ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, February 7, 2020

CRIME INCIDENTS 07-02-2020

ಧಾರವಾಡ ಜಿಲ್ಲೆಯಲ್ಲಿದಿನಾಂಕ:07-02-2020 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ತಿರ್ಲಾಪುರ ಗ್ರಾಮದ ಆರೋಪಿತನಾದ ಹನಮಂತಪ್ಪ ತಂದೆ ಚನ್ನಪ್ಪ ಹಣರಶಿಕಾರಿ ವಯಾ 50 ವರ್ಷ ಜಾತಿ ಹಿಂದು ಹರಣಶಿಕಾರಿ ಉದ್ಯೋಗ ಕೂಲಿ ಕೆಲಸ ಸಾ:ಪೆಟಾಲೂರ ತಾ:ಮುಂಡರಗಿ ಜಿ:ಗದಗ ಹಾಲಿ ತಿರ್ಲಾಪುರ ಇತನು ದಿನಾಂಕ 07-02-2020 ರಂದು ಮುಂಜಾನೆ 07-45 ಗಂಟೆಯ ಸುಮಾರಿಗೆ ತಿರ್ಲಾಪುರ  ಗ್ರಾಮದ ಬಸ್ಡಾಂಡ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ಕೆಂಪು ಕೈ ಚೀಲದಲ್ಲಿ ಒಟ್ಟು 17 ಹೈವರ್ಡ್ಸ ಚಿಯರ್ಸ ವಿಸ್ಕಿ ತುಂಬಿದ  90 ಎಮ್ ಎಲ್ ಅಳತೆಯ ಮದ್ಯೆದ ಟೆಟ್ರಾ ಪಾಕೀಟಗಳು ಅಕಿ: 515/- ರೂ ಹಾಗೂ ಒಟ್ಟು 15 ಓರಿಜಿನಲ್ ಚ್ವಾಯಿಸ್ ಡಿಲಕ್ಸ ವಿಸ್ಕಿ ತುಂಬಿದ 90 ಎಮ್ ಎಲ್ ಅಳತೆಯ ಮದ್ಯೆದಮಟೆಟ್ರಾ ಪಾಕೇಟಗಳು ಅಕಿ: 454 /- ರೂ ನೆದ್ದವುಗಳನ್ನು ತನ್ನ ಸ್ವಾದಿನದಲ್ಲಿ ಅಕ್ರಮವಾಗಿ ಇಟ್ಟುಕೊಂಡು  ಯಾವುದೆ ಪಾಸು ವ ಪರ್ಮಿಟ ಇಲ್ಲದೆ ಸರಕಾರದ ಬೋಕ್ಕಸಕ್ಕೆ ನಷ್ಟವನ್ನೂಂಟು ಮಾಡುವ ಉದ್ದೇಶದಿಂದ ಮಾರಾಟ ಮಾಡುತ್ತಾ ನಿಂತಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 19/2020 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.