ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, September 5, 2019

CRIME INCIDENTS 05-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-09-2019 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 05/09/2019 ರಂದು ಮದ್ಯಾಹ್ನ 14-45 ಗಂಟಗೆ ತಡಸ ಕ್ರಾಸ್ ಹತ್ತಿರ ಇರುವ ಭಾರತ್ ಡಾಬಾದ  ಹತ್ತಿರ ಇದರಲ್ಲಿ ಆರೋಪಿತನಾದ  ಇಮಾಮಸಾಬ ಶರೀಫಸಾಬ ನದಾಫ್ ವಯಾ. 28 ವರ್ಷ ಸಾ. ತಿರುಮಲ್ಲಕೊಪ್ಪ ತಾ. ಹುಬ್ಬಳ್ಳಿ ಇತನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ, ತನ್ನ ಫಾಯ್ದೇಗೋಸ್ಕರ ಒಟ್ಟು 50 ಓರಿನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಂ.ಎಲ್ ಟೇಟ್ರಾ ಪೌಚಗಳು, ಇವುಗಳ ಅ.ಕಿ 1516/- ರೂಪಾಯಿಗಳು, 2) ಒಟ್ಟು 18 ಓಲ್ಡ್ ಟಾರ್ವಿನ್ ವಿಸ್ಕಿ ತುಂಬಿದ 180 ಎಂ.ಎಲ್ ದ ಟೇಟ್ರಾ ಪೌಚಗಳು, ಇವುಗಳ ಅ.ಕಿ 1334 /-ರೂಪಾಯಿಗಳು, 3) ಒಟ್ಟು 9 ಬ್ಯಾಗ್ ಪೈಪರ ವಿಸ್ಕಿ ತುಂಬಿದ 180 ಎಂ.ಎಲ್.ದ ಟೇಟ್ರಾ ಪೌಚಗಳು ಇವುಗಳ ಅ,ಕಿ 811/- ರೂಪಾಯಿಗಳು,ಇವೆಲ್ಲವುಗಳ ಅ.ಕಿ 3661 ರೂಪಾಯಿ ಕಿಮ್ಮತ್ತಿನೇದ್ದವುಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/2019 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 04-09-2019 ರಂದು 05-30 ಗಂಟೆ ಸುಮಾರಿಗೆ ಆರೋಪಿತನಾದ ಸಾಹೇಬರಾವ್ ತಂದೆ ಭಾರತ್ ಯಾದವ್ ಈತನು ತಾನು ಚಲಾಯಿಸುತ್ತಿದ್ದ,ಲಾರಿ ನಂ ಎಮ್ಎಚ್-12/ಕ್ಯೂಜಿ-7387 ನೇದ್ದನ್ನು ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ವೇಗದ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ರಸ್ತೆ ಬಲ ಬದಿಯಲ್ಲಿ ಪಲ್ಟಿ ಮಾಡಿ ತನಗೆ ಸಾದಾ ಗಾಯ ಪಡಿಸಿಕೊಂಡಿದ್ದು, ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 112/2019 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.