ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, February 27, 2020

CRIME INCIDENTS 26-02-2020

ಧಾರವಾಡ ಜಿಲ್ಲೆಯಲ್ಲಿದಿನಾಂಕ:26-02-2020 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 25-02-2020 ರಂದು 21-00 ಗಂಟೆಗೆ ಗದಗ ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಸಮೀಪದ ಸವಳ ಹಳ್ಳ ಬ್ರಿಡ್ಜ ರಸ್ತೆಯ ಮೇಲೆ ಆರೋಪಿತ ಪುಂಡಲೀಕ ತಂದೆ ಮಹಾದೇವಪ್ಪ ಮಾದರ, ವಯಾ 24 ವರ್ಷ ಸಾಃ ಮುರಕಟ್ಟಿ ತಾಃ ಜಿಃ ಧಾರವಾಡ ಈತನು ತಾನು ಚಲಾಯಿಸುತ್ತಿದ್ದ ಕಾರ್ ನಂಬರ್ KA-25/AA 8305 ನೇದ್ದನ್ನು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮುಂದೆ ಹೊರಟ ಬೇರೆ ವಾಹನವನ್ನು ಓವರ್ ಟೇಕಕ್ ಮಾಡಿಕೊಂಡು ಕಾರನ್ನು ರಸ್ತೆಯ ಬಲಸೈಡಿನಲ್ಲಿ ಚಾಲನೆ ಮಾಡಿಕೊಂಡು ಬಂದು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ರಸ್ತೆಯ ಎಡ ಸೈಡಿನಲ್ಲಿ ಗಾಯಾಳು ಸಲೀಮ ತಂದೆ ಮಲಂಗಸಾಬ ಯಲಿಗಾರ @ ಕಲಾದಗಿ ವಯಾ 24 ವರ್ಷ  ಸಾಃ ಗದಗ ಈತನು ಚಾಲನೆ ಮಾಡಿಕೊಂಡು ಹೊರಟಿದ್ದ ಬಜಾಜ ಪಲ್ಸರ್ ಮೋಟರ್ ಸೈಕಲ್ ನಂಬರ್ KA-26/EA 3344 ನೇದ್ದರ ಎಡ ಭಾಗಕ್ಕೆ ತನ್ನ  ಕಾರಿನ ಎಡಗಡೆಯ ಭಾಗವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಸದರ ಮೋಟರ್ ಸೈಕಲ್ ಚಾಲಕ ಸಲೀಮ ಯಲಿಗಾರ ಈತನ ಎಡಗಾಲ ಮೊಣಕಾಲ ಹತ್ತಿರ ಎಲುಬು ಮುರಿಯುವಂತೆ ಹಾಗು ಭುಜಕ್ಕೆ, ಮುಖಕ್ಕೆ ಸಾದಾ ಗಾಯ ಪೆಟ್ಟು ಪಡಿಸಿದ್ದಲ್ಲದೇ ಸದರ ಮೋಟರ್ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಪಿರ್ಯಾದಿ ದಾವಲಸಾಬ ಸಾಜನಸಾಬ ಲಾಲಕೋಟಿ, ವಯಾ 23 ವರ್ಷ ಸಾಃ ಗದಗ ತನಿಗೂ ಸಹಿತ ಎಡಗಾಲ ಮೊಣಕಾಲ ಹತ್ತಿರ ಎಲುಬು ಮುರಿಯುವಂತೆ ಹಾಗು ಅಲ್ಲಲ್ಲಿ ಸಾದಾ ವ ಭಾರೀ ಪ್ರಮಾಣದ ಗಾಯ ಪೆಟ್ಟು ಪಡಿಸಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2020 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, February 25, 2020

CRIME INCIDENTS 25-02-2020

ಧಾರವಾಡ ಜಿಲ್ಲೆಯಲ್ಲಿದಿನಾಂಕ:25-02-2020 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಶಿಶ್ವಿನಹಳ್ಳಿ ಗ್ರಾಮದ ಆರೋಪಿತನಾದ ದೇವಪ್ಪ ರಂಗಪ್ಪ ದಿಡ್ಡಿ ವಯಾ-55 ವರ್ಷ ಜಾತಿ- ಹಿಂದು ವಾಲ್ಮೀಕಿ  ಉದ್ಯೊಗ ಕೂಲಿ ಕೆಲಸ, ಸಾಃ ಶಿಶ್ವಿನಹಳ್ಳಿ ತಾಃ ಅಣ್ಣಿಗೇರಿ ಈತನು ದಿನಾಂಕ 25-02-2020 ರಂದು 09-25 ಗಂಟೆಗೆ ಅಣ್ಣಿಗೇರಿ ಪೊಲೀಸ ಠಾಣಾ ಹದ್ದಿಯಲ್ಲಿ ಇರುವ ಶಿಶ್ವಿನಹಳ್ಳಿ ಗ್ರಾಮದ ಬಸ್ ಸ್ಟ್ಯಾಂಡ ಸಮೀಪದ ವಾಲ್ಮಿಕಿ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನು ತನ್ನ ಬಳಿ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಸರಾಯಿ ಟೆಟ್ರಾ ಪಾಕೇಟಗಳನ್ನು ಅಕ್ರಮವಾಗಿ ತನ್ನ ಪಾಯ್ದೆಗೊಸ್ಕರ 90 ಎಮ್ ಎಲ್ ಅಳತೆಯ ಒಟ್ಟು 34 Original Choice ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟಗಳು, ಅ!! ಕಿ!! 1,030=00  ನೇದ್ದವುಗಳನ್ನು ಒಂದು ಚೀಲದಲ್ಲಿ  ತುಂಬಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2020 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:25-02-2020 ರಂದು 13-50 ಗಂಟೆಯ ಸುಮಾರಿಗೆ ಬೆಲೂರ ಗ್ರಾಮದ ಆತ್ಮಲಿಂಗೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಕುಳಿತು  ಅಂಕಿ-ಸಂಖ್ಯೆಗಳ  ಆಧಾರದ ಮೇಲೆ 1 ರೂಪಾಯಿಗೆ 80 ರೂ ಗಳನ್ನು ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದಾ ಹಣವನ್ನು ಪಡೆದು ಓ.ಸಿ.ಚೀಟಿ ಬರೆದುಕೊಡುತ್ತಾ ಓ.ಸಿ.ಜೂಜಾಟದಲ್ಲಿ ತೊಡಗಿದಾಗ ಆರೋಪಿತಳಾದ ನಾಗಮ್ಮ.ಕೋಂ.ಮಾರುತಿ.ಮಲ್ಲಿಗವಾಡ ಸಾಃಬೆಲೂರ ಸಿಕ್ಕಿದ್ದು 2 ನೇದವನಾದ ಪ್ರಕಾಶ.ಚಿಮ್ಮನಕಟ್ಟಿ ಸಾಃಬೆಲೂರ ಇತನು ಓಡಿ ಹೋಗಿದ್ದು ಹಾಗೂ ನಂ.3 ನೇದವನಾದ ಮಡಿವಾಳಪ್ಪ.ಜುಮ್ಮನವರ ಸಾಃಹಂಗರಕಿ ಇತನು ಓ.ಸಿ.ಅಂಕಿ-ಸಂಖ್ಯೆಯ ಪಟ್ಟಿಯನ್ನು ಇಸಿದುಕೊಳ್ಳುವ ಸಿಕ್ಕಿದ್ದು ಅವರಿಂದ ರೂ.710-00 ಗಳನ್ನು ವಶಪಡಿಸಕೊಂಡಿದ್ದು ಇರುತ್ತದೆ.

Monday, February 24, 2020

CRIME INCIDENTS 24-02-2020

ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-02-2020 ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 24-02-2020 ರಂದು 16-00 ಗಂಟೆ ಸುಮಾರಿಗೆ ಆರೋಪಿತನಾದ ಮಾರುತಿ ಶಿವಪ್ಪ ಹೊಸಳ್ಳಿ ವಯಾ 23 ವರ್ಷ ಸಾ!! ಬಸಾಪೂರ ತಾ!! ಕುಂದಗೋಳ ಹಾಲಿ ಹಾಳಕುಸಗಲ್ ಈತನು ತನ್ನ ಸ್ವಂತ ಪಾಯಿದೆಗೋಸ್ಕರ ಯಾವುದೇ ಪಾಸ್. ವ. ಪರ್ಮಿಟ್ ಇಲ್ಲದೆ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾರಾಯಿ ಟೆಟ್ರಾ ಪಾಕೀಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ  ರೇಡ್ ಕಾಲಕ್ಕೆ 1] ಒಟ್ಟು 48 ಓರಿಜನಲ್ ಚಾಯ್ಸ್ ವಿಸ್ಕಿ ತುಂಬಿದ 90 ಎಮ್. ಎಲ್. ಟೆಟ್ರಾ ಪಾಕೀಟಗಳು ಅ:ಕಿ: 1440/- 2] ಒಟ್ಟು ಹೈವರ್ಡ್ಸ್ ವಿಸ್ಕಿ ತುಂಬಿದ 90 ಎಮ್. ಎಲ್. ಅಳತೆಯ ಟೆಟ್ರಾ ಪಾಕೀಟ್ ಗಳು ಅ:ಕಿ: 720 3] ಒಂದು ಗೊಬ್ಬರ ಚೀಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2020 ಕಲಂ 32.34 ಅಬಕಾರಿ ಕಾಯ್ದೆ ಪ್ರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:22-02-2020 ರಂದು ಸಂಜೆ 4-00 ಗಂಟೆ ಸುಮಾರಿಗೆ ಧಾರವಾಡ ನವಲಗುಂದ ರಸ್ತೆಯ ಮೇಲೆ ಗೊಂಗಡಿಕೊಪ್ಪ ಕ್ರಾಸ ಸಮೀಪ TVS VICTOR ಕಂಪನಿಯ ಮೋಟಾರ ಸೈಕಲ, ಅದರ ಚೆಸ್ಸಿ ನಂಬರ MD625AF1371L66760, ಇಂಜೀನ್ ನಂ:OF1L71589081 ನೇದ್ದರ ಚಾಲಕ ಪ್ರವೀಣ ಉಳವಪ್ಪ ಶಿಗಿಹಳ್ಳಿ ವಯಾ 21 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ಪ್ಯಾರಾ ಮೇಡಿಕಲ್ ವಿದ್ಯಾಭ್ಯಾಸ ಸಾ: ಮಾಳಾಪೂರ ಲಾಸ್ಟ ಸ್ಟಾಪ ರಾಜ ನಗರ 2 ನೇ ಕ್ರಾಸ ಇತನು  ಸದರ ಮೋಟಾರ ಸೈಕಲನ್ನು ಹೆಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ಮೋಟಾರ ಸೈಕಲದ ವೇಗವನ್ನು ನಿಯಂತ್ರಣ ಮಾಡಲಾಗದೇ ಸ್ಕೀಡಾಗಿ ಕೆಡವಿ ಅಪಘಾತಪಡಿಸಿ, ಮೋಟಾರ ಸೈಕಲ ಹಿಂದುಗಡೆ ಕುಳಿತ  ಚಂದ್ರಗೌಡ ಹಾಲಪ್ಪಗೌಡ ನೀಲಪ್ಪಗೌಡ್ರ ವಯಾ 21 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ವಿದ್ಯಾರ್ಥಿ ಸಾ: ಡೋಣಿ ತಾ: ಮುಂಡರಗಿ ಜಿ:ಗದಗ ಇತನಿಗೆ ಸಾದಾ ವ ಗಂಭೀರ ಗಾಯಪಡಿಸಿದಲ್ಲದೇ ತನಗೂ ಗಂಬೀರ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2020 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, February 23, 2020

CRIME INCIDENTS 23-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:23-02-2020 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕಃ 22-02-2020 ರಂದು ಸಾಯಂಕಾಲ 16-50 ಗಂಟೆಯ ಸುಮಾರಿಗೆ ಕಾಶೇನಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತನಾದ ಅಕ್ಬರ್ ತಂದೆ ಹುಸೇನಸಾಬ ಯರಗುದ್ದಿ, ವಯಾ 34 ವರ್ಷ, ಜ್ಯಾತಿ ಮುಸ್ಲಿಂ, ಉದ್ಯೋಗ ಚಹದ ಅಂಗಡಿ ವ್ಯಾಪಾರ, ಸಾ|| ಕಾಶೇನಟ್ಟಿ ತಾ|| ಅಳ್ನಾವರ ಜಿಲ್ಲಾ|| ಧಾರವಾಡ ಇವನು  ತನ್ನ ಫಾಯದೇಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳು ಕೊಡುತ್ತೇನೆ ಅಂತಾ ಹೇಳುತ್ತಾ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ. ಸಿ. ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿಯವನಿಂದ ರೋಕ ರಕಂ 270/- ರೂ. ಗಳು ಹಾಗೂ ಒಂದು ಬಿಳಿ ಹಾಳೆಯ  ಮೇಲೆ ಅಂಕಿ ಸಂಖ್ಯೆ ಬರೆದ ಚೀಟಿ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2020 ಕಲಂ 78(3)  ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 21/02/2020 ರಂದು ರಾತ್ರಿ 12.30 ಗಂಟೆ ಸುಮಾರಿಗೆ, ಇದರಲ್ಲಿಯ ಸ್ಕಾರ್ಪಿಯೋ ಕಾರ ನಂಬರಃ KA/63/M/5479 ನೇದ್ದರ ಚಾಲಕನಾದ ಅಭೀಜಿತ್ ತಾನಾಜಿ ನಿಕ್ಕಮ್ ಸಾಃ ಬೆಡಕಿಹಾಳ ತಾಃ ಚಿಕ್ಕೋಡಿ. ಜಿಃ ಬೆಳಗಾವಿ ಇವನು ತಾನು ಚಲಾಯಿಸಿಕೊಂಡು ಬರುತ್ತಿದ್ದ ಸದರಿ ಸ್ಕಾರ್ಪಿಯೋ ಕಾರನ್ನು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ , ಹುಬ್ಬಳ್ಳಿ -ಧಾರವಾಡ ಬೈಪಾಸ್ ರಸ್ತೆಯ ಮೇಲೆ, ಅತೀಜೋರಿನಿಂದ ವ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು, ಹುಬ್ಬಳ್ಳಿ ತಾರಿಹಾಳ ಕೈಗಾರಿಕಾ ಪ್ರದೇಶದ ಹತ್ತಿರ , ತನ್ನ ಮುಂದಿನಿಂದ ಹೋಗುತ್ತಿದ್ದ ಒಂದು ಯಾವುದೋ ಲಾರಿಗೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸ್ಕಾರ್ಪಿಯೋ ಕಾರನ್ನು ಜಕಂಗೊಳಿಸಿದ್ದು ಅಲ್ಲದೇ ತಾನು ಸಾದಾ ಗಾಯ ಪಡಿಸಿದ್ದು ಇರುತ್ತದೆ ಈಕುರಿತು ಹುಬ್ಬಳ್ಳಿ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಗುನ್ನಾನಂ 41/2020 ಕಲಂ 279.337.ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

Friday, February 21, 2020

CRIME INCIDENTS 21-02-2020

ಧಾರವಾಡ ಜಿಲ್ಲೆಯಲ್ಲಿದಿನಾಂಕ:21-02-2020 ರಂದು ವರದಿಯಾದ ಪ್ರಕರಣಗಳು

1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಬಸವೇಶ್ವರ ನಗರದ ಕಾಣೆಯಾದ ಅಂಜುಮಾ ತಂದೆ ಮಕ್ತುಂಸಾಬ ನಾಲಬಂದ ವಯಾ 22 ವರ್ಷ ಜಾತಿ ಮುಸ್ಲಿಂ ಉದ್ಯೋಗ ಸಿಂಗರ ಸಾ:ಬಸವೇಶ್ವರ ನಗರ ನವಲಗುಂದ ಇತಳು ದಿನಾಂಕ 17-02-2020 ರಂದು ಸಾಯಂಕಾಲ 19-30 ಗಂಟೆಯ ಸುಮಾರಿಗೆ ತನ್ನ ವಾಸದ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೊದವಳು  ಇಲ್ಲಿಯವರಿಗೆ ಮನೆಗೆ ಬಾರದೆ ಮನೆಯಿಂದ ಹೋಗಿ ಕಾಣೆಯಾದ ಹೋಗಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 29/2020 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಮಲ್ಲಿಗವಾಡ ಗ್ರಾಮದ  ಪಿರ್ಯಾದಿಯ ತಾಯಿ ಶಾಂತವ್ವ ಕೋಂ ಯಲ್ಲಪ್ಪ ಬಡಫಕ್ಕಿರಪ್ಪನವರ ವಯಾ. 74 ವರ್ಷ ಜಾತಿ ಹಿಂದೂ ಕುರಬ ಉದ್ಯೋಗ.ಮನೆಗೆಲಸ ಸಾಃ ಮಲ್ಲಿಗವಾಡ  ಇವರು ಮತ್ತು ಪಿರ್ಯಾದಿಯ ಮಗಳು ವಿಜಯಲಕ್ಷ್ಮೀ ಇವರು ಬರ್ಹಿದಸೆಗೆ ಅಂತಾ ಹೋದಾಗ  ದಿನಾಂಕಃ 20/02/2020 ರಂದು 19-30 ಗಂಟೆ ಯಿಂದ 20-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ಒಂದು ಮೋಟರ ಸೈಕಲ್ ನೇದ್ದರ ಸವಾರನು ಕೋಳಿವಾಡ  ಕಡೆಯಿಂದ ಮಲ್ಲಿಗವಾಡ ಕಡೆಗೆ ಅತಿ ವೇಗ ವ ನಿರ್ಲಕ್ಷತನದಿಂದ ಮೋಟರ ಸೈಕಲನ್ನು ನಡೆಯಿಸಿಕೊಂಡು ಬಂದು  ಮಲ್ಲಿಗವಾಡ ಹದ್ದಿಯ ದ್ಯಾಮಣ್ಣ ಗಿರಿಯಮ್ಮನವರ ಇವರ ಮನೆಯ ಹತ್ತಿರ ರಸ್ತೆ ಮೇಲೆ ಇದರಲ್ಲಿಯ ಪಿರ್ಯಾದಿಯ ತಾಯಿ ಶಾಂತವ್ವ ಕೋಂ ಯಲ್ಲಪ್ಪ ಬಡಫಕ್ಕಿರಪ್ಪನವರ ಇವರಿಗೆ  ಢಿಕ್ಕಿ ಮಾಡಿ ಅಪಘಾತಪಡಿಸಿ ತೆಲೆಗೆ ಮತ್ತು ಬಲಗಾಲಿಗೆ ಭಾರಿ ಗಾಯಪಡಿಸಿ ಮೋಟರ ಸೈಕಲನ್ನು ನಿಲ್ಲಿಸದದೇ ಅಪಘಾತದ ಸುದ್ದಿಯನ್ನು ಠಾಣೆಗೆ ತಿಳಿಸದೇ ಪರಾರಿ ಆಗಿ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 39/2020 ಕಲಂ 279.338. ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಉಮಚಗಿ ಗ್ರಾಮದ ಮೃತನಾದ ಹೇಮಯ್ಯ ರಾಚಯ್ಯ ಹುಬ್ಬಳ್ಳಿಮಠ, ವಯಾ 75 ವರ್ಷ ಸಾಃ ಉಮಚಗಿ ತಾಃ ಹುಬ್ಬಳ್ಳಿ ಈತನು ಮಾನಸೀಕ ಅಸ್ವಸ್ಥನಾಗಿದ್ದು ದಿನಾಂಕ 16-02-2020 ರಂದು ಮುಂಜಾನೆ 10-00 ಗಂಟೆಗೆ ಉಮಚಗಿ ಗ್ರಾಮದ ತನ್ನ ಮನೆಯಿಂದ ಹೋಗಿದ್ದವನು ದಿನಾಂಕ 21-02-2020 ರಂದು ಮುಂಜಾನೆ 10-00 ಘಂಟೆಗೆ ಭದ್ರಾಪೂರ ಗ್ರಾಮದ ಹದ್ದಿಯ ಗುರುಸಿದ್ದಮ್ಮ ಜಾಲಿಹಾಳ ಎಂಬುವವರ ಹೊಲದಲ್ಲಿ  ಮಲಗಿಕೊಂಡಲ್ಲಿಯೇ ಮರಣ ಹೊಂದಿದ್ದು ಸದರೀಯವನು ತನಗಿರುವ ಮಾನಸೀಕ ಕಾಯಿಲೆಯಿಂದ ಕಳೆದ ಐದಾರು ದಿನಗಳಿಂದ ಹೊಟ್ಟೆಗೆ ಊಟ ಇಲ್ಲದೇ ಉಪವಾಸ ಇದ್ದು ಅಶಕ್ತಿಯಿಂದ ಮರಣ ಹೊಂದಿರುವ ಬಗ್ಗೆ ವರದಿಗಾರರ ವರದಿಯನ್ನು ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2020 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಕ್ರಮ ಕೈಗೊಂಡಿದ್ದು ಇರುತ್ತದೆ.