ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, September 6, 2019

CRIME INCIDENTS 06-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-09-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಸಾಪೂರ ಗ್ರಾಮದ ಬಸ್ ಸ್ಟ್ಯಾಂಡ ಮುಂದುಗಡೆಯ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ  ಆರೋಪಿತರಾದ 1.ಮಲ್ಲಗೌಡ್ರ ಪಾಟೀಲ ಹಾಗೂ ಇನ್ನೂ 07 ಜನರು ಕೊಡಿಕೊಂಡು ತಮ್ಮ ತಮ್ಮ ಫಾಯದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1650-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 57/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
           
2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 05-09-2019 ರಂದು 20-00 ಗಂಟೆ ಸುಮಾರಿಗೆ ಕ್ರೂಜರ್ ನಂ ಕೆಎ-25/ಎನ್-4608 ನೇದ್ದರ ಚಾಲಕನು ತನ್ನ ವಾಹನವನ್ನು ಹೆಬ್ಬಾಳ ಕ್ರಾಸ್ ಕಡೆಯಿಂದ ಅಳಗವಾಡಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಅಳಗವಾಡಿ ಕಡೆಯಿಂದ ಹೆಬ್ಬಾಳ ಕ್ರಾಸ್ ಕಡೆಗೆ ಹೊರಟಿದ್ದ ಮೋಟಾರ್ ಸೈಕಲ್ ನಂ ಕೆಎ-25/ವೈ-5090 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಮೋಟಾರ್ ಸೈಕಲ್ ಸವಾರ ಆನಂದ ನಿಂಗಪ್ಪ ಜಟ್ಟೆಣ್ಣವರ ಹಾಗೂ ಹಿಂಬದಿ ಸವಾರರಾದ ಮಹಾಂತೇಶ ನಿಂಗಪ್ಪ ಗುಜ್ಜಳ ಮತ್ತು ಚಂದ್ರು ಶಂಕರಗೌಡ ಶಿವನಗೌಡ್ರ ಇವರಿಗೆ ಭಾರೀ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿದ್ದಲ್ಲದೆ ಪಿರ್ಯಾದಿದಾರನಿಗೆ ಭಾರೀ ಗಾಯ ಪಡಿಸಿ ವಾಹನ ಬಿಟ್ಟು ಪರಾರಿಯಾಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 113/2019 ಕಲಂ INDIAN MOTOR VEHICLES ACT, 1988 (U/s-134(A&B),187); IPC 1860 (U/s-38,279,304(A) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ ಠಾಣಾ ವ್ಯಾಪ್ತಿಯ:ದಿನಾಂಕ 05/09/2019 ರಂದು 18-00 ಗಂಟೆಯಿಂದ ರಾತ್ರಿ 22-00 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಮೃತ ವಿನೋದ ತಂದೆ ಶಿದ್ದಪ್ಪ ಗರಗದ ವಯಾ:16 ವರ್ಷ ಈತನು ಕಸ ಚೆಲ್ಲಲು ಹೊಲಕ್ಕೆ ಹೋದಾಗ ಯಾವುದೋ ವಿಷಕಾರಕ ಹುಳು ಕಚ್ಚಿದ್ದರಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬುದು ತಿಳಿಯುತ್ತಿಲ್ಲ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಲು ವಿನಂತಿ ಅದೆ.ಸದರಿ ನನ್ನ ಮಗನ ಸಾವಿನಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಪಿರ್ಯಾಧಿ ಇರುವುದಿಲ್ಲ ಅಂತಾ ಮೃತನ ತಂದೆ ಕೊಟ್ಟ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಗುಡಗೇರಿ  ಪೊಲೀಸ್ ಠಾಣೆಯಲ್ಲಿ ಯುಡಿನಂ 12/2019 ಕಲಂ 174 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.