ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, August 30, 2019

CRIME INCIDENTS 30-08-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-08-2019 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ ಠಾಣಾ ವ್ಯಾಪ್ತಿಯ: ಕಡಬಗಟ್ಟಿ ಗ್ರಾಮ ಹದ್ದಿಯ ಕಡಬಗಟ್ಟಿಯಿಂದ ಹುಲಿಕೇರಿ ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಎಡ ಬದಿಯಲ್ಲಿ  ಇದರಲ್ಲಿಯ ಆರೋಪಿತರಾದ 1) ಶ್ರಿನಿವಾಸ ತಂದೆ ಪರಶುರಾಮ ಪವಾರ 2) ಬಾಳಪ್ಪ ತಂದೆ ಪರಶುರಾಮ ನಾಗೇಶಟ್ಟಿ ಹಾಗೂ ಪರಾರಿಯಾದ 1) ನಾಗೇಂದ್ರ ತಂದೆ ಬಾಬು ಹೊಸಮನಿ 2) ಮಂಜುನಾಥ ತಂದೆ ಸುಭಾಸ ಕುರುಬರ ಎಲ್ಲರು ಸಾ|| ಕಡಬಗಟ್ಟಿ ತಾ|| ಅಳ್ನಾವರ ಜಿ|| ದಾರವಾಡ ಇವರುಗಳು ತಮ್ಮ ತಮ್ಮ ಪಾಯಿದೆಗೊಸ್ಕರ 52 ಇಸ್ಪಿಟ ಎಲೆಗಳ ಸಹಾಯದಿಂದ  "ಅಂದರ ಬಾಹರ " ಎಂಬ ಜೊಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1.260-00 ಗಳನ್ನು ವಶಪಡಿಸಿಕೊಂಡಿದ್ದು, ಇರುತ್ತದೆ.ಹಾಗೂ ಪರಾರಿಯಾಗಿ ಹೋಗಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ ಠಾಣೆಯಲ್ಲಿ ಗುನ್ನಾನಂ 71/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 30-08-2019 ರಂದು 00-00 ಗಂಟೆಗೆ ತಡಕೋಡ ಗ್ರಾಮದಶಿವಾನಂದ ಪಾಟೀಲ ಈತನ  ಮನೆಯಲ್ಲಿ ಆರೋಪಿತನಾದ ಶಿದ್ದನಗೌಡ ತಿಪ್ಪನಗೌಡ ಪಾಟೀಲ. ಸಾ: ತಡಕೋಡ ಈತನು ಪಿರ್ಯಾದಿಗೆ ಲೇ ಹಲ್ಕಟ ಬೈದಾಡಿ ಮಗನ ಈ ಮನೆ ನನಗೆ ಸೇರಬೇಕಾಗಿದ್ದು, ಮನೆ ಖಾಲಿ ಮಾಡು ಅಂತಾ ಹೇಳಿ ಪಿರ್ಯಾದಿಗೆ ಹಾಗೂ ಪಿರ್ಯಾದಿ ಹೆಂಡತಿಗೆ ಕೈಯಿಂದ ಹೊಡೆ ಬಡೆ ಮಾಡಿ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ, ಪಿರ್ಯಾದಿ ತಾಯಿಗೆ ಕೈಯಿಂದ ಹೊಡೆ ಬಡೆ ಮಾಡಿದ್ದಲ್ಲದೇ, ಇವತ್ತ ಉಳಕೊಂಡಿರಿ ಇನ್ನೊಮ್ಮೆ ಸೀಗ್ರಿ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2019 ಕಲಂ 323.324.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇದರಲ್ಲಿ ದಿನಾಂಕ 30-08-2019 ರಂದು 12-40 ಘಂಟೆಗೆ ಆರೋಪಿತ ವಾ.ಕ.ರ.ಸಾ.ಸಂಸ್ಥೆಯ ಬಸ್ ನಂಬರ್ KA-63/F 0130 ನೇದ್ದರ ಚಾಲಕನಾದ ಅಶೋಕ ನೀಲಪ್ಪ ನಾಯ್ಕ ಸಾಃ ಹುಲ್ಲೂರ ಎಲ್.ಸಿ ತಾಃ ಮುದ್ದೇಬಿಹಾಳ ಈತನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯಲ್ಲಿ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಬೇರೆ ವಾಹನವನ್ನು ಓವರ್ ಟೇಕ್ ಮಾಡುತ್ತಾ ಬಸ್ಸನ್ನು ರಸ್ತೆಯ ಬಲಸೈಡಿನಲ್ಲಿ ಮಾನವೀಯ ಪ್ರಾಣಕ್ಕೆ ಅಪಾಯಕರವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಎದುರಿಗೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಮೋಟರ್ ಸೈಕಲ್ ನಂಬರ್ KA-25/EC 3391 ನೇದ್ದನ್ನು ರಸ್ತೆಯ ತನ್ನ ಎಡ ಸೈಡಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದ ಮೃತ ಪ್ರವೀಣ ತಂದೆ ಸೋಮಪ್ಪ ಹರಕುಣಿ, ವಯಾ 24 ವರ್ಷ ಸಾಃ ಮನಸೂರ ತಾಃ ಜಿಃ ಧಾರವಾಡ ಈತನು ಚಾಲನೆ ಮಾಡಿಕೊಂಡು ಹೊರಟ ಮೋಟರ್ ಸೈಕಲ್ ಗೆ ಬಸ್ಸನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟರ್ ಸೈಕಲ್ ಚಾಲಕನಿಗೆ ಹಣೆಗೆ, ಬಲಗಾಲಿಗೆ ಮತ್ತು ಇತರೇ ಕಡೆಗಳಲ್ಲಿ ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸಿ ಬೀಳುವಂತೆ ಮಾಡಿ ಮರಣಾಂತಿಕ ಗಾಯ ಪೆಟ್ಟುಗಳಿಂದ  ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 148/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತ ಹೆಂಗಸು ವಯಾ 40 ರಿಂದ 45 ವರ್ಷದವಳು ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ ಈಗ ಸುಮಾರು 06 ತಿಂಗಳಗಳಿಂದ ಸದರಿಯವಳು ಎಲ್ಲಿಂದಲೋ ಬಂದು ಅಳ್ನಾವರ ಪಟ್ಟಣದಲ್ಲಿ ಬಿಕ್ಷೆ ಬೇಡುತ್ತಾ ಜೀವನ ಮಾಡಿ ದಿನಾಂಕಃ 29-08-2019 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಅಳ್ನಾವರ ಪಟ್ಟಣದ ಆಝಾದ ರಸ್ತೆಯಲ್ಲಿರುವ ಶ್ರೀ ಶನಿ ದೇವರ ಗುಡಿಯ ಹಿಂದೆ ರಸ್ತೆಯ ಪಕ್ಕದಲ್ಲಿ ತನಗಿದ್ದ ಯಾವುದೋ ಕಾಯಿಲೆಯಿಂದ ಬಳಲುತ್ತಿರುವಾಗ ಕೂಡಿದ ಜನರು 108 ವಾಹನ ಕರೆಯಿಸಿ ಉಪಚಾರ ಕುರಿತು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಕಳುಹಿಸಿದ್ದು ನಂತರ ಹೆಚ್ಚಿನ  ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ  ಉಪಚಾರ ಫಲಿಸದೇ ದಿನಾಂಕಃ 30-08-2019 ರಂದು ಮುಂಜಾನೆ 07-30 ಗಂಟೆಗೆ ಮರಣ ಹೊಂದಿರುತ್ತಾಳೆ ಅಂತಾ ವಗೈರೆ ವರದಿಯನ್ನು ನೀಡಿದ್ದು ಇರುತ್ತದೆ.ಈ ಕುರಿತು ಅಳ್ನಾವರ  ಪೊಲೀಸ್ ಠಾಣೆಯಲ್ಲಿ ಯುಡಿನಂ 10/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, August 27, 2019

CRIME INCIDENTS 27-08-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-08-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆಯ ಮೇಲೆ ಮಾರಡಗಿ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ-29/ಎಪ್-1187 ನೇದನ್ನು ಅದರ ಚಾಲಕ ಕೇದಾರಪ್ಪ ಈರಪ್ಪ ಪಟದಾರಿ  ಸಾ: ಹಾರೊಬೆಳವಡಿ ಹಾಲಿ ಕೆ.ಎಸ್. ಆರ್.ಟಿ.ಸಿ. ಡಿಪೊ ಧಾರವಾಡ ಇತನು ತಾನು ನಡೆಸುತ್ತಿದ್ದ ಬಸ್ಸನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಅನಾಮದೇಯ ಪುರುಷ ಅಜಮಾಸ 65-70 ವರ್ಷ  ಇತನಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮಾರಣಾಂತಿಕ ಗಾಯಪಡಿಸಿ ಸ್ಥಳದಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/2019 ಕಲಂ 279.304(ಎ)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, August 25, 2019

CRIME INCIDENTS 25-08-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-08-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ  ಮೃತ  ರಂಗಪ್ಪ ತಂದೆ ಧರ್ಮಪ್ಪ ಅಳಗವಾಡಿ ವಯಾ 24 ವರ್ಷ ಜಾತಿ ಹಿಂದು ಕುರುಬರ ಉದ್ಯೋಗ ಶೇತ್ಕಿ ಕೆಲಸ ಸಾ:ಗುಮಗೋಳ ತಾ:ನವಲಗುಂದ ಇತನ ತಂದೆ ಧರ್ಮಪ್ಪ ಅಳಗವಾಡಿ ಇತನು  ಕಳೆದ 05-06 ವರ್ಷಗಳ ಹಿಂದೆ ಸ್ಟೇಟ ಬ್ಯಾಂಕ್ ಆಪ್ ಮೈಸೂರ ಹುಬ್ಬಳ್ಳಿ ಶಾಖೆಯಲ್ಲಿ 5,00000/-(ಐದು ಲಕ್ಷ) ರೂಪಾಯಿಗಳ ಸಾಲವನ್ನು ಪಡೆದುಕೊಂಡು ಕಳೆದ 05 ತಿಂಗಳಗಳ ಹಿಂದೆ ಮೃತ ಪಟ್ಟಿದ್ದು ಈ ಮಾಡಿದ ಸಾಲವನ್ನು ಹೇಗೆ ತಿರಿಸುವದು ಅಂತಾ ಮಾನಸಿಕ ಮಾಡಿಕೊಂಡು ಅದೆ ಮಾನಸಿಕ ಅಸ್ಥಿತಿಯಲ್ಲಿ ದಿನಾಂಕ 24-08-2019 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ತನ್ನ ಜಮೀನುದಲ್ಲಿ ತನ್ನಷ್ಠಕ್ಕೆ ತಾನೆ ಯಾವದೂ ವಿಷಕಾರಕ ಎಣ್ಣೆಯನ್ನು ಸೇವಿಸಿ ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲೀಸದೆ ದಿನಾಂಕ 25-08-2019 ರಂದು ಬೆಳಿಗ್ಗೆ 07-15 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ, ವಿನಃ ನನ್ನ ಮಗನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ತಾಯಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 38/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, August 24, 2019

CRIME INCIDENTS 24-08-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-08-2019 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಪಶುಪತಿಹಾಳ ರಸ್ತೆಯ ಮೇಲೆ ಪಶುಪತಿಹಾಳ ಸಮೀಪ ಯಾವುದೋ ಒಂದು ಅಶೋಕ ಲೈಲ್ಯಾಂಡ ಕಂಪನಿಯ ತರಹದ ವಾಹವನ್ನು ಸಂಶಿ ರಸ್ತೆ ಕಡೆಯಿಂದ ಪಶುಪತಿಹಾಳ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು  ಸಂಶಿ ರಸ್ತೆ ಕಡೆಯಿಂದ ಪಶುಪತಿಹಾಳ ರಸ್ತೆ ಕಡೆಗೆ ನಡಕೊಂಡು ಬರುತ್ತಿದ್ದ  ಫಿರ್ಯಾದಿ ಕಾಕಾ ದೇವಪ್ಪ @ ದೇವೆಂದ್ರಪ್ಪ ನಾಯ್ಕರ ಸಾ: ಪಶುಪತಿಹಾಳ ಈತನಿಗೆ ಹಿಂದಿಬಂದು ಡಿಕ್ಕಿ ಮಾಡಿ ಆತನ ತಲೆಗೆ ಕಾಲಿಗೆ ಕಪಾಳಕ್ಕೆ ಸಾದಾ ವ ಬಾರಿ ಗಾಯಪಡಿಸಿದ್ದಲ್ಲದೇ ಘಟನೆಯ ಸಂಗತಿಯನ್ನು ಠಾಣೆಗೆ ತಿಳಿಸದೇ ಗಾಯಾಳುವಿಗೆ ಉಪಚಾರಕ್ಕೆ ದಾಖಲು ಮಾಡದೇ ವಾಹನ ನಿಲ್ಲಿಸದೇ ವಾಹನ ಸಮೇತವಾಗಿ ಪರಾರಿಯಾಗಿದ್ದು ಇರುತ್ತದೆ.ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2019 ಕಲಂ 279.338. ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, August 23, 2019

CRIME INCIDENTS 23-08-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-08-2019 ರಂದು ವರದಿಯಾದ ಪ್ರಕರಣಗಳು

1.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಹುಬ್ಬಳ್ಳಿ ಬೈಪಾಸ ರಸ್ತೆಯ ಮೇಲೆ ಯರಿಕೊಪ್ಪ ಸಮೀಪ ಅಶೋಕ ಲೈಲ್ಯಾಂಡ ಕಂಪನಿಯ ಇಕೋಮೆಂಟೊ ಲಾರಿ ನಂ: ಕೆ.ಎ-19/ಎಬಿ-2525 ನೇದನ್ನು ಅದರ ಚಾಲಕ  ಹಿಮಾಯುನಪಾಶಾ ತಂದೆ ಮಹಮ್ಮದಶಪೀ ಸಾ: ಮುಸ್ಲಿಂ ಸ್ಟ್ರೀಟ್ ಪೇಟೆ ಅರಕಲಗೋಡ ಹಾಸನ ಇತನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಪಿರ್ಯಾದಿ ಚಲಾಯಿಸಿಕೊಂಡು ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ:ಕೆ.ಎ-27/ಎಪ್-593 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಬಸನಲ್ಲಿದ್ದ ಪ್ರಯಾಣಿಕ ಈಶ್ವರಪ್ಪ ರಾಮಪ್ಪ ಹಡಪದ ಸಾ;ಸವದತ್ತಿ ಹಾಗೂ 03 ರಿಂದ 04 ಜನರು ಪ್ರಯಾಣಿಕರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2019 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2 ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ  ಪಿರ್ಯಾದಿ ನಾಗರಾಜ ತಂದೆ ಕಲ್ಲಪ್ಪ ಗಾಣಿಗೇರ ವಯಾ-43 ವರ್ಷ  ಈತನು ದಿನಾಂಕ: 22-08-2019 ರಂದು ರಾತ್ರಿ 20 ಗಂಟೆಯ ಸುಮಾರಿಗೆ ತನ್ನ ಕರ್ತವ್ಯ ವನ್ನು ಮುಗಿಸಿಕೊಂಡುಊರಿಗೆ ಹೋಗಲು ಅಂತಾ ನವಲಗುಂದ ಬಸ್ ನಿಲ್ದಾನದ ಮುಂದೆ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾಗ  ಯಾರೋ 4 ಜನ ಆರೋಪಿತರು  ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದು ಪಿರ್ಯಾದಿದಾರನಿಗೆ ಹತ್ತಿಸಿಕೊಂಡು ಕಾಲವಾಡ ಕ್ರಾಸ್ ದಾಟಿದ ನಂತರ ಪಿರ್ಯಾದಿದಾರನಿಗೆ ಕಾರಿನಲ್ಲಿ ಕಬ್ಬಿಣದ ರಾಡಿನಿಂದ ಹಾಗೂ ಕೈಯಿಂದ ಹೊಡಿ ಬಡಿ ಮಾಡುತ್ತಾ ಹೋಗಿ ಆತನ ಹತ್ತಿರ ಇದ್ದ 1) ರೋಖ ಹಣ -8000/- 2) ಎರಡು ಅರ್ಧ ತೊಲಿ ಬಂಗಾರದ ಉಂಗುರಗಳು ಅಕಿ-20000/- 3) ಕೊರಳಲ್ಲಿದ್ದ ಎರಡು ತೊಲೆ ಬಂಗಾರದ ಚೈನು ಅಕಿ-30000/- 4) ಒಂದು ಸ್ಯಾಮಸಂಗ್ ಮೊಬೈಲ್ ಅಕಿ-3000/- ಈ ಪ್ರಕಾರ ಇದ್ದವುಗಳನ್ನು ಕಸಿದುಕೊಂಡು ಕಿರೆಸೂರ ದಾಟಿದ ನಂತರ ರೈಲು ನಿಲ್ದಾಣಕ್ಕೆ ಹೊಗುವ ದಾರಿಯಲ್ಲಿ ಪಿರ್ಯಾದಿದಾರನಿಗೆ ಬಿಟ್ಟು ಕಾರ ಸಮೇತ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 108/2019 ಕಲಂ 394 ನೇದ್ದರಲ್ಲಿಪ್ರಕರರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.