ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, September 3, 2019

CRIME INCIDENTS 03-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-09-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ-03-09-2019 ರಂದು 10:45 ಗಂಟೆಯ ಸುಮಾರಿಗೆ ಕಾಮದೇನು ಗ್ರಾಮದ ಗಣೇಶ ಗುಡಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1.ಲಯಾಜ್ ವಾಲಿಕರ 2.ಮಂಜುನಾಥ ಸಂಕ್ರಪ್ಪಣ್ಣವರ ಹಾಗೂ ಇನ್ನೂ 04 ಜನರು ಕೂಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೆಗೊಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾಗ 3000/-ರೂ ನಗದು,  52 ಇಸ್ಪೀಟ ಎಲೆಗಳ  ಮತ್ತು  ಒಂದು ಹಳೆಯ ಪಾಟಿನ ಚೀಲದ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 109/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.