ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, September 29, 2019

CRIME INCIDENTS 29-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-09-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 25/09/2019 ರಂದು ಸಾಯಂಕಾಲ 4.00 ಗಂಟೆ ನಡುವಿನ ಅವಧಿಯಲ್ಲಿ. ಇದರಲ್ಲಿಯ ನೀಲಕಂಠ ಇವರು ಉಪಯೋಗಿಸಲು ಬರದೇ ಇದ್ದಂತಹ , ಇಗಿನ ಅಜಮಾಸ ಕಿಮ್ಮತ್ತು 8000/- ರೂ ಬೆಲೆಯ, ಜಮೀನದಲ್ಲಿ ರೂಟರ್ ಹೊಡೆಯಲು ಉಪಯೋಗಿಸುವ ಪಾವರ್ ಟಿಲ್ಲರ್ ನಂಃ KA-25-TA-4363 ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 156/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ:27-09-2019 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ದಾರವಾಡ ಸವದತ್ತಿ ರಸ್ತೆಯ ಅಮ್ಮಿನಬಾವಿ ಗ್ರಾಮ ದಾಟಿ ತುಸು ದೂರದಲ್ಲಿ ರಸ್ತೆಯ ಮೇಲೆ ಮೋಟರ ಸೈಕಲ್ಲ ನಂಬರ KA 27-W-6833 ನೇದ್ದರ ಚಾಲಕನಾದ ಪಿರ್ಯಾದಿಯ ತಂದೆಯಾದ  ಪಕ್ರುಸಾಬ ತಂದೆ ಹುಸೇನಸಾಬ ನಭಿಖಾನ ಸಾ|| ಹೂಲಿ ತಾ|| ಸವದತ್ತಿ ಜಿ|| ದಾರವಾಡ ಅವನು ತಾನು ನಡೆಸುತ್ತಿದ್ದ ಮೋಟರ ಸೈಕಲ್ಲನ್ನು ದಾರವಾಡ ಕಡೆಯಿಂದ ಸವದತ್ತಿ ಕಡೆಗೆ ದುಡುಕುತನದಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ಮೋಟರ ಸೈಕಲ್ಲ ಸ್ಕಿಡ್ ಮಾಡಿ ಕೆಡವಿ ಮೋಟರ ಸೈಕಲ್ಲ ಹಿಂದೆ ಕುಳಿತ  ಇವರ ತಾಯಿಯಾದ ಸಾಹೇಬ್ಬಿ ಕೋಂ ಪಕ್ರುಸಾಬ ನಬಿಖಾನ 40 ವರ್ಷ ಸಾ|| ಹೂಲಿ ತಾ|| ಅವದತ್ತಿ ಜಿ|| ಬೆಳಗಾಂವ ಅವಳಿಗೆ ಬಾರಿ ದುಖಾಪತ್ತ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 159/2019 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, September 28, 2019

CRIME INCIDENTS 28-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-09-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ  ಗ್ರಾಮದ  ಆರೋಪಿತನಾದ ಜಾಕೀರ ತಂದೆ ನಭೀಸಾಬ ಅಣ್ಣಿಗೇರಿ ವಯಾ-45 ವರ್ಷ ಜಾತಿ-ಮುಸ್ಲಿಂ, ಉದ್ಯೋಗ- ವ್ಯಾಪಾರ ಸಾ: ಅಣ್ಣಿಗೇರಿ ತಾ: ಅಣ್ಣಿಗೇರಿ ದಿನಾಂಕ 27-09-2019 ರಂದು 19-50 ಘಂಟೆಗೆ ಅಣ್ಣಿಗೇರಿ ಶಹರದ ಪುರಸಭೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ತಮ್ಮ ತಮ್ಮ ಫಾಯದೇಗೋಸ್ಕರ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅಂಕಿ ಸಂಖ್ಯೆಗಳ ಸಹಾಯದಿಂದ ಓ.ಸಿ ಮಟಕಾ ಜೂಜಾಟವನ್ನು ನಡೆಸುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಅವರಿಂದ ರೂ 350-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 61/2019 ಕಲಂ 78(3) ನೇದ್ದರಲ್ಲಿ ಪ್ರಕರಣವ0ನ್ನು ದಾಖಲಿಸಿದ್ದು ಇರುತ್ತದೆ.

2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 27-09-2019 ರಂದು  ರಾತ್ರಿ 21-30 ಗಂಟೇಯ ಸುಮಾರಿಗೆ ಹಳ್ಳಿಗೇರಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಬೀದಿ ಲೈಟಿನ ಬೆಳಕಿನಲ್ಲಿ ಇದರಲ್ಲಿಯ ಆರೋಪಿತರಾದ 1) ಸಂತೋಷ  ತಂದೆ ರಾಜಪ್ಪ ಕೋಟಳ್ಳಿ  2) ಮಾಂತೇಶ ತಂದೆ ಅಜರ್ುನ ಜಾಮನಾಳ, 3) ಮಾಂತೇಶ ನಿಂಗಪ್ಪ ಹರಿಜನ 4) ಗುರುನಾಥ ತಂದೆ ಯಲ್ಲಪ್ಪ ಅಗಸಿಮನಿ 5) ಶಿವಾನಂದ ಸತ್ಯೆಪ್ಪ ಹರಿಜನ  6) ಬಾಲಕಿೃಷ್ಣ ಅಶೋಕ ಶೌವಡೇ ಸಾ||  ಎಲ್ಲರೂ ಹಳ್ಳಿಗೇರಿ ತಾ|| ಜಿ|| ಧಾರವಾಡ ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್ - ಬಾಹರ್ '' ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 1060-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಳಿಗೇರಿ ಗ್ರಾಮದ ಮೃತನಾದ ನೀಲಪ್ಪ ತಂದೆ ಚಂದ್ರಪ್ಪ ಹಲಗಿ, ವಯಾ-42 ವರ್ಷ ಜಾತಿ-ಹಿಂದೂ ಮಾದರ ಉದ್ಯೊಗ ಶೇತ್ಕಿ ಕೆಲಸ ಸಾ: ಹಳ್ಳಿಕೇರಿ ತಾ: ಅಣ್ಣಿಗೇರಿ ಈತನು ತನ್ನ ಬಾಬತ್ 01 ಎಕರೆ 20 ಗುಂಟೆ ಜಮೀನದಲ್ಲಿನ ಬೆಳೆಯು ಸತತವಾಗಿ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಬೆಳೆಯು ಸರಿಯಾಗಿ ಬಾರದೇ ಇರುವದರಿಂದ ಹಾಗೂ ತನ್ನ ಹೆಂಡತಿ ಯಲ್ಲವ್ವ ಇವಳ ಹೆಸರಿನಲ್ಲಿ ಹೈನುಗಾರಿಕೆಗೆ ಅಂತಾ ಹಳ್ಳಿಕೇರಿಯ ಕೆ.ವಿ.ಜಿ.ಬ್ಯಾಂಕಿನಲ್ಲಿ 75 ಸಾವಿರ ರೂಪಾಯಿ ಸಾಲವನ್ನು ತೆಗೆದುಕೊಂಡಿದ್ದು ಅದನ್ನು ಹೇಗೆ ತಿರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ದಿ: 27-09-2019 ರಂದು ಸಾಯಂಕಾಲ 04-00 ಗಂಟೆಯಿಂದ ದಿ: 28-09-2019 ರಂದು ಬೆಳಗಿನ 06-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ಮಾನಸಿಕ ಮಾಡಿಕೊಂಡು ಯಲ್ಲಪ್ಪ ಈಶ್ವರಪ್ಪ ಪರಪ್ಪಣ್ಣವರ ಇವರ ಹೊಲದಲ್ಲಿನ ಬನ್ನಿಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರಳ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ  ಪೊಲೀಸ್ ಠಾಣೆಯಲ್ಲಿ ಯುಡಿನಂ 15/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, September 27, 2019

CRIME INCIDENTS 27-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-09-2019 ರಂದು ವರದಿಯಾದ ಪ್ರಕರಣಗಳು
1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 27/09/2019 ರಂದು ಮುಂಜಾನೆ 10-20 ಗಂಟೆಗೆ ಅದರಗುಂಚಿ ಪ್ಲಾಟದ ಅಂಗನವಾಡಿ ಹತ್ತಿರ ಸಾರ್ವಜನಿಕ ರಸ್ತೆ ಬಾಜು ಇದರಲ್ಲಿಯ ಅರೋಪಿ ಶಬ್ಬಿರ ತಂದೆ ಯುನೂಸಸಾಬ ಸವಣೂರ @ ಚಿತ್ತೆವಾಲೆ ಸಾ/ ಅದರಗುಂಚಿ ಪ್ಲಾಟ ತಾ/ಹುಬ್ಬಳ್ಳಿ ಇವನು ಯಾವುದೇ ಪಾಸು ವ ಪರ್ಮೀಟ ಇಲ್ಲದೆ ತನ್ನ ಪಾಯ್ದೆಗೋಸ್ಕರ ಒಟ್ಟು 28 ಬೆಂಗಳೂರ ವಿಸ್ಕಿ ತುಂಬಿದ 180 ಎಂ ಎಲ್ ದ ಟೆಟ್ರಾ ಪಾಕೇಟಗಳು ಅ//ಕಿ// 1370/- ರೂ ಕಿಮತ್ತಿನವುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 155/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:25-09-2019 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ದಾರವಾಡ ಸವದತ್ತಿ ರಸ್ತೆಯ ಹಾರೋಬೆಳವಡಿಯ ಬೀಮಪ್ಪ ಬೋವಿ ಅವರ ಹೊಲದ ಹತ್ತಿರ ರಸ್ತೆಯ ಮೇಲೆ ಕಾರ ನಂ ಕೆ.ಎ-19/ಜಡ್-5086 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಕಾರನ್ನು ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಶಾಂತವ್ವ ಕೋಂ ವೀರಭದ್ರಪ್ಪ ಮಡಿವಾಳರ ಸಾ|| ಹಾರೋಬೆಳವಡಿ ತಾ|| ಜಿ|| ದಾರವಾಡ ಅವಳೀಗೆ ಡಿಕ್ಕಿ ಮಾಡಿ ಕೆಡವಿ ಭಾರಿ ಘಾಯ ಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೆ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳೀಸದೆ ವಾಹನ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 158/2019 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 26-09-2019 ರಂದು ಸಾಯಂಕಾಲ 0700 ಗಂಟೆಯಿಂದ ರಾತ್ರಿ 0800 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿ ಮೃತ ಸಂತೋಷ ತಂದೆ ಭೀಮಪ್ಪ ಅತ್ತಿಗೇರಿ  ವಯಾ: 29 ವರ್ಷ: ಸಂಶಿ ಇತನು ತನ್ನ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ತಮ್ಮ ದೊಡ್ಡಪ್ಪನಾದ ಯಲ್ಲಪ್ಪ ಸೋಮಪ್ಪ ಅತ್ತಿಗೇರಿ ಹಾಗೂ ತಮ್ಮ ತಾಯಿ ಯಲ್ಲವ್ವ  ಇವರ ಜಂಟಿ ಹೆಸರಿನಲ್ಲಿ ತಮ್ಮ ಬಾಬತ್ತ ಹೊಲ 5 ಎಕರೆ 23 ಗುಂಟೆ ಜಮೀನಿನ ಮೇಲೆ ಸುಮಾರು 4-5 ವರ್ಷಗಳ ಹಿಂದೆ ಸಂಶಿ ವಿಜಯಾ ಬ್ಯಾಂಕಿನಲ್ಲಿ 25000/- ರೂ ಬೆಳೆಸಾಲ ಮಾಡಿಕೊಂಡಿದ್ದನ್ನು  ಹಾಗೂ ಇತ್ತಿಚಿಗೆ ವಿಪರೀತ ಮಳೆಯಿಂದ ತಮ್ಮ ಸ್ವಂತ ಮನೆಯು ಬಿದ್ದಿದ್ದು ಸರಿಯಾಗಿ ಮಳೆಬೆಳೆ ಆಗದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ತಮ್ಮ ಬಾಡಿಗೆ ಮನೆಯ ಬಿದಿರಿನ ಜಂತಿಗೆ ನೇಣು ಹಾಕಿಕೊಂಡು ತ್ರಾಸಮಾಡಿಕೊಳ್ಳುತ್ತಿದ್ದಾಗ ಉಪಚಾರಕ್ಕೆ ಅಂತಾ ಆಸ್ಪತ್ರೆಗೆಕರೆದುಕೊಂಡು ಹೋದಾಗ ನಿನ್ನೆ ದಿವಸ  ದಿನಾಂಕ: 26-09-2019 ರಂದು ರಾತ್ರಿ 8-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇತನ ಮರಣದಲ್ಲಿ ನನ್ನದು ಯಾವ ಮತ್ತು ಯಾರ ಮೇಲೆಯು ಸಂಶಯ ಇರುವುದಿಲ್ಲ ಅಂತಾ ವರದಿಯನ್ನು ನೀಡಿದ್ದು ಇರುತ್ತದೆ ಈ  ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 31/2019  ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹೆಬ್ಬಳ್ಳಿ ಗ್ರಾಮದ ಮೃತನಾದ ಹನಮಂತಪ್ಪ ತಂದೆ ನಿಂಗಪ್ಪ ಮೊರಬದ ವಯಾ-65 ವರ್ಷ ಜಾತಿ-ಹಿಂದೂ ಕುರಬ ಉದ್ಯೋಗ-ಮನೆ ಕೆಲಸ ಸಾ: ಹೆಬ್ಬಳ್ಳಿ ಜನತಾ ಪ್ಲಾಟ ತಾ: ಧಾರವಾಡ ಈತನಿಗೆ ಸುಮಾರು 06 ವರ್ಷಗಳ ಹಿಂದೆ ಗ್ಯಾಂಗ್ರಿನ ಖಾಯಿಲೆ ಆಗಿದ್ದು ಸದರಿಯವನಿಗೆ ಎಡಗಾಲು ಕತ್ತರಿಸಿದ್ದು ಇದ್ದು, ಇತ್ತಿತ್ತಲಾಗಿ ಸದರ ಖಾಯಲೆ ಬಲಗಾಲಿಗೂ ಅಂಟಿಕೊಂಡಿದ್ದರಿಂದ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೇ ತಾನೇ ದಿನಾಂಕ 26-09-2019 ರಂದು 22-00 ಗಂಟೆಯಿಂದ ದಿನಾಂಕಕ 27-09-2019 ರಂದು ನಸುಕಿನ 05-30 ಗಂಟೆ ನಡುವಿನ ಅವಧಿಯಲ್ಲಿ  ತನ್ನ ಮನೆಯಲ್ಲಿನ ಹುಸಿಯಲ್ಲಿನ ಕಟ್ಟಿಗೆಯ ಜಂತಿಗೆ ತೆಳುವಾದ ರಗ್ಗಿನಿಂದ  ನೇಣು ಹಾಕಿಕೊಂಡು ಮೃತಪಟಟ್ಟಿದ್ದು ಇರುತ್ತದೆ. ವಿನಃ ಅವನ ಮರಣದಲ್ಲಿ ಯಾರ ಮೇಲೂ ಯಾವುದೇ ರಿತೀಯ ಸಂಶಯ ವಗೈರೆ ಇರುವುದಿಲ್ಲಾ ಅಂತಆ ವರದಿಯನ್ನು ನೀಡಿದ್ದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 51/2019  ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, September 26, 2019

CRIME INCIDENTS 26-09-2019ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-09-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿಃ 26/09/2019 ರಂದು ಮುಂಜಾನೆ 11.30 ಗಂಟೆ ಸುಮಾರಿಗೆ, ಕುರುಡಿಕೇರಿ ಶ್ರೀ ಸಿದ್ದಾರೋಡ ಮಠದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ, ಇದರಲ್ಲಿ ಆರೋಪಿತನಾದ ಮಂಜುನಾಥ ಲಕ್ಷ್ಮಣ ಸಂಕದಾಳ . ವಯಾಃ 30 ವರ್ಷ. ಸಾಃ ಕುರಡಿಕೇರಿ ತಾಃ ಹುಬ್ಬಳ್ಳಿ ಇವನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಪಾಯ್ದೇಗೊಸ್ಕರ ವಿಸ್ಕಿ ತುಂಬಿದ, ಟೇಟ್ರಾ ಪೌಚಗಳನ್ನು ಮಾರಾಟ ಮಾಡುತ್ತಿದ್ದಾಗ, ಒಟ್ಟು ಅಃಕಿಃ 1,824/- ರೂ ಕಿಮ್ಮತ್ತಿನ  ಟೇಟ್ರಾ ಪೌಚಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 154/2019 ಕಲಂ 32.34 ಅಬಕಾರಿ ಕಾಯ್ದೆ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 24-09-2019 ರಂದು 21-00 ಗಂಟೆಗೆ ಕೋಟೂರ ಗ್ರಾಮದ ಪಿರ್ಯಾದಿ ಮನೆ ಹತ್ತಿರ  ಆರೋಪಿತನಾದ ಶಿವಾನಂದ ಮಡಿವಾಳ ಯಳ್ಳೂರ ಇವನ ಮನೆ ಹರನಾಳಗೆ ನೀರು ಪಿರ್ಯಾಧಿಯ ಹಿತ್ತಲದಲ್ಲಿ ಬಿಟ್ಟಿದಕ್ಕೆ ಪಿರ್ಯಾದಿಯ ತಾಯಿ ಮಲ್ಲವ್ವ ಹರನಾಳಗೆ ನೀರು ನಮ್ಮ ಹಿತ್ತಲದಲ್ಲಿ ಬಂದಿದ್ದು ನೀಮಗೆ ಎಷ್ಟು ಸಲಾ ಹೇಳಬೇಕು ಅಂತಾ ಹೇಳಿದಕ್ಕೆ ಆರೋಪಿತನು ಪಿರ್ಯಾದಿಯ ತಾಯಿಗೆ ಬೈದಾಡುತ್ತಾ ಬಾಯಿ ಮಾಡುತ್ತಿದ್ದಾಗ ಪಿರ್ಯಾದಿಯು ಬಂದು ಎಕೆ ಬಾಯಿ ಮಾಡುತ್ತಿರಿ ಹರನಾಳಗೆ ನೀರು ಬೇರೆ ಕಡೆ ಬಿಡರಿ ಅಂತಾ ಹೇಳಿದಕ್ಕೆ ನೀರು ಇಲ್ಲೇ ಬಿಡುವರೆ  ಅಂತಾ ತಂಟೆ ಸಂಬಂದಿಕರಾದ  ಸೋಮಲಿಂಗ ನಿಂಗಪ್ಪ ಇಂಗಳಗಿ ಮತ್ತು ಶಾಂತವ್ವ ಶಂಕ್ರಪ್ಪ ಅಂಬಣ್ಣವರ ನೇದವರು ಬಂದು ಬಡಿಗೆಯಿಂದಾ ಕೈಯಿಂದಾ ಪಿರ್ಯಾದಿಗೆ ಹೊಡೆದು ದುಃಖಾಪತ್ತ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 107/2019 ಕಲಂ 323.324.504.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಹೆಬ್ಬಳ್ಳಿ ಗ್ರಾಮದ ಮೃತನಾದ ಚನ್ನಬಸಪ್ಪ ತಂದೆ ಶಿವಪ್ಪ ಕುಂಬಾರ ವಯಾ-28 ವರ್ಷ ಜಾತಿ-ಹಿಂದೂ ಕುಂಬಾರ, ಉದ್ಯೋಗ-ಕೂಲಿ ಕೆಲಸ ಸಾ: ಹೆಬ್ಬಳ್ಳಿ ಜನತಾ ಪ್ಲಾಟ ತಾ: ಧಾರವಾಡ ಈತನು ಸರಾಯಿ ಸೇವನೆ ಮಾಡುವ ಚಟದವನಿದ್ದು ಇತ್ತಿತ್ತಲಾಗಿ ಕುಡಿತದ ಚಟದಿಂದ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿನ ಕಬ್ಬಿಣದ ಜಂತಿಗೆ ದಿನಾಂಕ ದಿನಾಂಕ 25-09-2019 ರಂದು 20-00 ಗಂಟೆಯಿಂದ 22-00 ಗಂಟೆಯ ನಡುವಿನ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾರ ಮೇಲೂ ಯಾವುದೇ ರಿತೀಯ ಸಂಶಯ ವಗೈರೆ ಇರುವುದಿಲ್ಲಾ ಅಂತಾ ವರದಿಗಾರಳ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 50/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 26-09-2019 ರಂದು ಬೆಳಗಿನ 06-00 ಗಂಟೆಯಿಂದ ಬೆಳಗಿನ 06-30 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಪಿರ್ಯಾದಿಯ ಹೆಂಡತಿಯಾದ ನೀಲಾ ಕೋಂ ಮಹಾಂತೇಶ ಶಿರಗುಪ್ಪಿ ವಯಾ-22 ವರ್ಷ ಜಾತಿ-ಹಿಂದೂ ಹರಣಶಿಖಾರಿ ಉದ್ಯೋಗ-ಮೆಗೆಲಸ ಸಾ|| ಅರೆಕುರಹಟ್ಟಿ ಇವಳು ತನ್ನ ಮಗಳಾದ ಮನಿಶಾ ತಂದೆ ಮಹಾಂತೇಶ ಶಿರಗುಪ್ಪಿ ವಯಾ-10 ತಿಂಗಳು ಇವಳಿಗೆ ಕರೆದುಕೊಂಡು ಪಿರ್ಯಾದಿಯ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಕಾಣೆಯಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 122/2019 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.