ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, December 31, 2019

CRIME INCIDENTS 31-12-2019


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-12-2019 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ:01/03/2019 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿದಾರಳ ಅಣ್ಣನಾದ ಮಣಬಸಪ್ಪ @ ಮಣ್ಣಪ್ಪ ತಂದೆ ಈಶ್ವರಪ್ಪ ದೊಡಮನಿ ವಯಾ:59 ವರ್ಷ ಜಾತಿ ಹಿಂದೂ ಲಿಂಗಾಯತ ಸಾ||ತಬಕದ ಹೊನ್ನಳ್ಳಿ ತಾ||ಕಲಘಟಗಿ  ಇತನು ಮನೆಯಿಂದ ಹೊರಗಡೆ ಹೋದವನು ಮರಳಿ ಈವರೆಗೆ ಮನೆಗೆ  ಬಾರದೇ  ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವನ ಪತ್ತೆ ಮಾಡಿಕೊಡುವಂತೆ ಪಿರ್ಯಾದಿದಾರಲು ಠಾಣೆಗೆ ಹಾಜರಾಗಿ  ಪಿರ್ಯಾದಿ ನೀಡಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 161/2019 ಕಲಂ  ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯ: ಇಬ್ರಾಹಿಂಪೂರ ಗ್ರಾಮದ ಅಪರಿಚಿತ ಗಂಡಸಿನ ಶವವು 30 ರಿಂದ 35 ವರ್ಷ ಇಬ್ರಾಹಿಂಪೂರ ಹದ್ದಿಯ ಚಿಪ್ಪಾಡಿ ಇವರ ಜಮೀನ ಹತ್ತಿರ ಇರುವ ಕಾಲುವೆ ನೀರಿನಲ್ಲಿ ತೇಲಿಕೊಂಡು ಬಂದು ಕಿನಾಲ ಮದ್ಯದಲ್ಲಿ ಪಾಚಿ ಹುಲ್ಲಿನ ಮಧ್ಯದಲ್ಲಿ ಸಿಕ್ಕಿಕೊಂಡು ಜಲಚರ ಪ್ರಾಣಿಗಳು ತಿಂದಂತೆ ಆಗಿ ಮೃತನ ಶವವು ಪೂರ್ತಿ ಕೊಳೆತು ಡಿ ಕಂಪೊಜ ಆಗಿದ್ದು ಅದೆ ಅಂತಾ ಪಿರ್ಯಾದಿದಾರನು ತನ್ನ ವರದಿಯಲ್ಲಿ ನಮೂದಿಸಿದ್ದು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್‌ ಠಾಣೆಯಲ್ಲಿ ಯುಡಿನಂ 62/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯ:ನವಲಗುಂದ  ಗ್ರಾಮದ ಯಾರೋ 8-10 ಜನರು ದಿನಾಂಕ: 28-12-2019 ರಂದು 18-00 ಗಂಟೆಗೆ ನವಲಗುಂದದ ಬಸವೇಶ್ವರ ನಗರದಲ್ಲಿ ಗಾಯಾಳು ಪಕ್ರುಸಾಬ ಮಾಬುಸಾಬ ನಧಾಪ್ ವಯಾ 50 ವರ್ಷ ಈತನು ದಿನಾಂಕ: 28-12-2019 ರಂದು 15-00 ಗಂಟೆಗೆ ಅಲ್ಪವಯಿ ಬಾಲಕಿ ನೇತ್ರಾ ವಡ್ಡರ ಇವಳ ಮೇಲೆ ಲೈಂಗಿಕ ಹಲ್ಲೆ ಮಾಡಿದ ಸಿಟ್ಟಿನಿಂದ ಪಕ್ರುಸಾಬನಿಗೆ ಲೈಟಿನ ಕಂಬಕ್ಕೆ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹಾಗೂ ಕೋಲಿನಿಂದ ಹೊಡಿಬಡಿ ಮಾಡಿದ್ದು ಇರುತ್ತದೆ  ಈ ಕುರಿತು  ನವಲಗುಂದ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 165/219 ಕಲಂ 143.147.148.342.323.324.504.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Monday, December 30, 2019

CRIME INCIDENTS 30-12-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-12-2019 ರಂದು ವರದಿಯಾದ ಪ್ರಕರಣಗಳು

1. ಗುಡಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ 29-12-2019 ರಂದು  ಸಂಜೆ 6-30 ಗಂಟೆಗೆ ಲಕ್ಷ್ಮೇಶ್ವರ ಹುಬ್ಬಳ್ಳಿ ರಸ್ತೆಯ ಮೇಲೆ ಪಶುಪತಿಹಾಳ ಗ್ರಾಮದ ವಿಜಯಕ್ಕಾ ಮೂಖನವರ ಇವರ ಜಮೀನ ಹತ್ತಿರ ಮೋಟರ್ ಸೈಕಲ್ ನಂಬರ ಕೆ.ಎ 63/ ಜೆ 4616 ನೇದ್ದನ್ನು ಲಕ್ಷ್ಮೇಶ್ವರ ರಸ್ತೆ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು  ಸ್ಕಿಡ್ಡಾಗಿ ಬಿದ್ದು ಮೋಟರ್ ಸೈಕಲ್ ನಡೆಸುತ್ತಿದ್ದ ಕಿರಣ ಬಸವಂತಪ್ಪ ಬಡಿಗೇರ ಸಾ: ಸಂಶಿ ಈತನು ತನ್ನ ತಲೆಗೆ ಮೈಕೈಗೆ ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ  ಮೋಟರ್ ಸೈಕಲ್ ಹಿಂದೆ ಕುಳಿತ ಅಭಿಷೇಕ ತಂದೆ ಮೋಹನರಾವ ಪಡತರೆ ಸಾ: ಸಂಶಿ ಈತನು ತಲೆಗೆ ಮೈ ಕೈಗೆ ಭಾರಿ ಗಾಯಹೊಂದಿ  ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹೋಗುವಾಗ ಮಾರ್ಗಮದ್ಯದಲ್ಲಿ  ಮರಣಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 61/2019 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ  ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 29/12/2019 ರಂದು 22-00 ಗಂಟೆ ಸುಮಾರಕ್ಕೆ ನೂಲ್ವೀ ಗ್ರಾಮದ ಇದರಲ್ಲಿಯ ಪಿರ್ಯಾಧಿ ಸಿದ್ದನಗೌಡ ಕಂಟೆಪ್ಪಗೌಡ ಕಲ್ಲನಗೌಡ್ರ ಇವರ ಮನೆಯ ಮುಂದೆ ಆಸ್ತಿ ಸಂಬಂಧ ಆರೋಪಿತರಾದ 1) ರತ್ನವ್ವ ಗಂಗನಗೌಡ ಕಲ್ಲನಗೌಡ್ರ 2) ಬಸನಗೌಡ ಗಂಗನಗೌಡ ಕಲ್ಲನಗೌಡ್ರ 3) ಈಶ್ವರಗೌಡ ಗಂಗನಗೌಡ ಕಲ್ಲನಗೌಡ್ರ 4) ಮಲ್ಲವ್ವ ಸುರೇಶ ವೈದ್ಯ 5) ರಾಮನಗೌಡ ನಿಂಗನಗೌಡ ಕಲ್ಲನಗೌಡ್ರ 6) ಯಲ್ಲವ್ವ ರಾಮನಗೌಡ ಕಲ್ಲನಗೌಡ್ರ 7) ಚನ್ನವ್ವ ಚನ್ನಬಸಗೌಡ ಕಲ್ಲನಗೌಡ್ರ ಎಲ್ಲರೂ ಸಾ. ನೂಲ್ವೀ ಇವರುಗಳು ಕೂಡಿಕೊಂಡು ಬಂದು ಪಿರ್ಯಾಧಿಗೆ ಹಾಗೂ ಪಿರ್ಯಾಧಿ ಮನೆಯ ಜನರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 203/2019 ಕಲಂ 506.504.149 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ:30-12-2019 ರಂದು ಮುಂಜಾನೆ 07-30 ಗಂಟೆ ಸುಮಾರಿಗೆ ಧಾರವಾಡ ಹುಬ್ಬಳ್ಳಿ ಬೈಪಾಸ ರಸ್ತೆಯ ಯರಿಕೊಪ್ಪ ಸಮೀಪ ಕಾಲವಾಡ ಇಟ್ಟಂಗಿ ಬಟ್ಟಿ ಹತ್ತಿರ, ಟ್ಯಾಂಕರ ಲಾರಿ ನಂ: MH-11/AL-6687 ನೇದರ ಚಾಲಕ ಮುರಳಿಧರ ಬಾಬುರಾವ ನಿಗಡೆ ವಯಾ 52 ವರ್ಷ ಜಾತಿ ಹಿಂದೂ  ಉದ್ಯೋಗ ಚಾಲಕ ಕೆಲಸ ಸಾ: ಆರಡಗಾಂವ  ಜಿ:ಸತಾರ ರಾಜ್ಯ ಮಹಾರಾಷ್ಟ್ರ ಇತನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಮತ್ತು ಅಜಾಗೃಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು, ಲಾರಿಯ ವೇಗ ನಿಯಂತ್ರಣ ಮಾಡಲಾಗದೇ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಚಲಾಯಿಸಿ ಕೊಂಡು ಹೋಗುತ್ತಿದ್ದ skoda ಕಂಪನಿ Rapid ಕಾರ ನಂ: KA-01/MJ-7702 ನೇದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಅಪಘಾತದಲ್ಲಿ ಕಾರ ಚಾಲಕ ಮಹಾದೇಪ್ಪ ಮಧು ತಂದೆ ಪುಟ್ಟಪ್ಪ ವಯಾ 42 ವರ್ಷ ಜಾತಿ ಹಿಂದೂ ಉದ್ಯೋಗ ಡಿಸ್ಟ್ರಿಬೋಟರ ಸಾ: ಎಫ್ 3 ವಿಶಾಲ ಮನೊರ 2 ಕ್ರಾಸ್ ಎಮ್ ಎಲ್ ಎ ಲೇಔಟ ಡಾಲರ್ಸ ಕಾಲೋನಿ ನ್ಯೂ ಬೆಲ್ ರೋಡ ಆರ್ ಎಮ್ ವಿ 2 ಸ್ಟೇಜ ಬೆಂಗಳೂರ ಹಾಲಿ ರೇಣುಕಾ ನಗರ ಗೋಕುಲ ರೋಡ ಹುಬ್ಬಳ್ಳಿ ಹಾಗೂ ಕಾರನಲ್ಲಿದ್ದ ಮಮತಾ ಕೊಂ ಸುನೀಲಕುಮಾರ ವಯಾ 41 ವರ್ಷ ಸಾ: ನಂ: 171/1 6 ಕ್ರಾಸ 8 ಮೇನ್ ಮಲ್ಲೇಶ್ವರ ಬೆಂಗಳೂರ-560003. ನೇದರವರಿಗೆ ಮಾರಣಾಂತಿಕ ಗಾಯ ಪಡಿಸಿ ಸ್ಥಳದಲ್ಲಿ ಮರಣ ಹೊಂದುವಂತೆ ಮಾಡಿ ತನಗೂ ಸಾದಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 234/2019 ಕಲಂ 279.337.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯ:ಶೆಲವಡಿ ಗ್ರಾಮದ  ಮೃತನಾದ ಅಂದಾನಗೌಡ ತಂದೆ ಶಂಕರಗೌಡ ಪಾಟೀಲ ವಯಾ 60 ವರ್ಷ ಜ್ಯಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ: ಶೆಲವಡಿ ತಾ: ನವಲಗುಂದ ಇತನು ಶೆಲವಡಿ ಗ್ರಾಮದ ಹಸಬಿ ಇವರ ಜಮೀನುದಲ್ಲಿತನ್ನ ಮೇಣಸಿನಕಾಯಿಗಳನ್ನು ಹಾಕಿದ್ದು ಅವುಗಳನ್ನು ಕಾಯಲು ಅಂತಾ ಹೋಗಿ  ರಾತ್ರಿ ಮಲಗಲು ಅಂತಾ ಟ್ರೈಲರ ಹತ್ತುತಿದ್ದಾಗ ಆಕಸ್ಮಾತಾಗಿ ಜೂಲಿ ತಪ್ಪಿ ಮುಖ ಹಚ್ಚಿ ನೆಲಕ್ಕೆ ಬಿದ್ದು  ಗಾಯ ಹೊಂದಿ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಧಾಖಲ ಮಾಡಿದಾಗ ಉಪಚಾರ ಪಲೀಸದೆ ದಿನಾಂಕ 30-12-2019 ರಂದು ಬೆಳಗಿನ 01,25 ಘಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ ವಿನಃ ಸದರಿ ನನ್ನ ಗಂಡನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್‌ ಠಾಣೆಯಲ್ಲಿ ಯುಡಿನಂ 61/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, December 28, 2019

CRIME INCIDENTS 28-12-2019ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-12-2019 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ:28-12-2019 ರಂದು ಬೆಳಗಿನ 04-10 ಗಂಟೆಯ ಸುಮಾರಿಗೆ ಕೊಟೂರ ಗ್ರಾಮದ ಮೌಲಾಲಿ ದರ್ಗಾದ ಹತ್ತಿರ ಸಾರ್ವಜನಿಕ ರಸ್ಗೆಯ ಮೇಲೆ ಆರೋಪಿ ವಿಜಯ ತಂದೆ ವಿನೊದ ಖೊಹೊಲಿ ಸಾಃಬೆಲೂರ ಹಾಗೂ 7 ಜನರ ಕೂಡಿಕೊಂಡು ಬೀದಿ ದೀಪದ ಬೆಳಕಿನಲ್ಲಿ ಇಸ್ಪೆಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಅನ್ನುವ ಜೂಜಾಟವನ್ನು ಆಡುತ್ತಿದ್ದಾಗ 6 ಜನರು ಸಿಕ್ಕಿದ್ದು ಅವರಿಂದ ರೂ 14.300-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.ಹಾಗೂ 2 ಜನರು ಪರಾರಿಯಾಗಿ ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುನ್ನಾನಂ 155/2019 ಕಲಂ  87 ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ 28/12/2019 ರಂದು 09:00 ಗಂಟೆಗೆ ಹುಬ್ಬಳ್ಳಿ ಕಾರವಾರ ರಸ್ತೆಯ ಉಗ್ಗಿನಕೇರಿ ಕ್ರಾಸ ಹತ್ತಿರ ಆರೋಪಿತನಾದ ಯಲ್ಲಪ್ಪ ತಂದೆ ಭರಮಪ್ಪ ರಾಮನಾಳ ವಯಸ್ಸು: 40 ವರ್ಷ ಜಾತಿ: ಹಿಂದೂ (ಲಿಂಗಾಯತ) ಉದ್ಯೋಗ: ಕೂಲಿ ಕೆಲಸ ಸಾ: ಹಿರೇಹೊನ್ನಳ್ಳಿ ತಾ: ಕಲಘಟಗಿ ಈತನು ತನ್ನ ಪಾಯ್ದೆಗೋಸ್ಕರ ಯಾವುದೇ ಪಾಸ್ ವ. ಪರವಾಣಿಗೆಯನ್ನು ಹೊಂದದೇ ಜಪ್ತಾದ ಓರಿಜಿನಲ್ ಚಾಯ್ಸ್ ವಿಸ್ಕಿ 90 ಎಂ.ಎಲ್ ದ 64 ಮದ್ಯದ ಟೆಟ್ರಾ ಪಾಕೀಟಗಳು ಅ.ಕಿ: 1,948/-ರೂ ಕಿಮ್ಮತ್ತಿನವುಗಳನ್ನು ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಕೆಎ 30 / ಕೆ 4511 ನೇದ್ದರಲ್ಲಿ ಸಾಗಾಟ ಮಾಡುತ್ತಿರುವಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ.ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 159/2019 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ 19-12-2019 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 20-12-2019 ರಂದು ಬೆಳಗಿನ 5-00 ಗಂಟೆ ನಡುವಿನ ಅವದಿಯಲ್ಲಿ ಆನಂದ ನಗರದ  ಅರಳಿ ಹೊಂಡದ ಇವರು ಬಾಡಿಗೆ ಇರುವ ಮನೆಯ ಮುಂದೆ ನಿಲ್ಲಿಸಿದ ಬಾಬತ್ತ ಹೊಸ ಹಿರೋ ಸ್ಪ್ಲೆಂಡರ ಮೋಟರ ಸೈಕಲ್ಲ ಇಂಜಿನ ನಂ HA10AGKHL0124 ಚಸ್ಸಿನ ನಂ MBLHAW08XKHL01484 ಅ||ಕಿ|| 30.000/- ರೂ ಕಿಮ್ಮತ್ತಿನ ಮೋಟರ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುನ್ನಾನಂ 233/2019 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, December 27, 2019

CRIME INCIDENTS 27-12-2019

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-12-2019 ರಂದು ವರದಿಯಾದ ಪ್ರಕರಣಗಳು

1.ಕುಂದಗೋಳ ಪೊಲೀಸ್‌ ಠಾಣಾ ದಿನಾಂಕ: 18-12-2019 ರಂದು ಬೆಳ್ಳಿಗ್ಗೆ 10-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಮೃತ ಬಸವರಾಜ ತಂದೆ ಫಕ್ಕೀರಪ್ಪ ಕಳ್ಳಿಮನಿ, ವಯಾ: 42 ವರ್ಷ, ಸಾ: ವಿಠಲಾಪೂರ ಇತನು ತಮ್ಮ ಬಾಬತ್ತ ಹೊಲಕ್ಕೆ ತೊಗರಿ ಬೆಳೆಗೆ ಔಷಧ ಹೊಡೆಯಲು ಹೋದಾಗ ಕೈಯನ್ನು ತೊಳೆಯದೇ ಅದೆ ಕೈಯಿಂದ 3-4 ಸಲ ಎಲೆ-ಅಡಿಕೆ ಹಾಕಿದ್ದರಿಂದ ವಿಷವು ಹೊಟ್ಟೆ ಒಳಗೆ ಹೋಗಿ 3-4 ಸಲ ವಾಂತಿ ಆಗಿ ತ್ರಾಸ್ ಮಾಡಿಕೊಳ್ಳುತ್ತಿದ್ದವನನ್ನು ದಿನಾಂಕ: 18-12-2019 ರಿಂದ ರಾತ್ರಿ 8-45 ಗಂಟೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಲೈಪ್ ಲೈನ್ ಆಸ್ಪತ್ರೆಗೆ ದಾಖಲು ಮಾಡಿದವನು ಉಪಚಾರ ಫಲಿಸದೇ ನಿನ್ನೆ ದಿವಸ ದಿನಾಂಕ: 26-12-2019 ರಂದು ರಾತ್ರಿ 22-55 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಯುಡಿನಂ 41/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯ:ದಿನಾಂಕ: 26-12-2019 ರಂದು 2130 ಗಂಟೆಯಿಂದ, ದಿನಾಂಕ: 27-12-2019 ರ 0030 ಗಂಟೆಯ ನಡುವಿನ ಅವಧಿಯಲ್ಲಿ ವರದಿದಾರನ ಬಾಬತ್ ಮಡಕಿಹೊನ್ನಳ್ಳಿ ಗ್ರಾಮ ಹದ್ದಿಯ ಸರ್ವೇ ನಂ: 103 ನೇ ಹೊಲದಲ್ಲಿರುವ ಬೋರವೆಲ್ ನ್ನು ಚಾಲು ಮಾಡಿ ಬರುತ್ತೇನೆಂದು ಹೇಳಿ ಹೋಗಿದ್ದ ವರದಿದಾರನ ಮಗ ಮಂಜುನಾಥ ಕಲ್ಲಪ್ಪ ತಳವಾರ ವಯಾ: 32 ವರ್ಷ ಜಾತಿ: ಹಿಂದೂ ವಾಲ್ಮೀಕಿ ಉದ್ಯೋಗ: ಶೇತ್ಕಿ ಕೆಲಸ ಸಾ: ಮಡಕಿಹೊನ್ನಳ್ಳಿ ತಾ: ಕಲಘಟಗಿ ಈತನಿಗೆ ಅಕಸ್ಮಾತ್ ಬೋರವೆಲ್ ದ ಕರೆಂಟ್ ಬೋರ್ಡನಿಂದ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾರ ಮೇಲೆಯೂ ಯಾವುದೇ ಸಂಶಯ ವಗೈರೆ ಇರುವುದಿಲ್ಲವೆಂದು ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಯುಡಿನಂ 73/2019 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನು ದಾಖಲಿಸಿದ್ದು ಇರುತ್ತದೆ.