ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, February 1, 2020

CRIME INCIDENTS 01-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:01-02-2020 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ: 01-02-2020 ರಂದು 02-00 ಗಂಟೆಗೆ ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ  ಅಜುಱ ತಳವಾರ ಸಾಗುವಳಿ ಮಾಡುವ ಹೊಲದಲ್ಲಿರುವ ಮನೆಗೆ ಯಾರೋ 4 ಜನ ಹೆಸರು, ವಿಳಾಸ ತಿಳಿಯದ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ಹೆಂಡತಿ ಮರಿತಂಗೆವ್ವ ಕೋಂ ಅರ್ಜುನ ತಳವಾರ. ಸಾ: ಬೇಲೂರ ಇವಳಿಗೆ ದೂಗಿಸಿ ಹೆದರಿಸಿ ಬಲವಂತವಾಗಿ ಪಿರ್ಯಾದಿ ರವರ ಮನೆಯಲ್ಲಿ ನೇತು ಹಾಕಿದ್ದ ಪಿರ್ಯಾದಿಯ ಡಿ.ಬಿ.ಬಿ.ಎಲ್ ಗನ್ ನಂ 30546. ಅ||ಕಿ|| 10,000/- ರೂಪಾಯಿ ನೇದ್ದನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ ಈಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ  18/2020 ಕಲಂ 392.448 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಪಡೆಸೂರ ಗ್ರಾಮದ  ಆರೋಪಿತನಾದ ಶಿದ್ದಲಿಂಗೇಶ ಮಹಾದೇವಪ್ಪ ಹಡಗಲಿ ಸಾ!! ಪಡೇಸೂರ ಈತನಿಂದ ಪಿರ್ಯಾದಿದಾರನು ಸನ್ 2012 ನೇ ಸಾಲಿನಲ್ಲಿ 2 ಲಕ್ಷ ರೂಪಾಯಿಗಳನ್ನು ಸಾಲ ತೆಗೆದುಕೊಂಡಿದ್ದು ಆ ಕಾಲಕ್ಕೆ ಪಿರ್ಯಾದಿದಾರನು 2 ಖಾಲಿ ಚೆಕ್ಗಳನ್ನು ಕೊಟ್ಟಿದ್ದು ಇರುತ್ತದೆ ನಂತರ ಪಿರ್ಯಾದಿದಾರನು ಪಡೆದ ಸಾಲವನ್ನು ವಾಪಸ್ ತೀರಿಸಿ ತಾನು ಕೊಟ್ಟ ಚೆಕ್ಗಳನ್ನು ಕೇಳಲು ಅಂತ ದಿನಾಂಕ: 15-07-2019 ರಂದು ಆರೋಪಿತನ ಮನೆಗೆ ಹೋದಾಗ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಪಿರ್ಯಾದಿದಾರನಿಗೆ ಮೋಸ ಮಾಡುವ ಉದ್ದೇಶದಿಂದ ಸದರಿ ಚೆಕ್ಗಳನ್ನು ವೈಶ್ಯಾ ಬ್ಯಾಂಕ್ ಚೆಕ್ ನಂ 706333 ನೇದ್ದಕ್ಕೆ 45,00,000/- ಹಾಗೂ ಎಕ್ಸಿಸ್ ಬ್ಯಾಂಕ್ ಚೆಕ್ ನಂ 051221 ನೇದ್ದಕ್ಕೆ 50,00,000/- ಬರೆದುಕೊಂಡು ಸುಳ್ಳು ಎನ್. ಐ. ಯಾಕ್ಸ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 16/2020 ಕಲಂ 504.506.420 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಚಳಮಟ್ಟಿ ಕ್ರಾಸ್ ಹತ್ತಿರ ನಿಂತುಕೊಂಡಿದ್ದೆವು. ಆಗ ಹುಬ್ಬಳ್ಳಿ ಕಡೆಯಿಂದ ಒಂದು ಬೈಕ್ ವೇಗವಾಗಿ ಬಂದಿದ್ದು, ಸಂಶಯ ಬಂದು ನಾವು ಅದನ್ನು ನಿಲ್ಲಿಸಲು ಹೋದಾಗ ಅದರಲ್ಲಿ 3 ಜನ ಸವಾರರು ಇದ್ದು, ಚಾಲಕನು ಅಡ್ಡಾದಿಡ್ಡಿಯಾಗಿ ಚಲಿಸಿ ಬೈಕನ್ನು ಒಮ್ಮಿಂದೊಮ್ಮಲೆ ನಿಲ್ಲಿಸಿದವನೆ, ಬೈಕಿನಿಂದ ಜಿಗಿದವನೆ ಓಡಿಹೋದನು. ಆಗ ನಾನು ಮತ್ತು ಸಿಬ್ಬಂದಿಯವರು ಬೈಕಿನಲ್ಲಿ ಹಿಂದೆ ಕುಳಿತ ಇನ್ನಿಬ್ಬರನ್ನು ಹಿಡಿದು ಹೆಸರು, ವಿಳಾಸ ವಿಚಾರಿಸಲಾಗಿ ಸಮರ್ಪಕ ಉತ್ತರ ನಿಡಿರುವುದಿಲ್ಲಾ, ನಂತರ ಬೈಕನ್ನು ಚೆಕ್ ಮಾಡಲಾಗಿ ಅದಕ್ಕೆ ನೋಂದಣಿ ಸಂಖ್ಯೆ ಇರದೇ ಇದ್ದಿದ್ದು ಕಂಡುಬಂದಿದ್ದು ಅದರ ಬಗ್ಗೆಯೂ ಸಹ ಸಿಕ್ಕವರು ಸರಿಯಾದ ಉತ್ತರ ನೀಡಿರುವುದಿಲ್ಲಾ. ಕಾರಣ ಸದರಿಯವರನ್ನು ಠಾಣೆಗೆ ಬೆಳಿಗ್ಗೆ 5.00 ಘಂಟೆಯ ಸುಮಾರಿಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿ ತಮ್ಮ ಹೆಸರು ಅಲ್ತಾಪ್ ತಂದೆ ಹುಸೇನಸಾಬ್ ಮುಳುಗುಂದ ವಯಾ 18 ವರ್ಷ, ಜಾತಿ ಮುಸ್ಲೀಂ, ಉದ್ಯೋಗ ಪ್ಲಂಬಿಂಗ್ ಕೆಲಸ, ಸಾ: ಆಶ್ರಯ ಕಾಲನಿ ಎಸ್ ಎಮ್ ಕೃಷ್ಣಾ ನಗರ ಗದಗ ತಾ.ಜಿ ಗದಗ ಹಾಗೂ ಅಬ್ದುಲ್ ರಜಾಕ್ ತಂದೆ ಮಕ್ತುಂಹುಸೇನ್ ನರಗುಂದ ವಯಾ 21 ವರ್ಷ, ಜಾತಿ ಮುಸ್ಲೀಂ, ಉದ್ಯೋಗ ಟೈಲ್ಸ ಕೆಲಸ, ಸಾ: ಆಶ್ರಯ ಕಾಲನಿ ಎಸ್ ಎಮ್ ಕೃಷ್ಣಾ ನಗರ ಗದಗ ತಾ.ಜಿ ಗದಗ ಹಾಗೂ ಬೈಕ ನಡೆಸುತ್ತಿದ್ದವನ ಹೆಸರು ಹಜರತಲಿ @ ಮಿಂಟ್ಯಾ ತಂದೆ ದಾವಲಸಾಬ ಇಟಿ ಎಂದೂ ತಿಳಿಸಿದರು. ಬೈಕಿನ ಬಗ್ಗೆ ವಿಚಾರಿಸಲಾಗಿ ಸದರಿ ಬೈಕನ್ನು ದಿನಾಂಕ 25-01-2020 ರಂದು ರಾತ್ರಿ 11.30 ಘಂಟೆಯ ಸುಮಾರಿಗೆ ರಾತ್ರಿ ಗದಗ ಶಹರದ ಸ್ಥಳದಲ್ಲಿ ಒಂದು ಮನೆಯಿಂದ 3 ಜನರು ಸೇರಿ ಕಳುವು ಮಾಡಿದ್ದಾಗಿ ತಿಳಿಸಿರುತ್ತಾರೆ. ಅದರ ನೋಂದಣಿ ಸಂಖ್ಯೆಯನ್ನು ಅಳುಕಿಸಿ ಈ ದಿನ ರಾತ್ರಿ 3 ಜನರು ಸೇರಿ ಅದೆ ಬೈಕನ್ನು ತಗೆದುಕೊಂಡು ಗೋವಾಕ್ಕೆ ಹೋಗುತ್ತಿದ್ದಾಗ ಸಿಕ್ಕಿರುತ್ತೆವೆಂದೂ ಹೆಳಿರುತ್ತಾರೆ. ಸದರಿ ಬೈಕ್ ಹೊಂಡಾ ಯುನಿಕಾರ್ನ 150 ಸಿಸಿ, ಬಣ್ಣ ಕಪ್ಪು, ಮತ್ತು ಚೆಸ್ಸಿ ನಂ   ಎಮ್ಇ4ಕೆಸಿ311ಜಿಜೆ8331256, ಎಂಜಿನ ನಂ ಕೆಸಿ31ಇ-8-0331423 ಇದ್ದು ಅಂದಾಜು ಬೆಲೆ ಸುಮಾರು 50.000/- ಆಗಬಹುದು. ನಂತರ ಈ ಬಗ್ಗೆ ಗದಗ ಪೊಲೀಸ್ ಠಾಣೆಗೆ ಪೋನ ಮೂಲಕ ವಿಚಾರಣೆ ಮಾಡಲಾಗಿ ಸದರಿ ದ್ವಿಚಕ್ರ ವಾಹನ ಅಲ್ಲಿ ಕಳುವಾಗಿ ಪ್ರಕರಣ ದಾಖಲಾಗಿದ್ದು ತಿಳಿದುಬಂದಿರುತ್ತದೆ.   ಕಾರಣ ಈ ದಿನ ಬೆಳಿಗ್ಗೆ 4 ಘಂಟೆಯ ಸುಮಾರಿಗೆ ಈ ಮೇಲ್ಕಂಡ ಮೂವರು ಕೂಡಿಕೊಂಡು ಗದಗ ಶಹರದಲ್ಲಿ ಕಳುವು ಮಾಡಿದ ವಾಹನ ಸಮೇತ ಹೋಗುತ್ತಿದ್ದಾಗ ಆರೋಪಿ ನಂ 1]ಹಜರತಲಿ@ಮಿಂಟ್ಯಾ ತಂದೆ ದಾವಲಸಾಬ ಇಟಿ ಇವನು ಓಡಿಹೋಗಿದ್ದು,  ಆರೋಪಿ ನಂ 2]ಅಲ್ತಾಫ್ ತಂದೆ ಹುಸೇನಸಾಬ ಮುಳಗುಂದ ಮತ್ತು 3]ಅಬ್ದುಲರಜಾಕ ತಂದೆ ಮಕ್ತುಂ ಹುಸೇನ ನರಗುಂದ ಇವರನ್ನು ಹಿಡಿದುಕೊಂಡಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 13/2020 ಕಲಂ CODE OF CRIMINAL PROCEDURE, 1973 (U/s-41,102); IPC 1860 (U/s-379) ನೇದ್ದರಲ್ಲಿ  ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 29-01-20120 ರಂದು 17-00 ಗಂಟೆಯಿಂದ ದಿ..31-01-2020 ರಂದು ರಾತ್ರಿ10-00 ಗಂಟೆ ನಡುವಿನ ವೇಳೆಯಲ್ಲಿಅಮ್ಮಿನಬಾವಿ ಗ್ರಾಮದ ಬಸ್ಟಾಂಡ್ ಹತ್ತಿರ ಅಬ್ದಲ ನಗರಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಇರುವ ಖುಲ್ಲಾ ಜಾಗೆಯಲ್ಲಿ ನನ್ನ ಮಗ ನೂರಹಮ್ಮದ ಮಕಾಂದರ ಇವನಿಗೆ ಕುಡಿದ ನಿಶೆಯಲ್ಲಿ ಪಿಡ್ಸ ಬಂದಿದ್ದರಿಂದ ಅದರ ನೋವು ತಾಳಲಾರದೆ ಮೃತಪಡ್ಡಿದ್ದು ಅದೆ ಅಂತಾ ಮೃತನ ತಂದೆ ವರದಿ ಕೊಟ್ಟಲ್ಲಿ ನನ್ನ ಮಗನ ಸಾವಿನಲ್ಲಿ ಯಾವುದೆ ಸಂಶಯ ಇರುವದಿಲ್ಲಾ. ಅಂತಾ ಕೊಟ್ಟ ವರದಿಯನ್ನು ಸ್ವಿಕರಿಸಿಕೊಂಡು ನಮ್ಮ ಠಾಣೆಯ ಯು ಡಿ ನಂ 05/2020 ಕಲಂ 174 ನೇದ್ದಕ್ಕೆ ದಾಖಲುಮಾಡಿಕೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2020 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.