ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, February 10, 2020

CRIME INCIDENTS 08-02-2020

ದಿನಾಂಕ. 08-02-2020 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು

1)ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕಃ 01-02-2020 ರಂದು 19-00 ಗಂಟೆಯಿಂದ ದಿನಾಂಕ 02-02-2020 ರಂದು ಮುಂಜಾನೆ 09-45 ಗಂಟೆಯ ನಡುವಿನ ಅವಧಿಯಲ್ಲಿ ಶಿಶ್ವಿನಹಳ್ಳಿ ಗ್ರಾಮದ ಪಿರ್ಯಾದಿ ಬಾಬತ್ ಜಮೀನು ರಿ.ಸ ನಂಬರ್ 202/1 ಮತ್ತು 202/2 ನೇ ಜಮೀನದಲ್ಲಿ ಪಿರ್ಯಾದಿದಾರನು ಸದರ ತನ್ನ ಜಮೀನದಲ್ಲಿ ಬೆಳೆದಿದ್ದ ಮೆಕ್ಕೆಜೋಳದ ತೆನೆಯ ಪೀಕನ್ನು ಕಟಾವ ಮಾಡಿ ಸದರ ಜಮೀನದ ನಡುವೆ ಗುಂಪಿ ಹಾಕಿದ್ದು ಯಾರೋ ಆರೋಪಿತರು ಪಿರ್ಯಾದಿದಾರನಿಗೆ ಕೇಡು ಹಾಗು ಲುಕ್ಸಾನ ಮಾಡುವ  ಉದ್ದೇಶದಿಂದ ಪಿರ್ಯಾದಿದಾರನ ಬಾಬತ್ ಕಟಾವು ಮಾಡಿ ಗುಂಪಿ ಹಾಕಿದ್ದ  ಅಂದಾಜು 500 ರಿಂದ 600 ಕ್ವಿಂಟಲ್ ತೂಕದ ಮೆಕ್ಕೆ ಜೋಳದ ತೆನೆಯ ಪೀಕಿಗೆ ಬೆಂಕಿ ಹಚ್ಚಿ ಮೆಕ್ಕೆಜೋಳದ ತೆನೆಗಳು ಸುಟ್ಟು ಕರಕಲಾಗುವಂತೆ ಮಾಡಿ ಪಿರ್ಯಾದಿದಾರನಿಗೆ ಅಂದಾಜು 9 ರಿಂದ 10 ಲಕ್ಷ ರೂಪಾಯಿ ಲುಕ್ಸಾನ ಮಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 07-02-2020 ರಂದು ಮದ್ಯಾಹ್ನ 14-30 ಗಂಟೆಗೆ ಈ ದಿವಸ ದಿನಾಂಕ: 08-02-2019 ರಂದು ಬೆಳಿಗ್ಗೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಮೃತ ಪ್ರೇಮ ತಂದೆ ಯಲ್ಲಪ್ಪ ಮೇಲಿನಮನಿ  ವಯಾ: 14 ವರ್ಷ ಸಾ:  ಬೈರಿದೇವರಕೊಪ್ಪ ಅಂಬೇಡ್ಕರ್ ಓಣಿ ಹುಬ್ಬಳ್ಳಿ ಇತನು ಮುಳ್ಳಳ್ಳಿ  ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ಈಜಾಡಲು ಹೋಗಿ ಅಕಸ್ಮಾತಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ ತನಿಖೆ ಮುಂದುವರೆದಿರುತ್ತದೆ.