ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 3, 2020

CRIME INCIDENTS 03-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:03-02-2020 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ  ವ್ಯಾಪ್ತಿಯ:ದಿನಾಂಕ..23-01-2020 ರಂದು 00-00 ಗಂಟೆಯಿಂದಾ 00-01 ಗಂಟೆಯ ನಡುವಿನ ಅವಧಿಯಲ್ಲಿ ಬೆಟದೂರ ಗ್ರಾಮದಲ್ಲಿ ಇದರಲ್ಲಿ ಆರೋಪಿಯು ಪಿರ್ಯಾಧಿ ಯಲ್ಲಪ್ಪ @ ಕಲ್ಲಪ್ಪ ಶಿವಳ್ಳಿ @ ಮಳಪ್ಪನವರ ಇವರ ಮೋಬೈಲ್ ನಂ 7022489404 ನೇದ್ದಕ್ಕೆ 8489149952 ನೇದ್ದರಿಂದ ಸಂಗೀತಾ ಮೋಬೈಲ್ ಬೆಂಗಳೂರ ಅಂತಾ ಒಬ್ಬ ಹೆಣ್ಣು ಮಗಳು ಕರೆ ಮಾಡಿ  ಪಿರ್ಯಾಧಿಗೆ ಮೋಸ ಮಾಡುವ ಉದ್ದೇಶದಿಂದ ಲಕ್ಕಿ ಕಸ್ಟಮರ ಅಂತಾ ಸೆಲೆಕ್ಟ ಮಾಡಲಾಗಿದೆ, ನಿಮಗೆ ರೆಡ್ ಮಿ ವೈ 2 ಮೋಬೈಲ್ ಆಫರ ಇದೆ, ಅದರ ಮಾರುಕಟ್ಟೆ ಬೆಲೆ 7999/- ಇದ್ದು, ನಿಮಗೆ ಕೇವಲ 2,500/- ರೂ ಗಳಿಗೆ ಕೊಡುತ್ತೇವೆ ಮತ್ತು ಇದರ ಜೊತೆಗೆ ಪವರ್ ಬ್ಯಾಂಕ, ಚಾರ್ಜರ ಕೊಡುತ್ತೇವೆ ಅಂತಾ ಹೇಳಿ ತಮ್ಮ ವಾಟ್ಸಪ್ ನಂ 7094929557 ನೇದ್ದರಿಂದ ಭಾವಚಿತ್ರ ಕಳುಹಿಸಿಕೊಟ್ಟು, ಸದರ ಮೋಬೈಲ್ ನ್ನು ಪೋಸ್ಟ ಮುಖಾಂತರ ಕಳುಹಿಸುತ್ತೇವೆ, ಪೋಸ್ಟದಲ್ಲಿ ನಿಮಗೆ ದಿ..31-01-2020 ರಂದು ಬರುತ್ತದೆಂದು ಹೇಳಿ ಸದರ ದಿನದಂದು ಪಿರ್ಯಾಧಿಯು ಪೋಸ್ಟ ಆಫೀಸ ಬೆಟದೂರದಲ್ಲಿ ಪೋಸ್ಟ ಚಾರ್ಜ ಸೇರಿ 2625/- ಹಣ ಪಾವತಿಸಿ ಪಾರ್ಸಲ್ ಬಂದ ಬಾಕ್ಸನ್ನು ತೆರದು ನೋಡಿದಾಗ ಅದರಲ್ಲಿ ಮೋಬೈಲ್ ಪೋನ್ ಕಳುಹಿಸಿದೆ ಸುಮಾಂರು 150/- ಕಿಮ್ಮತ್ತಿನ ಡೆಸ್ಕ ಲ್ಯಾಂಪನ್ನು ಕಳುಹಿಸಿಕೊಟ್ಟು ಪಿರ್ಯಾಧಿಗೆ ಯಲ್ಲಾಪ್ಪಾ ಮರಿಯಪ್ಪಣ್ಣವ ಇತನಿಗೆ ಮೋಸ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 06/2020 ಕಲಂ 420 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಾಮದೇನು ಗ್ರಾಮದ ಆರೋಪಿತರಾದ 3) ಸಂತೋಷ ತಂದೆ ಮಹದೇವಪ್ಪ ಹುಲಗೂರ, 24 ವರ್ಷ, ಶೇತ್ಕಿ ಕೆಲಸ, ಗಾಣಿಗ ಜನಾಂಗ, 4) ಕಲ್ಲಪ್ಪ ತಂದೆ ಮಹದೇವಪ್ಪ ಹುಲಗೂರ, 22 ವರ್ಷ, ಶೇತ್ಕಿ ಕೆಲಸ, ಗಾನಿಗ ಜನಾಂಗ, ಸಾ|| ಇಬ್ಬರೂ ಕಾಮಧೇನು ಗ್ರಾಮ, ತಾ|| ಕಲಘಟಗಿ ಇವರುಗಳು ಮತ್ತು ಪಿರ್ಯಾದಿದಾರರು ಸಂಬಂದಿಕರಾಗಿದ್ದು ಇವರುಗಳ ಮದ್ಯೆ ಆಸ್ತಿಯ ವಿಚಾರವಾಗಿ ಸುಮಾರು ವರ್ಷಗಳಿಂದ ತಂಟೆ ತಕರಾರುಗಳು ನಡೆದಿರುತ್ತದೆ. ಈ ವಿಚಾರವಾಗಿ ದಿನಾಂಕ :02-02-2020 ರಂದು ರಾತ್ರಿ 09 :30 ಗಂಟೆಯ ಸುಮಾರಿಗೆ ಆರೋಪಿ 03 ಮತ್ತು 04 ನೇದವರು ಆರೋಪಿತರಾದ 1)  ಈರಯ್ಯ ತಂದೆ ಕಲ್ಲಯ್ಯ ಯಾದವಾಡ, 24 ವರ್ಷ, ಜಂಗಮ ಜನಾಂಗ, ಖಾಸಗಿ ಕೆಲಸ, 2)  ಮಂಜುನಾಥ ಯಾದವಾಡ, 26 ವರ್ಷ, ಜಂಗಮ ಜನಾಂಗ, ಖಾಸಗಿ ಕೆಲಸ, ಸಾ|| ಇಬ್ಬರೂ ಗಂಜಿಗಟ್ಟಿ, ಹಾಲಿ ವಸ್ತಿ|| ಕಾಮಧೇನು ಗ್ರಾಮ, ಇವರುಗಳೊಂದಿಗೆ ಸೇರಿ ಪಿರ್ಯಾದಿಯ ಸೊಸೆಯಾದ 1) ಅಕ್ಷತಾ ತಂದೆ ಗುರುಸಿದ್ದಪ್ಪ ಹುಲಗೂರ, 16 ವರ್ಷ,ವಿದ್ಯಾರ್ಥಿನಿ, ಗಾಣಿಗಾ ಜನಾಂಗ, ಸಾ|| ಕಾಮದೇನು ಇವಳು ಮೂತ್ರ ವಿಸರ್ಜನೆಯನ್ನು ಮಾಡಿ ಬರುತ್ತಿರುವಾಗ ಸುಕಾಸುಮ್ಮನೆ ತಂಟೆತೆಗೆದು ಇವಳಿಗೆ ಹಲ್ಲೆ ಮಾಡುತ್ತಿದ್ದಾಗ ಪಿರ್ಯಾದಿ ಮತ್ತು ಶ್ರೀಮತಿ ಮಂಜುಳಾ ಗಂಡ ಗುರುಸಿದ್ದಪ್ಪ ಹುಲಗೂರ,36 ವರ್ಷ, ಮನೆಗೆಲಸ, ಗಾಣಿಗೇರ ಜನಾಂಗ, ಗುರುಸಿದ್ದಪ್ಪ ತಂದೆ ಬಸವಣ್ಣೆಪ್ಪ ಹುಲಗೂರ, 44 ವರ್ಷ, ವ್ಯವಸಾಯ ಕೆಲಸ, ಗಾಣಿಗಾ ಜನಾಂಗ, ಶ್ರೀಮತಿ  ಗಂಗವ್ವ ಗಂಡ ರಾಮಪ್ಪ ಶಿರಬಡಗಿ, 50 ವರ್ಷ, ಮನೆಗೆಲಸ. ಗಾಣಿಗ ಜನಾಂಗ, ಸಾ|| ಎಲ್ಲರೂ ಕಾಮಧೇನು ಗ್ರಾಮ, ತಾ|| ಕಲಘಟಗಿ ಇವರುಗಳಿಗೆ ಹಲ್ಲೆ  ಮಾಡಿ ಜಗಳವನ್ನು ಬಿಟ್ಟು ಹೋಗುವಾಗ ಜೀವದ ಬೆದರಿಕೆಯನ್ನು ಹಾಕಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಗುನ್ನಾನಂ 15/2020 ಕಲಂ 341.323.324.325.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.   ಧಾರವಾಡ ಸಿ.ಇ ಎನ್ ಪೊಲೀಸ  ಠಾಣಾ ವ್ಯಾಪ್ತಿಯ:ದಿನಾಂಕ:19-01-2020 ರಂದು ಮುಂಜಾನೆ 08-00 ಗಂಟೆಗೆ ಫೇಸಬುಕ್ ಅಕೌಂಟ ಆದಿತ್ಯಾ ಆದಿ ಮುಖಾಂತರ ತನ್ನ ಹೆಸರು ತಾಲಿಖ ಅಕ್ಬರ ಅಂತಾ ಪರಿಚಯ ಮಾಡಿಕೊಂಡು ಫೇಸ್ ಬುಕ ಅಕೌಂಟನಲ್ಲಿ ರಾಯಲ್ ಎನ್ ಫೀಲ್ಡ್ ಮೋಟರ ಸೈಕಲ ನಂಬರ ಕೆಎ-23 ಇಎನ್-7786 ನೇದ್ದರ ಮೇಲೆ ಮೊಬೈಲ ನಂಬರ 8307093506 ನೇದ್ದನ್ನು ಹಾಕಿ ಅಪಲೋಡ ಮಾಡಿ ಸದರಿ ವಾಹನವನ್ನು ಮಾರಾಟಕ್ಕೆ ಇಟ್ಟಿರುವುದಾಗಿ ಪೋಸ್ಟ ಮಾಡಿ ತನ್ನಿಂದ ವಿವಿಧ ಚಾರ್ಜ ಅಂತಾ ವಿವಿಧ ದಿನಾಂಕಗಳಂದು ರೂ 74,000/- ಗಳನ್ನು ಪೋನ ಪೇ ಮುಖಾಂತರ ವರ್ಗಾಯಿಸಿಕೊಂಡು ಮೋಸ ವಂಚನೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಸಿ.ಎನ್ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 04/2020 ಕಲಂ INFORMATION TECHNOLOGY  ACT 2000 (U/s-66(D)); IPC 1860 (U/s-419,420) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.