ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, January 31, 2020

CRIME INCIDENTS 31-01-2020



ಧಾರವಾಡ ಜಿಲ್ಲೆಯಲ್ಲಿದಿನಾಂಕ:31-01-2020 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 29-01-2020 ರಂದು 15-30 ಗಂಟೆಗೆ ಗರಗ ಕ್ರಾಸದಿಂದ ಧಾರವಾಡ ಕಡೆಗೆ ಹರಿದ ಸರ್ವಿಸ್ ರಸ್ತೆಯ ಮೇಲೆ ನೀಲಕಮಲ ಹೊಟೇಲ್ ಹತ್ತಿರ ಇದರಲ್ಲಿ ನಮೂದ ಮಾಡಿದ ಫಕ್ಕೀರಸಾಬ ದಾವಲಸಾಬ ಬೋಡ್ಲೆಕರ. ಸಾ: ಯಾವಗಲ್ ಈತನು ಟಿಪ್ಪರ ಲಾರಿ ನಂ ಕೆ.ಎ-63/5539 ನೇದ್ದನ್ನು ಮೇನ್ ರೋಡದಿಂದ ಸರ್ವಿಸ್ ರಸ್ತೆ ಕಡೆಗೆ ಅತೀ ವೇಗ, ಅಲಕ್ಷತನದಿಂದ ನಡೆಯಿಸಿ ಸರ್ವಿಸ್ ರಸ್ತೆ ಮೇಲೆ ಪಿರ್ಯಾದಿಯು ಚಲಾಯಿಸಿಕೊಂಡು ಹೊರಟಿದ್ದ ಮೋಟಾರ ಸೈಕಲ್ ನಂ ಕೆ.ಎ-25/ಡಬ್ಲೂ-9797 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾದಿಗೆ ಸಾದಾ ವ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ ಮೋಟಾರ ಸೈಕಲ್ ಜಕಂಗೊಳಿಸಿದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 16/2020 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 29-01-2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಪುಂಡಲೀಕ  ಅಣ್ಣ ಮಡಿವಾಳಪ್ಪ ಶಿವಾನಂದ ಕುರಶನವರ ಇತನು ಯಾದವಾಡ ಗ್ರಾಮದ ಪರಮೇಶ ಯಲ್ಲಪ್ಪ ಕನಜನವರ ಇತನಿಗೆ ಅವನ ಮನೆತೆನದ ಅಡಚಣೆಗೆ ಅಂತಾ 8000 ರೂಪಾಯಿಗಳನ್ನು ಕೊಟ್ಟಿದ್ದು ಅವುಗಳನ್ನು ಕೊಡು ಅಂತಾ ಕೇಳಲು ಹೋದಾಗ ಪರಮೇಶ ಯಲ್ಲಪ್ಪ ಕನಜನವರ ಮತ್ತು ಶಿರೂರ ಗ್ರಾಮದ ಶಂಕ್ರಪ್ಪ ಅನ್ನುವವನು ಕೂಡಿಕೊಂಡು ಮಡಿವಾಳಪ್ಪನಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದಾ ಮತ್ತು ಕಲ್ಲಿನಿಂದಾ ಸಿಕ್ಕ ಸಿಕ್ಕಲ್ಲಿ ಹೊಡಿಬಡಿಮಾಡಿ ಗಾಯಪಡಿಸಿದ್ದು ಪಿರ್ಯಾದಿಯು  ತಂಟೆ ಬಿಡಿಸಲು ಹೋದಾಗ ಅವನಿಗೆ ಕಲ್ಲಿನಿಂದಾ ಹೊಡೆಯಲು ಬಂದಾಗ ಪಿರ್ಯಾದಿಯು ತಪ್ಪಿಸಿಕೊಂಡು ಹೋಗುವಾಗ ಅವನಿಗೆ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 17/2020 ಕಲಂ IPC 1860 (U/s-506,34,504,323,324) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 30-01-2020 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಮನಗುಂದಿ ಗ್ರಾಮದ ಪಿರ್ಯಾದಿ ಮಲ್ಲವ್ವ ಕಳ್ಳಿಮನಿ ಇವರ ಮನೆಯಲ್ಲಿ ಪಿರ್ಯಾದಿಯ ಸಂಬಂದಪಟ್ಟ ಹಿರಿಯರ ಮನೆ ಆಸ್ತಿಯ ಬಗ್ಗೆ ತಕರಾರು ಅರ್ಜಿ ಸಲ್ಲಿಸಿದ್ದಕ್ಕೆ ಪಿರ್ಯಾದಿಯ ಮನೆಯವರ ಜೊತೆ ಸಿಟ್ಟಾಗಿ ಆಪಾದಿತರಾದ  1) ಮಲ್ಲಪ್ಪ @ ಮುದಕಪ್ಪ ತಂದೆ ಶಿವಪ್ಪ ಕಳ್ಳಿಮನಿ 2) ಮಂಜಪ್ಪ ತಂದೆ ಶಿವಪ್ಪ ಕಳ್ಳೀಮನಿ 3) ಮಹೇಶ ತಂದೆ ಶಿವಪ್ಪ ಕಳ್ಳೀಮನಿ 4) ಬಸಪ್ಪ ಮಲ್ಲಪ್ಪ ಕಳ್ಳಿಮನಿ ಸಾ|| ಎಲ್ಲರೂ ಮನಗುಂಡಿ ತಾ||ಜಿ|| ದಾರವಾಡ  ಇವರು ಆ ಸೇ 4 ನೇದವನ ಚಿತಾವಭಣಿಯಿಂದ ಆ ಸೇ ನಂ 1 ರಿಂದ 3 ನೇದವರು ಪಿರ್ಯಾದಿಯ ಮನೆಯ ಒಳಗೆ ಪ್ರವೇಶ ಮಾಡಿ ಪಿರ್ಯಾದಿಯ ಗಂಡನಿಗೆ ಹಾಗೂ ಮೈದುನನಿಗೆ ಕೈಯಿಂದ ಹೊಡಿ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಧಮಕಿ ಹಾಕಿದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 17/2020 ಕಲಂ IPC 1860 (U/s-109,506,323,448,34,504) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 29/01/2020 ರಂದು ಮದ್ಯಾಹ್ನ 03.00 ಗಂಟೆ ಸುಮಾರಿಗೆ ಮಗನು ಮನೆಯಿಂದ ಊಟ ಮಾಡಿ ನನಗೆ ಬೇರೆ ಕಡೆ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ನಂತರ ಮಗನು ಇಲ್ಲಿಯ ತನಕ ನಮ್ಮ ಮನೆಗೆ ವಾಪಸ್ ಬಂದಿರಲಿಲ್ಲಾ, ಅವನು ಹೀಗೆ ಸುಮಾರು ಸಲ ತನಗೆ ಕೆಲಸ ಇದೆ ಅಂತ ಎರಡು ಮೂರು ದಿವಸ ಮನೆಗೆ ಬಾರದೇ ಇರುತ್ತಿದ್ದರಿಂದ ಈ ಸಲವೂ ಹಾಗೇ ಎಲ್ಲಿಯಾದರೂ ಹೋಗಿರಬಹುದು ಅಂತ ತಿಳಿದು ಸುಮ್ಮನೆ ಇದ್ದೆವು. ನಮ್ಮ ಹೊಲದಲ್ಲಿ ಬಿಳಿ ಜೋಳದ ಬೆಳೆ ಇದ್ದು ನೋಡಿಕೊಂಡು ಬರಲು ಅಂತ ಈ ದಿವಸ ದಿನಾಂಕ: 31/01/2020 ರಂದು ಮುಂಜಾನೆ 07.30 ಗಂಟೆ ಸುಮಾರಿಗೆ ನಾನು ನಮ್ಮ ಬಿಳಿಜೋಳದ ಬೆಳೆ ಇರುವ ಹೊಲಕ್ಕೆ ಬಂದಾಗ ಹೊಲದಲ್ಲಿರುವ ಮಾವಿನ ಗಿಡಕ್ಕೆ ಯಾರೋ ನಿಂತಂತೆ ಕಂಡಿದ್ದು, ನಾನು ಹತ್ತಿರ ಹೋಗಿ ನೋಡಲು ನನ್ನ ಮಗನಾದ ನಾಗರಾಜನು ಪ್ಲಾಸ್ಟಿಕ್ ಹಗ್ಗವನ್ನು ಮಾವಿನ ಗಿಡದ ಟೊಂಗಿಗೆ ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ನೇತು ಬಿದ್ದು ಮೃತಪಟ್ಟಿದ್ದನ್ನು ನೋಡಿ ಗಾಬರಿಯಾಗಿ ಓಡಿ ಮನಗೆ ಹೋಗಿ ಮನೆಯ ಮತ್ತು ಓಣಿಯ ಜನರಿಗೆ ಕೆರೆದುಕೊಂಡು ಬಂದು ತೋರಿಸಿದೆನು. ನನ್ನ ಮಗನಾದ ನಾಗರಾಜ ತಂದೆ ಶಂಕರಪ್ಪ ಮುಗಳಿ ವಯಾ: 23 ವರ್ಷ, ಸಾ: ಬಿದರಗಡ್ಡಿ ಇವನು ಮನೆಯ ಹಿರೆತನವನ್ನು ಮಾಡಿಕೊಂಡು ಹೋಗುತ್ತಿದ್ದು, ನನ್ನ ಬಾಬತ್ ಜಮೀನದ ಮೇಲೆ ವಿಜಯಾ ಬ್ಯಾಂಕ್ ಕಲಘಟಗಿಯಲ್ಲಿ ಬೆಳೆಸಾಲ ಅಂತ ಸುಮಾರು 1.00.000/-ರೂಗಳನ್ನು, ನಮ್ಮ ಹೊಸ ಮನೆ ಕಟ್ಟಲು ಮತ್ತು ಒಕ್ಕಲುತನ ಕೆಲಸಕ್ಕೆ ಅಂತ ಅವನು ಊರಲ್ಲಿ ಕೈಗಡ ಮಾಡಿದ ಸುಮಾರು 1.00.000/-ರೂಗಳ ಸಾಲವನ್ನು ಹೇಗೆ ತೀರಿಸುವದು ಅಂತ ಚಿಂತೆ ಮಾಡುತ್ತ ಇದ್ದವನು ಅದೇ ಚಿಂತೆಯಲ್ಲಿ ಮಾನಸಿಕ ಮಾಡಿಕೊಂಡು ತನ್ನ ಜೀವನದಲ್ಲಿ ಬೇಸರಗೊಂಡು ನಮ್ಮ ಹೊಲದಲ್ಲಿರುವ ಮಾವಿನ ಗಿಡದ ಟೊಂಗಿಗೆ ತಾನಾಗಿಯೇ ಪ್ಲಾಸ್ಟಿಕ್ ಹಗ್ಗ ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಏನೂ ಇರುವದಿಲ್ಲಾ, ಅಂತಾ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2020 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

Thursday, January 30, 2020

CRIME INCIDENTS 30-01-2020



ಧಾರವಾಡ ಜಿಲ್ಲೆಯಲ್ಲಿದಿನಾಂಕ:30-01-2020 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 29-01-2020 ರಂದು ಸಾಯಂಕಾಲ 16-30 ಗಂಟೆಯ ಸುಮಾರಿಗೆ ಅಳ್ನಾವರ ಪಟ್ಟಣದ ಹಳೆ ಬಸ್ ನಿಲ್ದಾಣದ ಹತ್ತಿರ ರೈಲು ನಿಲ್ದಾಣಕ್ಕೆ ಹೊಗುವ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆಪಾದಿತನಾದ ಬಸವರಾಜ ತಂದೆ ಅಶೋಕ ಲಿಂಗನಮಠ,  ವಯಾ 32 ಜಾತಿ ಹಿಂದೂ ಮರಾಠಾ ವೃತ್ತಿ ಗೌಂಡಿ ಸಾ: ಅಳ್ನಾವರ ಮಿಶನ ರೊಡ  ತಾ ಃ ಅಳ್ನಾವರ ಜಿಲ್ಲಾ ಃ ಧಾರವಾಡ  ಇವನು  ತನ್ನ ಫಾಯದೇಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳು ಕೊಡುತ್ತೇನೆ ಅಂತಾ ಹೇಳುತ್ತಾ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ. ಸಿ. ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿಯವನಿಂದ ರೋಕ ರಕಂ 270/- ರೂ. ಗಳು ಹಾಗೂ ಒಂದು ಬಿಳಿ ಹಾಳೆಯ  ಮೇಲೆ ಅಂಕಿ ಸಂಖ್ಯೆ ಬರೆದ ಚೀಟಿ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಈ ಕುರಿತು  ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 08/2020 ಕಲಂ KARNATAKA POLICE ACT, 1963 (U/s-78(III))ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 29-01-2020 ರಂದು 22-30 ಗಂಟೆಗೆ ಕಾಳಗಟ್ಟಿ ಕೆರೆ ದಂಡೆಯ ಮೇಲೆ ಅಗಸನಳ್ಳಿ ರಸ್ತೆಯಲ್ಲಿ ಆರೋಪಿ ನಂ 1 ಬಸವರಾಜ ಮಡಿವಾಳಪ್ಪ ಅಮರಗೋಳ. ಸಾ: ಗರಗ ಈತನು ಮೋಟಾರ ಸೈಕಲ್ ನಂ ಕೆ.ಎ-25/ವಿ-8454 ನೇದ್ದನ್ನು ರಸ್ತೆ ಮಧ್ಯ ಭಾಗದಲ್ಲಿ ನಿಲ್ಲಿಸಿ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ತನ್ನ ಸಂಗಡ ಇದ್ದ ಆರೋಪಿ ನಂ 2 ಮತ್ತು 3 ನೇದವರೊಂದಿಗೆ ಮಾತನಾಡುತ್ತಾ ನಿಂತಾಗ ಪಿರ್ಯಾದಿ ಮಡಿವಾಳಪ್ಪ್ ಚನ್ನಪ್ಪ ಉಳವನ್ನವರ ಇವನು ದಾರಿ ಸಲುವಾಗಿ ತನ್ನ ಸ್ಕಾರ್ಪಿಯೋ ವಾಹನ ನಂ ಕೆ.ಎ-27/ಎಮ್-2696 ನೇದ್ದರಲ್ಲಿ ಕುಳಿತು ಹಾರ್ನ ಹಾಕಿದಾಗ ಆರೋಪಿತರು ಪಿರ್ಯಾದಿಗೆ ಅವಾಚ್ಯ ಬೈಯ್ದು, ಅಂಗಿ ಹಿಡಿದು ಎಳೆದು ಪಿರ್ಯಾದಿ ಬಳಿ 6 ಗುಂಡುಗಳ ಲೋಡ ಸಮೇತ ಇದ್ದ ರಿವಾಲ್ವಾರನ್ನು ಹೆದರಿಸಿ ಬಲವಂತವಾಗಿ ತೆಗೆದುಕೊಂಡು ಪಿರ್ಯಾದಿಗೆ ದೂಗಿಸಿ ರಸ್ತೆ ಬದಿಯ ಇಳಿಜಾರಿನಲ್ಲಿ ಕೆಡವಿ ರಿವಾಲ್ವಾರ ಸಮೇತ ಓಡಿ ಹೋದ ಅಪರಾಧ.ಈ ಕುರಿತು ಗರಗ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 15/2020 ಕಲಂ  IPC 1860 (U/s-392) ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, January 29, 2020

CRIME INCIDENTS 29-01-2020



ಧಾರವಾಡ ಜಿಲ್ಲೆಯಲ್ಲಿದಿನಾಂಕ:29-01-2020 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 28-01-2020 ರಂದು ಮದ್ಯಾಹ್ನ 03-30 ಗಂಟೆಯ ಸುಮಾರಿಗೆ  ಪಿರ್ಯಾದಿಯ  ತಂದೆಯಾದ ಫಕ್ಕಿರಪ್ಪ ತಂದೆ ಭೀಮಪ್ಪ ಪಾಗೂಜಿ, ವಯಾ 78 ವರ್ಷ, ಉದ್ಯೋಗ ಶೇತ್ಕಿ, ಜಾತಿ ಹಿಂದೂ ,ಮರಾಠಾ, ಸಾ|| ದೇವಗೀರಿ ತಾ||ಜಿ|| ಧಾರವಾಡ ಇವನು ದೇವಗಿರಿ ಗ್ರಾಮದ ತನ್ನ  ಮನೆಯಿಂದ ನಿಗದಿ ಗ್ರಾಮದ ಆಸ್ಪತ್ರೆಗೆ ಹೊಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು  ಮರಳಿ ಮನೆಗೆ ಬಂದಿರುವದಿಲ್ಲಾ ಎಲ್ಲ ಕಡೆ ಹುಡುಕಾಡಿದ್ದು ಸಿಕ್ಕಿರುವದಿಲ್ಲಾ  ವರದಿಯನ್ನು ನೀಡಿದ್ದು ಈ ಕುರಿತು  ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 07/2020 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪಿರ್ಯಾದಿದಾರ ಶ್ರೀನಿವಾಸ ಅಂಬಾಜಿ ಕಲಾಲ ವಯಾ-56 ವರ್ಷ ಸಾ: ಧಾರವಾಡ ಇವರ ಮಗಳಾದ ಶೃತಿ ವಯಾ-29 ವರ್ಷ ಇವಳಿಗೆ ಬೆಂಗಳೂರ ಶಹರದ ಚಂದನ ಪ್ರಕಾಶ ಪಾರಿಶ್ವಾಡ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಸದರಿಯವರಿಗೆ ಅದಿತಿ ವಯಾ-03 ವರ್ಷ ಎಂಬ ಮಗಳಿರುತ್ತಾಳೆ.ದಿನಾಂಕ 15-11-2019 ರಂದು ಪಿರ್ಯಾದಿದಾರರಿಗೆ ಶೃತಿ ಚಂದನ ಪಾರಿಶ್ವಾಡ ಇವಳ ಹೆಸರಿನಲ್ಲಿ ಕೌಟುಂಬಿಕ ನ್ಯಾಯಾಲಯ ಬೆಂಗಳೂರದಿಂದ ಸಮನ್ಸ ಬಂದಿದ್ದು ಈ ಬಗ್ಗೆ ಪಿರ್ಯಾದಿದಾರರು ಬೆಂಗಳೂರಗೆ ಹೋಗಿ ವಿಚಾರಿಸಲಾಗಿ  ತಮ್ಮ ಮಗಳು ಶೃತಿ ಹಾಗೂ ಅಳಿಯ ಚಂದನ ವಿವಾಹ ವಿಚ್ಚೇದನ ಪಡೆದಿರುವದು ತಿಳಿದು ಬಂದಿದೆ ನಂತರ ಪಿರ್ಯಾದಿದಾರರು  ತಮ್ಮ ಮಗಳು ಶೃತಿ ಗಂಡ ಚಂದನ ಪಾರಿಶ್ವಾಡ ವಯಾ-29 ವರ್ಷ ಹಾಗೂ ಮೊಮ್ಮಗಳು ಕುಮಾರಿ ಅದಿತಿ  ತಂದೆ ಚಂದನ ಪಾರಿಶ್ವಾಡ ವಯಾ-03 ವರ್ಷ ಇವರಿಗೆ ಹುಡುಕಾಡಲು ಸದರಿಯವರು ಕಾಣೆಯಾಗಿರುವದಾಗಿ ತಿಳಿದು ಬಂದಿದ್ದು ಇರುತ್ತದೆ ಈ ಬಗ್ಗೆ  ಪಿರ್ಯಾದಿದಾರರು ದಿನಾಂಕ 09-01-2020 ರಂದು ಮಾನ್ಯ  ಮುಖ್ಯ ನ್ಯಾಯಾಧೀಶರು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರವರಿಗೆ  ದೂರು ಅರ್ಜಿಯನ್ನು ಸಲ್ಲಿಸಿದ್ದು ಸದರಿ ಅರ್ಜಿಯು ಮಾನ್ಯ ಹೈಕೋರ್ಟ ಬೆಂಗಳೂರವರ ಆದೇಶ ನಂ CJT 078/2020  January 17, 2020  ನೇದರಲ್ಲಿ ಟಪಾಲ ಮುಖಾಂತರ ಬಂದ ಪಿರ್ಯಾದಿಯನ್ನು ಮಾನ್ಯ ಎಸ್.ಪಿ ಸಾಹೇಬರು ಧಾರವಾಡ ಜಿಲ್ಲೆ ಧಾರವಾಡ ರವರ  ಆದೇಶ ನಂ 720/ಡಿ.ಸಿ.ಆರ್.ಬಿ/164/2020 ದಿನಾಂಕ 29-01-2020 ರನ್ವಯ ಮಹಿಳೆ ಹಾಗೂ ಮಗು ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಫೊಲೀಸ್ ಠಾಣೆಯಲ್ಲಿ ಗುನ್ನಾನಂ 16/2020 ಕಲಂ  ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 26-01-2020 ರಂದು 1530 ಗಂಟೆಗೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ನೂಲ್ವಿ-ಅದರಗುಂಚಿ ನಡುವೆ ಇರುವ ಕೋಳಿ ಫಾರ್ಮ ಹತ್ತಿರ ಬ್ರಿಜ್ ಸಮೀಪ ಆರೋಪಿತನಾದ ಗುರುಸಿದ್ದಪ್ಪ ಬಸವಂತಪ್ಪ ಕಾಲವಾಡ ಸಾ: ನೂಲ್ವಿ ತಾ: ಹುಬ್ಬಳ್ಳಿ ಇವನು ಮೋಟಾರ ಸೈಕಲ್ ನಂ: KA 63 / K 0428 ನೇದ್ದರಲ್ಲಿ ತನ್ನ ಹಿಂದೆ ಮಂಜುನಾಥ ವಾಲೀಕಾರ ಸಾ: ನೂಲ್ವಿ ಇವನಿಗೆ ಕೂಡ್ರಿಸಿಕೊಂಡು ಸದರ ಮೋಟಾರ ಸೈಕಲ್ ನ್ನು ಹುಬ್ಬಳ್ಳಿ ಕಡೆಯಿಂದ ನೂಲ್ವಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೇ ರಪೀಕ ಧಾರವಾಡ ಮತ್ತು ಪ್ರವೀಣ ಸುಣಗಾರ ಇವರು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಮೋಟಾರ ಸೈಕಲ್ ನಂ: KA 25 / EK 6028 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ರಫೀಕ ಹಾಗೂ ಪ್ರವೀಣ ಇವರಿಗೆ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ, ಮಂಜುನಾಥ ವಾಲೀಕಾರ ಈತನಿಗೆ ಸಾದಾ ಗಾಯಪೆಟ್ಟುಪಡಿಸಿದ್ದಲ್ಲದೇ, ಎರಡೂ ಮೋಟಾರ ಸೈಕಲ್ ಗಳಿಗೆ ಜಕಂ ಗೊಳಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಫೊಲೀಸ್ ಠಾಣೆಯಲ್ಲಿ  ಗುನ್ನಾನಂ 24/2020  ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Tuesday, January 28, 2020

CRIME INCIDENTS 28-01-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:28-01-2020 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಸಿ.ಇ.ಎನ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ:22-12-2019 ರಂದು.ಯಾರೋ ಆರೋಪಿತರು ಪ್ರಭುನಗರ ಹೊನ್ನಾಪುರ ಗ್ರಾಮ ಪಂಚಾಯತಿಯ ಹೆಸರಿನಲ್ಲಿ ಡಾಂಗಲ್ ಬಳಿಸಿ ಎಂಡ ಟು ಎಂಡ ಸಾಪ್ಟವೇರನಲ್ಲಿ ಧಾರವಾಡ ಎಮ್.ಜಿ.ಎನ್.ಆರ್.ಇ.ಜಿ.ಎ ಆಡಳಿತ ವೆಚ್ಚದ ಖಾತೆ ನಂಬರ 64159636255 ನೇದ್ದರಿಂದ ಶ್ರೀ ಸಾಯಿ ಕಂಪ್ಯೂಟರ ಚಿತ್ರದುರ್ಗ ಇವರ  ಎಸ್.ಬಿ.ಐ ಖಾತೆ ನಂಬರ 36984161553 ನೇದ್ದಕ್ಕೆ ಮೋಸ ಮಾಡುವ ಉದ್ದೇಶದಿಂದ ಡಿಎಸ್ಎ ದುರಪಯೋಗ ಪಡಿಸಿಕೊಂಡು 15,750/- ರೂ ಗಳು ವರ್ಗಾಯಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಸಿ.ಇ.ಎನ್ ಪೊಲೀಸ  ಠಾಣೆಯಲ್ಲಿ ಗುನ್ನಾನಂ 03/2020 ಕಲಂ INFORMATION TECHNOLOGY  ACT 2000 (U/s-66(D)); IPC 1860 (U/s-420)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 17/01/2020 ರಂದು ಮೇಲಿನ ಟ್ಯಾಂಕರ್ ನಲ್ಲಿ ಕಾರವಾರದಿಂದ ಡಾಂಬರ್ ಲೋಡ್ ಮಾಡಿಕೊಂಡು ರಾಣೇಬೆನ್ನೂರಗೆ ಅನ್ ಲೋಡ್ ಮಾಡುವ ಕುರಿತು ನಮ್ಮ ಟ್ಯಾಂಕರ್ ಚಾಲಕ ಕಲಘಟಗಿ ಮಾರ್ಗವಾಗಿ ಹೊರಟಿದ್ದು ದಿನಾಂಕ: 18/01/2020  ರಂದು ಬೆಳಗಿನ 02-00 ಗಂಟೆಯ ಸುಮಾರಿಗೆ  ಕಲಘಟಗಿ ಪೊಲೀಸ್ ಠಾಣಾ ಹದ್ದಿಯ ಮಡಕಿಹೊನ್ನಳ್ಳಿ ಗ್ರಾಮದ ಹತ್ತಿರದ ಬೇಡ್ತಿ ಹಳ್ಳದ ಬ್ರೀಡ್ಜ್ ಹತ್ತಿರ ನಮ್ಮ ಟ್ಯಾಂಕರ್ ನ  ವೇಗದ ನಿಯಂತ್ರಣ ಮಾಡಲಾಗದೇ  ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ  ಪಲ್ಟಿಯಾಗಿ ಕೆಡವಿ ಟ್ಯಾಂಕರ್ ಅನ್ನು ಜಖಂ ಗೊಳಿಸಿದ್ದು ಹಾಗೂ ಅದರಲ್ಲಿ ಲೋಡ್ ಮಾಡಿದ್ದ ಡಾಂಬರ ಸೋರಿ ಹಾಳಾಗಿದ್ದು ಇರುತ್ತದೆ . ಈ ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯ ವಗೈರೆ ಆಗಿರುವದಿಲ್ಲ. ಈ ಅಪಘಾತದ ಬಗ್ಗೆ ನಾನು ನಮ್ಮ ಮನೆಯ ಜನರೊಂದಿಗೆ ಚರ್ಚಿಸಿ ಈ ದಿವಸ ದಿನಾಂಕ:28/01/2020 ರಂದು ತಮ್ಮ ಠಾಣೆಗೆ ತಡವಾಗಿ ಹಾಜರಾಗಿ ಈ ಪಿರ್ಯಾದವನ್ನು ಸಲ್ಲಿಸಿದ್ದು ನಮ್ಮ ಟ್ಯಾಂಕರ್ ಚಾಲಕ ಉಮೇಶ ತಂದೆ ಹರಿಯಪ್ಪ ಸಪಲ್ಯಾ ಸಾ|| ಯಡಪದವು ಗ್ರಾಮ ತಾ|| ಮಂಗಳೂರು ಜಿ|| ದಕ್ಷಿಣ ಕನ್ನಡ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಫಿಯಾಱದಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 10/2020 ಕಲಂ 279 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


3. ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ ಕಾಣೆಯಾದ ಶ್ರೀಮತಿ ಶ್ರೀಮತಿ ಲಕ್ಷ್ಮೀ ಕೋಂ ಮಾಂತೇಶ ತಿಪ್ಪಣ್ಣವರ ವಯಾ 22 ವರ್ಷ ಜಾತಿ ಹಿಂದು ವಾಲ್ಮೀಕಿ ಉದ್ಯೋಗ ಮನೆ ಕೆಲಸ ಸಾ:ಅಳಗವಾಡಿ ತಾ: ನವಲಗುಂದ ಇತಳು ದಿನಾಂಕ 21-01-2020 ರಂದು  ಬೆಳಗಿನ 10-00 ಗಂಟೆಯಿಂದ 12-30 ಗಂಟೆಯ ಮದ್ಯೆದ ಅವದಿಯಲ್ಲಿ  ಅಳಗವಾಡಿ ಗ್ರಾಮದಿಂದ ತನ್ನ ವಾಸದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು ಇರುತ್ತದೆ. ನನ್ನ ಹೆಂಡತಿಗೆ ಅಂತಾ  ಕಾಣೆಯಾದವಳ ಗಂಡ ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2020 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 27-01-2020 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಎನ್.ಎಚ್-4 ರಸ್ತೆ ಛಬ್ಬಿ ಕ್ರಾಸ್ ಹತ್ತಿರ ಯಾವುದೋ ವಾಹನದ ಚಾಲಕನು ಸದರ ವಾಹನವನ್ನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಚಿಕ್ಕಪ್ಪನ ಮಗ ರಮೇಶ ಶೇಖಪ್ಪ ಸುಂಕದ ವಯಾ: 40 ವರ್ಷ ಜಾತಿ: ಹಿಂದೂ (ಲಿಂಗಾಯತ) ಉದ್ಯೋಗ: ವ್ಯಾಪಾರ ಸಾ: ಮಂಟೂರ ತಾ: ಹುಬ್ಬಳ್ಳಿ ಈತನು ಚಲಾಯಿಸಿಕೊಂಡು ಹೊರಟಿದ್ದ ಮೋಟಾರ ಸೈಕಲ್ ನಂ: ಕೆಎ 63 / ಎಚ್: 9457 ನೇದ್ದರ ಹಿಂಭಾಗಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಭಾರೀ ಗಾಯಪೆಟ್ಟುಗಳಾಗುವಂತೆ ಮಾಡಿ ಆ ವಾಹನ ನಿಲ್ಲಿಸದೇ ಹಾವೇರಿ ಕಡೆಗೆ ಹೋಗಿದ್ದು ಸದರಿ ಗಾಯಾಳು ರಮೇಶ ಸುಂಕದ ಈತನು ಉಪಚಾರ ಫಲಿಸದೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಿನಾಂಕ: 27-01-2020 ರಂದು ರಾತ್ರಿ 10-26 ಗಂಟೆಗೆ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ  ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 22/2020 ಕಲಂ IPC 1860 (U/s-279,304(A)); INDIAN MOTOR VEHICLES ACT, 1988 (U/s-134,187)  ನೇದ್ದರಲ್ಲಿ ಪ್ರಕರಣವನ್ನು  ದಾಖಲಿಸಿದ್ದು ಇರುತ್ತದೆ.