ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, September 11, 2019

CRIME INCIDENTS 11-09-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-09-2019 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬಳ್ಳೂರ ಗ್ರಾಮದ  ಆರೋಪಿತನಾದ ಶಿವಾನಂದ ತಂದೆ ಹೂವಪ್ಪ ಚುಂಚನೂರ ವಯಾ 35 ವರ್ಷ ಜಾತಿ ಹಿಂದು ಕ್ಷೇತ್ರೀಯ ಉದ್ಯೋಗ ಕೂಲಿ ಕೆಲಸ ಸಾ:ಬಳ್ಳೂರ ಇತನು ದಿನಾಂಕ 11-09-2019 ರಂದು 13-00 ಗಂಟೆಯ ಸುಮಾರಿಗೆ ಬಳ್ಳೂರ ಗ್ರಾಮದ ಬಸ್ಡಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ಬಿಳಿ ಗೊಬ್ಬರ ಚೀಲದಲ್ಲಿ ಒಟ್ಟು 36 ಹೈವರ್ಡ್ಸ ವಿಸ್ಕೀ ತುಂಬಿದ 90 ಎಮ್ ಎಲ್ ಅಳತೆಯ ಮದ್ಯೆದ ಟೆಟ್ರಾ ಪಾಕೀಟಗಳನ್ನು ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಮಾರಾಟ ಮಾಡುತ್ತಿದ್ದು ಅವನಿಂದ ಅಕಿ:1091/ಮೌಲ್ಯದ ಮಧ್ಯೆವನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 118/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದುಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 11/09/2019 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಹುಬ್ಬಳ್ಳಿ-ನವಲಗುಂದ ರಸ್ತೆಯ ಮೇಲೆ, ಕಿರೇಸೂರ ಹದ್ದಿಯ ಸಿದ್ದಪ್ಪ ಬಡಿಗೇರಿ ಸಾಃ ಕಿರೇಸೂರ ಇವರ ಹೋಲದ ಹತ್ತಿರ, KSRTC ಬಸ್ ನಂಃ KA-29-F-1475 ನೇದ್ದರ ಚಾಲಕನಾದ ಪಾಂಡಪ್ಪ ಶ್ಯಾಸಪ್ಪ ತಳವಾರ ಸಾಃ ಮುಡಪಲಜೀವಿ. ತಾಃಜಿಃ ಬಾಗಲಕೋಟ ಇವನು ತಾನು ನಡೆಸುತ್ತಿದ್ದ ಬಸ್ಸನ್ನು ಹೆಬಸೂರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀಜೋರಿನಿಂದ ಅಜಾಗರೂಕತೆಯಿಂದ ಮತ್ತು ಮಾನವೀಯ ಪ್ರಾಣಕ್ಕೆ ಅಪಾಯಕರ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಇದರಲ್ಲಿಯ ಮೃತ ಗುರುಸಿದ್ದಪ್ಪ ನಿಂಗಪ್ಪ ಹರ್ತಿ ವಯಾಃ 52 ವರ್ಷ. ಸಾಃ ಹೆಬಸೂರ ಇವನು ಹೆಬಸೂರ ಕಡೆಯಿಂದ ಕುಸುಗಲ್ಲ ಕಡೆಗೆ ನಡೆಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲ್ ನಂಃ KA-35-Y-2717 ನೇದ್ದನ್ನು ಓವರ್ ಟೇಕ್ ಮಾಡಲು ಹೋಗಿ , ಮೋಟಾರ ಸೈಕಲ್ಲಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸದರಿ ಮೋಟಾರ ಸೈಕಲ್ಲ ಸವಾರನ ತಲೆಯ ಮೇಲೆ ಬಸ್ಸಿನ ಹಿಂದಿನ ಗಾಲಿಯನ್ನು ಹಾಯಿಸಿ ಇವನಿಗೆ ಸ್ಥಳದಲ್ಲಿಯೇ ಮರಣ ಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 145/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.