ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, July 30, 2019

CRIME INCIDENTS 30-07-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-07-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಜಿಗಳೂರ ಗ್ರಾಮದ ಹತ್ತಿರ ದಿನಾಂಕ..29-07-2019 ರಂದು 17-30 ಗಂಟೆಯ ಸುಮಾರಿಗೆ ಶಿಗ್ಗಾಂವ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಜಿಗಳೂರ ಗ್ರಾಮದ ಸಮೀಪ ಆಟೋ ರಿಕ್ಷಾ ನಂ KA-63-3187 ನೇದ್ದರ ಚಾಲಕನಾದ ಈರಪ್ಪ ತಂದೆ ಶಿವಾನಂದ ಅಂಗಡಿ ಸಾ..ನೂಲ್ವೀ ತಾ..ಹುಬ್ಬಳ್ಳಿ ಇವನು ಆಟೋ ರಿಕ್ಷಾವನ್ನು ಶಿಗ್ಗಾಂವ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಪಿಎಸ್ ಐ ಕುಂದಗೋಳ ರವರ ಆದೇಶದ ಮೇರೆಗೆ ವಾಹನ ದಾಖಲೆಗಳ ತಪಾಸಣೆ ಕುರಿತು  ರಸ್ತೆಯ ಸೈಡಿನಲ್ಲಿ ನಿಂತು ವಾಹನಗಳನ್ನು ನಿಲ್ಲುವಂತೆ ಕೈ ಮಾಡುತ್ತಿರುವ ಮಂಜುನಾಥ ಫಕ್ಕೀರಪ್ಪ ಶಿರೂರ HG 593 ಕುಂದಗೋಳ ಪೊಲೀಸ ಠಾಣೆ ಇವನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 82/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ ಗ್ರಾಮದ ಮೃತೆ ದೂತಲವ್ವ ಕೋಂ ತಿಪ್ಪಣ್ಣ ಲಮಾಣಿ ವಯಾ 70 ವರ್ಷ, ಸಾ: ಜುಂಜನಬೈಲ್ ತಾಂಡಾ, ಇವಳು ತನ್ನ ಮಗ ಮತ್ತು ಸೊಸೆ ಒಂದು ವರ್ಷದ ಹಿಂದೆ ತೀರಿಕೊಂಡಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನ ಜೀವನದಲ್ಲಿ ಬೇಸರಗೊಂಡು ದಿನಾಂಕ 28/07/2019 ರಂದು ಸಂಜೆ 7-00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹತ್ತಿಗೆ ಹೊಡೆಯುವ ಎಣ್ಣೆಯನ್ನು ಸೇವನೆ ಮಾಡಿ ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತ ಕಲಘಟಗಿ ಸರಕಾರಿ ದವಾಖಾನೆಗೆ ತೋರಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲ್ ಮಾಡಿದರೂ ಸಹ ಉಪಚಾರದಿಂದ ಗುಣ ಹೊಂದದೆ ದಿನಾಂಕ 29/07/2019 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತ ಮೃತಳ ಮೊಮ್ಮಗ ಈ ದಿನ ತಡವಾಗಿ ಬಂದು ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 52/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, July 29, 2019

CRIME INCIDENTS 29-07-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-07-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ ಠಾಣಾ  ವ್ಯಾಪ್ತಿಯ: ಇಬ್ರಾಹಿಂಪುರ ಮೃತ ಕಾಲಕಾಲೇಶ್ವರ ತಂದೆ ಹನಮಪ್ಪ ಕರಿಗಣ್ಣವರ ವಯಾ 20 ವರ್ಷ ಜಾತಿ ಹಿಂದು ಕುರುಬರ ಉದ್ಯೋಗ ವಿದ್ಯಾರ್ಥಿ ಸಾ:ಇಬ್ರಾಹಿಂಪುರ ಇತನಿಗೆ ಅಸ್ತಮಾ ಕಾಯಿಲೆಯು ಇದ್ದು ಈ ಬಗ್ಗೆ ಖಾಸಗಿ ವೈದ್ಯೆರ ಬಳಿ ಉಪಚಾರವನ್ನು ಮಾಡಿಸಿದರು ಕಡಿಮಿಯಾಗದ್ದರಿಂದ ಮತ್ತು ಸದರಿಯವನಿಗೆ ಸರಿಯಾಗಿ ಅಬ್ಯಾಸವನ್ನು ಮಾಡು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸು ಅಂತಾ ಬುದ್ದಿಮಾತು ಹೇಳಿದಕ್ಕೆ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 28-07-2019 ರಂದು ಬೆಳಿಗ್ಗೆ 11,00 ಗಂಟೆಯ ಸುಮಾರಿಗೆ ಜೋಳದ ಚೀಲದಲ್ಲಿ ಹಾಕುವ ನುಶಿ ಸಾಯುವ  ಗುಳೆಗೆಗಳನ್ನು ಸೇವಿಸಿ ಅಸ್ವಸ್ಥಗೊಂಡು ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲಿಸದೆ ರಾತ್ರಿ 23,20 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ವಿನಃ ಸದರಿ ನನ್ನ ಮಗನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಂದೆಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 36/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, July 28, 2019

CRIME INCIDENTS 28-07-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-07-2019 ರಂದು ವರದಿಯಾದ  ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 28-07-2019 ರಂದು 1405 ಗಂಟೆಗೆ ಹಿರೇಹೊನ್ನಳ್ಳಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಹನಮಂತಪ್ಪ ಚನ್ನಪ್ಪ ತಳವಾರ ವಯಾ: 45 ವರ್ಷ, ಸಾ: ಹಿರೇಹೊನ್ನಳ್ಳಿ ಈತನು ತನ್ನ ಸ್ವಂತ ಪಾಯ್ದೆಗೋಸ್ಕರ 1,182-00 ಮೌಲ್ಯದ ಮದ್ಯದ ಟೆಟ್ರಾ ಪಾಕೀಟಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವಾಗ  ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2019  ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇದರಲ್ಲಿ ದಿನಾಂಕಃ 27/07/2019 ರಂದು ರಾತ್ರಿ 8.20 ಗಂಟೆ ಸುಮಾರಿಗೆ , ಹುಬ್ಬಳ್ಳಿ ಕುಂದಗೋಳ ರಸ್ತೆಯ ಮೇಲೆ, ಅದರಗುಂಚಿ ಹೊರಕೇರಿ ಓನಿ ಸಮೀಪ , ಹಜರೇಸಾಬ ಕಳ್ಳಿಮನಿ ಸಾಃ ಶೆರೆವಾಡ ತಾಃ ಹುಬ್ಬಳ್ಳಿ ಇತನು ಬಜಾಜ ಅಪೆ 3 ಗಾಲಿಯ ಗೂಡ್ಸ್ ವಾಹನ ನಂಬರ : KA-63-3279 ನೇದ್ದನ್ನು  ಹುಬ್ಬಳ್ಳಿ ಕಡೆಯಿಂದ ಕುಂದಗೋಳ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಬಂದು , ನೂಲ್ವಿ ಕಡೆಯಿಂದ  ಅದರಗುಂಚಿ ಕಡೆಗೆ ಮೃತ ನಾಗಪ್ಪ ವೀರುಪಾಕ್ಷಪ್ಪ ಹಾವಣಗಿ. ವಯಾಃ 33 ವರ್ಷ  ಸಾಃ ಅದರಗುಂಚಿ , ಹೊರಕೇರಿ ಓನಿ, ಇವನು ನಡೆಯಿಸಿಕೊಂಡು ಬರುತ್ತಿದ್ದ ಮೋಟಾರ ಸೈಕಲ್ ನಂಬರಃ KA-04-EY-6415 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅದರ ಸವಾರನಿಗೆ ಭಾರಿ ಗಾಯ ಪಡಿಸಿ  ಮರಣ ಹೊಂದುವಂತೆ ಮಾಡಿ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಡಿಯನ್ನು ಬಿಟ್ಟು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಗುನ್ನಾನಂ 127/2019 ಕಲಂ 279.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, July 26, 2019

CRIME INCIDENTS 26-07-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-07-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 25-07-2019 ರಂದು ಸಾಯಂಕಾಲ 16-50 ಗಂಟೆಯ ಸುಮಾರಿಗೆ ಕೋಗಿಲಗೇರಿ ಗ್ರಾಮದ ವ್ಯಾಪ್ತಿಯ ಕತ್ರಿ ದಡ್ಡಿ ಹತ್ತಿರ ಸಾರ್ವಜನಿಕ ರಸ್ತೆಯ ಎಡ ಬದಿಯಲ್ಲಿ ಇದರಲ್ಲಿಯ ಆರೋಪಿತರಾದ ಅಶೋಕ ಕುಮಾರ ಮನಗೋಲ ಹಾಗೂ ಇನ್ನೂ 04 ಜನರು  ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ " ಅಂದರ್ ಬಾಹರ " ಎಂಬ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿಯವರಿಂದ ರೋಕ ರಖಂ 550/- ರೂ. ಹಾಗೂ 52 ಇಸ್ಪೇಟ್ ಎಲೆಗಳು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2019 ಕಲಂ 87 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 26-07-2019 ರಂದು ಮುಂಜಾನೆ 7-15 ಗಂಟೆಗೆ ಎನ್.ಎಚ್-4 ಪಿ.ಬಿ ರಸ್ತೆಯ ಮೇಲೆ ವೆಂಕಟಾಪೂರ ಗ್ರಾಮದ ಹತ್ತಿರ ಆರೋಪಿತನಾದ ನೀಸಾರಅಹ್ಮದ ಡಿ.ಕೆ ತಂದೆ ಅಬ್ದುಲರವೂಫಸಾಬ ಈತನು ಬಸ್ಸ ನಂ ಕೆ.ಎ-01/ಎ.ಜೆ-9721 ನೇದ್ದನ್ನು ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದೆ ಪಿರ್ಯಾದಿಯು ಚಲಾಯಿಸಿಕೊಂಡು ಹೊರಟ ಲಾರಿ ನಂ ಕೆ.ಎ-13/ಸಿ-4256 ನೇದ್ದರ ಹಿಂಬದಿ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾದಿಗೆ ಹಾಗೂ ಲಾರಿ ಕ್ಲೀನರ ಉಮೇಶ ತಂದೆ ಬುಡ್ಡಾಬೋವಿ ಈತನಿಗೆ ಸಾದಾ ಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ, ಎರಡೂ ವಾಹನಗಳಿಗೆ ಜಖಂಗೊಳಿಸಿದ್ದು ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2019 ಕಲಂ 279.337.ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಬೈಪಾಸ ರಸ್ತೆಯ ಮೇಲೆ ಕ್ಲಾಸಿಕ್ ಇಂಟರನ್ಯಾಷನಲ್ ಸ್ಕೂಲ ಹತ್ತಿರ YAMAHA RX 135 ಮೋಟಾರ ಸೈಕಲ ನಂ:KA-23/V-5555  ಇಂಜೀನ್ ನಂ:4TL551809, ಚೆಸ್ಸಿ ನಂ: 03E4TL551809  ಅ.ಕಿ: 22500/- ನೇದನ್ನು ಮುರಗೋಡದಿಂದ ಹುಬ್ಬಳ್ಳಿ ಕಡೆಗೆ ಹೋಗುವಾಗ, ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆಯ ಬ್ರಿಡ್ಜ್ ಹತ್ತಿರ ಮೋಟಾರ ಸೈಕಲನಲ್ಲಿರುವ ಪೆಟ್ರೋಲ ಖಾಲಿಯಾಗಿದ್ದರಿಂದ ರಸ್ತೆ ಸೈಡಿಗೆ ನಿಲ್ಲಿಸಿ, ಹೆಂಡಲ ಲಾಕ್ ಮಾಡಿ, ಪೆಟ್ರೋಲ ತಗೆದುಕೊಂಡು ಬರಲು ಹೋದಾಗ  ಯಾರೊ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದ್ಯಾವನಕೊಂಡ ಗ್ರಾಮದ ಮೃತ ಈಶ್ವರ ಪಕ್ಕೀರಪ್ಪ ಬಶೆಟ್ಟೆಪ್ಪನವರ ವಯಾ 33 ವರ್ಷ, ಸಾ: ದ್ಯಾವನಕೊಂಡ, ಇವನು ದಿನಾಂಕ 24/07/2019 ರಂದು ಮುಂಜಾನೆ 9-00 ಗಂಟೆಗೆ ಕೂಲಿ ಕೆಲಸಕ್ಕೆ ಅಂತ ಪಕ್ಕೀರಯ್ಯಾ ಈರಯ್ಯ ಸಂಶಿ ರವರ ಹೊಲದಲ್ಲಿ ಗೋವಿನ ಜೋಳದಲ್ಲಿ ಗೊಬ್ಬರ ಹಾಕುವಾಗ ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಯಾವುದೋ ಒಂದು ವಿಷಪೂರಿತ ಹಾವು ಕಚ್ಚಿದ್ದರಿಂದ ಅವನಿಗೆ ಬಸಾಪೂರಕ್ಕೆ ಹೋಗಿ ಗೌಂಟಿ ಔಷಧ ಕೊಡಿಸಿ, ಮನೆಗೆ ಬಂದಾಗ ಅರಾಮ ಆಗದೇ ತ್ರಾಸ್ ಮಾಡಿಕೊಳ್ಳುವದನ್ನು ನೋಡಿ 108 ಅಂಬುಲೆನ್ಸ್ ದಲ್ಲಿ ಕರೆದುಕೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲ್ ಮಾಡಿ ಉಪಚಾರ ಮಾಡಿದರೂ ಸಹ ಗುಣ ಹೊಂದದೆ ದಿನಾಂಕ 25/07/2019 ರಂದು ರಾತ್ರಿ 10-10 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತ ಮೃತನ ಹೆಂಡತಿ ಈ ದಿನ ತಡವಾಗಿ ಬಂದು ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 49/2019 ಕಲಂ  174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.


5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಆಲದಕಟ್ಟಿ ಗ್ರಾಮದ  ನಾಗಪ್ಪ ಶಂಕ್ರಪ್ಪ ದೊಡ್ಡಮನಿ, ವಯಾ: 35 ವರ್ಷ, ಸಾ: ಆಲದಕಟ್ಟಿ ತಾ: ಕಲಘಟಗಿ ಈತನು ಮನೆಯ ಹಿರೇತನವನ್ನು ಮಾಡಿಕೊಂಡು ಬಂದಿದ್ದು ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ಮಳೆ ಬೆಳೆ ಬರದೇ ಇರುವುದರಿಂದ ವರದಿದಾರನು ಬ್ಯಾಂಕಿನಲ್ಲಿ ಮಾಡಿದ ಬೆಳೆಸಾಲ ಮತ್ತು ಬಂಗಾರದ ಮೇಲಿನ ಸಾಲ ಒಟ್ಟು ರೂ 2,90,000/-ಗಳನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಮಾನಸೀಕ ಮಾಡಿಕೊಂಡು ಈ ದಿವಸ ದಿನಾಂಕ: 26-07-2019 ರಂದು 1030 ಗಂಟೆಯಿಂದ 1230 ಗಂಟೆಯ ನಡುವಿನ ಅವಧಿಯಲ್ಲಿ ವರದಿದಾರನ ಬಾಬತ್ ಸರ್ವೇ ನಂ: 53 ಕ್ಷೇತ್ರ 4 ಎಕರೆ ಹೊಲದಲ್ಲಿಯ ಮತ್ತಿ ಗಿಡದ ಟೊಂಗೆಗೆ ಹಗ್ಗವನ್ನು ಕಟ್ಟಿ ತನ್ನಷ್ಟಕ್ಕೇ ತಾನೇ ತನ್ನ ಕುತ್ತಿಗೆಗೆ  ನೇಣು ಹಾಕಿಕೊಂಡು ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ವರದಿಯಲ್ಲಿ ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 50/2019 ಕಲಂ  174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Thursday, July 25, 2019

CRIME INCIDENTS 25-07-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-07-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಕೋಗಿಲಗೇರಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಎಡ ಬದಿಯಲ್ಲಿ ಇದರಲ್ಲಿಯ ಆರೋಪಿತರಾದ 1) ಸುಭಾಷ ತಂದೆ ವೆಂಕಟಯ್ಯ ಮೀನಗೋಳ 2) ಕೃಷ್ಣಪ್ಪ ತಂದೆ ಕಲ್ಲಪ್ಪ ಕರಿಯವರ 3) ಜಯಪ್ಪ ತಂದೆ ಪೀರಪ್ಪ ಮಾನೊಜಿ ಸಾಃ ಎಲ್ಲರೂ ಕೋಗಿಲಗೇರಿ ತಾಃ ಅಳ್ನಾವರ ಜಿಃ ಧಾರವಾಡ ಇವರುಗಳು ತಮ್ಮ ತಮ್ಮ ಪಾಯದೇಗೋಸ್ಕರ 52 ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 730-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ:ಅದರಗುಂಚಿ ಗ್ರಾಮದ ಲಕ್ಷ್ಮಣ ತಂದೆ ಸೋಮಪ್ಪ ದೊಡಮನಿ ವಯಾ. 38 ವರ್ಷ  ಉದ್ಯೋಗ. ಕೂಲಿ ಸಾ. ಅದರಗುಂಚಿ ತಾ.ಹುಬ್ಬಳ್ಳಿ ಇವನಿಗೆ ದುಡಿದ  ಪಗಾರ ಕೇಳಿದ್ದಕ್ಕೆ ಅದನೆ ಮನಸಿಗೆ ಹಚ್ಚಿಕೊಂಡು ಮನೆಯಿಂದ ಹೋದವನು ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ ಎಲ್ಲ ಕಡೆ ಹುಡಕಲಾಗಿ ಸಿಕ್ಕಿರುವುದಿಲ್ಲ  ಅಂತಾ ಫಿಯಾಱಧಿ ನೀಡಿದ್ದು ಈ  ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2019 ಕಲಂ ಮನುಷ್ಯ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ ಮೃತ ಬಸವಣ್ಣೆಪ್ಪ ತಂದೆ ಹನಮಂತಪ್ಪ ಗೌಳಿ ವಯಾ:70ವರ್ಷ ಸಾ: ಗೌಡಗೇರಿ ಈತನು ತಾನು ಕೃಷಿ ಸಾಗುವಳಿಗೆ ಅಂತಾ 2015-16 ರಲ್ಲಿ ಗುಡಗೇರಿಯ ಯೂನಿಯನ್ ಬ್ಯಾಂಕನಲ್ಲಿ 2 50000/- ರೂಪಾಯಿ ಸಾಲ ಮಾಡಿದ್ದು ಹಾಗೂ ಗೌಡಗೇರಿಯ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 15000/- ಸಾವಿರ ರೂಪಾಯಿ ಸಾಲ ಮಾಡಿದ್ದು ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆಬೆಳೆಯಾಗದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ 24-07-2019 ರಂದು ರಾತ್ರಿ 22-30 ಗಂಟೆಯಿಂದ ದಿನಾಂಕ 25-07-2019 ರಂದು ಬೆಳಗಿನ 6-00 ಗಂಟೆಯ ನಡುವಿನ ಅವಧಿಯಲ್ಲಿ  ತನ್ನಷ್ಟಕ್ಕೆ ತಾನೇ ಮನೆಯ ಹಿಂದಿನ ಬಾಗಿಲ ಹತ್ತಿರ ಮೇಲ್ಜಂತಿಗೆ ವಾಯರ್ ಹಗ್ಗದಿಂದ ಉರಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿದ್ದು ಇರುತ್ತದೆ. ವಿನಃ ಸದರಿ ತನ್ನ ತಂದೆಯ ಮನರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವುದಿಲ್ಲ ಅಂತಾ ವರದಿಗಾರನು ತನ್ನ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಯುಡಿನಂ 08/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.