ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, September 4, 2019

CRIME INCIDENTS 04-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-09-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ ಠಾಣಾ ವ್ಯಾಪ್ತಿಯ: ಸೂಳಿಕಟ್ಟಿ ಗ್ರಾಮದ ಮೃತನಾದ ನಾಗೇಂದ್ರ ತಂದೆ ದೇಮಣ್ಣಾ ಬೇಕಣಿ ವಯಾ: 55 ವರ್ಷ, ಸಾ: ಸೂಳಿಕಟ್ಟಿ ಇವನು ಸುಮಾರು 19-20 ವರ್ಷಗಳ ಹಿಂದೆ ತನ್ನ ಹೆಂಡತಿಯ ಜಮೀನನ್ನು ಅವಳಿಗೆ ಹೇಳದೇ ಮಾರಿದ್ದರಿಂದ ಅವನ ಹೆಂಡತಿಯು ಅವನ ಸಂಗಡ ಜಗಳ ಮಾಡಿದ್ದು, ಅಲ್ಲಿ ಇಲ್ಲಿ ಕೈಗಡ ಸಾಲ ಮಾಡುವದು ಬ್ಯಾಂಕದಲ್ಲಿ ಸಾಲ ಮಾಡುತ್ತ ಬಂದಿದ್ದು, ನಿನ್ನೆಯ ದಿವಸ ಮನೆಯಲ್ಲಿದ್ದ ಕುರಿಯನ್ನು ಯಾರಿಗೂ ಹೇಳದೇ ಕೇಳದೇ ಮಾರಿದ್ದರಿಂದ ಅವನ ಹೆಂಡತಿಯು ನಮ್ಮ ಮಕ್ಕಳು ಬಾಳುವೆ ಮಾಡುತ್ತ ಬಂದಿದ್ದಾರೆ ನೀನು ಹಾಳು ಮಾಡುತ್ತ ಬಂದೀದಿ ಅಂತ ಸಿಟ್ಟು ಮಾಡಿದಾಗ ಅದನ್ನೇ ಮನಸಿಗೆ ಹಚ್ಚಿಕೊಂಡು ತನ್ನ ಜೀವನದಲ್ಲಿ ಬೇಸರಗೊಂಡು ದಿ: 03/09/2019 ರಂದು ರಾತ್ರಿ 10.30 ಗಂಟೆಯಿಂದ ದಿ: 04/09/2019 ರಂದು ಮುಂಜಾನೆ 08.30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಿಂದ ಮಲಗಲು ಅಂತ ತನ್ನ ಜಮೀನದ ದನದ ಮನೆಗೆ ಹೋದವನು ದನದ ಮನೆಯ ಜಂತಿಗೆ ಹಗ್ಗ ಕಟ್ಟಿ ಕುತ್ತಿಗೆ ಟಾವೆಲ್ ಸುತ್ತಿಕೊಂಡು ಜಂತಿಗೆ ಕಟ್ಟಿದ್ದ ಹಗ್ಗಕ್ಕೆ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು, ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ಮಗ ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 54/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.