ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, February 5, 2020

CRIME INCIDENTS 05-02-2020


ಧಾರವಾಡ ಜಿಲ್ಲೆಯಲ್ಲಿದಿನಾಂಕ:05-02-2020 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 29/01/2020 ರಂದು ಮುಂಜಾನೆ 11.00 ಘಂಟೆ ಸುಮಾರಿಗೆ ಕಾರ ನಂಬರಃ KA/25/MA/5882 ನೇದ್ದರ ಚಾಲಕನಾದ ಸುರೇಶ ರಾಮಪ್ಪ ಭಜಂತ್ರಿ ಸಾಃ ಧಾರವಾಡ ಇವನು ತಾನು ಚಾಲನೆ ಮಾಡುತ್ತಿದ್ದ ಕಾರನ್ನು ಹೆಬಸೂರ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ಅಜಾಗರೂಕತೆಯಿಂದ ನಡೆಯಿಸಿಕೊಂಡು ಹೋಗಿ , ಇದರಲ್ಲಿಯ ಪಿರ್ಯಾಧಿಯ ಅತ್ತೆಯವರಾದ ಶ್ರೀಮತಿಃ ಪ್ರೇಮವ್ವ @ ಪ್ರೇಮಾ ಕೊಂ ಗಿರಿಯಪ್ಪ ತಳವಾರ  ವಯಸ್ಸು 45 ವರ್ಷ ಸಾಃ ಹೆಬಸೂರ ಇವರು  ಮನೆಯಿಂದ ಹೋಲಕ್ಕೆ ಹೋಗಿ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು  ರಸ್ತೆಯನ್ನು ದಾಟಿ ಬರುತ್ತಿರುವಾಗ  ಇವರಿಗೆ  ಡಿಕ್ಕಿ ಮಾಡಿ ಅಪಘಾತ ಪಡಿಸಿ ಕೈಗೆ ಭಾರಿ ಗಾಯ ಪಡಿಸಿದ್ದು ಅಲ್ಲದೇ  ತಲೆಗೆ , ನಡಕ್ಕೆ ಕಾಲಿಗೆ ಸಾದಾ ಗಾಯ ಗೊಳಿಸಿದ್ದು ಇರುತ್ತದೆ.ಈ  ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 27/2020 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಧಾರವಾಡ  ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:29.01.2020 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ:30.01.2020 ರ ಬೆಳಗಿನ 6-00 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಮನೆಯ ಜನರು ಮಲಗಿಕೊಂಡಿದ್ದಾಗ, ತಮ್ಮ ಮಗಳು ಸರಸ್ವತಿ ತಂದೆ ಪಡೆಪ್ಪ ಲಿಂಕೆಣ್ಣವರ, ವಯಾ 17 ವರ್ಷ ಇವಳಿಗೆ ಯಾರೋ ಏನೋ ಆಸೆ ತೋರಿಸಿ, ಯಾವುದೋ ಕಾರಣಕ್ಕಾಗಿ ಎಲ್ಲಿಯೋ ಅಪಹರಿಸಿಕೊಂಡು ಹೋಗಿದ್ದು,ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು  ಫಿಯಾಱಧಿ ನೀಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 12/2020 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.