ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, September 10, 2019

CRIME INCIDENTS 10-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-09-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ  ವ್ಯಾಪ್ತಿಯ: ದಿನಾಂಕ..10-09-2019 ರಂದು ಬೆಳಗಿನ 01-15 ಗಂಟೆಯ ಸುಮಾರಿಗೆ ಶಿರೂರ ಗ್ರಾಮದ ಬಸವಣ್ಣದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರಾದ 1.ಶಂಕರ ಗಾಣಗೇರ ಹಾಗೂ ಇನ್ನೂ11 ಜನ ಆರೋಪಿತರೆಲ್ಲರೂ ಕೂಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಜೂಜಾಟ  ಆಡುತ್ತಿದ್ದಾಗ 52 ಇಸ್ಪೀಟ ಎಲೆಗಳು ಹಾಗು ಒಟ್ಟು 2340/- ಹಣದ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  97/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಗ್ರಾಮದ  ಮೃತನಾದ ಅಯ್ಯನಗೌಡ ತಂದೆ ಬಸವನಗೌಡ ಪಾಟೀಲ್. ವಯಾ: 19 ವರ್ಷ, ಇವನು ಚಿಕ್ಕಂದಿನಿಂದ ಬಹಳ ಮೃದು ಸ್ವಭಾವದನಿದ್ದು ಅವನ ತಾಯಿಯ ತಂಗಿಯರ ಮದುವೆ ಆದ ಬಳಿಕ ಅಜ್ಜ ಅಜ್ಜಿಯರು ಇಬ್ಬರೇ ಆಗುತ್ತಾರೆ ಅಂತ ತಿಳಿದು ಅಲ್ಲದೇ ಅವನು ಅವರ ಮನೆಯಲ್ಲಿ ಇದ್ದರೆ ಅವರಿಬ್ಬರಿಗೂ ಕಾಳಜಿ ಮಾಡುತ್ತ ಧಾರವಾಡದಲ್ಲಿ ಅವನಿಗೆ ಒಳ್ಳೆಯ ಶಿಕ್ಷಣ ಸಿಗುತ್ತದೆ ಅಂತ ಮನೆಯವರು ಮಾಡಿ ಅವನಿಗೆ ಮುಕ್ಕಲ್ಲದ ಅವನ ಅಜ್ಜ ಅಮ್ಮನ ಮನೆಯಲ್ಲಿ ಬಿಟ್ಟಿದ್ದು, ತನ್ನ ಅಜ್ಜ ಅಜ್ಜಿಯ ಮನೆಯಲ್ಲಿ ತನ್ನ ತಂದೆ ತಾಯಿ ಬಿಟ್ಟು ಇರಲು ಮನಸ್ಸು ಇಲ್ಲದೇ ನನಗೆ ಕರೆದುಕೊಂಡು ಹೋಗಿರಿ ಅಂತ ಅನ್ನುತ್ತ ಅಳುವುದು ಕರೆಯುವದು ಮಾಡುತ್ತ ಇದ್ದವನು ಅದನ್ನೇ ಮನಸಿಗೆ ಹಚ್ಚಿಕೊಂಡು ತನ್ನ ಜೀವನದಲ್ಲಿ ಬೇಸರಗೊಂಡು ದಿ: 09/09/2019 ರಂದು ಮುಂಜಾನೆ 08.00 ಗಂಟೆಯಿಂದ ಸಾಯಂಕಾಲ 06.15 ಗಂಟೆಯ ನಡುವಿನ ಅವಧಿಯಲ್ಲಿ ತಾನಾಗಿಯೇ ಮುಕ್ಕಲ್ಲದ ತನ್ನ ಅಜ್ಜಿಯ ಮನೆಯ ಅಡುಗೆ ಮನೆಯ ಜಂತಿಗೆ ಲುಂಗಿ ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಂದೆ ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿ ನಂ 56/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.