ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, April 30, 2019

CRIME INCIDENTS 30-04-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-04-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕುಂದಗೋಳ ಶಹರದ ಬಸ್ ಸ್ಟ್ಯಾಂಡ ಹತ್ತಿರ ಶಿವಾ ಮೋಟಾರ್ಸ ಎದುರಿಗೆ ರಸ್ತೆಯ ಮೇಲೆ ಯಾರೋ ಕಳ್ಳರು ಪಿರ್ಯಾದಿಯ ಚನ್ನಬಸಣ್ಣಗೌಡ ಗದಗ ಇವರ  ಪ್ಯಾಂಟ ಕಿಸೆಯಲ್ಲಿದ್ದ ರೂ 45,000/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ 

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮುಕ್ಕಾಲ ಗ್ರಾಮದ ಮೃತಳಾದ ಕರಬಸಮ್ಮ ತಂದೆ ಪರಶುರಾಮ ಶಿಂಪಿ ವಯಸ್ಸು 20 ವರ್ಷ ಸಾ: ಮುಕ್ಕಲ್ ಇವಳು ತನ್ನ ತಂದೆಗೆ ಸುಮಾರು 05 ವರ್ಷದ ಹಿಂದೆ ಲಕ್ವಾ ಹೊಡೆದಿದ್ದರಿಂದ ಅವನಿಗೆ ದುಡಿಯಲು ಆಗದೇ ಮನೆಯಲ್ಲಿ ಇದ್ದದ್ದರಿಂದ ನಮ್ಮ ಮನೆಯ ಪರಿಸ್ಥಿತಿ ಹಾಳಾಯಿತು, ಬೇರೆಯವರ ಹಾಗೆ ನಮ್ಮ ಮನೆತನ ಚನ್ನಾಗಿ ಇಲ್ಲಾ ಅಂತ ಚಿಂತೆ ಮಾಡುತ್ತ ಕೊರಗುತ್ತಿದ್ದವಳು, ತಂದೆ ತಾಯಿಗೆ ನಾನು ಭಾರವಾಗಿ ಏಕೆ ಇರಬೇಕು ಅಂತ ಅನ್ನುತ್ತಿದ್ದವಳು ಅದೇ ಚಿಂತೆಯಲ್ಲಿ ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ: 29/04/2019 ರಂದು ರಾತ್ರಿ 09.00 ಗಂಟೆಯಿಂದ 09.30 ಗಂಟೆ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಅಡುಗೆ ಮನೆಯಲ್ಲಿ ಯಾವುದೋ ವಿಷವನ್ನು ತಾನಾಗಿಯೇ ಕುಡಿದು ತ್ರಾಸ್ ಮಾಡಿಕೊಂಡವಳಿಗೆ ಉಪಚಾರಕ್ಕೆ ಕಲಘಟಗಿ ಸರಕಾರಿ ದವಾಖಾನೆಗೆ ಮತ್ತು ಅಲ್ಲಿಂದ ಹುಬ್ಬಳ್ಳಿ ಕೆ.ಎಮ್.ಸಿ ದವಾಖಾನೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ದಿ: 29/04/2019 ರಂದು ರಾತ್ರಿ 11.00 ಗಂಟೆ ಸುಮಾರಿಗೆ ಹುಬ್ಬಳ್ಳಿ ಕೆ.ಎಮ್.ಸಿ ದವಾಖಾನೆಯ ಸಮೀಪ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ  ಅಂತ ಮೃತಳ ತಂದೆ ವರದಿ ಕೊಟ್ಟಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 28/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, April 28, 2019

CRIME INCIDENTS 28-04-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-04-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ರಾಮಾಪೂರ ರಸ್ತೆಯ ಶಂಕ್ರಪ್ಪ ಕೌದನವರ ಇವರ ಹೊಲದಲ್ಲಿ ಟಿಪ್ಪರ ಲಾರಿ ನಂಬರ ಕೆಎ25-ಡಿ-9626 ನೇದರ ಪಾಟಾ ರಿಪೇರಿ ಮಾಡಲು ಜಾವೇದ. ಶೇಖ ಇತನು ಲಾರಿಯ ಕೆಳಗೆ ಕುಳಿತು ಜಾಕ್ ಹಚ್ಚುವಾಗ ಜಾಕ್ ಹಚ್ಚಲು ಅಡಚಣೆಯಾಗಿದರಿಂದಾ ಚಾಲಕನಿಗೆ ಹೇಡ್ರೂಲೀಕ್ ಏರಿಸಲು ಹೇಳಿದ್ದಾಗ ಟಿಪರ್ ಲಾರಿ ಚಾಲಕನ್ನು ತನ್ನ ವಾಹನವನ್ನು ಗೇರನಲ್ಲಿ ಇಟ್ಟುಕೊಂಡಿದ್ದು ನಿರ್ಲಕ್ಷತೆಯಿಂದಾ ಲಾರಿಯನು ಚಾಲು ಮಾಡಿದಾಗ ಲಾರಿಯು ಒಮ್ಮಲೆ ಮುಂದೆ ಹೋಗಿ ಜಾವೇದ ಶೇಖ ಇತನ ನಡದ ಮೇಲೆ ಹಿಂದಿನ ಗಾಲಿಯು ಹಾಯ್ದು ಭಾರಿ ಸ್ವರೂಪದ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 50/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಮರಗೋಳ ಗ್ರಾಮದ ಹತ್ತಿತ  ಲಾರಿ ನಂ MH-09 EL-4992 ಕೇರಳದಿಂದ ಲಾತೂರಿಗೆ ಮಂಗಳೂರ ಹುಬ್ಬಳ್ಳಿ ನವಲಗುಂದ ಮಾರ್ಗವಾಗಿ ನರಗುಂದ ಕಡೆಗೆ ಹೊರಟಾಗ ಅಮರಗೋಳ ದಾಟಿ ಹಳ್ಳದ ದೊಡ್ಡ ಫೋಲ ಹತ್ತಿರ ರಸ್ತೆ ಎಡಸೈಡ ನಿಲ್ಲಿಸಿ ಮೂತ್ರ ಮಾಡಲು ಇಳಿದಾಗ ಹಿಂದಿನಿಂದ ನವಲಗುಂದ ಕಡೆಯಿಂದ ಆರೋಪಿತನಾದ ಮಹೇಶ ಐರವಾ ಈತನು ತಾನು ನಡೆಸುತ್ತಿದ್ದ ಲಾರಿ ನಂ MP-09/GG-1194 ನವಲಗುಂದ ಕಡೆಯಿಂದ ನರಗುಂದ ಕಡೆಗೆ ಅತೀ ಜೋರಿನಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎಡಸೈಡ ನಿಲ್ಲಿಸಿದ್ದ ಪಿರ್ಯಾದಿ ಲಾರಿಯ ಹಿಂಬದಿಗೆ ಡಿಕ್ಕಿ ಮಾಡಿ ಎರಡು ವಾಹನ ಡಿಕ್ಕಿ ಪಡಿಸಿ ತಾನು ಸಾದಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 52/2019 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Saturday, April 27, 2019

CRIME INCIDENTS 27-04-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-04-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ನಲವಡಿ ಗ್ರಾಮದ ಹತ್ತಿರ ಆರೋಪಿತನಾದ ವಿನೋದ ತಂದೆ ಮಹಾದೇವಪ್ಪ ಜಂತ್ಲಿ ಸಾ: ಗದಗ ಈತನು ತಾನು ಚಲಯಿಸುತ್ತಿದ್ದ ತೂಪಾನ ಟೆಂಪೋ ಟ್ರ್ಯಾಕ್ಸ ನಂಬರ ಕೆಎ-26/ಎ-6063 ನೇದ್ದನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ತನ್ನ ಮುಂದೆ ಇದ್ದ ವಾಹನವನ್ನು ಓವರಟೇಕ ಮಾಡುತ್ತಾ ತನ್ನ ಬಲಸೈಡಿಗೆ ಹೋಗಿ, ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ಎಡಸೈಡಿಗೆ ಹೊರಟಿದ್ದ ಹಿರೋ ಪ್ಯಾಶನ್ ಪ್ರೊ ಮೋಟರ ಸೈಕಲ ನಂಬರ ಕೆಎ-63/ಜೆ-4535 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ ಸೈಕಲ ಚಾಲಕನಾದ ಯಲ್ಲಪ್ಪ ಭಿಮಪ್ಪ ಕಟಗಿ ಮತ್ತು ಹಿಂದೆ ಕುಳಿತಿದ್ದ ನಂಧೀಶ ತಾನಪ್ಪ ಲಮಾಣಿ ಇವರಿಬ್ಬರಿಗೂ ಸಾಧಾ ವ ಭಾರಿ ಪ್ರಮಾಣದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 34/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆ ಮೇಲೆ ಬುಡ್ನಾಳ ಹದ್ದಿಯ ಜೈ ಬಾಲಾಜಿ ಸಿಮೆಂಟ್ ಬ್ಲಾಕ್ ಪ್ಯಾಕ್ಟರಿ ಎದುರಿಗೆ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ಬದಿಗೆ ನಡಕೋತ ಹೋಗುತ್ತಿದ್ದ ಅನಾಮಧೇಯ ಭೀಕ್ಷುಕ ಅಜಮಾಸ ವಯಾ 40 ರಿಂದ 50 ವರ್ಷ ಇತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ವಾಹನವನ್ನು ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 67/2019 ಕಲಂ 304.(ಎ)279 ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಳ್ಳಿ ಗ್ರಾಮದ ಮೂಗ ಬಸವೇಶ್ವರ ದೇವಸ್ಥಾನದ ಮುಂದೆ ರಸ್ತೆ ಕೆ.ಎಸ್.ಆರ್.ಟಿ.ಸಿ ಬಸ್ ನಂ KA-25-F-2754 ನೇದರ ಚಾಲಕ ಹನಮಂತ ರವೀಂದ್ರಪ್ಪ ಹುಗ್ಗಣ್ಣವರ ಇವನು ತನ್ನ ಬಸನ್ನು ಹೆಬ್ಬಳ್ಳಿ ಗ್ರಾಮದೊಳಗಿನ ಬಸ್ ನಿಲ್ದಾಣದ ಕಡೆಯಿಂದ ಪಂಚಾಯತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೂಗ ಬಸವೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಿ ಮರಳಿ  ರಸ್ತೆ ಮೇಲೆ ಮನೆಗೆ ಹೋಗುತ್ತಿದ್ದ ಗೌರವ್ವ ಗಂಡ ರುದ್ರಪ್ಪ  ಪರಣ್ಣವರ  ವಯಾ-70 ವರ್ಷ ಸಾ: ಹೆಬ್ಬಳ್ಳಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿಯೇ ಮೃತಪಡಿಸಿದ್ದು ಇರುತ್ತದೆ ಈಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶಿರೂರ ಗ್ರಾಮದ  ಫಿರ್ಯದಿಯ ಹೆಂಡತಿ ಲಕ್ಷ್ಮಿ ಕೋಂ ಧರಿಯಪ್ಪ ಕಿಚಡಿ ವಯಾ: 22 ವರ್ಷ ಸಾ:ಶಿರೂರು ಈತಳು ತನ್ನ ಮಗಳು ಶಿಲ್ಪಾ ವಯಾ:3 ತಿಂಗಳು ಕೂಸಿನೊಂದಿಗೆ ತನ್ನ ಮನೆಯಲ್ಲಿ ಮಲಗಿದಾಗ ಯಾರಿಗೂ ಗೊತ್ತಾಗದ ಹಾಗೆ ಎದ್ದು ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 51/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, April 26, 2019

CRIME INCIDENTS 26-04-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-04-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಜಮ್ಮಿಹಾಳ ಗ್ರಾಮದ ಪಾತಿಮಾ ವಾಲಿಕಾರ ಇವರ  ಬಾಭತ್ ಜಮೀನು ಸರ್ವೆ ನಂ 44ಅ/2 ಕ್ಷೇತ್ರ 9 ಎಕರೆ 14 ಗುಂಟೆ ನೇದ್ದರಲ್ಲಿ ಆರೋಪಿತರಾದ ಶೌಕತಅಲಿ ನವಲೂರ ಹಾಗೂ ಇನ್ನೂ 05 ಜನರು ಕೊಡಿ  ಸರ್ವೆ ನಂ 44ಅ/2 ಕ್ಷೇತ್ರ 9 ಎಕರೆ 14 ಗುಂಟೆ ನೇದ್ದಕ್ಕೆ ಸಂಭಂದಿಸಿದಂತೆ ಪಿರ್ಯಾಧಿದಾರರೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿದ್ದಲ್ಲದೆ, ಪಿರ್ಯಾಧಿದಾರರ ತಮ್ಮ ಮಹಮ್ಮದತಾಹೀರ ತಂದೆ ಬಾಬುಸಾಭ ಕುಂಬಾರ ಇವನು ಸದರ ಜಮೀನದಲ್ಲಿ ಕೆಲಸ ಮಾಡುತ್ತಿರುವಾಗ ಹಲ್ಕಟ್ ಬೈದಾಡಿ ಮಗಳ ಇವನಿಗೆ ಬೈದಾಡುತ್ತಾ ಸಲೀಂ ಕುಂಬಾರ ಇವನು ಬಡಿಗೆಯಿಂದಾ,ಶೌಕತಅಲಿ ಇವನು ಕಬ್ಬಿಣದ ರಾಡಿನಿಂದಾ, ಇಮಾಮಸಾಬ ಇವನು ಕುಡಗೋಲಿನಿಂದಾ ಪಿರ್ಯಾಧಿ ತಮ್ಮ ಮಹಮ್ಮದತಾಹೀರ ಇವನಿಗೆ ಹೊಡಿಬಡಿ ಮಾಡಿ ಗಾಯಪಡಿಸಿದ್ದು, ಅವನಿಗೆ ಉಪಚಾರಕ್ಕೆ ಅಂತಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ಉಳಿದ ಆರೋಪಿತರೆಲ್ಲರೂ ಹೊಡೆಯಲು ಹಿಂಬಾಲಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 67/2019 ಕಲಂ 143.147.148.324.504.506.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ .

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಹುಬ್ಬಳ್ಳಿ ನವಲಗುಂದ ರಸ್ತೆ ನವಲಗುಂದದ ಕೆಎಸ್ಆರ್ ಟಿಸಿ ಡಿಪೋ ಎದುರಿನ ಹೆದ್ದಾರಿಯ ಮೇಲೆ ಶಿವಕುಮಾರ ಕೈದಾರಿ ಇತನು ನಡೆಸುತ್ತಿದ್ದ ಕೆಎಸ್ಆರ್ ಟಿಸಿ ಕೆಎ-19 ಎಫ್-3258 ನೇದ್ದನ್ನು ಡಿಪೋ ಒಳಗಿನಿಂದ ಹೈವೇ ಕಡೆಗೆ ಅತೀ ವೇಗದಿಂದ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ತನ್ನ ಟಾಟಾ ಗೂಡ್ಸ ಗಾಡಿ ನಮ ಕೆಎ-25 ಸಿ-6196 ನೇದ್ದನ್ನು ಅತೀ ವೇಗವಾಗಿ ಅಲಕ್ಷತನದಿಂದ ಹೊರಟಾಗ ಬಸ ಚಾಲಕನು ಟಾಟಾ ಗೂಡ್ಸ ಗಾಡಿಗೆ ಡಿಕ್ಕಿ ಮಾಡಿ ಅದರ ಚಾಲಕನಿಗೆ ಭಾರಿ ಗಾಯ ಪಡಿಸಿದ್ದು ಟಾಟಾ ಗೂಡ್ಸ ಚಾಲಕನು ಬಸ್ಸಿನ ಬಲಸೈಡ ಮಧ್ಯದ ಬೌಡಿಗೆ ಡಿಕ್ಕಿ ಮಾಡಿ ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 50/2019 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, April 25, 2019

CRIME INCIDENTS 25-04-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-04-2019 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 24-04-2019 ರಂದು ಸಾಯಂಕಾಲ 17-30 ಗಂಟೆಯ ಸುಮಾರಿಗೆ ಇದರಲ್ಲಿಯ ಪಿರ್ಯಾದಿ ಕಾಕ ಯಲ್ಲಪ್ಪ ಹನಮಪ್ಪ ಕಬ್ಬೂರ ವಯಾ: 50  ಸಾ: ಬೋಗಾನೂರ ಈತನು ಪಿರ್ಯಾದಿ ಜೊತೆಗೆ ತನ್ನ ಕುರಿಗಳನ್ನು ಮೇಯಿಸಿಕೊಂಡು ಶಲವಡಿ ನಾಯಕನೂರ ರಸ್ತೆ ಹಿಡಿದು ಎಡ ಸೈಡದಲ್ಲಿ ಹೊರಟಾಗ ಆರೋಪಿ ಬಸವರಾಜ ಯಲ್ಲಪ್ಪ ಪೂಜಾರ ಸಾ: ಬೋಗಾನೂರ ಈತನು ತಾನು ನಡೆಸುತ್ತಿದ್ದ ಮೋಟರ ಸೈಕಲ್ ನಂ ಕೆಎ-25 ಇಆರ್-0943 ನೇದ್ದನ್ನು ಹಿಂದಿನಿಂದ ಶಲವಡಿ ಕಡೆಯಿಂದ ನಾಯಕನೂರ ಕಡೆಗೆ ಅತೀ ಜೋರಿನಿಂದ ಅತನದಿಂದ ನಡೆಯಿಸಿಕೊಂಡು ಬಂದು ಪಿರ್ಯಾದಿಯ ಕಾಕಾ ಯಲ್ಲಪ್ಪನಿಗೆ ಡಿಕ್ಕಿ ಮಾಡಿ ಕೆಡವಿ ಎಡಗಾಲ ಪಾದದ ಹಿಡಿಕಿಗೆ ಬಲಗಾಲ ತೊಡೆಗೆ ಹಾಗೂ ಹಣೆಗೆ ಮತ್ತು ಭಾರಿ ಗಾಯಪಡಿಸಿ ಎಲಬು ಮುರಿಯುವಂತೆ ಮಾಡಿ ತಾನು ಸಾದಾ ಗಾಯ ಹೊಂದಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 49/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ: ದಾಸನಕೊಪ್ಪ ಹದ್ದಿಯ ಪಿರ್ಯಾದಿಯ ಬಾಬತ ಜಮೀನ ಸರ್ವೆ ನಂ 46/ಬಿ/1ಎ ಮತ್ತು 49/ಬಿ/1 ನೇದ್ದವುಗಳಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ವಿರಸಂಗಪ್ಪಾ ಇವರಿಗೆ ಮೋಸ ಮಾಡಿ ಅಕ್ರಮ ಸಕ್ರಮ ಪ್ಲಾಟಗಳನ್ನು ನಿರ್ಮಿಸಿ ಅವುಗಳನ್ನು ಮಾರಾಟ ಪಿರ್ಯಾದಿ ಜಮೀನಿಗೆ ನೋಡಲು ಬಂದಾಗ ಆರೋಪಿತರಾದ 1.ಸಿದ್ದವ್ವ ಹತ್ತಱಕ್ಕಿ ಹಾಗೂ ಇನ್ನೂ 09 ಜನರು  ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಡಿಬಡಿ ಮಾಡಿ ಜೀವದ ದಮಿಕಿ ಹಾಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2019 ಕಲಂ 505.506.447.420.504.34.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಹೊನ್ನಳ್ಳಿ ಗ್ರಾಮದ  ಮೃತನಾದ ಯಲ್ಲಪ್ಪ ತಂದೆ ಬಸವಣ್ಣೆಪ್ಪ ಹಂಚಿನಾಳ ವ: 50 ವರ್ಷ, ಸಾ: ಹಿರೇಹೊನ್ನಳ್ಳಿ ಇವನು ಸುಮಾರು 20 ವರ್ಷಗಳಿಂದ ವಿಪರೀತ ಕುಡಿಯುವ ಚಟಕ್ಕೆ ಬಿದ್ದವನು, ದುಡಿದ ಹಣವನ್ನು ಮನೆಯ ಖಚರ್ಿಗೆ ಕೊಡದೇ ಕುಡಿದು ಹಾಳು ಮಾಡುತ್ತ ಇದ್ದವನಿಗೆ ಕುಡಿಯುವದನ್ನು ಬಿಡು ಅಂತ ತಿಳಿಸಿ ಹೇಳಿದರೆ ಬಿಡದೇ, ಮನೆಯವರೊಂದಿಗೆ ವಿನಾಕಾರಣ ಜಗಳ ಮಾಡುತ್ತ ಇದ್ದವನು, ನೀವೆಲ್ಲರೂ ಆರಾಮದಿಂದ ಇರ್ರಿ ನಾನೇ ಎಲ್ಲಿಯಾದರೂ ಹೋಗಿ ಸಾಯುತ್ತೇನೆ ಅಂತ ಅನ್ನುತ್ತ ಬಂದವನು, ತವರಿಗೆ ಬಂದ ಹೆಣ್ಣುಮಕ್ಕಳಿಗೆ ಬಟ್ಟೆ ಬರೆ ಕೊಡಿಸಲು ಹಣ ಕೇಳಿದಾಗ ಸಿಟ್ಟು ಮಾಡಿಕೊಂಡು ಕುಡಿದ ಅಮಲಿನಲ್ಲಿ ದಿ: 24/04/2019 ರಂದು ರಾತ್ರಿ 09.00 ಗಂಟೆಯಿಂದ 11.50 ಗಂಟೆ ನಡುವಿನ ಅವಧಿಯಲ್ಲಿ ತನ್ನ ಮನೆಯ ಮುಂದಿನ ಸಾವಕ್ಕ ಧನಿಗೊಂಡ ಇವರ ಮನೆಯ ಗೋಡೆಯ ಮೇಲಿನ ಹೆಂಚು ಹೊಂದಿಸಲು ಹಾಕಿದ ಕಟ್ಟಿಗೆಗೆ ತಾನಾಗಿಯೇ ಹಗ್ಗ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ವರದಿ ಕೊಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 27/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.