ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, September 7, 2019

CRIME INCIDETNS 07-09-2019ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-09-2019 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡ  ಗ್ರಾಮದ  ಮೃತ  ಬಸವರಾಜ ತಂದೆ ಬಾಲಪ್ಪ ತುರಮಂದಿ ವಯಾ 28 ವರ್ಷ ಜಾತಿ ಹಿಂದು ವಾಲ್ಮೀಕಿ ಉದ್ಯೋಗ ಕೂಲಿ ಕೆಲಸ ಸಾ:ಅಳಗವಾಡಿ ಇತನು ದಿನಾಂಕ 07-09-2019 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ನಳದ ನೀರು ಬಂದಾಗ ಕರೆಂಟ ಮೋಟರ ಹಚ್ಚಿ ನೀರು ತುಂಬುವಾಗ ಕರೆಂಟ್ ಮಶೀನದಲ್ಲಿನ ವಾಯರ ಆಕಸ್ಮಾತಾಗಿ ಎಡಗೈ ಹೆಬ್ಬರಳು ಮತ್ತು ತೋರಬೆರಳಿಗೆ ತಗುಲಿ ವಿದ್ಯೂತ್ ಶಾಖ್ ಹೊಡೆದು ಅಸ್ವಸ್ಥನಾಗಿ ಉಪಚಾರಕ್ಕೆ ನವಲಗುಂದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗ ಮದ್ಯೆದಲ್ಲಿ ಮೃತ ಪಟ್ಟಿದ್ದು ಇರುತ್ತದೆ ವಿನಃ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು  ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 39/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿಲ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಮ್ಮಿಗಟ್ಟಿ ಗ್ರಾಮದ ಮೃತಳಾದ ಗಂಗವ್ವ ಗಂಡ ಬಸಪ್ಪ ಬೆಂಗೇರಿ ವಯಾ: 55 ವರ್ಷ ಸಾ: ಬಮ್ಮಿಗಟ್ಟಿ ಇವಳು ಈ ದಿವಸ ದಿನಾಂಕ; 07/09/2019 ರಂದು ಮುಂಜಾನೆ 10.20 ಗಂಟೆ ಸುಮಾರಿಗೆ ಬಮ್ಮಿಗಟ್ಟಿಯ ಹುಡೇದ ಬಾವಿಗೆ ನೀರು ಸೇದಿಕೊಂಡು ತರಲು ಹೋಗಿ ಬಾವಿಯ ಕಟ್ಟೆಯ ಹತ್ತಿರ ನಿಂತು ಬಾವಿಯಲ್ಲಿ ಕೊಡವನ್ನು ಬಿಟ್ಟು ನೀರು ಜಗ್ಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ಕಟ್ಟೆಯ ಮೇಲಿಂದ ನೀರಿನಲ್ಲಿ ಬಿದ್ದು ನೀರು ಕುಡಿದು ಮುಳುಗುವದು ಏಳುವದು ಮಾಡುತ್ತಿದ್ದವಳಿಗೆ ನೋಡಿದವರು ಕೂಡಿ ಅವಳಿಗೆ ನೀರಿನಿಂದ ಹೊರಗೆ ತೆಗೆದು ಉಪಚಾರ ಮಾಡಿದರೂ ಕೂಡ ಮುಂಜಾನೆ 10.30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತ ಮೃತಳ ಗಂಡ ವರದಿ ಕೊಟ್ಟಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 55/2019 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.