ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, September 9, 2019

CRIME INCIDENTS 09-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-09-2019 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 09-09-2019 ರಂದು ಮುಂಜಾನೆ 08-30 ಗಂಟೆಗೆ ರಾಷ್ಟ್ರಿಯ ಹೆದ್ದಾರಿ ಎನ್.ಎಚ್-67 ಗದಗ ಹುಬ್ಬಳ್ಳಿ ರಸ್ತೆಯ ಅಣ್ಣಿಗೇರಿ ಬಂಗಾರಪ್ಪ ನಗರದ ಹತ್ತಿರ ರಸ್ತೆಯ ಮೇಲೆ ಆರೋಪಿತ ದ್ಯಾನದೇವ ತಂದೆ ಬಸಪ್ಪ ವಿಠೋಜಿ ವಯಾ 40 ವರ್ಷ ಉದ್ಯೋಗ ಕೂಲಿ ಕೆಲಸ ಜಾತಿ ಹಿಂದೂ ಕುರುಬ ಸಾಃ ಅಣ್ಣಿಗೇರಿ ಗಣೇಶ ನಗರ ತಾಃ ನವಲಗುಂದ ಇತನು ತಾನು ಚಲಾಯಿಸುತ್ತಿದ್ದ ಮೋಟರ ಸೈಕಲ್ ಕೆಎ25 ಹೆಚ ಎ6156 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲ್ ವೇಗ ನಿಯಂತ್ರಣ ಮಾಡದೇ ರಸ್ತೆಯಲ್ಲಿ ಸ್ಕಿಡ್ ಮಾಡಿ  ಬಿಳ್ಳಿಸಿ ಅಪಘಾತ ಪಡಿಸಿ ಮೋಟರ ಸೈಕಲ್ ಹಿಂಬದಿ ಸವಾರಳಾದ ಬಸವ್ವ ತಂದೆ ಶಿವಲಿಂಗಪ್ಪ ದ್ಯಾವನೂರು ವಯಾ 15 ವರ್ಷ ಜಾತಿ: ಹಿಂದೂ ಕುರುಬ ಉದ್ಯೋಗ ವಿದ್ಯಾಭ್ಯಾಸ ಸಾಃ ಕೋಳಿವಾಡ ತಾಃ ಹುಬ್ಬಳ್ಳಿ ಇವಳಿಗೆ ಸಾಧಾ ವ ಬಾರಿ ಪ್ರಮಾಣದ ಗಾಯ ಪೆಟ್ಟು ಪಡಿಸಿದ್ದಲ್ಲದೇ ತನ್ನ  ತಲೆಗೆ ಮತ್ತು ಮುಖಕ್ಕೆ ಮಾರಾಣಾಂತಿಕ ಗಾಯ ಪೆಟ್ಟು ಮಾಡಿಕೊಂಡು ದಿನಾಂಕ 09-09-2019 ರಂದು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 58/2019 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ  ವ್ಯಾಪ್ತಿಯ:ದಿನಾಂಕ: 09-09-2019 ರಂದು 0200 ಗಂಟೆಗೆ, ಕುಬಿಹಾಳ ಗ್ರಾಮದ ಬನಶಂಕರಿ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ  ಆರೋಪಿತರಾದ 1.ಸುರೇಶ ಹುಬ್ಬಳ್ಳಿ ಹಾಗೂ ಇನ್ನೂ 23 ಜನ ಆರೋಪಿತರು ತಮ್ಮ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 11.400-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 93/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ  ವ್ಯಾಪ್ತಿಯ :ದಿನಾಂಕ: 09-09-2019 ರಂದು 0400 ಗಂಟೆಗೆ, ಕುಂದಗೋಳ ಪಟ್ಟಣದ ಶಂಭುಲಿಂಗೇಶ್ವರ ಗುಡಿಯ ಹತ್ತಿರ ಖುಲ್ಲಾ  ಆರೋಪಿತರಾದ ಸುರೇಶ ಮಾರುತಿ ಶಿಂಧೆ ಹಾಗೂ ಇನ್ನೂ 7ಜನ ಆರೋಪಿತರು ತಮ್ಮ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 3.460-00 ರೂ ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 09-09-2019 ರಂದು 00-45 ಗಂಟೆ ಸುಮಾರಿಗೆ ಬಸವೇಶ್ವರ ದೇವಾಲಯ ಹತ್ತಿರ ಆರೋಪಿತರಾದ 1.ಗಣೇಶ ತಿಮ್ಮಾಪುರ  ಹಾಗೂ ಇನ್ನೂ 07 ಜನರು ಕೊಡಿಕೊಂಡು ತಮ್ಮ ಸ್ವಂತ ಪಾಯಿದೆಗೋಸ್ಕರ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಎಲೆಗಳ ಸಗಾಯದಿಂದ ಅಂದರ್ ಬಾಹರ್ ಅನ್ನುವ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ. 2400/- ರೂ  ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 116/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 09-09-2019 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಬೆಳವಟಗಿ ಗ್ರಾಮದ ದೊಡ್ಡ ಬಸವೇಶ್ವರ ಗುಡಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 1.ಬಸವರಾಜ ಜಗಳೂರ ಹಾಗೂ ಇನ್ನೂ 04 ಜನರು ಕೊಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದಿಗೊಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬುವ ಜೂಜಾಟವನ್ನು ಆಡುತಿದ್ದಾಗ ಸಿಕ್ಕಿದ್ದು ಅವರಿಂದ ರೂ 2.100-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 117/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಹುಬ್ಬಳ್ಳಿ  ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿಃ 09/09/2019 ರಂದು 00.30 ಗಂಟೆ ಸುಮಾರಕ್ಕೆ ಗದಗ ಹುಬ್ಬಳ್ಳಿ ರಸ್ತೆ ಮೇಲೆ, ಇಂಗಳಹಳ್ಳಿ ಕ್ರಾಸ್ ಸಮೀಪ್ ಆರೋಪಿ ನಂಃ 1 ನೇ ಮಂಜುನಾಥ ತಂದೆ ಬಸಪ್ಪ ಅಂಗಡಿ ಸಾಃ ಬಾಚಣಕಿ ತಾಃ ಮುಂಡಗೋಡ ಇತನು ತವೇರಾ ಕಾರ ನಂಃ KA-35-M-6324 ನೇದ್ದನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಆರೋಪಿ ಸೇಃನಂಃ 2 ನೇ ಖಾಜಾಮೈನುದ್ದೀನ್ ತಂದೆ ಅಬ್ದುಲಗನಿ ಪಾನವಾಲೆ ಸಾಃ ಹಳೇಹುಬ್ಬಳ್ಳಿ, ಹುಬ್ಬಳ್ಳಿ ಇತನು ರಸ್ತೆಯ ಮೇಲೆ, ಯಾವುದೇ ಸಿಗ್ನಲ್ ವಗೈರೆ ಹಾಕದೇ ನಿಲ್ಲಿಸಿದ್ದ ಲಾರಿ ನಂಬರಃ KA-42-0393 ನೇದ್ದಕ್ಕೆ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಕಾರಿನಲ್ಲಿದ್ದ 1] ಶಾಮ @ ಶಾನು ತಂದೆ ರಾಜಪ್ಪ ನಿಟ್ಟೂರ ವಯಾಃ 28 ವರ್ಷ. ಸಾಃ ಗಂಗಾಧರ ನಗರ , ಹುಬ್ಬಳ್ಳಿ. 2] ನಾಗರಾಜ ಸದಾಶಿವ ಹೊಸಕೋಟಿ . ವಯಾಃ 24 ವರ್ಷ.  ಸಾಃ ಹುಬ್ಬಳ್ಳಿ, ಮಂಟೂರ ರೋಡ  ಇವರಿಗೆ ಭಾರಿ ಗಾಯಗೊಂಡು ಮರಣ ಹೊಂದುವಂತೆ ಮಾಡಿದ್ದಲ್ಲದೇ , ಅಮೀತ್ ಮಧುಕರ ಗುಂಜಾಳ ವಯಾಃ 25 ವರ್ಷ ಸಾಃ ಗಂಗಾಧರ ನಗರ, ಹುಬ್ಬಳ್ಳಿ ಇತನಿಗೆ ಭಾರಿ ಗಾಯಪಡಿಸಿ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2019 ಕಲಂ 279.337338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಚಿಕ್ಕಮಲ್ಲಿಗವಾಡ ಗ್ರಾಮದಸ ಹತ್ತಿರ ಆರೋಪಿತನಾದ ನಾಗಪ್ಪ ತಂದೆ ಶಿವಪುತ್ರಪ್ಪ ರಡ್ಡಿಗೇರ ವಯಾ 40 ವರ್ಷ ಜಾತಿ ಹಿಂದೂ ಲಿಂಗಾಯತ  ಉದ್ಯೋಗಃ ಕೂಲಿ ಕೆಲಸ   ಸಾ: ಚಿಕ್ಕಮಲ್ಲಿಗವಾಡ  ಜನತಾ ಪ್ಲಾಟ ತಾ:ಜಿ: ಧಾರವಾಡ ಈತನು ದಿನಾಂಕ 09-09-2019 ರಂದು 11-45 ಗಂಟೆಗೆ ಚಿಕ್ಕಮಲ್ಲಿಗವಾಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಬಳಿಗೆ ಯಾವುದೇ ಪಾಸ್ ಹಾಗು ಪರ್ಮಿಟನ್ನು ಹೊಂದದೇ ಅಕ್ರಮವಾಗಿ  ಒಟ್ಟು 20 20 ಓಲ್ಡ ಟಾವರ್ನ  ವಿಸ್ಕಿ ತುಂಬಿದ 180 ಎಂ.ಎಲ್  ಅಳತೆಯಮದ್ಯದ ಟೆಟ್ರಾ ಪಾಕೀಟಗಳು (ಒಟ್ಟು  3 ಲೀಟರ 600 ಮೀಲಿ)  ಅ:ಕಿ: 1480 /- ರೂ ರೂ ನೇದ್ದವುಗಳನ್ನು ಅಕ್ರಮವಾಗಿ ತನ್ನ ಫಾಯದೇಗೋಸ್ಕರ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 152/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.