ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, June 4, 2019

CRIME INCIDENTS 04-06-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-06-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 04-06-2019 ರಂದು 1300 ಗಂಟೆಗೆ ಯರಗುಪ್ಪಿ ಗ್ರಾಮ ಹೊರವಲಯದ ಮುಳ್ಳೊಳ್ಳಿ ಕ್ರಾಸನಲ್ಲಿ ಆರೋಪಿತನಾದ ಸುರೇಶ ಶೇಖಪ್ಪ ಹಾಗಲವಾಡಿ, ಸಾ: ಮುಳ್ಳೊಳ್ಳಿ ಈತನು ಮೋಟಾರ ಸೈಕಲ್ ನಂ: KA 25 / ER 5978 ನೇದ್ದನ್ನು ಯರಗುಪ್ಪಿ ಕಡೆಯಿಂದ ಮುಳ್ಳೊಳ್ಳಿ ಕಡೆಗೆ ಅತೀ ವೇಗ, ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ನಿಂತಿದ್ದ ಕಲ್ಲಪ್ಪ ಬಸಪ್ಪ ಹಾಗಲವಾಡಿ ವಯಾ: 35 ವರ್ಷ ಸಾ: ಮುಳ್ಳೊಳ್ಳಿ ಈತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ತಲೆಗೆ ಭಾರೀ ಗಾಯಪೆಟ್ಟುಪಡಿಸಿ ಸ್ಥಳದಲ್ಲಿಯೇ ಮರಣವಾಗುವಂತೆ ಮಾಡಿ ತನಗೂ ಸಾದಾ ಗಾಯಪಡಿಸಿದ್ದಲ್ಲದೇ ಅದೇ ಸಮಯಕ್ಕೆ ಸಾಕ್ಷಿದಾರ ಗುರಪ್ಪ ವಿರುಪಾಕ್ಷಪ್ಪ ಅಡವಿ ಸಾ: ಮುಳ್ಳೊಳ್ಳಿ ಈತನು ಟ್ರ್ಯಾಕ್ಟರ ನಂ: KA 25 / T: 6616 ನೇದ್ದನ್ನು ಚಲಾಯಿಸಿಕೊಂಡು ಬಂದಾಗ ಮೋಟಾರ ಸೈಕಲ್ಲಿಗೆ ಡಿಕ್ಕಿಪಡಿಸುತ್ತೇನೆಂದು ಜೋರಾಗಿ ಬ್ರೇಕ ಹಾಕಿ ಪಲ್ಟಿ ಮಾಡಿ ಕೆಡವಿದ್ದು ಸದರ ಆರೊಪಿತನು ತನ್ನ ಮೋಟಾರ ಸೈಕಲ್ & ಟ್ರ್ಯಾಕ್ಟರಿಗೆ ಜಕಂ ಆಗುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2019 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ: ಕ್ಯಾರಕೊಪ್ಪ ಗ್ರಾಮದ ಕುಮಾರ ಸ್ವಾಮಿ ಪೂಜಾರ ಮಗಳಾದ ಸೌಮ್ಯ ಪೂಜಾರ, ವಯಾ 17 ವರ್ಷ, ಸಾ:ಕ್ಯಾರಕೊಪ್ಪ, ಬಸವೇಶ್ವರ ಓಣಿ, ತಾ:ಜಿ:ಧಾರವಾಡ ಇವಳು, ದಿನಾಂಕ:30-05-2019 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಶೌಚಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೊರಹೋದವಳು ಮನೆಗೆ ವಾಪಸ್ ಬಾರದೇ ಯಾವುದೋ ಕಾರಣಕ್ಕಾಗಿ ಎಲ್ಲಿಯೋ ಹೋಗಿ ಕಾಣೆಯಾಗಿದ್ದು  ಇರುತ್ತದೆ ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 24/2019 ಕಲಂ ಹೆಣ್ಣು ಮಗಳು ಕಾಣೆ ಪ್ರಕರಣದಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಮುಗಳಿ ಗ್ರಾಮದ  ಮೃತ ರಾಮಪ್ಪ.ನಾಗಪ್ಪ.ಟಕ್ಕಪ್ಪನವರ.ವಯಾ-60 ವರ್ಷ.ಜ್ಯಾತಿ-ಹಿಂದೂ-ಮರಾಠ.ಉದ್ಯೋಗ-ಕೂಲಿಕೆಲಸ.ಸಾಃಮುಗಳಿ ಇತನಿಗೆ ಕಳೆದ 4 ವರ್ಷಗಳಿಂದಾ ಕಾಮಾನಿ ರೋಗದಿಂದಾ ಬಳಲುತ್ತಿದ್ದು ಇದರಿಂದಾ ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ದಿನಾಂಕ:04-06-2019 ರಂದು ಬೆಳಗಿನ02-00 ಗಂಟೆ ಸುಮಾರಿಗೆ  ಅಸ್ತವ್ಯಸ್ಥನಾದಾಗ ಉಪಚಾರಕೆಂದು ಜಿಲ್ಲಾ ಆಸ್ಪತ್ರೆಗೆ 108 ಅಂಬುಲೆನ್ಸದಲ್ಲಿ ಕರೆದುಕೊಂಡು ಹೋಗುವಾಗ ಬೆಳಗಿನ 3-30 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿಯೇ ಜಿಲ್ಲಾ ಆಸ್ಪತ್ರೆಯ ಗೇಟಿನ ಹತ್ತಿರ ಮೃತ ಪಟ್ಟಿದ್ದು ಸದರಿಯವನ ಸಾವಿನಲ್ಲಿ ಬೇರೆ ಏನು ಯಾರ ಮೇಲೆಯು ಸಂಶಯ ವಗೈರೆ ಇರುವದಿಲ್ಲಾಂತಾ ಮೃತನ ಹೆಂಡತಿಯು ವರದಿಯನ್ನು ಕೊಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 22/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.