.ಅಂಗಡಿ.ವಯಾ-46 ವರ್ಷ ಸಾಃಮಾಧನಬಾವಿ ಇತನು ಹೊಸ ಮನೆಯನ್ನು ಕಟ್ಟಿಸಿದ್ದು ಅದಕ್ಕೆ ಊರಲ್ಲಿ ಅವರ ಇವರ ಕಡೆಯಿಂದಾ ಕೈಗಡಾ ಅಂತಾ ಹಣವನ್ನು ಇಸಿದುಕೊಂಡಿದ್ದು ಅದನ್ನು ಹೇಗೆ ಮುಟ್ಟಿಸುವದು ಅಲ್ಲದೇ ತನ್ನ ಮಗಳ ಮದುವೆಯನ್ನು ಹೇಗೆ ಮಾಡುವದು ಅಂತಾ ತನ್ನ ಮನಸ್ಸಿಗೆ ಹಚ್ಚಿಕೊಂಡು ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಸರಾಯಿ ಕುಡಿಯಬೇಡಾ ಅಂತಾ ಬಿದ್ದಿ ಮಾತು ಹೇಳಿದ್ದಕ್ಕೆ ಅದನ್ನೇ ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:17-03-2019 ರಂದು ಮುಂಜಾನೆ-11-00 ಗಂಟೆಯಿಂದಾ ದಿನಾಂಕ:18-03-2019 ರ ಬೆಳಗಿನ 08-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆಯನ್ನು ಮಾಡಿ ಮೃತ ಪಟ್ಟಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಬೇರೆ ಏನು ಸಂಶಯ ವಗೈರೆ ಇರುವದಿಲ್ಲಾಂತಾ ಮೃತನ ಮಗನ ವರದಿಯನ್ನು ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, March 17, 2019

CRIME INCIDENTS 17-03-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-03-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಡಸ ರಸ್ತೆಯ ಮೇಲೆ ಹಿಂಡಸಗೇರಿ ಬ್ರಿಜ್ ಸಮೀಪ ನಂಬರ ಇಲ್ಲದ ಹಿರೊ ಹೊಂಡಾ ಮೋಟಾರ್ ಸೈಕಲ್ ಸವಾರನಾದ ನಾಗರಾಜ ತಂದೆ ರಾಮಪ್ಪ ರಾಮನಾಳ 24 ವರ್ಷ ಸಾ..ಹಿರೆಹೊನ್ನಳ್ಳಿ ಇವನು ಮೋಟಾರ್ ಸೈಕಲ್ ನ್ನು ಕಲಘಟಗಿ ಕಡೆಯಿಂದಾ ತಡಸ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೆ ತಡಸ ಕಡೆಯಿಂದಾ ಕಲಘಟಗಿ ಕಡೆಗೆ ಬರುತ್ತಿದ್ದ ಪಿರ್ಯಾದಿ ಬಾಬತ್ ಟ್ಯಾಂಕರ್ ನಂ KA-51-C-6167 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಾನೆ ತನ್ನ ತಲೆಗೆ, ಮೈಕೈಗೆ ಗಂಭೀರ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 42/2019 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕರಡಿಗುಡ್ಡ ಗ್ರಾಮದ ಮೃತ ಶಿವಲಿಂಗಪ್ಪ ತಂದೆ ಪಕ್ಕೀರಪ್ಪ ಬಾಚಗುಂಡಿ ವಯಾ 78 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಕೂಲಿ ಕೆಲಸ ಸಾ:ಕರಡಿಗುಡ್ಡ ಇತನಿಗೆ ಕಳೆದ 4-5 ವರ್ಷಗಳಿಂತ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತಿದ್ದು ಮತ್ತು ಹರಣಿ ಸಮಸ್ಯೆಯಿಂದ ಬಳಲುತಿದ್ದು ಈ ಬಗ್ಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರವನ್ನು ಪಡೆದುಕೊಂಡು ಸವದತ್ತಿ ಸರಕಾರಿ ಆಸ್ಪತ್ರೆಯಲ್ಲಿ ಆಪರೇಶನ ಮಾಡಿಸಿಕೊಂಡರು ಸಹಿತಾ ಹರಣಿ ಸಮಸ್ಯೆ ಮತ್ತು ಮೂತ್ರ ವಿಸರ್ಜನೆ ಸಮಸ್ಯೆ ಕಡಿಮಿಯಾಗದ್ದರಿಂದ ಮನನೂಂದು ದಿನಾಂಕ 17-03-2019 ರಂದು ಬೆಳಗಿನ 00,30 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಲ್ಲಿ ತನ್ನಷ್ಠಕ್ಕೆ ತಾನೆ ಯಾವೂದು ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿ ಉಪಚಾರ ಕುರಿತು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮದ್ಯೆದಲ್ಲಿ ಮೃತ ಪಟ್ಟಿದ್ದು ಇರುತ್ತದೆ, ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 18/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.