ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, November 30, 2019

CRIME INCIDENTS 30-11-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-11-2019 ರಂದು ವರದಿಯಾದ ಪ್ರಕರಣಗಳು
1. ನವಲಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯ:ಹಣಸಿ ಗ್ರಾಮದ ಆರೋಪಿತನಾದ ರಾಘವೇಂದ್ರ ತಂದೆ ನಾಗಪ್ಪ ಪಟಗುಂಡಿ ವಯಾ33 ವರ್ಷ ಜಾತಿ ಹಿಂದು ವಡ್ಡರ ಉದ್ಯೋಗ ಕೂಲಿ ಕೆಲಸ ಸಾ: ನವಲಗುಂದ  ಇತನು ದಿನಾಂಕ 30-11-2019 ರಂದು 10,00 ಗಂಟೆಯ ಸುಮಾರಿಗೆ ಹಣಸಿ ಗ್ರಾಮದ ಬಸ್ಡಾಂಡ ಹತ್ತಿರ  ಸಾರ್ವಜನಿಕ ರಸ್ತಯೆ ಮೇಲೆ ತನ್ನ ಬಾಬಾತ ಮೋಟರ ಸೈಕಲ ನಂಬರ ಕೆ ಎ 25 ಈವಿ 9020 ನೇದ್ದರ ಮೇಲೆ ಅಕ್ರಮವಾಗಿ ಒಂದು ಬಿಳಿ ಗೊಬ್ಬರ ಚೀಲದಲ್ಲಿ 288  ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಅಳತೆಯ ಮದ್ಯೆದ ಸರಾಯಿ ಟೆಟ್ರಾ ಪಾಕೀಟಗಳನ್ನು ಅಕಿ 8732/- ನೇದ್ದವುಗಳನ್ನು ತನ್ನ ಸ್ವಾದಿನದಲ್ಲಿ ಅಕ್ರಮವಾಗಿ ಇಟ್ಟುಕೊಂಡು ಸರಕಾರದ ಬೋಕ್ಕಸಕ್ಕೆ ನಷ್ಠವನ್ನುಂಟು ಮಾಡುವ ಉದ್ದೇಶದಿಂದ ಯಾವುದೆ ಪಾಸು ವ ಪರ್ಮಿಟ ಇಲ್ಲದೆ   ಹಣಸಿ ಗ್ರಾಮಕ್ಕೆ ಮಾರಾಟವನ್ನು ಮಾಡಲು ಅಂತಾ ಸಾಗಟಾ ಮಾಡುತ್ತಿರುವಾಗ ಸಿಕ್ಕಿದು ಸದರಿ 2 ನೇ ಆರೋಪಿತನು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂ  ಪೊಲೀಸ ಠಾಣೆಯಲ್ಲಿ ಗುನ್ನಾನಂ 153/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 26/11/2019 ರಂದು 22-00 ಗಂಟೆ ಸುಮಾರಕ್ಕೆ ಪುನಾ ಬೆಂಗಳೂರ ರಸ್ತೆಯ ಅಗಡಿ ಕ್ರಾಸ್ ಸಮೀಪದ ರಿಲಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ಇದರಲ್ಲಿಯ ಆರೋಪಿತನಾದ ಶೌಕತಲಿ ಫೀರಸಾಬ ನದಾಫ್ ಸಾ. ನೆಗಳೂರ ತಾ. ಹಾವೇರಿ ಇತನು ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ವಾಹನ ನಂಬರ ಕೆಎ-27/ಬಿ-8752 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಗಾಡಿ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಕೆಟ್ಟು ನಿಂತಿದ್ದ ಲಾರಿ ನಂಬರ ಕೆಎ-22/ಎ-6959 ನೇದ್ದರ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಘಾತಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 182/2019 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ;ದಿನಾಂಕ: 27-11-2019 ರಂದು 16-20 ಗಂಟೆಯಿಂದ 17-30 ಗಂಟೆಯ ನಡುವಿನ ಅವದಿಯಲ್ಲಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಹದ್ದಿ, ಹಾರೊ ಬೆಳವಡಿ ಬೆಟಗೇರಿ ರಸ್ತೆಯ ಮಹೇಶ ಯಲ್ಲಪ್ಪ ಅಂಗಡಿ ಸಾ: ಹಾರೊ ಬೆಳವಡಿ ತಾ: ಧಾರವಾಡ ರವರ ಜಮೀನ ಹತ್ತಿರ ರಸ್ತೆಯ ಸೈಡಿಗೆ ನಿಲ್ಲಸಿದ ಪಿರ್ಯಾದಿ ಶಿವಾನಂದ ಈರಪ್ಪ ಪುಂಡಪ್ಪನವರ ವಯಾ 39 ವರ್ಷ ಉದ್ಯೋಗ ಒಕ್ಕಲತನ ಸಾ; ಹಾರೊಬೆಳವಡಿ ತಾ:ಧಾರವಾಡ ರವರ ಬಾಬತ್ತ ಹಿರೊ ಹೊಂಡಾ ಸ್ಪೇಲೆಂಡರ ಮೋಟಾರ ಸೈಕಲ ನಂ: KA-25/EC-2260, ಇಂಜಿನ್ ನಂ: HA10EA89M06591 ಚೆಸ್ಸಿ ನಂ: MBLHA10EE89MO3813 ಅ.ಕಿ: 21000/-ರೂ ನೇದನ್ನು ಯಾರೋ ಕಳ್ಳರು  ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 182/2019 ಕಲಂ 279 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 30-11-2019 ರಂದು ಬೆಳ್ಳಿಗ್ಗೆ 10-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿ ಮೃತ ಗುರುಶಿದ್ದಪ್ಪ ಗದಿಗೆಪ್ಪ ಕಂಬಾರ, ವಯಾ: 45 ವರ್ಷ, ಇತನಿಗೆ ಕುಡಿಯಬೇಡಾ ಹಾಗೂ ಕುಡಿಯಲಿಕ್ಕೆ ತನ್ನ ಬ್ಯಾಂಕ್ ಪಾಸ್ ಬುಕ್ಕನಲ್ಲಿ ಹಣ ತೆಗೆದುಕೊಳ್ಳಲು ಪಾಸ್ ಬುಕ್ ಕೇಳಿದ್ದಕ್ಕೆ ಅದನ್ನು ಕೊಡದೆ ಇರುವುದಕ್ಕೆ ಅದನ್ನೆ ಮಾನಸಿಕ ಮಾಡಿಕೊಂಡು ಯಲಿವಾಳ ಗ್ರಾಮದ ಗುಳ್ಳಮ್ಮನ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಹೆಂಡತಿ ವರದಿ ಕೊಟ್ಟಿದ್ದು  ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಯುಡಿನಂ 36/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ:ಶಿವಳ್ಳಿ ಗ್ರಾಮದ  ಮೃತನಾದ ಕೇದಾರಿ ತಂದೆ ನರಸಪ್ಪ ಕದಮ  ವಯಾ 24 ಉದ್ಯೋಗ ಮನೆ ಕೆಲಸ ಜ್ಯಾತಿ ಹಿಂದೂ ಮರಾಠಾ ಸಾ: ಶಿವಳ್ಳಿ ತಾ|| ಜಿ|| ದಾರವಾಡ ಈತನು ತನ್ನ ಮಾನಸಿಕತೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ದಿನಾಂಕ ದಿನಾಂಕ 30-11-2019 ರಂದು ಮುಂಜಾನೆ 10-00 ಗಂಟೆಯಿಂದ 14-00 ಗಂಟೆ ನಡುವಿನ ಅವದಿಯಲ್ಲಿ ತನ್ನ ಮನೆಯಲ್ಲಿನ ಹಾಲದಲ್ಲಿರುವ ಕಬ್ಬಿಣದ ಜಂತಿಗೆ ಪತ್ತಲದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನ: ಅವಳ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ವರದಿಗಾರನು ಕೊಟ್ಟ ಲಿಖೀತ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಯುಡಿನಂ 66/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, November 25, 2019

CRIME INCIDENTS 25-11-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-11-2019 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ  ಪೊಲೀಸ್‌ ಠಾಣಾ ವ್ಯಾಪ್ತಿಯ: ದಿನಾಂಕ: 25-11-2019 ರಂದು 1800 ಗಂಟೆಗೆ ಕುಂದಗೋಳ ಶಹರದ ರೇಲ್ವೆ ಸ್ಟೇಷನ್ ಹತ್ತಿರ ಸಾರ್ವಜನಿಕ ರಸ್ತೆಯ ಬದಿಗೆ ಇದರಲ್ಲಿ ಆರೋಪಿತನಾದ ಮಾಬೂಲಿ ತಂದೆ ನನ್ನೆಸಾಬ ಮುಲ್ಲಾನವರ, ವಯಾ: 28 ವರ್ಷ, ಜಾತಿ: ಮುಸ್ಲಿಂ, ಉದ್ಯೋಗ: ಎಗ್ಗರೈಸ್ ಅಂಗಡಿ, ಸಾ: ಕಾಳಿದಾಸನಗರ, ಕುಂದಗೋಳ, ತಾ: ಕುಂದಗೋಳ ಇವನು ತನ್ನ ಪಾಯ್ದೆಗೋಸ್ಕರ ಓ.ಸಿ ಅಂಕಿಸಂಖ್ಯೆಗಳ ಮೇಲೆ ಹಣವನ್ನು ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕ ಅಪರಾಧ. ಈ ಕುರಿತು  ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 115-2019  ಕಲಂ KARNATAKA POLICE ACT, 1963 (U/s-78(III))ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ: ದಿನಾಂಕಃ 24/11/2019 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಇದರಲ್ಲಿಯ ಪಿರ್ಯಾಧಿ ಮತ್ತು ಆತನ ಮನೆಯ ಜನರು ಸೇರಿ ತಮ್ಮ ಜಮೀನು ರಿ.ಸ.ನಂ. 470 ನೇದ್ದರಲ್ಲಿ ಕೆಲಸ ಮಾಡುತ್ತಿದ್ದಾಗ. ಇದರಲ್ಲಿಯ ಆರೋಪಿತರೆಲ್ಲರೂ ಸೇರಿ ಸಂಗನಮತ ಮಾಡಿಕೊಂಡು ಹಲ್ಕಟ್ ಹಲ್ಕಟ್ ಬೈಯುತ್ತಾ.ಸದರಿ ಜಮೀನಿಗೆ ಬಂದವರೇ ಈ ಜಮೀನು ನಮ್ಮದು ನೀವು ಹೊರೆಗೆ ನಡೆಯಿರಿ ಅಂತಾ ಪಿರ್ಯಾಧಿಗೆ ಮತ್ತು ಆತನ ಮನೆಯ ಜನರಿಗೆ ಹಲ್ಕಟ್ ಹಲ್ಕಟ್ ಬೈದಾಡುತ್ತಾ  ಜಗಳ ತೆಗೆದು ಹುಸೇನಖಾನ ತಂದೆ ಅಲ್ಲಾವುದ್ದಿನಖಾನ ಜಮಖಾನವಾಲೆ ಇವರ ಮಗನೊಬ್ಬ ಪಿರ್ಯಾಧಿಗೆ ಕೈಯಿಂದ ಹೊಡೆಯುತ್ತಾ  ಎತ್ತಿ ಒಗೆದಿದ್ದು, ಬಿಡಿಸಲು ಹೋದ ಪಿರ್ಯಾಧಿ ಹೆಂಡತಿಗೆ   ಸಹ ಸದರಿ ಹುಸೇನಖಾನ ತಂದೆ ಅಲ್ಲಾವುದ್ದಿನಖಾನ ಜಮಖಾನವಾಲೆ ಇವನ ಇನ್ನೋಬ್ಬ ಮಗನು  ಆಕೆಯ ಜಂಪರ ಹಿಡಿದು ಆಕೆಗೆ ಏ ಹಡಸು ಈ ಹೋಲ ಬಿಟ್ಟು ನಡಿ ಅಂತಾ ಜಗ್ಗಿ ಒಗೆದು ಆಕೆಯ ಜಂಪರ ಹರಿದಿದ್ದು  ಉಳಿದ ಆರೋಪಿತರು ಪಿರ್ಯಾಧಿ ಮತ್ತು ಆತನ ಮನೆಯ ಜನರಿಗೆ ಹಲ್ಕಟ್ ಹಲ್ಕಟ್ ಬೈದಾಡುತ್ತಾ ದುಗಿಸುತ್ತಾ ಕೈಯಿಂದ ಹೊಡಿ ಬಡಿ ಮಾಡಿ್ದ್ದು ಅಲ್ಲದೇ ಆರೋಪಿತರೆಲ್ಲರೂ  ಸೇರಿ ಸೂಳೇ ಮಕ್ಕಳ ಇನ್ನೊಮ್ಮೆ ಈ ಜಮೀನಿಗೆ ನೀವು ಬಂದಿದ್ದೆ ಆದರೆ ನಿಮಗೆ ನಾವು ಜೀವ ಸಹಿತ ಉಳಿಸಲ್ಲ ಅಂತಾ ಜೀವದ ಧಮಕಿ ಹಾಕಿದ ಅಪರಾಧ.ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 178/2019 ಕಲಂ IPC 1860 (U/s-354(A),506,147,143,149,504,323)ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ: ದಿನಾಂಕ:12-09-2019 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಕ್ಯಾರಕೊಪ್ಪ ಗ್ರಾಮ ಹದ್ದಿಯ ಪಿರ್ಯಾದಿ ಕವಿತಾ ಚನ್ನಬಸಪ್ಪ ಮಾಳಗಿ ಇವಳ ಹೊಲದಲ್ಲಿ  ಕೆಲಸ ಮಾಡುವಾಗ ಪಿರ್ಯಾದಿಯ ಹೊಲದ ಬಾಜು ಇರುವ ಆಪಾದಿತರಾದ   1) ಆನಂದ ತಂದೆ ಕಾಂತಪ್ಪ ಪಾಟೀಲ ಸಾ|| ದಾರವಾಡ 2) ಪ್ರಶಾಂತ ತಂದೆ ಕಾಂತಪ್ಪ ಪಾಟೀಲ ಸಾ|| ದಾರವಾಡ 3) ಹಾಗೂ ಅವರ ತಾಯಿ ಯು ಇವರೆಲ್ಲರೂ ಸೇರಿ ಪಿರ್ಯಾದಿ ಹತ್ತಿರ ಎಕಾ ಎಕಿ ಬಂದು ನಮ್ಮ ಹೊಲಾ ಬಿಡತೀರೋ ಇಲ್ಲೋ ಮಾದರ ಸೂಳಿ ಅಂತಾ ಜ್ಯಾತಿ ಎತ್ತಿ ಬೈದಾಡಿ ಹೊಲವನ್ನು ಬಿಡಲಿಲ್ಲಾ ಅಂದ್ರ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಧಮಕಿ ಹಾಕಿದ್ದು ಅಲ್ಲದೆ ಹೊಲದಲ್ಲಿದ್ದ ಗಿಡ ಹಾಗೂ ಪೀಕನ್ನು ಲುಕ್ಷಾಣ ಪಡಿಸಿದ ಅಪರಾಧ.  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 208-2019 ಕಲಂ  IPC 1860 (U/s-427,504,506,34); Scheduled Castes and Scheduled Tribes (Prevention of Atrocities) Amendment Ordinance 2014 (U/s-3(1)(r)(s)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, November 24, 2019

CRIME INCIDENTS 24-11-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-11-2019 ರಂದು ವರದಿಯಾದ ಪ್ರಕರಣಗಳು

1. ಸಿಇಎನ್ ಪೊಲೀಸ್‌ ಠಾಣಾ ವ್ಯಾಪ್ತಿಯ: ದಿನಾಂಕ 24/11/2019 ರಂದು 15-00 ಗಂಟೆ ಸುಮಾರಿಗೆ ಶಿರಗುಪ್ಪಿ ಗ್ರಾಮದ ಸ್ಟಾರ ಧಾಬಾ ಎದುರಿಗೆ ರಸ್ತೆಯ ಮೇಲೆ ಆರೋಪಿ ಮುಕ್ತುಂಸಾಬ ತಂದೆ ಇಮಾಮಸಾಬ ಭಾವಾನವರ ಸಾ: ಶಿರಗುಪ್ಪ ಪ್ಲಾಟ್  ತಾ: ಹುಬ್ಬಳ್ಳಿ ಇತನು ತನ್ನ ಸ್ವಂತ ಪಾಯ್ದೆಗೋಸ್ಕರ ಪಾಸು ವ ಪರ್ಮಿಟ್ ಇಲ್ಲದೇ 1) ಓಲ್ಡ ಟಾವರಿನ್ ವಿಸ್ಕಿ ತುಂಬಿದ 180 ಎಂ.ಎಲ್ ದ 10 ಟೇಟ್ರಾ ಪಾಕೇಟ್ ಗಳು ಅ.ಕಿ.741/- ರೂಗಳು 2]  ಬ್ಯಾಗ್ ಪೈಪರ್ ವಿಸ್ಕಿ ತುಂಬಿದ 180 ಎಂ.ಎಲ್ ದ 6 ಟೇಟ್ರಾ ಪಾಕೇಟ ಗಳು ಅ.ಕಿ 541/- ರೂಗಳು 3] ಇಂಪಿರಿಯಲ್ ಬ್ಲ್ಯೂ ವಿಸ್ಕಿ ತುಂಬಿದ 180 ಎಂ.ಎಲ್ 3 ಬಾಟಲ್ ಗಳು ಅ.ಕಿ .486/- ರೂಗಳು ಇವುಗಳ ಒಟ್ಟು 1768/- ರೂಗಳು ಕಿಮ್ಮತ್ತಿನ ಮದ್ಯವನ್ನು ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದಾಗ ಸಿಕ್ಕ ಅಪರಾಧ. ಈ ಕುರಿತು ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 05/2019  ಕಲಂ KARNATAKA EXCISE ACT, 1965 (U/s-32,34) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ: ದಿನಾಂಕ:24-11-2019 ರಂದು ಬೆಳಗಿನ 01-30 ಗಂಟೆಗೆ ಕನಕೂರ ಗ್ರಾಮದ ಬಸ್ಡ್ಯಾಂಡ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ Maruti Hanamantappa Halligeri, Gadideppa Maruti Hulikatti, Rajesab Hajaresab Nadaf, Kashimasab Rmajanasab Nadaf, Basappa Gadigeppa Kallimani, Hajaresab Raimanasab Nadaf, Shrikant Hanamantappa Lakkannavar, Arjun Lakxappa Gayakawad, Shabbir Hasenasab Nadaf, Raimanasab Dastagirasab Nadaf, Dyamanna Fhakkirappa Ranager, Shrikant Nagappa Ronad, Parameswar Namadev Ronad, Devaray Basavantappa Kadam  ಸಾ:  ಎಲ್ಲರೂ ಕನಕೂರ ಇವರೆಲ್ಲರೂ ಕೂಡಿಕೊಂಡು ತಮ್ಮ ತಮ್ಮ ಸ್ವಂತ ಪಾಯ್ದೇಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಕಟ್ಟಿ ಅಂದರ ಬಾಹರ ಅಂಬುವ ಜೂಜಾಟ ಆಡುತ್ತಿರುವಾಗ 1) ರೊಕ ಹಣ 7260/- ರೂ   2) 52 ಇಸ್ಪೀಟ ಎಲೆಗಳು ಅ.ಕಿ:00-00/- ರೂ 3) ಮೇಣದ ಬತ್ತಿಗಳ ಸಮೇತ ಸಿಕ್ಕ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 207/2019 ಕಲಂ 87 kp act ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, November 23, 2019

CRIME INCIDENTS 23-11-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-11-2019 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ  ಪೊಲೀಸ್‌ ಠಾಣಾ ವ್ಯಾಪ್ತಿಯ:ತುಪ್ಪದ ಕುರಹಟ್ಟಿ ಗ್ರಾಮದ ಮಾರುತಿ ರಾಮಪ್ಪ ಚನ್ನದಾಸರ, ವಯಾ 58 ವರ್ಷ ಸಾಃ ತುಪ್ಪದಕುರಹಟ್ಟಿ  ಈತನು ಲಾವಣೀ ತರೀಕ ಸಾಗುವಳಿ ಮಾಡುವ ಜಮೀನದ ಸಲುವಾಗಿ  ಮಾರುತಿ ಚನ್ನದಾಸರ ಈತನು ತಾನು ಲಾವಣಿ ಮಾಡಿರುವ ತುಪ್ಪದಕುರಹಟ್ಟಿ ಗ್ರಾಮದ ನಿಂಗಪ್ಪ ಗಾಣಿಗೇರ ಇವರ ಜಮೀನಕ್ಕೆ ಹೋದಾಗ ಆರೋಪಿತರಾದ 1) ವಿರುಪಾಕ್ಷಪ್ಪ ಶಿವಲಿಂಗಪ್ಪ ಗಾಣಿಗೇರ 2) ಶಂಕ್ರಪ್ಪ ಶಿವಲಿಂಗಪ್ಪ ಗಾಣಿಗೇರ 3) ವಸಂತ ಅಡಿವೆಪ್ಪಗೌಡ ಗದ್ದಿಗೌಡ್ರ 4) ಕುಮಾರ ಅಡಿವೆಪ್ಪಗೌಡ ಗದ್ದಿಗೌಡ್ರ 5) ಸಯ್ಯದಸಾಬ ದಸ್ತಗೀರಸಾಬ ಮುಲ್ಲಾನವರ ಸಾಃ ಎಲ್ಲರೂ ತುಪ್ಪದಕುರಹಟ್ಟಿ ಇವರೆಲ್ಲರೂ ಗೈರ್ ಕಾಯ್ದೇಶೀರ ಚನ್ನದಾಸರ ಜಾತಿಯ ಗೊತ್ತಿದ್ದೂ ಜಮೀನು ಸಾಗುವಳಿಯ ಸಂಬಂದವಾಗಿ ಪಿರ್ಯಾದಿಯ ಗಂಡನಿಗೆ ಜಾತಿ ನಿಂದನೆ ಮಾಡಿ ಕೆಟ್ಟ ಶಬ್ದಗಳಿಂದ ಬೈದಾಡಿದ್ದು ಅಲ್ಲದೇ ದಿನಾಂಕ 20-08-019 ರಂದು ಮುಂಜಾನೆ 06-30 ಗಂಟೆ ನಂತರದಲ್ಲಿ ಪಿರ್ಯಾದಿಯ ಗಂಡನನ್ನು ಯಾವುದೋ ರೀತಿಯಿಂದ ಕೊಲೆ ಮಾಡಿ ಮೃತನ ಶವವನ್ನು ನಾಶ ಪಡಿಸಿರುವ ಸಂಶಯ ಇರುವ ಬಗ್ಗೆ ಪಿರ್ಯಾದಿ ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 81/2019  ಕಲಂ PC 1860 (U/s-302,201,149); Scheduled Castes and Scheduled Tribes (Prevention of Atrocities) Amendment Ordinance 2014 (U/s-3(1) (r),3(1) (s),3(2)(5a)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 19-11-2019 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಸಂಶಿ ಗ್ರಾಮದ  ಸೊಸಾಯಿಸಿ ಪ್ಲಾಟದಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ. ಜಾಸ್ಮೀನ ಕೋಂ ರಿಯಾಜಅಹ್ಮದ ನಾಗರಳ್ಳಿ, ಇವರ ಮನೆಯಿಂದ ಪಿರ್ಯಾದಿಯ ತಂದೆಯಾದ ಶರೀಫಸಾಬ ತಂದೆ ಫಕ್ರುಸಾಬ ಮಳಲಿ, ವಯಾ: 65 ವರ್ಷ, ಜಾತಿ: ಮುಸ್ಲಿಂ, ಉದ್ಯೋಗ: ಬೀಡಿ ಅಂಗಡಿ ವ್ಯಾಪಾರ, ಸಾ: ಸಂಶಿ, ತಾ: ಕುಂದಗೋಳ, ಹಾಲಿ: ಬನ್ನರಘಟ್ಟ ರೋಡ, ಗುಳಕಮಲ್ಲೆ, ಬೆಂಗಳೂರು, ಈತನು ಮನೆಯಿಂದ ಯಾರಿಗೂ ಹೇಳದೇ ಎಲ್ಲಿಯೋ ಹೋದವನು ಇದೂವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ಅವನಿಗೆ ತಪಾಸ ಮಾಡಿಕೊಡುವಂತೆ ಪಿರ್ಯಾದಿದಾರರ ಪಿರ್ಯಾದಿ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 114/2019 ಕಲಂ ಮನುಷ್ಯ  ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ:21/07/2017 ಹಾಗೂ 03/08/2018 ರಂದು ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಆಸ್ತಕಟ್ಟಿ ಮತ್ತು ಮಮದಾಪೂರ ತಾಂಡಾದಲ್ಲಿ  ನಮೂದ ಮಾಡಿದ ಆರೋಪಿತರಾದ 1) ವಿಜಯ ತಂದೆ ಗುರುನಾಥ  ನಾಡಜೋಶಿ, ವಯಾ:60 ವರ್ಷ ಸಾ: ವಿದ್ಯಾನಗರ ಗುರುದತ್ತ ಭವನ ಹುಬ್ಬಳ್ಳಿ 2)ಶ್ರಿನೀಧಿ ತಂದೆ ಗುರುನಾಥ ನಾಡಜೋಶಿ ವಯಾ:30 ವರ್ಷ ಸಾ: ವಿದ್ಯಾನಗರ ಗುರುದತ್ತ ಭವನ ಹುಬ್ಬಳ್ಳಿ 3)ವಿನಾಯಕ ದಿಕ್ಷಿತ್ ವಯಾ:42 ವರ್ಷ ಸಾ: ಅಮ್ಮಿಬಾವಿ ತಾ: ಜಿ: ಧಾರವಾಡ  ಇವರು ಪಿರ್ಯಾದಿಗೆ ಹಾಗೂ ಸಾಕ್ಷಿದಾರರಿಗೆ ಬೆಂಡಲಗಟ್ಟಿ ,ಆಸ್ತಕಟ್ಟಿ ,ಮತ್ತು ತಬಕದ ಹೊನ್ನಳ್ಳಿ ಗ್ರಾಮಗಳ ಹದ್ದಿಯಲ್ಲಿರುವ ಸರಕಾರಿ ವ ಹುಲ್ಲುಗಾವಲ ಗಾಂವಠಾಣ ಜಮೀನ ನ್ನು ಮಂಜೂರು ಮಾಡಿಸಿ ಕೊಡುವುದಾಗಿ ನಂಬಿಸಿ ಪ್ರತಿ ಎಕರೆಗೆ 20,000/- ರೂ. ಗಳ ಖರ್ಚು ಬರುತ್ತದೆ ಅಂತಾ ಒಟ್ಟು 38,50,000/- ರೂ ಗಳನ್ನು ಪಡೆದುಕೊಂಡು ಜಮೀನ ಮಂಜೂರು ಮಾಡಿಸಿ ಕೊಡದೇ ನಂಬಿಕೆ ದ್ರೋಹ ಮಾಡಿ ಬೈದಾಡುತ್ತಾ ಜೀವ ಬೆದರಿಕೆ ಹಾಕಿ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 147/2019 ಕಲಂ 419.420.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ: ಶಿಗಿಗಟ್ಟಿ ಪಿಯರ್ಾದಿದಾರರಾದ ಶ್ರೀ ಬನ್ನಪ್ಪ ತಂದೆ ಬಸಪ್ಪ ದೊಡಮನಿ, 80 ವರ್ಷ, ಲಿಂಗಾಯತ ಜನಾಂಗ, ಕೂಲಿ ಕೆಲಸ, ಸಾ|| ಮುತ್ತಗಿ ಗ್ರಾಮ, ತಾ|| ಕಲಘಟಗಿ ಇವರು ಶಿಗಿಗಟ್ಟಿಯಿಂದ ಮುತ್ತಗಿ ಕಡೆಗೆ ತನಗೆ ಸಂಬಂದಿಸಿದ ದನಕರುಗಳನ್ನು ಹೊಡೆದುಕೊಂಡು ಬರುತ್ತಿರುವಾಗ ಆರೋಪಿತನಾದ ಬಸಪ್ಪ ತಂದೆ ಶಿವಪ್ಪ ಶಿವಳ್ಳಿ, 45 ವರ್ಷ, ಲಿಂಗಾಯತ ಜನಾಂಗ, ಕೂಲಿ ಕೆಲಸ, ಸಾ|| ಮುತ್ತಗಿ ಗ್ರಾಮ, ತಾ|| ಕಲಘಟಗಿ ಈತನು ಕುಡಿದ ಅಮಲಿನಲ್ಲಿ ಪಿಯರ್ಾದಿಯನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಏಕಾಏಕಿಯಾಗಿ ತನ್ನ ಹತ್ತಿರ ಇದ್ದ ಕಟ್ಟಿಗೆಯ ಕೋಲಿನಿಂದ ಪಿಯರ್ಾದಿದಾರರಿಗೆ ಹೊಡೆದು ಅವರ ಹತ್ತಿರ ಇದ್ದ 6,300/- ರೂಗಳನ್ನು ತೆಗೆದುಕೊಮಡು ಹೋಗುತ್ತಿದ್ದಾಗ ನಿನ್ನನ್ನ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 147/2019 ಕಲಂ 323.324.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.