ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ
WELCOME TO DHARWAD DISTRICT POLICE BLOG

Thursday, October 31, 2019

CRIME INCIDENTS 31-10-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-10-2019 ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕಃ 31-10-2019 ರಂದು ಬೆಳಗಿನ ಜಾವ 01-30 ಗಂಟೇಯ ಸುಮಾರಿಗೆ ಅಂಬೋಳ್ಳಿ ಗ್ರಾಮದ ಶ್ರೀ ಕರೆಮ್ಮನ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಬೀದಿ ಲೈಟಿನ ಬೆಳಕಿನಲ್ಲಿ ಇದರಲ್ಲಿಯ ಆರೋಪಿತರಾದ 1) ಮಡಿವಾಳಿ ತಂದೆ ಹನಮಂತಪ್ಪಾ ತಾಂಬೆ, 2) ನನ್ನೆಸಾಬ ತಂದೆ ಮೌಲಾಸಾಬ ಮುಲ್ಲಾ, 3) ಮಂಜುನಾಥ ತಂದೆ ಉಳವಪ್ಪಾ ಮಾದಪ್ಪನವರ, ಹಾಗೂ 4)  ಯಾಸೀನ ತಂದೆ ಹಸನಸಾಬ ಧಾರವಾಡಕರ, ಎಲ್ಲರೂ ಸಾ ಃ ಅಂಬೋಳ್ಳಿ ತಾಃ ಅಳ್ನಾವರ ಜಿ ಃ ಧಾರವಾಡ  ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್ - ಬಾಹರ್ '' ಎಂಬ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 950-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 90/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 31-10-2019 ರಂದು 2-10 ಗಂಟೆಗೆ ಮುಮ್ಮಿಗಟ್ಟಿ ಗ್ರಾಮದ ಬಸಸ್ಟ್ಯಾಂಡ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಇದರಲ್ಲಿ ಆರೋಪಿತರಾದ ಈಶ್ವರ ಮಡಿವಾಳರ ಹಾಗೂ ಇನ್ನೂ 15 ಜನರು  ತಮ್ಮ ತಮ್ಮ ಸ್ವಂತ ಫಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಜೂಜಾಟವನ್ನು ಸಿಕ್ಕಿದ್ದು, 2 ಜನ ಆರೋಪಿತರು ಪರಾರಿಯಾಗಿದ್ದು  ಅವರಿಂದ ರೂ 13.300-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 127/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Wednesday, October 30, 2019

CRIME INCIDENTS 30-10-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-10-2019 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮೃತನಾದ ಮಂಜುನಾಥ ಯಲ್ಲಪ್ಪ ಭೋವಿ ವಯಾ 35 ವರ್ಷ ಸಾ: ಅಮ್ಮಿನಭಾವಿ ತಾ:ಜಿ:ಧಾರವಾಡ ಇತನು ದಿನಾಂಕ: 29-10-2019 ರಂದು 22-00 ಗಂಟೆಯಿಂದ ದಿ:30-10-2019 ಮುಂಜಾನೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಅಮ್ಮಿನಭಾವಿ ಗ್ರಾಮದ ತನ್ನ ಮನೆಯಲ್ಲಿ ತನ್ನ ಮನೆತನದ ವಿಷಯವಾಗಿ ಹಾಗೂ ಕಲಘಟಗಿ ರೋಡದಲ್ಲಿರುವ ಜನ ಕಲ್ಯಾಣ ಬ್ಯಾಂಕನಲ್ಲಿ 60000/-ರೂಪಾಯಿ ಸಾಲ ಇದ್ದ ಬಗ್ಗೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ಮನೆಯ ಕಬ್ಬಿಣದ ಬೆಲಗಿಗೆ ಪತ್ತಲದಿಂದ ಉರಲು ಹಾಕಿಕೊಂಡು ಸತ್ತಿದ್ದು ಅದೆ ವಿನಃ ಸದರರಿಯವನ ಮರಣದಲ್ಲಿ ಬೇರೆ ಎನು ಸಂಶಯ ವಗೈರ ಇರುವುದಿಲ್ಲಾ ಅಂತಾ ಸಂಗೀತಾ ಬೋವಿ  ವರದಿಯನ್ನು ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 60/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, October 29, 2019

CRIME INCIDENTS 29-10-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-10-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 29-10-2019 ರಂದು 12-15 ಗಂಟೆಗೆ ಎನ್.ಎಚ್-4 ಪಿ.ಬಿ ರಸ್ತೆಯ ಮೇಲೆ ವೆಂಕಟಾಪೂರ ಗ್ರಾಮದ ಹತ್ತಿರ ಇದರಲ್ಲಿ ಆರೋಪಿತನಾದ ವಿನಾಯಕ ವೆಂಕಟೇಶ ಕುಲಕರ್ಣಿ. ಸಾ: ಧಾರವಾಡ ಈತನು ಕಾರ ನಂ ಕೆ.ಎ-25/ಎಮ್.ಬಿ-7167 ನೇದ್ದನ್ನು ಧಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಅತೀ ವೇಗ ವ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ದಾರವಾಡ ಕಡೆಯಿಂದ ಬೆಳಗಾವಿ ಕಡೆಗೆ ಹೊರಟ ಪಿರ್ಯಾದಿ ಮೋಟಾರ ಸೈಕಲ್ ನಂ ಕೆ.ಎ-25/ಇ.ಝಡ್-5634 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾದಿಗೆ ಸಾದಾ ಗಾಯಪಡಿಸಿದ್ದಲ್ಲದೇ ಪಿರ್ಯಾದಿ ಮೋಟಾರ ಸೈಕಲ್ ಹಿಂದೆ ಕುಳಿತ ಆಸ್ಮಾ ಕೋಂ ಜುನೇದ ಮನಿಯಾರ ಇವಳಿಗೆ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2019 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, October 28, 2019

CRIME INCIDENTS 28-10-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-10-2019 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ:ದಿನಾಂಕ 28-10-2019 ರಂದು ಬೆಳಗಿನ 2-00 ಗಂಟೆ ಸುಮಾರಿಗೆ ಬಾಡ ಗ್ರಾಮದ ತಡಕೋಡ ಪೆಟ್ರೋಲ ಬಂಕ ಹತ್ತಿರ ಸಾರ್ವಜನಿಕ ಖೂಲ್ಲಾ ಜ್ಯಾಗೆಯಲ್ಲಿ ಆರೋಪಿತರಾದ ದಾಯಪ್ಪ ಮಾದನಬಾವಿ ಮಂಜುನಾಥ ಬಡಗೇರ ಹಾಗೂ ಇನ್ನೂ 02 ಜನರು ಸೇರಿಕೊಂಡು ತಮ್ಮ ತಮ್ಮ ಪಾಯಿದೆಗೋಸ್ಕರ 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬುವ ಜೂಜಾಟ ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ  ರೂ.6300 ರೂ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 180/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಧಾರವಾಡ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಸಂಗಮೇಶ ಬಸರಿಕೊಪ್ಪ ಇವರ ಮಗಳಾದ ಸೌಭಾಗ್ಯ ತಂದೆ ಸಂಗಮೇಶ ಬಸರಿಕೊಪ್ಪ, ವಯಾ 19 ವರ್ಷ, ಜಾತಿ ಹಿಂದು ವಾಲ್ಮೀಕಿ, ಸಾ:ದುಮ್ಮವಾಡ ಇವಳು, ತನ್ನ ಅತ್ತೆಯಾದ ಅನುಸೂಯಾ ಕೋಂ ಮಹಾದೇವಪ್ಪಾ ನಾಯಕ, ಸಾ:ದೇವರಹುಬ್ಬಳ್ಳಿ ಇವರ ಮನೆಯಿಂದ, ಮನೆಯಲ್ಲಿ ಮನೆಯ ಜನರೆಲ್ಲ ಮಲಗಿಕೊಂಡಿದ್ದಾಗ ದಿನಾಂಕ:22.10.2019 ರಂದು ಬೆಳಗಿನ ಜಾವ 2-00 ಗಂಟೆ ಸುಮಾರಿಗೆ ಯಾರಿಗೂ ಏನೂ ಹೇಳದೇ ಕೇಳದೇ ಯಾವುದೋ ಕಾರಣಕ್ಕಾಗಿ ಮನೆಯಿಂದ ಎಲ್ಲೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು  ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 44/2019 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಲಘಟಗಿ  ಗ್ರಾಮದ  ಮೃತನಾದ ಮೊಹಮ್ಮದ ಹನೀಫ್ ತಂದೆ ಇಬ್ರಾಹಿಮಸಾಬ ಜಾಲಿಗಾರ ವಯಾ: 45 ವರ್ಷ, ಸಾ: ರಾಗಿಗುಡ್ಡ ಮಲ್ಲಿಕಾರ್ಜುನ ನಗರ ಶಿವಮೊಗ್ಗ ಹಾ:ವ: ಸುಭಾಸ ನಗರ ಮುಂಡಗೋಡ ಇವನು ಸಾರಾಯಿ ಕುಡಿಯುವ ಚಟದವನು ಇದ್ದು, ತನ್ನ ಹೆಂಡತಿಯು ಕಿಡ್ನಿ ತೊಂದರೆಯಿಂದ ತೀರಿಕೊಂಡ ನಂತರ ಅವಳ ಚಿಂತೆಯಲ್ಲಿ ಮತ್ತಷ್ಟು ಹೆಚ್ಚಿಗೆ ಸಾರಾಯಿ ಕುಡಿಯುತ್ತ ಇದ್ದವನು ಮನೆ ಬಿಟ್ಟು ಊರೂರು ಅಲೆಯುತ್ತ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಕುಡಿಯುತ್ತ ಇದ್ದು ದಿ: 15/09/2019 ರಂದು ಮದ್ಯಾಹ್ನ 03.30 ಗಂಟೆ ಸುಮಾರಿಗೆ ರಾಗಿಗುಡ್ಡ ಮಲ್ಲಿಕಾಜರ್ುನ ನಗರ ಶಿವಮೊಗ್ಗದಿಂದ ಕೊಪ್ಪದಲಲ್ಲಿರುವ ತನ್ನ ಮಗಳಿಗೆ ನೋಡಿಕೊಂಡು ಬರಲು ಹೋದವನು ಕುಡಿದ ಅಮಲಿನಲ್ಲಿ ಸುಮಾರು 10 ದಿವಸಗಳ ಹಿಂದೆ ಕಲಘಟಗಿ ಹೊರವಲಯದ ದೇಸಾಯಿಗೌಡ ಜಂಗಳೆಪ್ಪಗೌಡ್ರ ಸಾ: ದಾಸ್ತಿಕೊಪ್ಪ ಇವರ ಕಬ್ಬಿನ ಹೊಲದಲ್ಲಿ ಹೋಗಿ ಮೃತಪಟ್ಟಿದ್ದು ಶವದ ಮೇಲಿನ ಬಟ್ಟೆ ಹಾಗೂ ಅವನ ಎದೆ ಬೆನ್ನು ಹಾಗೂ ಎರಡು ರೆಟ್ಟೆಗಳಿಗೆ ಈ ಮೊದಲು ಆಗಿದ್ದ ಸುಟ್ಟ ಗಾಯಗಳ ಗುರುತಿನಿಂದ ಶವವು ನನ್ನ ಅಣ್ಣನು ಅಂತ ಖಾತ್ರಿಯಾಗಿದ್ದು, ನನ್ನ ಅಣ್ಣನ ಸಾವಿನಲ್ಲಿ ಯಾರ ಮೇಲೆ ಬೇರೆ ಯಾವುದೇ ರೀತಿಯ ಸಂಶಯ ವಗೈರೆ ಏನೂ ಇರುವದಿಲ್ಲಾ ಅಂತ ಮೃತನ ಅಣ್ಣ ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 63/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.  ಧಾರವಾಡ ಗ್ರಾಮೀಣ ಫೊಲೀಸ್ ಠಾಣಾ ವ್ಯಾಪ್ತಿಯ:ಮುಮ್ಮಿಗಟ್ಟಿ ಗ್ರಾಮದ ಮೃತನಾದ  ಫಕ್ಕೀರಪ್ಪ ತಂದೆ ಬರಮಪ್ಪ ರಾಯಾಪುರ ವಯಾ-54 ವರ್ಷ ಜಾತಿ-ಹಿಂದೂ ಕುರುಬ ಉದ್ಯೋಗ-ಶೇತ್ಕಿ ಕೆಲಸ ಸಾ: ಮತ್ತಿಗಟ್ಟಿ ತಾ|| ಕುಂದಗೋಳ ಜಿ||: ಧಾರವಾಡ ಇತನು ದಿನಾಂಕ 28-10-2019 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಮೃತನ ಅಳಿಯನಾದ ಪರಸಪ್ಪ ತಂದೆ ನಾಗಪ್ಪ ಹೆಬ್ಬಳ್ಳಿ ಸಾ|| ಸೋಮಾಪುರ ಇವರ ಹೊಲದಲ್ಲಿ ತನ್ನಅಳಿಯ ಹಾಗೂ ಮಗಳಾದ ರುದ್ರವ್ವ ಇವರೊಂದಿಗೆ ಇದ್ದಾಗ ತನಗಿದ್ದ ಎದೆ ನೋವಿನ ಬಾದೆಯಿಂದ ಹೊಲದಲ್ಲಿ ಮಲಗಿಕೊಂಡಲ್ಲಿಯೆ ಮರಣ ಹೊಂದಿದ್ದು ಅದೆ ವಿನ: ಅವನ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ವರದಿಗಾರನು ಕೊಟ್ಟ ಲಿಖಿತ ವರದಿಯನ್ನು ನೀಡಿದ್ದು ಇರುತ್ತದೆ  ಈ ಕುರಿತು ಧಾರವಾಡ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 59/2019 ಕಲಂ ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, October 26, 2019

CRIME INCIDENTS 26-10-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-10-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಣಕವಾಡ ಗ್ರಾಮದ ಆರೋಪಿತನಾದ ನಿಂಗಪ್ಪ ತಂದೆ ರಾಮಪ್ಪ ಚಲವಾದಿ ವಯಾ-27 ವರ್ಷ, ಜಾತಿ-ಹಿಂದೂ ಚಲವಾದಿ, ಉದ್ಯೋಗ-ಕೂಲಿ ಕೆಲಸ ಸಾ!! ಗುಡಗೇರಿ ಹಾಲಿವಸ್ತಿ ಮಣಕವಾಡ ತಾ!! ಅಣ್ಣಿಗೇರಿ ಈತನು  ದಿನಾಂಕ 26-10-2019 ರಂದು 13-30 ಗಂಟೆಗೆ ಮಣಕವಾಡ ಗ್ರಾಮದ ಬಸ ನಿಲ್ದಾಣ ಮುಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ ಇಲ್ಲದೇ ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಒಟ್ಟು 40 ORIGINAL CHOICE ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು,  ಅಜ್ಮಾಸು ಕಿಮ್ಮತ್ತು 1200=00 ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಮಾರಾಟ ಮಾಡುವಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 71/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:26-10-2019 ರಂದು 04-00 ಗಂಟೆ ಸುಮಾರಿಗೆ ಬೆಲೂರ ವಿಜಯಾ ಬ್ಯಾಂಕದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತುಕೊಂಡು ಬೀದಿ ದ್ವಿಪದ ಬೆಳಕಿನಲ್ಲಿ ಆರೋಪಿತರಾದ ಕೃಷ್ಣಪ್ಪಾ ದಾವಳಗೋಳ ಹಾಗೂ ಇನ್ನೂ 07 ಜನರು ಕೊಡಿ ತಮ್ಮ ತಮ್ಮ ಸ್ವಂತ ಪಾಯ್ದೆಗೊಸ್ಕರ ಇಸ್ಪೇಟ ಎಲೆಗಳ ಸಹಾಯದಿಂದಾ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಅನ್ನುವ ಜೂಜಾಟವನ್ನು ಆಡುತ್ತಿರುವಾಗ ಸಿಕ್ಕಿದ್ದು ಅವರಿಂದ ರೂ 10.850-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2019 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತಡಹಾಳ ಗ್ರಾಮದ ಕಲ್ಲನಗೌಡ ಪಾಟೀಲ  04-04-2019 ರಂದು ಪಿರ್ಯಾದಿದಾರನ ಸಹೋದರನಾದ ಶಿವನಗೌಡ ಪಾಟೀಲ ಈತನು ಜಮೀನ ದಲ್ಲಿ  ದನ ಮೇಯಿಸುತ್ತಾ ಗಿಡದ ಕೆಲಗೆ ಮಲಗಿದ್ದಾಗ ಆರೊಪಿತರರಾದ ಫಕ್ಕಿರವ್ವಾ ಕರೆಮ್ಮಗೌಡರ ಶಿವಕುಮಾರ ತಾವರಗೇರಿ ಸಿದ್ದಣ್ಣಗೌಡ ಕರೆಮ್ಮಗೌಡರ ಇವರು ಏಕಾಏಕಿ  ಬಂದು ಹೊಡಿ ಬಡಿ ಮಾಡಿದ್ದಲ್ಲದೆ ಗಾಯಾಳು ನವಲಗುಂದ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಾಗಿದ್ದಾಗ ಸಹ ಆರೋಪಿತರೆಲ್ಲರೂ ಮಾರಕಾಸ್ತ್ರಗಳಾದ ಕೊಡಲಿ ಕುಡಗೋಲು ಬಡಿಗೆ ತೆಗೆದುಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಹೊಡಿ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 131/2019 ಕಲಂ 323.324.307.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.