ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 31, 2019

CRIME INCIDENTS 31-05-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-05-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 30-05-2019 ರಂದು 22-30 ಗಂಟೆ ಸುಮಾರಿಗೆ ಆರೋಪಿತನಾದ ಪ್ರಕಾಶ ತಂದೆ ಗ್ಯಾನಪ್ಪ ಪಟ್ಟೆದ ವಯಾ-30 ವರ್ಷ ಜಾತಿ-ಹಿಂದೂ ಲಿಂಗಾಯತ ಉದ್ಯೊಗ-ಶೇತ್ಕಿ ಕೆಲಸ ಸಾ: ಅಣ್ಣಿಗೇರಿ ಹೊಸಪೇಟಿ ಓಣಿ ತಾ: ಅಣ್ಣಿಗೇರಿ ಈತನು ತಾನು ಟಿ.ವ್ಹಿಎಸ್ ಸ್ಪೊಟ್ಸ ಮೋಟರ ಸೈಕಲ ನಂಬರ ಕೆಎ-25/ಈಜಿ-3495 ನೇದ್ದನ್ನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ಮೋಟರ ಸೈಕಲ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತನಗೆ ತಲೆಗೆ ಭಾರಿ ಪ್ರಮಾಣದ ಮಾರಾಣಾಂತಿಕ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ43/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, May 29, 2019

CRIME INCIDENTS 29-05-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-05-2019 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಳೀಯಾಳ ಧಾರವಾಡ ರಸ್ತೆಯ ಟಿ ರಾಮಚಂದ್ರನಗರ ಗ್ರಾಮದಲ್ಲಿ ರಸ್ತೆಯ ಮೇಲೆ ಕಾರ ನಂ ಕೆ.ಎ 31/ಎ-1665 ನೇದ್ದರ ಚಾಲಕನಾದ ಶಿವರಾಮ ತಂದೆ ರಾಮ ಪೂಜಾರಿ ಸಾ|| ಶಿರಶಿ ದೇವನಹಳ್ಳಿ ತಾ|| ಶಿರಶಿ ಜಿ|| ಕಾರವಾರ ಅವನು ತನ್ನ ಕಾರನ್ನು ದಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಹೋಗುವಾಗ ತಾನು ನಡೆಸುತ್ತಿದ್ದ ಕಾರನ್ನು ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಅವನ ಎದುರಿನಿಂದ ಹಳಿಯಾಳ ಕಡೆಯಿಂದ ಟಿ ರಾಮಚಂದ್ರ ನಗರ ಗ್ರಾಮದ ಕಡೆಗೆ ಹೊರಟ ಮೋಟರ ಸೈಕಲ್ಲ ನಂ ಕೆ.ಎ 25/ಇ.ಪಿ.-9101 ನೇದ್ದಕ್ಕೆ ಡಿಕ್ಕಿ ಮಾಡಿ ಕೆಡವಿ ಅಪಘಾತ ಪಡಿಸಿ ಅದರ ಸವಾರನಾದ ಸೋನು ತಂದೆ ವಿಠ್ಠಲ ಕೋಳಾಪಟ್ಟೆ ಹಾಗೂ ಅವನ ಹೆಂಡ್ತಿಯಾದ ಸಕ್ಕುಬಾಯಿ ಕೋಳಾಪಟ್ಟೆ ಮತ್ತು ಮಗನಾದ ವಿಠ್ಠಲ ಕೋಳಾಪಟ್ಟೆ ಸಾ|| ಎಲ್ಲರೂ ಟಿ ರಾಮಚಂದ್ರನಗರ ತಾ||ಜಿ|| ದಾರವಾಡ ಅವರಿಗೆ ಸಾದಾ ವ ಭಾರಿ ಘಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 41/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಎನ್.ಎಚ್-4 ಹೈವೆ ರಸ್ತೆಯ ಮೇಲೆ ಬೆಳ್ಳಿಗಟ್ಟಿ ನರ್ಸರಿ ಹತ್ತಿರ ಸಿಲ್ವರ ಕಲರಿನ ಡಸ್ಟರ ಕಾರನ್ನು ಅದರ ಚಾಲಕನು ಹುಬ್ಬಳ್ಳಿ ಕಡೆಯಿಂದ ಬೆಳ್ಳಿಗಟ್ಟಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಬೆಳ್ಳಿಗಟ್ಟಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಯಲ್ಲಪ್ಪಾ ಮುಂದಿನಮನಿ ಇವರು  ಚಲಾಯಿಸಿಕೊಂಡು ಹೊರಟ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ನಂ ಕೆ.ಎ-25/ಇ.ಎಚ್-5996 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿದ ಪಿರ್ಯಾದಿಗೆ ಹಾಗೂ ಮೋಟಾರ ಸೈಕಲ್ ಹಿಂದೆ ಕುಳಿತ ಮೌಲಾಸಾಬ ಶರೀಫಸಾಬ ಹಳೇಮನಿ ಇವನಿಗೆ ಸಾದಾ ವ ಭಾರಿ ಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ ಕಾರನ್ನು ನಿಲ್ಲಿಸದೇ ಹೋಗಿದ್ದು ಈ  ಕುರಿತು ಕುಂದಗೋಳ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 60/2019 ಕಲಂ 279.337.338.ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ  ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.


3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿ..28-05-2019 ರ ಸಂಜೆ 7-00 ಗಂಟೆಯಿಂದಾ ದಿ..29-05-2019 ರ ಬೆಳಗಿನ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಚಳಮ್ಟಟಿ ಹದ್ದಿ ಬೂದನಗುಡ್ಡದ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ವಾಯರ್ ಲೆಸ್ ಸ್ಟೆಶನ್ನಿನ ಬಾಗಿಲವನ್ನು ಕೊಡ್ಲಿಯಿಂದಾ ಹೊಡೆದು ಮುರಿದು ಒಳಹೊಕ್ಕು ವಾಯರ್ ಲೆಸ್ ಸಟ್ ನ್ನು ಕೊಡ್ಲಿಯಿಂದಾ ಹೊಡೆದು ಲುಕ್ಷಾಣಪಡಿಸಿ ಸುಮಾರು 15,000/- ರೂ ಕಿಮ್ಮತ್ತಿನ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ ಬಸವೇಶ್ವರ ದೇವಸ್ಥಾನದ ಗರ್ಭಗುಡಿಯ ಬಾಗಿಲದ ಕೀಲಿ ಮುರಿದು ಒಳಹೊಕ್ಕು ಅಲ್ಲಿರುವ ಗಲಿಪಾ, ಬಟ್ಟೆ ಇತರೆ ಸಾಮಗ್ರಿಗಳನ್ನು ಸುಟ್ಟು ಲುಕ್ಷಾಣಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/2019 ಕಲಂ 457.380.436.427 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 28/05/2019 ರಂದು ರಾತ್ರಿ 2030 ಗಂಟೆಗೆ ಮೃತ ಮಂಜುನಾಥ ತಂದೆ ಮಹಾದೇವಪ್ಪ ಕಲಬುರ್ಗಿ ವಯಾ 28 ಸಾ. ಗಂಗಿವಾಳ ಇತನು ಗಂಗಿವಾಳ ಗ್ರಾಮದ ತನ್ನ ಮನೆಯ ಕೋಣೆಯಲ್ಲಿರುವ ಸೀಲಿಂಗ್ ಹುಕ್ಕಿಗೆ ತನಗಿದ್ದ ನೋವಿನ ಬಾದೆಯನ್ನು ತಾಳಲಾರದೇ ತನ್ನಷ್ಟಕ್ಕೆ ತಾನೇ ಲೈಲಾನ ಸೀರೆಯಿಂದ ಉರುಲು ಹಾಕಿಕೊಂಡು ತ್ರಾಸ ಆಗಿ ಉಪಚಾರಕ್ಕೆ ಕಿಮ್ಸ ಹುಬ್ಬಳ್ಳಿಗೆ ಹೋಗುತ್ತಿರುವಾಗ ದಾರಿ ಮಧ್ಯೆದಲ್ಲಿ ಮೃತ ಪಟ್ಟಿದ್ದು ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವದಿಲ್ಲಾ ವರದಿಗಾರಳ  ವರದಿನ್ನು ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 23/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, May 28, 2019

CRIME INCIDENTS 28-05-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-05-2019 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರೋಡ ಹತ್ತಿರ ಆರೋಪಿತ ಸ್ಕೋಡಾ ಕಂಪನಿಯ ಕಾರ್ ನಂಬರ್ KA-25/Z 7700 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ಗದಗ ಹುಬ್ಬಳ್ಳಿ ರಸ್ತೆಯ ಅಣ್ಣಿಗೇರಿ ಪಟ್ಟಣದಲ್ಲಿ ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು ವೇಗ ನಿಯಂತ್ರಣ ಮಾಡದೇ ಅಣ್ಣಿಗೇರಿ ಪಟ್ಟಣದ ಹರಿಜನಕೇರಿ ಹತ್ತಿರ ತನ್ನ ಮುಂದೆ ಗದಗ ಕಡೆಗೆ ಪಿರ್ಯಾದಿದಾರರು ರಸ್ತೆಯ ತಮ್ಮ ಸೈಡಿನಲ್ಲಿ ಚಾಲನೆ ಮಾಡಿಕೊಂಡು ಹೊರಟಿದ್ದ ಹ್ಯುಂಡಾಯ್ ಇಯೊನ್ ಕಾರ್ ನಂಬರ್ KA-26/M 8336 ನೇದ್ದಕ್ಕೆ ಹಿಂಬದಿಗೆ ತನ್ನ ಕಾರನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರುಗಳು ಜಖಂ ಆಗುವಂತೆ ಮಾಡಿ ಕಾರಿನಲ್ಲಿದ್ದ ಶರಫ್ ರಾಜ ಅಹಮ್ಮದ ಇವರಿಗೆ ಇವರ ಹೆಂಡತಿ ಹಾಗು ಮಗನಿಗೆ ಸಾದಾ ಪ್ರಮಾಣದ ಗಾಯ ಪೆಟ್ಟು ಪಡಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮಲ್ಲಪ್ಪಾ  ತಿರ್ಲಾಪೂರ ಇವರ ಹೆಂಡತಿಯಾದ ಗಂಗವ್ವ ಕೋಂ ಮಲ್ಲಪ್ಪ ತಿರ್ಲಾಪೂರ ವಯಾ-43 ವರ್ಷ ಸಾ:  ಕರ್ಲವಾಡ ಈತಳು ದಿನಾಂಕ: 18-05-2019 ರಂದು ಸಾಯಂಕಾಲ 08-00 ಗಂಟೆಯ ಸುಮಾರಿಗೆ ಕರ್ಲವಾಡ ಗ್ರಾಮದ ಮನೆಯಿಂದ ಕಾಣೆಯಾಗಿದ್ದು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2019 ಕಲಂ  ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Saturday, May 25, 2019

CRIME INCIDENTS 25-05-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-05-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಿರುಮಲಕೊಪ್ಪ ಗ್ರಾಮದ ಹತ್ತಿರ ಕಾರ ನಂ: KA/25/C/7893 ನೇದ್ದರ ಚಾಲಕನಾದ ಮಂಜುನಾತ ಸಾಃ ಗಬ್ಬೂರ, ಹುಬ್ಬಳ್ಳಿ ಇವನು ತಾನು ನಡೆಸುತ್ತಿದ್ದ ಕಾರನ್ನು , ಹುಬ್ಬಳ್ಳಿ ಕಡೆಯಿಂದ ತಡಸ ಕಡೆಗೆ ಅತೀವೇಗ ವ ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗಿ , ಒಮ್ಮೇಲೇ ಕಾರನ್ನು ತಿರುವಿಸಿಕೊಂಡು ಸರ್ವಿಸ್ ರಸ್ತೆಯಲ್ಲಿ ಅಡ್ಡಲಾಗಿ ತಂದು, ಅದೇ ಸರ್ವಿಸ್ ರಸ್ತೆಯಲ್ಲಿ , ತಡಸ ಕಡೆಯಿಂದ ತಿರುಮಲಕೋಪ್ಪ ಕಡೆಗೆ  ಇದರಲ್ಲಿಯ ಪಿರ್ಯಧಿ ನಡೆಯಿಸಿಕೊಂಡು ಬರುತ್ತಿದ್ದ ಮೋಟಾರ ಸೈಕಲ್ ನಂ: KA/25/U/1236 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾಧಿಗೆ ಭಾರಿ ಗಾಯ ಪಡಿಸಿದ್ದ ಅಲ್ಲದೇ ಪಿರ್ಯಾದಿಯ ಹಿಂದೆ ಕುಳಿತ ಇನ್ನೋಬ್ಬ ಜಗದೀಶ ನಿಚ್ಚನಕಿ ಸಾಃ ದಾಸ್ತಿಕೊಫ್ಪ ಇವನಿಗೂ ಸಹ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಿಸಾಗ ಗ್ರಾಮದ ಮೃತ ರುದ್ರಪ್ಪ ಬಸಪ್ಪ ಹಳ್ಯಾಳ ವಯಾ: 58 ವರ್ಷ ಸಾ:ಗುಡಿಸಾಗರ ಈತನು ಒಂದುವರೆ ವರ್ಷಗಳಿಂದ ಕ್ಯಾನ್ಸರ ರೋಗದಿಂದ ಬಳಲುತ್ತಿದ್ದು ಹುಬ್ಬಳ್ಳಿಯ ಕ್ಯಾನ್ಸರ ಆಸ್ಪತ್ರೆ ಮತ್ತು ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ತೋರಿಸಿದರೂ ಗುಣವಾಗಿರಲಿಲ್ಲ ಈಗ ಒಂದು ತಿಂಗಳಿಂದ ಗಂಟಲು ನೋವಿನಿಂದ ಸರಿಯಾಗಿ ಮಾತನಾಡುತ್ತಿರಲಿಲ್ಲ ವೈಧ್ಯರು ಕೊನೆಯ ಸ್ಟೇಜ ಇರುವುದರಿಂದ ಊರಿಗೆ ಕರೆದುಕೊಂಡು ಬಂದಿದ್ದರು. ಈ ಖಾಯಿಲೆಯ ಸಲುವಾಗಿ ಸಾಲ ಮಾಡಿ ಉಪಚಾರ ಮಾಡಿದ್ದರೂ ಆರಾಮ ಆಗಿರಲಿಲ್ಲ ಬಹಳ ಮಾನಸಿಕ ಮಾಡಿಕೊಂಡಿದ್ದರು. ಅಲ್ಲದೆ ಹೊಲದ ಮೇಲೆ ವಿಜಯ ಬ್ಯಾಂಕನಲ್ಲಿ ಸಾಲವನ್ನು ಮಾಡಿದ್ದರು. ಇದರ ಬಗ್ಗೆ ಮಾನಸಿಕ ಮಾಡಿಕೊಂಡಿದ್ದರು. ದಿನಾಂಕ 24-05-2019 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಗುಡಿಸಾಗರ ಗ್ರಾಮದ ವರದಿಗಾರಳ ಮನೆಯಲ್ಲಿ ವರದಿಗಾರಳ ತಂದೆಯಾದ ಪೋತಿ ಪೋತಿ ರುದ್ರಪ್ಪ ಬಸಪ್ಪ ಹಳ್ಯಾಳ ವಯಾ: 58 ವರ್ಷ ಸಾ:ಗುಡಿಸಾಗರ ಈತನು ಯಾವುದೋ ಕ್ರಿನಿನಾಶಕ ಜೌಷಧಿಯನ್ನು ಸೇವನೆ ಮಾಡಿಕೊಂಡು ಅಸ್ವಸ್ಥನಾಗಿ ಬಹಳ ತ್ರಾಸ್ ಆಗಿದ್ದರಿಂದ ನವಲಗುಂದದ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿದ್ದು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸಗೆ ಹೋಗುವಾಗ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಫಲಿಸದೆ ಮೃತಪಟ್ಟಿರುತ್ತಾನೆ. ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ  ಮಗಳು ತನ್ನ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, May 24, 2019

CRIM INCIDENTS 24-05-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-05-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 24-05-2019 ರಂದು ಮುಂಜಾನೆ 09-30 ಗಂಟೆಯ ಸುಮಾರಿಗೆ ಅಳ್ನಾವರದ ಹಳೇ ಬಸ್ ನಿಲ್ದಾಣದ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ  1) ಪವನ ತಂದೆ ಶಿವಾಜಿ ಕಾಕತ್ಕರ ವಯಾ 23 ವರ್ಷ ಸಾಃ ಅಳ್ನಾವರ ಜೈಹಿಂದ ರೋಡ 2) ಸಹದೇವ ತಂದೆ ರಾಮಣ್ಣ ನಾರ್ವೇಕರ ವಯಾ 44 ವರ್ಷ ಸಾಃ ಅಳ್ನಾವರ ವನಶ್ರೀ ರೋಡ 3) ಶ್ರೀಹರಿ ತಂದೆ ಸುರೇಶ ಸಾವಂತ ವಯಾ 24 ವರ್ಷ ಸಾಃ ಅಳ್ನಾವರ ಮಿಶನ್ ರೋಡ ತಾಃ ಅಳ್ನಾವರ ಅವರು ತಮ್ಮ ತಮ್ಮ ವೈಯಕ್ತಿಕ ದ್ವೇಷದಿಂದ ಸಾರ್ವಜನಿಕ ಸ್ಥಳದಲ್ಲಿ ಕೈ ಕೈ ಮಿಲಾಯಿಸಿ ನಮ್ಮ ಸಮಕ್ಷಮ ಹೊಡಿದಾಟ ಬಡಿದಾಟ ಮಾಡಿ ಸಾರ್ವಜನಿಕ ಶಾಂತಿ ಕದಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2019 ಕಲಂ 160 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕುಸುಗಲ ಗ್ರಾಮದ ಬಾಷಾಸಾಬ ಕುರಟ್ಟಿ ಇವನ ವಾಸದ ಮನೆಯಿಂದ ಇವನ ಹೆಂಡ್ತಿ, ಪಿರ್ಯಾದಿಯ ಮಗಳಾದ ಸಬೀನಾ ಕೋಂ ಬಾಷಾಸಾಬ ಕುರಹಟ್ಟಿ ವಯಾಃ 36 ವರ್ಷ ಸಾಃ ಬ್ಯಾಹಟ್ಟಿ ಹಾಲಿ ವಸ್ತಿ ಕುಸುಗಲ ಇವಳು ಗಂಡನೊಂದಿಗೆ ತಂಟೆ ಮಾಡಿಕೊಂಡು ಯಾರಿಗು ಹೇಳದೆ ಕೇಳದೆ ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2019 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 23-05-2019 ರಂದು ರಾತ್ರಿ 09-30 ಗಂಟೆ ಸುಮಾರಿಗೆ ಇದರಲ್ಲಿಯ ಮೃತ ಗುರಸಿದ್ದಪ್ಪ ಮಲ್ಲಪ್ಪ ಹಲ್ಯಾಳ ಈತನು ಸರಾಯಿ ಕುಡಿಯುವ ಚಟದವನಾಗಿದ್ದು ಈತನು ವಿಪರೀತ ಸರಾಯಿ ಕುಡಿಯುತ್ತಿದ್ದು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ ಸ್ವಲ್ಪ ಹೊತ್ತಿನಲ್ಲಿ   ಸರಾಯಿ ಕುಡಿದ ನಶೆಯಲ್ಲಿ ನಂತರ ಕಾಳುಗಳಿಗೆ ಹಾಕುವ ವಿಷ ಗುಳಗೆಯನ್ನು ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು ಉಪಚಾರಕ್ಕೆ ನವಲಗುಂದ ಆಸ್ಪತ್ರೆಗೆ ದಾಖಲಿಸಿದಾಗ ಇಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಿಮ್ಸ ಹುಬ್ಬಳ್ಳಿ ಕಳುಹಿಸಿದ್ದು ಅಲ್ಲಿ ಉಪಚಾರ ಫಲಿಸದೆ ಈ ದಿನ ಬೆಳಗಿನ 12-05 ಗಂಟೆಗೆ ಮರಣ ಹೊಂದಿದ್ದು ಸದರಿ ಮೃತನ ಮರಣದಲ್ಲಿ ಬೇರೆ ಸಂಶಯ ವಿರುವದಿಲ್ಲ ಅಂತಾ ವರದಿಯನ್ನು ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 19/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.