ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, February 4, 2020

CRIME INCIDENTS 04-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:04-02-2020 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 03-02-2020 ರಂದು ಸಾಯಂಕಾಲ 16-15 ಗಂಟೆಯ ಸುಮಾರಿಗೆ ಹಳ್ಳಿಗೇರಿ ಗ್ರಾಮದ   ಕಲಾಭವನದ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಇದರಲ್ಲಿಯ ಆರೋಪಿತನಾದ 1] ಖಂಡೋಬಾ ತಂದೆ ಮಹಾದೇವಪ್ಪ ರೇವಡ್ಯಾಳ, ವಯಾ 27 ವರ್ಷ, ಉದ್ಯೋಗ-ಹೊಟೇಲ ಕೆಲಸ, ಜ್ಯಾತಿ ಹಿಂದೂ ಮರಾಠಾ, ಸಾ|| ಹಳ್ಳಿಗೇರಿ ತಾ||ಜಿ|| ಧಾರವಾಡ  ಅವನು  ತನ್ನ ಫಾಯದೇಗೋಸ್ಕರ ಒಂದು ರೂಪಾಯಿಗೆ 80 ರೂಪಾಯಿಗಳು ಕೊಡುತ್ತೇನೆ ಅಂತಾ ಸಾರ್ವಜನಿಕರಿಗೆ ಹೇಳುತ್ತಾ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ. ಸಿ. ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ರೂ. 350/- ವಶಪಡಿಸಿಕೊಂಡು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 09/2020 ಕಲಂ 78(3)  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ತೇಗೂರ ಗ್ರಾಮದ ಮೃತ ಕುಮಾರಿ ಲಲಿತಾ ತಂದೆ ಮಹಾದೇವಪ್ಪ ತೇಗೂರ, ವಯಾ 18 ವರ್ಷ ಸಾ; ಕೊಟಬಾಗಿ ಇವಳು ತನಗಿದ್ದ ಮಾನಸಿಕತೆಯಲ್ಲಿ ದಿನಾಂಕ; 04-02-2020 ರಂದು ಬೆಳಗಿನ 5 ಗಂಟೆಯಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಕೊಟಬಾಗಿ ಗ್ರಾಮದ ತಮ್ಮ ಮನೆಯಲ್ಲಿ ಯಾರು ಇಲ್ಲದಾಗ  ತನ್ನಷ್ಟಕ್ಕೆ ತಾನೇ ನೂಲಿನ ಹಗ್ಗದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿನಃ ಸದರಿಯವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲ ಅಂತಾ ವರದಿಯನ್ನು ನೀಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2020 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಹುಬ್ಬಳ್ಳಿ ರಸ್ತೆಯ ಇಟ್ಟಿಗಟ್ಟಿ ಗ್ರಾಮದ ಮಸಿದಿ ಪೂಜಾರ ಕಣದ ಹತ್ತಿರ  ಸುಮಾರು 40-50 ವರ್ಷದ ವಯಸ್ಸಿನ ಅನಾಮೇಧೆಯ ಗಂಡಸು ವ್ಯಕ್ತಿ ಶವವು ಸಿಕ್ಕಿದ್ದು ಶವವು ಸುಮಾರು 2 ದಿವಸಗಳ ಹಿಂದೆ ಸತ್ತಿರಬಹುದು ಶವದ ಬಗ್ಗೆ ಅಕ್ಕ ಪಕ್ಕ ಗ್ರಾಮಗಳ ಜನರನ್ನು ವಿಚಾರಿಸಿದಾಗ ಸದರಿಯುವನ ಬಗ್ಗೆ ಯಾವುದೆ ಮಾಹಿತಿ ಸಿಗದಿದ್ದದರಿಂದ ನಾನು ಈ ಬಗ್ಗೆ ಎಲ್ಲಾ ಪರಿಚದವರನ್ನು ವಿಚಾರಿಸಿಕೊಂಡು ಬಂದು ಸದರಿಯುವನ ಸಾವಿನ ಬಗ್ಗೆ ಯಾವು ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ವರದಿಯನ್ನು ಸ್ವಿಕರಿಸಿಕೊಂಡು ಈ ಕುರಿತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2020 ಕಲಂ 174 ನೇದ್ದಕ್ಕೆ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ.

4. ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ 04-02-2020  ರಂದು ಸಾಯಂಕಾಲ 14-30 ಗಂಟೆಯ ಸುಮಾರಿಗೆ ನವಲಗುಂದದ ಶಂಕರ ಕಾಲೇಜ  ಕ್ರಾಸ್ ಹತ್ತಿರ  ಸಾರ್ವಜನಿಕ ರಸ್ತೆಯ ಮೇಲೆ ಇದರಲ್ಲಿಆರೋಪಿತನಾದ ಸಂಜಯ್ಯ ತಂದೆ ಹನಮಂತಪ್ಪ ಖಾನಪೇಟ ವಯಾ 25 ವರ್ಷ ಜಾತಿ ಹಿಂದು ಸಮಗಾರ ಉದ್ಯೋಗ ಕೂಲಿ ಕೆಲಸ ಸಾ:ನವಲಗುಂದ ಇತನು  ತನ್ನ  ಸ್ವಂತ ಪಾಯಿದೇಗೋಸ್ಕರ 01 ರೂಪಾಯಿಗೆ 80 ರೂಪಾಯಿಗಳನ್ನು ಕೊಡುವದಾಗಿ ಹೇಳುತ್ತಾ  ಹೋಗಿ ಬರುವ ಸಾರ್ವಜನಿಕರಿಂಧ  ಹಣ ಪಡೆದು ಕಲ್ಯಾಣಿ ಓಸಿ ಅನ್ನುವ ಜೂಜಾಟ ನಡೆಸುತ್ತಿದ್ದಾಗ  ರೇಡ್ ಕಾಲಕ್ಕೆ 1) ರೋಖ ಹಣ ರೂ - 280/-  2)  ಒಂದು ಬಾಲ್ ಪೆನ್ ಅಕಿ-0000 ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 18/2020 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.