ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, June 29, 2019

CRIME INCIDENS 29-06-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-06-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ:ಹೆಬಸೂರ ಗ್ರಾಮದ  ಹತ್ತಿರ ಲಾರಿ ನಂಬರಃ KA/28/C/0204 ನೇದ್ದರ ಚಾಲಕನಾದ ಶಿವಾನಂದ ಶಿವಪುತ್ರಪ್ಪ ನಾವಳ್ಳಿ ಸಾಃ ಕುರ್ತಕೋಟಿ. ತಾ:ಜಿ: ಗದಗ ಇವನು ತಾನು ನಡೆಸುತ್ತಿದ್ದ ಲಾರಿಯನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ವ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಗಾಡಿಯನ್ನು ನಿಯಂತ್ರಿಸಲಾಗದೇ ಹುಬ್ಬಳ್ಳಿ ನವಲಗುಂದ ರಸ್ತೆಯ ಮೇಲೆ ಹೆಬಸೂರ ಸಮೀಪ  ಹುಬ್ಬಳ್ಳಿ 23 ಕಿ.ಮೀ  ಅಂತಾ ಬರೆದ ಕಿಮೀ ಕಲ್ಲಿನ ಹತ್ತಿರ ಲಾರಿಯನ್ನು ಪಲ್ಟಿ ಮಾಡಿ ಕೆಡವಿ ಅಪಘಾತ ಪಡಿಸಿ ತನಗೆ ಸಾದಾ ಸ್ವರೂಪದ ಗಾಯ ಪಡಿಸಿಕೊಂಡು ಲಾರಿಯನ್ನು ಜಕಂಗೊಳಿಸಿದ್ದು ಇರುತ್ತದೆ.ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಗುನ್ನಾನಂ  107/2019 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಕಾರವಾರ ರಸ್ತೆಯ ಮೇಲೆ, ಅಂಚಟಗೇರಿ ಪೆಟ್ರೋಲ ಬಂಕ್ ಹತ್ತಿರ,ಆರೋಪಿತನಾದ ಕಮರುದ್ದೀನ್ ಶೇಖಸನದಿ ಸಾಃ ಆನಂದನಗರ, ಹುಬ್ಬಳ್ಳಿ ಇವನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂಬರಃ KA/63/H/8587 ನೇದ್ದನ್ನು , ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀವೇಗ ವ ನಿರ್ಲಕ್ಷತನದಿಂದ ನಡೆಯಿಸಿ, ಹುಬ್ಬಳ್ಳಿ ಕಡೆಯಿಂದ ಕಲಘಟಗಿ ಕಡೆಗೆ ಹೊರಟ ಮೋಟಾರ ಸೈಕಲ್ ನಂಬರಃ KA-25-EQ-8088 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತಾನೂ ಗಾಯ ಹೊಂದಿದ್ದಲ್ಲದೇ ಮೋಟಾರ ಸೈಕಲ್ಲ ನಡೆಸುತ್ತಿದ್ದ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 108/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, June 28, 2019

CRIME INCIDENTS 28-06-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-06-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಗದಗ ಹುಬ್ಬಳ್ಳಿ ರೋಡ ಹತ್ತಿರ ವಿರುವ ಅಮಡ್ಲ ಪೆಂಟ್ರೋಲ ಬಂಕ ಹತ್ತಿರ ಆರೋಪಿತ ಟಾಟಾ ಟೇಲರ್ ಲಾರಿ ನಂಬರ್ TN-04/AC 9951 ನೇದ್ದರ ಚಾಲಕು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅಣ್ಣಿಗೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಮೃತನು ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ ನಂಬರ್ KA-24/S 7605 ನೇದ್ದನ್ನು ಓವರಟೇಕ್ ಮಾಡಲು ಅಂತಾ ಹೋಗಿ ಲಾರಿಯ ಹಿಂದಿನ ಬಂಪರ್ ಭಾಗವನ್ನು ಮೋಟರ್ ಸೈಕಲ್ ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ್ ಸೈಕಲ್ ಸವಾರರು ಬೀಳುವಂತೆ ಮಾಡಿ ವಿಶಾಲ ಮಹಮ್ಮದಲಿ ಇಸ್ಮಾಯಿಲ ವಯಾ 24 ವರ್ಷ ಸಾಃ ಅಣ್ಣಿಗೇರಿ ಈತನಿಗೆ ಸಾದಾ ಪ್ರಮಾಣದ ಗಾಯ ಪೆಟ್ಟು ಪಡಿಸಿದ್ದಲ್ಲದೇ ಮೋಟರ್ ಸೈಕಲ್ ಚಾಲಕ ಮೃತ ಪ್ರಕಾಶ ತಂದೆ ಶ್ರೀನಿವಾಸ ಹರಿನಶಿಕಾರಿ, ವಯಾ 26 ವರ್ಷ ಈತನ ತಲೆಗೆ, ಎಡಗೈ, ಎಡಗಾಲಿಗೆ, ಮರಣಾಂತಿಕ ಗಾಯ ಪೆಟ್ಟು ಪಡಿಸಿದ್ದಲ್ಲದೇ ಅಪಘಾತದ ಬಗ್ಗೆ ಮಾಹಿತಿಯನ್ನು ನೀಡದೇ ಅಪಘಾತ ಪಡಿಸಿದ ಲಾರಿಯ ಸಮೇತ ಪರಾರಿ ಆಗಿ ಹೋಗಿದ್ದು ಅಲ್ಲದೇ ಉಪಚಾರದಲ್ಲಿ ಇದ್ದ ಪ್ರಕಾಶ ಶ್ರೀನಿವಾಸ ಹರಿನಶಿಕಾರಿ ಈತನಿಗೆ ಅಪಘಾತದ ಕಾಲಕ್ಕೆ ಮರಣಾಂತಿಕ ಗಾಯ ಪೆಟ್ಟು ಪಡಿಸಿದ್ದರಿಂದ ಆತನು ಉಪಚಾರ ಫಲಿಸದೇ ದಿನಾಂಕ 28-06-2019 ರಂದು 06-00 ಘಂಟೆಗೆ ಎಸ್.ಡಿ.ಎಮ್ ಆಸ್ಪತ್ರೆ ಧಾರವಾಡದಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 50/2019 ಕಲಂ 279.337.338.304(ಎ)ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣಾ ವ್ಯಾಪ್ತಿಯ: ಪಾಳೆ ಗ್ರಾಮದ ಹತ್ತಿರ ಬಸ್ ನಂಬರಃ KA-52-7383 ನೇದ್ದರ ಚಾಲಕನಾದ ಸಯ್ಯದ ರಿಜ್ವಾನ್ ಸಾಃ ಡಾವಣಗೇರೆ ಇವನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ವ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು , ಇದರಲ್ಲಿ ಪಿರ್ಯಾಧಿ ಹಿಂದೆ ಕುಳಿತು ಮೋಟಾರ ಸೈಕಲ್ ನಂಬರಃ KA-25-EG-9255 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಪಿರ್ಯಾಧಿಗೆ ಮತ್ತು ಮೋಟಾರ ಸೈಕಲ್ಲ ನಡೆಸುತ್ತಿದ್ದ ಜುಂಜಪ್ಪ ಮೈಲಾರಪ್ಪ ಕಾಳಿ ಸಾಃ ಬು. ಅರಳಿಕಟ್ಟಿ ಇವನಿಗೆ ಸಾದಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 106/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕವಲಗೇರಿ ಗ್ರಾಮದ ಮೃತ ಸಲ್ಮಾ ತಂದೆ ಮೌಲಾಸಾಬ ನಧಾಪ್ ವಯಾ 16 ವರ್ಷ ಜಾತಿ ಮುಸ್ಲಿಂ ಉದ್ಯೋಗ ವಿದ್ಯಾರ್ಥಿ ಸಾ:ಕವಲಗೇರಿ ಇತಳು ಧಾರವಾಡದ ತೇಜಸ್ವಿನಗರದ ಜೈಹಿಂದ ಹೈಸ್ಕೋಲದಲ್ಲಿ 10 ನೇ ತರಗತಿಯಲ್ಲಿ ವಿದ್ಯಾಬ್ಯಾಸವನ್ನು ಮಾಡುತಿದ್ದು ಕಳೆದೆ ಮಾರ್ಚ ಎಪ್ರೇಲ್ ತಿಂಗಳಲ್ಲಿ ನಡೆದ 10 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತಿರ್ಣವಾಗಿದ್ದರಿಂದ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 27-06-2019 ರಂದು ರಾತ್ರಿ 10,00 ಗಂಟೆಯ ಸುಮಾರಿಗೆ ಜೋಳದ ಚೀಲದಲ್ಲಿ ನುಶಿಗೆ ಹಾಕುವ ವಿಷಕಾರಕ ಗುಳಿಗೆಗೆಳನ್ನು ಸೇವಿಸಿ ಅಸ್ವಸ್ಥಳಾಗಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಪಚಾರ ಪಲೀಸದೆ ದಿನಾಂಕ 28-06-2019 ರಂದು ಬೆಳಿಗ್ಗೆ 03-00 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ, ವಿನಃ ನನ್ನ ಮಗಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ತಾಯಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 32/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Thursday, June 27, 2019

CRIME INCIDENTS 27-06-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-06-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 27/06/2019 ರಂದು 00-30 ಗಂಟೆಯಿಂದ 01-00 ಗಂಟೆಯ ಅವಧಿಯಲ್ಲಿ ಪುನಾ ಬೆಂಗಳೂರ ರಸ್ತೆ ಮೇಲೆ ತಾರಿಹಾಳ ಹದ್ದಿಯ ಹವಾವಾಲ್ಸ್ ಪ್ಯಾಕ್ಟರಿ ಹತ್ತಿರ ಯಾವುದೋ ಒಂದು ವಾಹನವನ್ನು ಅದರ ಚಾಲಕನು ಹಾವೇರಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಅಜಾಗರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅನಾಮಧೇಯ ಮಹಿಳೆ ಅಜಮಾಸ ವಯಾ 55- ರಿಂದ 60 ವರ್ಷ ಇತಳಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಹಾಗೇ ನಡೆಯಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2019 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅರಳಿಕಟ್ಟಿ ಗ್ರಾಮದ ಹತ್ತಿರ ಶಂಕರಗೌಡ ಕುರಹಟ್ಟಿ ತನ್ನ ಕಾರ ನಂಃ KA-25-MA-4972 ನೇದ್ದನ್ನು ಪಿಬಿ ರಸ್ತೆಯ ಮೇಲೆ, ಪಾಳೇ ಗ್ರಾಮದ ಹಳೇ ಕಾವೇರಿ ದಾಬಾದ ಹತ್ತಿರ ಯು ಟರ್ನದಲ್ಲಿ ಇಂಡಿಕೇಟರ್ ಕೋಟ್ಟು ಕಾರನ್ನು ಟರ್ನ ಮಾಡುತ್ತಿರುವಾಗ ಈ ಕಾರಿಗೆ,  ಮಿನಿ ಗೂಡ್ಸ ವಾಹನ ನಂಃ KA-25-AA-5369 ನೇದ್ದರ ಚಾಲಕನಾದ ರಾಮಲಿಂಗಪ್ಪ ನಾಗಪ್ಪ ಬಡಿಗೇರ ಸಾಃ ಅಗಡಿ ಇವನು ತಾನು ನಡೆಸುತ್ತಿದ್ದ ಕಾರನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ವ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು, ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ  ಪಿರ್ಯಾಧಿ ಕಾರ ಜಕಂಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 105/2019 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, June 26, 2019

CRIME INCIDENTS 26-06-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-06-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 26-06-2019 ರಂದು 1110 ಗಂಟೆಗೆ, ರೊಟ್ಟಿಗವಾಡ ಗ್ರಾಮದ ಮೈಲಾರಲಿಂಗೇಶ್ವರ ಶಿಬಾರಗಟ್ಟಿಯ ಹತ್ತಿರ ಆರೋಪಿತರಾದ 1) ಮಂಜುನಾಥ ದೇವಿಂದ್ರಪ್ಪ ಕಿತ್ತೂರ, 2) ಅಶೋಕ ಬಸವಣ್ಣೆಪ್ಪ ಕಲಭಾರ, ಸಾ: ಇಬ್ಬರೂ ರೊಟ್ಟಿಗವಾಡ ತಾ: ಕುಂದಗೋಳ ಇವರು ತಮ್ಮ ಪಾಯ್ದೆಗೋಸ್ಕರ ಅಕ್ರಮವಾಗಿ ಜಪ್ತಾದ ಮದ್ಯದ ಟೆಟ್ರಾ ಪಾಕೀಟಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಅವನಿಂದ 2090-00 ಮೌಲ್ಯದ ಮಧ್ಯೆವನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 70/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಅಳ್ನಾವರ ಗ್ರಾಮದ  ಪಿರ್ಯಾದಿ ಹನುಮಂತಪ್ಪಾ ನರಸಪ್ಪಾ ವಡ್ಡರ ಸಾ ಃ ಅಳ್ನಾವರ ಇಂದಿರಾ ನಗರ ಇವರ ಬಾಬತ್ ಪ್ಲೇಜರ ಮೋಟಾರ ಸೈಕಲ್ ನಂ. ಕೆಎ - 25/ಇಎನ್ - 8176 ಗ್ರೀನ್ ಬಣ್ಣದ್ದು  ಇದರ ಚಸ್ಸಿ ನಂ.  MBLJF16EFDGJ12174 ಮತ್ತು ಇಂಜನ್ ನಂ. JF16ECDGJ11948 ಅಃಕಿಃ 20,000/- ರೂ. ಕಿಮ್ಮತ್ತಿನೇದ್ದನ್ನು ಯಾರೋ ಕಳ್ಳರು ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 54/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, June 25, 2019

CRIME INCIDENTS 25-06-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-06-2019 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:25-06-2019 ರಂದು ಮದ್ಯಾಹ್ನ 12-30 ಗಂಟೆಗೆ, ಕುಂದಗೋಳ ಶಹರದ ಇಂದುಮತಿನಗರದಲ್ಲಿ ಆರೋಪಿತನಾದ ಮಲ್ಲಿಕಾರ್ಜುನ ಚಂದ್ರಶೇಖರ ಮಣ್ಣೂರ, ಸಾ: ಮುಳಗುಂದ, ತಾ: ಗದಗ ಹಾಲಿ: ಕಾಳಿದಾಸನಗರ ಕುಂದಗೋಳ ಇವರು ತಮ್ಮ ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಮೇಲೆ ಪಿರ್ಯಾದಿಯ ಅಣ್ಣ ಮಹ್ಮದರಫೀಕ ಮರ್ದಾನಸಾಭ ಬಾಗೇವಾಡಿ, ವಯಾ: 41 ವರ್ಷ ಸಾ: ಕಾಳಿದಾಸನಗರ ಕುಂದಗೋಳ ಇವನಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೇ, ಅವನು ಕಟ್ಟಡದ ಮೇಲಿಂದ ಆಯತಪ್ಪಿ ಕೆಳಗೆ ಬಿದ್ದರೆ ಸಾಯುತ್ತಾನೆಂದು ಗೊತ್ತಿದ್ದರೂ ಕೂಡಾ ಅವನಿಂದ ಇಲೆಕ್ಟ್ರಿಕ್ ಕೆಲಸ ಮಾಡಿಸುತ್ತಿರುವಾಗ ಅವನು ಆಯತಪ್ಪಿ ಕೆಳಗೆ ವಿದ್ಯುತ್ ವಾಯರ ತಾಗಿ ಕರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದು ಭಾರೀ ಮರಣಾಂತಿಕ ಗಾಯಪೆಟ್ಟು ಹೊಂದಿ ಮರಣವಾಗುವಂತೆ ಮಾಡಿ ಸದರಿಯವನ ಮರಣಕ್ಕೆ ಕಾರಣೀಭೂತನಾದನಾಗಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 69/2019 ಕಲಂ 304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕಲ್ಲೇ ಗ್ರಾಮದ ಮೃತ ರಾಜೇಶ್ವರಿ ತಂದೆ ಅಮೃತಗೌಡ.ಪಾಟೀಲ.ವಯಾ-19 ವರ್ಷ.ಸಾ:ಕಲ್ಲೆ ತಾಃಧಾರವಾಡ ಇವಳಿಗೆ ತನ್ನ ತಂದೆ ತಾಯಿಯವರು ಮುಂದೆ ಓದುವದು ಬೇಡಾ ನಮಗೆ ಮುಂದೆ ಕಲಿಸಲು ಆಗುವದಿಲ್ಲಾಂತಾ ಹೇಳಿದ್ದಕ್ಕೆ ಮೃತಳು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ:24-06-2019 ರಂದು ರಾತ್ರಿ 9-00 ಗಂಟೆ ಸುಮಾರಿಗೆ ತನ್ನ ತಾಯಿಯೊಂದಿಗೆ ಬಹಿರ್ದೇಸಿಗೆ ಹೋದಾಗ ಉಣ್ಣೆಎಣ್ಣೆಯನ್ನು ಸೇವಿಸಿ ಅಸ್ತವ್ಯಸ್ಥಗೊಂಡಾಗ ಅವಳಿಗೆ ಉಪಚಾರಕ್ಕೆಂದು ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲ ಮಾಡಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ದಿನಾಂಕ:25-06-2019 ರಂದು ಬೆಳಗಿನ ಜಾವ 00-36 ಅವರ್ಸಕ್ಕೆ ಮೃತ ಪಟ್ಟಿದ್ದು ಅದೆ ಸದರಿಯವಳ ಮರಣದಲ್ಲಿ ಬೇರೆ ಏನು ಮತ್ತು ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾಂತಾ ಮೃತಳ ತಂದೆಯು ತನ್ನ ವರದಿಯಲ್ಲಿ ದಾಖಲಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 25/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ವರೂರ ಗ್ರಾಮದ ಮೃತ ರಮೇಶ ಲಕ್ಷ್ಮಪ್ಪ ದೊಡಮನಿ ವಯಾ 27 ವರ್ಷ ಸಾ: ತೀರ್ಥ ತಾ: ಕುಂದಗೋಳ ಇವರು ದಿನಾಂಕ 21/06/2019 ರಂದು ಮಧ್ಯಾಹ್ನ 02-40 ಗಂಟೆಯ ಸುಮಾರಿಗೆ ವಿ.ಆರ್.ಎಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಕಿಡಿ ಡಿಜಲ್ ಟ್ಯಾಂಕ್ ಮೇಲೆ ಬಿದ್ದು ವಾಹನದ ಟ್ಯಾಂಕ್ ಬ್ಲಾಸ್ಟ್ ಆಗಿ ಮೃತನ ಮೈಮೇಲೆ ಡಿಜೆಲ್ ಬಿದ್ದು ಬೆಂಕಿ ಹತ್ತಿ ಸುಟ್ಟಗಾಯಗಳಾಗಿದ್ದು ಉಪಚಾರಕ್ಕೆ ಕಿಮ್ಸ ಹುಬ್ಬಳ್ಳಿಗೆ ದಾಖಲ ಮಾಡಿದಾಗ ಉಪಚಾರ ಫಲಿಸದೇ ದಿನಾಂಕ 24/06/2019 ರಂದು ಮಧ್ಯಾಹ್ನ 03-00 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ಬೇರೆ ಯಾವ ಸಂಶಯ ಇರುವದಿಲ್ಲ ಅಂತ ವರದಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಯುಡಿನಂ 31/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.