ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, September 8, 2019

CRIME INCIDENTS 08-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-09-2019 ರಂದು ವರದಿಯಾದ ಪ್ರಕರಣಗಳು
1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 08-09-2019 ರಂದು 11-30 ಗಂಟೆಗೆ ಗರಗ ಗ್ರಾಮದ ಶಿಂಗನಳ್ಳಿ ರಸ್ತೆ ಪ್ಲಾಟದಲ್ಲಿ ಎಮ್.ಎಸ್.ಐ.ಎಲ್ ಬಿಲ್ಡಿಂಗ ಪಕ್ಕದಲ್ಲಿರುವ ರಸ್ತೆಯ ಮೇಲೆ  ಆರೋಪಿತರಾದ ಮಂಜುನಾಥ ಕಡೆಮನಿ 2.ಅಶೋಕ ಭದ್ರಕಟ್ಟಿ 3.ಯಲ್ಲಪ್ಪಾ ಕಡೆಮನಿ.4 ಬಸವರಾಜ 5.ಹನೀಫ ಜಕಾತಿ ಇವರು  ತಮ್ಮ ತಮ್ಮ ಫಾಯ್ದೆಗೋಸ್ಕರ ಯಾವುದೇ ಪಾಸ ವ ಪರ್ಮಿಟ ಇಲ್ಲದೇ ವಿಸ್ಕಿ ತುಂಬಿದ ಸರಾಯಿ ಟೆಟ್ರಾ ಪಾಕೀಟಗಳನ್ನು ಸಾಗಾಟ ಮಾಡಿಕೊಂಡು ಬಂದು ಸಾರ್ವಜನೀಕರಿಗೆ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಹಾಗೂ ಆರೋಪಿ ನಂ 4 ಮತ್ತು 5 ನೇದವರು ಮಾರಾಟ ಮಾಡಲು ಸರಾಯಿ ಟೆಟ್ರಾ ಪಾಕೀಟಗಳನ್ನು ನೀಡಿದ್ದು ಅವರಿಂದ ರೂ 14.471-00 ಮೌಲ್ಯದ ಮದ್ಯೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ87/2019 ಕಲಂ  32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 07-09-2019 ರಂದು 23-45 ಗಂಟೆಯ ಸುಮಾರಿಗೆ ಶಿರಕೋಳ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಬೀದಿ ದೀಪದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರಾದ 1.ಬಸವರಾಜ ನಾಯಕರ ಹಾಗೂ ಇನ್ನೂ 05 ಜನರು ತಮ್ಮ ತಮ್ಮ  ಸ್ವಂತ ಪಾಯಿದೆಗೋಸ್ಕರ ಹಣವನ್ನು ಪಣಕ್ಕಿಟ್ಟು ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಅನ್ನುವ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು  ಅವರಿಂದ ರೂ 2250/-  ಹಾಗೂ 52 ಇಸ್ಪೀಟ್ ಎಲೆಗಳ ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್  ಠಾಣೆಯಲ್ಲಿ ಗುನ್ನಾನಂ 114/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 07-09-2019 ರಂದು 1600 ಗಂಟೆಗೆ, ಬಿ.ಹೂಲಿಕಟ್ಟಿ-ಪರಸಾಪೂರ ರಸ್ತೆಯ ಮೇಲೆ, ಪರಸಾಪೂರ ಗ್ರಾಮದ ಹತ್ತಿರ ಆರೋಪಿತನಾದ ಪಕ್ಕೀರಪ್ಪ ಯಲ್ಲಪ್ಪ ವಾಲೀಕಾರ, ಸಾ: ಹುಣಸೀಕಟ್ಟಿ ಹಾಲಿ: ಪರಸಾಪೂರ ತಾ: ಕಲಘಟಗಿ ಈತನು ಮೋಟಾರ ಸೈಕಲ್ ನಂ: ಕೆಎ 25 / ಇ.ವ್ಹಿ: 7581 ನೇದ್ದರಲ್ಲಿ ತನ್ನ ಹಿಂದೆ ಪಿರ್ಯಾದಿಯ ತಂದೆಯಾದ ಬಸಪ್ಪ ನಿಂಗಪ್ಪ ಸಂಕಬಾಳಿ, ವಯಾ: 60 ವರ್ಷ ಸಾ: ಬಿ.ಹೂಲಿಕಟ್ಟಿ ಇವನಿಗೆ ಕೂಡ್ರಿಸಿಕೊಂಡು ಬಿ.ಹೂಲಿಕಟ್ಟಿ ಕಡೆಯಿಂದ ಪರಸಾಪೂರ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಸ್ಕಿಡ್ ಮಾಡಿ ಕೆಡವಿ ತನಗೆ ಹಾಗೂ ಹಿಂದೆ ಕುಳಿತ ಬಸಪ್ಪನಿಗೆ ತಲೆಗೆ, ಮೈ ಕೈ ಗಳಿಗೆ ಸಾದಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ, ಪಿರ್ಯಾದಿಯ ತಂದೆಯು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ ದಿನಾಂಕ: 08-09-2019 ರಂದು 0030 ಗಂಟೆಗೆ  ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 111/2019 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಟದೂರ ಗ್ರಾಮದ ಗಿರಣಿ ಹತ್ತೀರ ಯಲ್ಲಪ್ಪಾ ಶೇರೆವಾಡ ಇತನಿಗೆ ಕೊಡಬೇಕಾಗಿದ್ದ ಉಳಿದ 10000/- ರೂ.ಗಳನ್ನು  ಕೇಳಿದಾಗ ಆರೋಪಿತರಾದ ಚನ್ನಪ್ಪಾ ಅರಳಿಕಟ್ಟಿ ಹಾಗೂ ಇನ್ನೂ ಇಬ್ಬರೂ  ಸಿಟ್ಟಾಗಿ ಲೇ ಅವಾಚ್ಯ ಬೈದಾಡಿ  ನಿನ್ನ ಯಾವ ದುಡ್ಡು, ದಾರಿಯಲ್ಲಿ ಕೇಳುತ್ತೀಯಾದ ಕೈಯಿಂದ ಹೊಡಿಬಡಿ ಮಾಡುತ್ತೀದ್ದಾಗ ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ತಲೆಗೆ, ಮೈಕೈಗೆಗೆ ಹೊಡಿಬಡಿ ಮಾಡಿದ್ದಲ್ಲದೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 92/2019 ಕಲಂ 506.341.504.34.323.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.